ದ್ರಾಕ್ಷಿ

ದ್ರಾಕ್ಷಿಯ ತುಕ್ಕು ಮಿಟೆ

Calepitrimerus vitis

ಹುಳು

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಅತೀ ಸಣ್ಣದಾದ ಅರೆಪಾರದರ್ಶಕ ಚುಕ್ಕೆಗಳು (ಸ್ಟಿಪ್ಲಿಂಗ್) ಕಾಣಿಸಿಕೊಳ್ಳುತ್ತವೆ.
  • ಬಿಳಿ ಕೂದಲುಗಳು ಮತ್ತು ಎಲೆಗಳು ಗಾಢ ಹಸಿರು-ನೇರಳೆ ಬಣ್ಣಕ್ಕೆ ತಿರುಗುತ್ತವೆ ಮತ್ತು ಎಲೆಗಳ ವಿರೂಪತೆ.
  • ಕುಂಠಿತ ಬೆಳವಣಿಗೆ.
  • ಹಣ್ಣಿನ ಉತ್ಪಾದನೆಯಲ್ಲಿ ಕಡಿತ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ರೋಗದ ಮೊದಲ ಚಿಹ್ನೆಯೆಂದರೆ ಎಲೆಗಳ ಮೇಲೆ ಸ್ಟಿಪ್ಲಿಂಗ್ ಗಳು ಕಾಣಿಸಿಕೊಳ್ಳುವುದು. ಎಲೆಗಳನ್ನು ಸೂರ್ಯನ ವಿರುದ್ಧ ಹಿಡಿದಾಗ ಇದು ನಿಖರವಾಗಿ ಗೊತ್ತಾಗುತ್ತದೆ. ಪ್ರತಿ ಎಲೆಯ ಮೇಲಿರುವ ಸಣ್ಣ ಅರೆಪಾರದರ್ಶಕ, ಒಣಗಿದಂತಹ ಚುಕ್ಕೆಗಳ ಸಂಖ್ಯೆ ಸಸ್ಯ ಸೋಂಕಿತಗೊಂಡಿರುವ ಮಟ್ಟವನ್ನು ತಿಳಿಸುತ್ತದೆ. ಸಮೃದ್ಧ ಬಿಳಿ ಕೂದಲಿನ ಉಪಸ್ಥಿತಿಯೂ ಸಹ ಸೋಂಕಿನ ಸಂಕೇತವಾಗಿದೆ. ಎಲೆಗಳು ನಂತರ ಗಾಢ ಹಸಿರು-ಕೆನ್ನೇರಳೆ ಬಣ್ಣ ಪಡೆದುಕೊಳ್ಳುತ್ತವೆ. ಮತ್ತು ಗಾಯದ ಪರಿಣಾಮವಾಗಿ ವಿರೂಪಗೊಳ್ಳುತ್ತವೆ. ಋತುವಿನ ಮೊದಲಿಗೆ ಅತಿಯಾದ ಸೋಂಕಿನಿಂದ ಚಿಗುರುಗಳು ಮತ್ತು ಎಲೆಗಳಿಗೆ ಗಂಭೀರ ಹಾನಿ ಉಂಟಾಗಬಹುದು. ಎಲೆ ಉದುರುವುದು ಮತ್ತು ಕುಂಠಿತ ಬೆಳವಣಿಗೆಯೂ ಉಂಟಾಗುತ್ತದೆ. ಹೂವುಗಳು ಗಾಯಗೊಂಡ ಕಾರಣ ಅಥವಾ ಬೆಳವಣಿಗೆ ವಿಳಂಬವಾದ ಕಾರಣ ಹಣ್ಣಿನ ಉತ್ಪಾದನೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ, ತುಕ್ಕು ಮಿಟೆಗಳ ಸಮಸ್ಯೆ ಸಣ್ಣದಾಗಿರುತ್ತದೆ. ಏಕೆಂದರೆ ಋತುವಿನ ಕೊನೆಯ ಅವಧಿಯಲ್ಲಾದರೆ ದ್ರಾಕ್ಷಿಗಳು ಈ ರೋಗದ ಹಾನಿಯನ್ನು ತಡೆದುಕೊಳ್ಳುತ್ತವೆ. ಆದರೆ, ರೋಗಕಾರಕಗಳ ಸಂಖ್ಯೆಯ ಕ್ಷಿಪ್ರ ಬೆಳವಣಿಗೆಗೆ ಬೇಕಾದ ಎಲ್ಲಾ ಪರಿಸ್ಥಿತಿಗಳು ಇದ್ದರೆ, ಇದು ಇಳುವರಿ ಮತ್ತು ಗುಣಮಟ್ಟದಲ್ಲಿ ನಷ್ಟ ಉಂಟುಮಾಡಬಹುದು.

Recommendations

ಜೈವಿಕ ನಿಯಂತ್ರಣ

ತುಕ್ಕು ಮಿಟೆಗಳು ಅನೇಕ ನೈಸರ್ಗಿಕ ಶತ್ರುಗಳಿಗೆ, ವಿಶೇಷವಾಗಿ ಪರಭಕ್ಷಕ ಹುಳಗಳಿಗೆ ಸುಲಭ ಆಹಾರವಾಗಿವೆ. ಸುಪ್ತಾವಸ್ಥೆಯ ಹಂತದಲ್ಲಿ ಮತ್ತು ಮೊಗ್ಗೊಡೆಯುವ ಸಂದರ್ಭದಲ್ಲಿ ವೆಟ್ಟೆಬಲ್ ಸಲ್ಫರ್ ನ ಸಕಾಲಿಕವಾಗಿ ಸಿಂಪಡಿಕೆ ಹುಳಗಳನ್ನು ನಿವಾರಿಸಲು ಸಹಾಯ ಮಾಡಬಹುದು. ಆದಾಗ್ಯೂ, ಈ ದ್ರವೌಷಧಗಳ ಬಳಕೆ ನಿಲ್ಲಿಸಿದಾಗ ಹುಳುಗಳ ಸಂಖ್ಯೆಯು ಹೆಚ್ಚಾಗಬಹುದು. ಬೇವಿನ ಎಣ್ಣೆ ಅಥವಾ ಕೆಲವು ಕೀಟನಾಶಕ ಸಾಬೂನುಗಳ ಸಾರವನ್ನು ಸಹ ಎಲೆಗಳ ಮೇಲೆ ಸಿಂಪಡಿಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಹೆಚ್ಚಿನ ಸಂದರ್ಭಗಳಲ್ಲಿ, ಈ ಕೀಟವನ್ನು ನಿಯಂತ್ರಿಸಲು ಸಹಾಯ ಮಾಡುವ, ಪರಭಕ್ಷಕ ಹುಳಗಳ ಸಂಖ್ಯೆಯಲ್ಲಿ ಇಳಿಕೆಯಾಗುವುದನ್ನು ತಡೆಗಟ್ಟುವ ಸಲುವಾಗಿ ಕೀಟನಾಶಕಗಳ ಬಳಕೆಯನ್ನು ತಪ್ಪಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ವಿಟಿಸ್ ವಿನಿಫೆರಾದ ಕಡ್ಡಾಯ ಕೀಟವಾದ ಕ್ಯಾಲಿಪಿಟ್ರಿಮೆರಸ್ ವಿಟಿಸ್ ಎಂಬ ದ್ರಾಕ್ಷಿ ತುಕ್ಕು ಮಿಟೆಯಿಂದ ಈ ಲಕ್ಷಣಗಳು ಉಂಟಾಗುತ್ತವೆ. ವಯಸ್ಕ ಹೆಣ್ಣು ಕೀಟಗಳು ತೊಗಟೆಯ ಕೆಳಗೆ ಅಥವಾ ನಾಳಗಳಲ್ಲಿನ ಬಿರುಕುಗಳಲ್ಲಿ ಚಳಿಗಾಲ ಕಳೆಯುತ್ತವೆ. ಮತ್ತು ಅಲ್ಲಿಂದ ವಸಂತಕಾಲದ ಆರಂಭದಲ್ಲಿ ಅವು ಬೆಳೆಯುತ್ತಿರುವ ಚಿಗುರುಗಳಿಗೆ ವಲಸೆ ಹೋಗುತ್ತವೆ. ಸೂಕ್ಷ್ಮ ಗಾತ್ರ ಮತ್ತು ಅರೆಪಾರದರ್ಶಕ ಬಣ್ಣದಿಂದಾಗಿ ಅವುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಎಲೆಗಳ ಮೇಲೆ, ಅವುಗಳು ಹೆಚ್ಚಾಗಿ ಬಿಳಿ ಸಸ್ಯ ಕೂದಲಿನಿಂದ ಸುತ್ತುವರೆದಿರುತ್ತವೆ. ವಸಂತಕಾಲದ ಆರಂಭದಲ್ಲಿ ಇವು ಎಳೆಯ ಎಲೆಗಳು ಮತ್ತು ಚಿಗುರುಗಳನ್ನು ಅತಿಯಾಗಿ ಕಬಳಿಸುತ್ತವೆ. ತಮ್ಮ ಸ್ಟೈಲೆಟ್ ( ಬಾಯಿಯ ಅಂಗ) ಅನ್ನು ಎಪಿಡೆರ್ಮಲ್ ಜೀವಕೋಶಗಳೊಳಗೆ ತೂರಿಸಿ ಸಾರವನ್ನು ಹೀರಿಕೊಳ್ಳುತ್ತವೆ. ತಿನ್ನುವಾಗ ಅವುಗಳು ಜೀವಕೋಶಗಳ ಒಳಗೆ ಸೇರಿಸುವ ಕೆಲವು ಪದಾರ್ಥಗಳಿಗೆ ಹಾರ್ಮೋನುಗಳ ಗುಣಲಕ್ಷಣಗಳಿದ್ದು, ಅವು ಅಂಗಾಂಶಗಳ ವಿರೂಪತೆಯನ್ನು ಉಂಟುಮಾಡುತ್ತದೆ. ಬೇಸಿಗೆಯ ಮಧ್ಯದಿಂದ ಕೊನೆಯವರೆಗೂ, ಹುಳಗಳು ತಮ್ಮ ಚಳಿಗಾಲದ ಸ್ಥಳಗಳಲ್ಲಿ ರಕ್ಷಣೆ ಪಡೆಯುತ್ತವೆ. ಇವುಗಳು ಸಾಮಾನ್ಯವಾಗಿ ಸಮಸ್ಯೆಯಲ್ಲ ಏಕೆಂದರೆ ಅನೇಕ ಪರಭಕ್ಷಕ ಕೀಟಗಳು ಮತ್ತು ಹುಳುಗಳು ಇವುಗಳನ್ನು ತಿನ್ನತ್ತವೆ.


ಮುಂಜಾಗ್ರತಾ ಕ್ರಮಗಳು

  • ಭೂಮಿ ತಯಾರಿಕೆಯ ಸಮಯದಲ್ಲಿ ಮಣ್ಣಿನಲ್ಲಿ ಉತ್ತಮವಾಇ ನೀರು ಬರಿದಾಗುವಂತೆ ಯೋಜಿಸಿ.
  • ಮಣ್ಣಿನ ಇಂಗಾಲದ ಅಂಶವನ್ನು ಸಮತೋಲನಗೊಳಿಸಲು ಸಾವಯವ ಗೊಬ್ಬರವನ್ನು ಸೇರಿಸಿ.
  • ರೋಗದ ಚಿಹ್ನೆಗಳಿಗಾಗಿ ಸಸ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ.
  • ಕೀಟಗಳ ಚಿಹ್ನೆಗಳಿಗಾಗಿ ದ್ರಾಕ್ಷಿತೋಟಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ ಇದರಿಂದ ಪ್ರಯೋಜನಕಾರಿ ಹುಳಗಳು ಮತ್ತು ಕೀಟಗಳ ಸಂಖ್ಯೆಯು ಆರೋಗ್ಯಕರವಾಗಿರುತ್ತದೆ.
  • ರಸಗೊಬ್ಬರಗಳನ್ನು ಸರಿಯಾದ ಸಮಯ ಮತ್ತು ಡೋಸೇಜ್‌ಗಳಲ್ಲಿ ಬಳಸಲು ಖಚಿತಪಡಿಸಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ