ದ್ರಾಕ್ಷಿ

ದ್ರಾಕ್ಷಿಯ ಗುಳ್ಳೆ ಮಿಟೆ

Colomerus vitis

ಹುಳು

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲ್ಮೈ ಪ್ರದೇಶಗಳಲ್ಲಿ ಗುಳ್ಳೆಯಂತಹ ಊತಗಳು ಬೆಳೆಯುತ್ತವೆ.
  • ವಿವಿಧ ಬಣ್ಣಗಳ ಸಣ್ಣ ದಪ್ಪ ಕೂದಲುಗಳ ಒಂದು ಪದರವು ಈ ಉಬ್ಬಿದ ಪ್ರದೇಶಗಳ ಕೆಳಗೆ ಕಂಡುಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ರೋಗಲಕ್ಷಣಗಳು ಹುಳುವಿನ ಮತ್ತು ದ್ರಾಕ್ಷಿಯ ವಿಧ, ಹಾಗು ಪರಿಸರ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಅತ್ಯಂತ ಸಾಮಾನ್ಯ ರೋಗಲಕ್ಷಣಗಳು ವಸಂತ ಋತುವಿನ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಎಳೆಯ ಎಲೆಗಳ ಹೊರ ಮೇಲ್ಮೈನ ಕೆಲವು ಪ್ರದೇಶಗಳು ಉಬ್ಬಿ ಗುಳ್ಳೆಯಂತೆ ಆಗುತ್ತದೆ (ಇದನ್ನು ಎರಿನಿಯಮ್ ಎಂದೂ ಕರೆಯಲಾಗುತ್ತದೆ). ಈ ಉಬ್ಬು ಪ್ರದೇಶಗಳ ಕೆಳಗಿನ ಕುಳಿಗಳಲ್ಲಿ, ಸಣ್ಣ ದಪ್ಪ ಕೂದಲಿನ ಒಂದು ಪದರವು ಕಂಡುಬರುತ್ತದೆ. ಇದರ ಬಣ್ಣ ಬಿಳಿಯಿಂದ ಗುಲಾಬಿಯಾಗಿರುತ್ತದೆ. ಸಣ್ಣ ಮತ್ತು ಅರೆಪಾರದರ್ಶಕ ಹುಳಗಳು ಈ ದಟ್ಟವಾದ ಕೂದಲಿನ ಪದರಗಳಿಂದ ರಕ್ಷಿಸಲ್ಪಟ್ಟಿರುತ್ತವೆ. ನಂತರ, ಊತ ಮತ್ತು ಅವುಗಳ ಒಳಭಾಗವನ್ನು ಆವರಿಸಿರುವ ಕೂದಲುಗಳು ಒಣಗಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕೆಲವು ದೇಶಗಳಲ್ಲಿ, ಈ ಹುಳಗಳು ಬೇರೆ ರೀತಿಯ ಹಾನಿ ಉಂಟುಮಾಡುತ್ತವೆ, ಉದಾಹರಣೆಗೆ ಕೆಳಗಿನ ಎಲೆಗಳಲ್ಲಿ ಅಸ್ಪಷ್ಟತೆ ಮತ್ತು ಮೊಗ್ಗುಗಳಲ್ಲಿ ವಿರೂಪತೆ ಹಾಗು ಎಲೆಗಳು ಸುರುಳಿ ಸುತ್ತುವುದು.

Recommendations

ಜೈವಿಕ ನಿಯಂತ್ರಣ

ಪರಭಕ್ಷಕ ಮಿಟೆಯಾದ ಗಲೆಂಡ್ರೋಮಸ್ ಆಕ್ಸಿಡೆಂಟಾಲಿಸ್ ಗುಳ್ಳೆ ಮಿಟೆಗಳನ್ನು ತಿನ್ನುತ್ತದೆ ಮತ್ತು ಅವುಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಕೀಟನಾಶಕ ಸೋಪ್ ಅಥವಾ ಬೇವಿನ ಎಣ್ಣೆಯನ್ನು ಸಹ ಬಳಸಬಹುದು. ಆದರೆ ಇದು ಪ್ರಯೋಜನಕಾರಿ ಕೀಟಗಳ ಸಂಖ್ಯೆಯನ್ನು ಕೂಡ ಕಡಿಮೆ ಮಾಡಬಹುದು. ಇದಲ್ಲದೆ, ವೆಟ್ಟೆಬಲ್ ಸಲ್ಫರ್ ಬಳಕೆ ಕೂಡ ಸಹಾಯಕವಾಗಬಹುದು.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆ ಒಟ್ಟಾಗಿರುವ ಸಂಯೋಜಿತ ವಿಧಾನ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಸ್ಪಿರೋಟೆಟ್ರಾಮ್ಯಾಟ್ ಅನ್ನು ಯಶಸ್ವಿಯಾಗಿ ಗುಳ್ಳೆ ಹುಳಗಳಿಗೆ ವಿರುದ್ಧವಾಗಿ ಬಳಸಲಾಗುತ್ತದೆ. ಈ ರಾಸಾಯನಿಕವನ್ನು ಹೀರಿಕೊಳ್ಳಲು ಸಾಕಾಗುವಷ್ಟು ಎಲೆಗೊಂಚಲುಗಳು ಇರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಎರಡು ಸಿಂಪಡಿಕೆಗಳ ನಡುವೆ 30 ದಿನಗಳ ಕಾಲಾವಕಾಶ ಇರಲಿ. ವೆಟ್ಟಬಲ್ ಸಲ್ಫರ್ ಅನ್ನು ಸಹ ಬಳಸಬಹುದಾಗಿದೆ.

ಅದಕ್ಕೆ ಏನು ಕಾರಣ

ಎಲೆಗಳ ಮೇಲೆ ಗುಳ್ಳೆಯ ತರಹದ ಬೆಳವಣಿಗೆಗಳು ಕೋಲೋಮೆರಸ್ ವಿಟಿಸ್ ನಿಂದ ಉಂಟಾಗುತ್ತವೆ. ಸ್ಪಷ್ಟ ರೋಗಲಕ್ಷಣಗಳ ಹೊರತಾಗಿಯೂ, ಇದನ್ನು ದ್ರಾಕ್ಷಿಯ ಪ್ರಮುಖ ಕೀಟ ಎಂದು ಪರಿಗಣಿಸಲಾಗುವುದಿಲ್ಲ. ಸಣ್ಣ ಮತ್ತು ಸಾರ-ಹೀರುವ ಹುಳಗಳು ಪ್ರಧಾನವಾಗಿ ದ್ರಾಕ್ಷಿಬಳ್ಳಿಯ ಮೇಲೆ ಪರಿಣಾಮ ಬೀರುತ್ತವೆ. ಎಲೆಗಳ ಹೊರಚರ್ಮವನ್ನು ತಿನ್ನುವಾಗ ಇವು ಹಾರ್ಮೋನು ತರಹದ ಪದಾರ್ಥಗಳನ್ನು ತಮ್ಮ ಬೆಳವಣಿಗೆಯನ್ನು ಬದಲಿಸುವ ಜೀವಕೋಶಗಳೊಳಗೆ ಸೇರಿಸುತ್ತವೆ. ಇದರ ಪರಿಣಾಮವಾಗಿ ವಿಶಿಷ್ಟ ಉಬ್ಬುವಿಕೆಗಳು ಉಂಟಾಗುತ್ತವೆ. ದ್ರಾಕ್ಷಿಯ ಗುಳ್ಳೆ ಹುಳಗಳು ದ್ರಾಕ್ಷಿ ಗಿಡಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಉದಾಹರಣೆಗೆ ಮೊಗ್ಗುಗಳ ತೊಟ್ಟಿನ ಕೆಳಗೆ ಅಡಗಿಕೊಂಡು. ಇವು ವಸಂತಕಾಲದಲ್ಲಿ ಸಕ್ರಿಯವಾಗುತ್ತವೆ ಮತ್ತು ಎಳೆಯ ಎಲೆಗಳ ಕೆಳಭಾಗಕ್ಕೆ ತೆರಳಿ, ಅವುಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಬೇಸಿಗೆಯ ಕೊನೆಯಲ್ಲಿ, ಅವು ಎಲೆಗಳನ್ನು ಬಿಟ್ಟು ಚಳಿಗಾಲಕ್ಕಾಗಿ ಆಶ್ರಯ ಪಡೆಯುತ್ತವೆ. ಎಲೆಗಳ ಕೆಳಭಾಗದಲ್ಲಿನ ಪದರವನ್ನು ಮಿಲ್ಡೂ ನಂತಹ ಶಿಲೀಂಧ್ರ ರೋಗವೆಂದು ತಪ್ಪಾಗಿ ಗುರುತಿಸಬಾರದು. ಬೆಚ್ಚನೆಯ ಆರ್ದ್ರ ವಾತಾವರಣದಲ್ಲಿ ಎಲೆಗಳು ವೇಗವಾಗಿ ಬೆಳೆಯುವ ಸಮಯದಲ್ಲಿ ರೋಗಲಕ್ಷಣಗಳು ಹೆಚ್ಚು ತೀವ್ರವಾಗಿರುತ್ತವೆ. ಆದರೆ ಈ ಹುಳದಿಂದ ಹಣ್ಣಿನ ಇಳುವರಿ ಮೇಲೆ ಯಾವುದೇ ಹಾನಿಕಾರಕ ಪರಿಣಾಮ ಕಂಡುಬಂದಿಲ್ಲ,


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲದಿಂದ ಆರೋಗ್ಯಕರ ಸಸ್ಯಗಳನ್ನು ಬಳಸಿ.
  • ನಿಯಮಿತವಾಗಿ ತೋಟವನ್ನು ಪರಿಶೀಲಿಸಿ.
  • ಸೋಂಕಿನ ಮಟ್ಟ ಕಡಿಮೆಯಾಗಿರುವವರೆಗೂ ಸೋಂಕಿತ ಶಾಖೆಗಳನ್ನು ಮತ್ತು ಸಸ್ಯದ ಭಾಗಗಳನ್ನು ತೆಗೆದುಹಾಕಿ, ಸಂಗ್ರಹಿಸಿ ಮತ್ತು ನಾಶಗೊಳಿಸಿ.
  • ಪ್ರಯೋಜನಕಾರಿಯಾದ ಕೀಟಗಳಿಗೆ ಹಾನಿಯನ್ನು ತಪ್ಪಿಸಲು ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.
  • ದ್ರಾಕ್ಷಿ ಸಸ್ಯಗಳ ಸುತ್ತಲೂ ಸಸ್ಯನಾಶಕಗಳನ್ನು ಸಿಂಪಡಿಸುವುದನ್ನು ತಪ್ಪಿಸಿ.
  • ಅವುಗಳೂ ಕೂಡ ಪರಭಕ್ಷಕ ಹುಳುಗಳಂತಹ ಪ್ರಯೋಜನಕಾರಿ ಕೀಟಗಳಿಗೆ ಹಾನಿಕಾರಕವಾಗಿದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ