ಉದ್ದಿನ ಬೇಳೆ & ಹೆಸರು ಬೇಳೆ

ಎಲೆಯ ಬ್ಯಾಕ್ಟೀರಿಯಲ್ ಬ್ಲೈಟ್ (ಎಲೆಯ ದುಂಡಾಣು ರೋಗ)

Xanthomonas axonopodis pv. phaseoli

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ನಿಂಬೆ-ಹಳದಿ ಬಣ್ಣದ ಅಂಚು ಇರುವ ಸಣ್ಣ, ನೀರು-ನೆನೆಸಿದಂತಹ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ಈ ಚುಕ್ಕೆಗಳು ಒಣಗಿರುತ್ತವೆ ಮತ್ತು ನಿರ್ಜೀವವಾದಂತೆ ಕಾಣುವ ಗಾಯಗಳಾಗಿ ಬದಲಾಗುತ್ತವೆ.
  • ಸೋಂಕಿನ ಮುಂದಿನ ಹಂತದಲ್ಲಿ ಎಲೆಗಳು ಉದುರುತ್ತವೆ.
  • ಕೆಂಪು ಮತ್ತು ಹಳದಿ ಪಟ್ಟೆಗಳು ಕಾಂಡದಿಂದ ಒಸರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ಬೆಳವಣಿಗೆಯ ಯಾವುದೇ ಹಂತದಲ್ಲಿ ಸೋಂಕು ತಗುಲಬಹುದು. ಗಿಡದ ವಯಸ್ಸಿನ ಆಧಾರದ ಮೇಲೆ ರೋಗಲಕ್ಷಣಗಳು ಸ್ವಲ್ಪ ಭಿನ್ನವಾಗಿರುತ್ತವೆ. ಸೋಂಕಿತ ಬೀಜದಿಂದಾಗಿ ಮೊಳಕೆಯಲ್ಲಿ ಗಾಯಗೊಂಡ ತುದಿ ಹಾಗೂ ಪ್ರಾಥಮಿಕ ಎಲೆಗಳಲ್ಲಿ ಮತ್ತು ಕಾಂಡದಲ್ಲಿ ವಕ್ರವಾದ ನೀರು-ನೆನೆಸಿದಂತಹ ಚುಕ್ಕೆಗಳು ಕಾಣಿಸುತ್ತವೆ. ದಿನದ ಸಮಯದಲ್ಲಿ ಗಿಡಗಳು ಬಾಡಿದಂತಿರುತ್ತವೆ. ಇದು ಈ ರೋಗದ ವಿಶಿಷ್ಟ ಲಕ್ಷಣ. ಬೆಳವಣಿಗೆಯ ಮುಂದಿನ ಹಂತಗಳಲ್ಲಿ ಸೋಂಕು ತಗುಲಿದಲ್ಲಿ, ಎಲೆಗಳಲ್ಲಿ ನಿಂಬೆ-ಹಳದಿ ಬಣ್ಣದ ಸಣ್ಣ, ನೀರು-ನೆನೆಸಿದಂತಹ ಚುಕ್ಕೆಗಳು ಮೂಡುತ್ತವೆ. ಕಾಲಾನಂತರದಲ್ಲಿ, ಅವು ಕಂದು ಬಣ್ಣದ ಸತ್ತ ಗಾಯಗಳಾಗಿ ಬದಲಾಗುತ್ತವೆ. ಈ ಗಾಯಗಳಿಂದಾಗಿ ಗಿಡವು ಸುಟ್ಟಂತೆ ಕಾಣುತ್ತದೆ. ಇದರಿಂದ ಎಲೆ ಉದುರಿ ಹೋಗಬಹುದು. ಸೋಂಕಿತ ಗಿಡಗಳು ಕುಬ್ಜವಾಗಿರುತ್ತವೆ ಮತ್ತು ಕೆಂಪು ಮಿಶ್ರಿತ ಕಂದು ಅಥವಾ ಇಟ್ಟಿಗೆ-ಕೆಂಪು ಬಣ್ಣದ ಗಾಯಗಳಿರುವ ಕೆಲವು ಕಾಯಿಗಳನ್ನು (ಬೀಜಕೋಶ) ಉತ್ಪಾದಿಸುತ್ತವೆ. ಕಾಂಡದಲ್ಲಿ ಕೆಂಪು ಪಟ್ಟೆಗಳು ಮೂಡುತ್ತವೆ. ಸಾಮಾನ್ಯವಾಗಿ ಈ ಪಟ್ಟೆಗಳು ಒಡೆದು ಹಳದಿ ಬಣ್ಣವನ್ನು ಹೊರಹಾಕುತ್ತವೆ. ಕಾಯಿ ಬೆಳೆಯುತ್ತಿರುವ ಸಮಯದಲ್ಲಿ ಸೋಂಕು ತಗುಲಿದರೆ ಬೀಜಗಳು ಸುಕ್ಕುಸುಕ್ಕಾಗಿರಬಹುದು, ಸೊರಗಿರಬಹುದು, ಕೊಳೆತಿರಬಹುದು ಅಥವಾ ಬಣ್ಣಗೆಟ್ಟಿರಬಹುದು.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಕ್ಸಂಥೋನಾನಸ್ ಆಕ್ಸನೊಪೊಡಿಸ್ ಪಿವಿ. ಫೇಸಿಯೋಲಿ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ತಿಳಿದಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಮಾಹಿತಿ ಏನಾದರೂ ನಿಮಗೆ ಗೊತ್ತಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಾವು ಎದುರು ನೋಡುತ್ತಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ರೋಗದ ರಾಸಾಯನಿಕ ಚಿಕಿತ್ಸೆಯು ಕಾರ್ಯಸಾಧುವಲ್ಲದಿರಬಹುದು ಏಕೆಂದರೆ ಬ್ಯಾಕ್ಟೀರಿಯಾಗಳು (ದುಂಡಾಣು) ಕಾಲಾನಂತರ ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು. ಬಿತ್ತನೆ ಮಾಡುವ ಮುನ್ನ ಬೀಜಗಳನ್ನು 500 ppm ಸ್ಟ್ರೆಪ್ಟೋಸಿಕ್ಲೈನ್ ದ್ರಾವಣದಲ್ಲಿ 30 ನಿಮಿಷಗಳ ಕಾಲ ನೆನೆಸಬಹುದು. ಬ್ಯಾಕ್ಟೀರಿಯಾಗಳ ಅಗತ್ಯವಿದ್ದರೆ, ತಾಮ್ರ ಆಕ್ಸಿಕ್ಲೋರೈಡ್ ಮತ್ತು ಅಧಿಕೃತ ಪ್ರತಿಜೀವಕ (ಸ್ಟ್ರೆಪ್ಟೊಮೈಸೈನ್ ಅಥವಾ ಪ್ಲಾಂಟಮೈಸೈನ್ನ 2 ಗ್ರಾಂ / ಲೀ) ಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಎಲೆಗಳ ಚಿಕಿತ್ಸೆಗಳಾಗಿ ಬಳಸಬಹುದು.

ಅದಕ್ಕೆ ಏನು ಕಾರಣ

ಕ್ಸಂಥೋನಾನಸ್ ಆಕ್ಸನೊಪೊಡಿಸ್ ಪಿವಿ. ಫೇಸಿಯೋಲಿ ಎಂಬ ಬ್ಯಾಕ್ಟೀರಿಯಾವು ಮಣ್ಣಿನಲ್ಲಿ, ಬೀಜದ ಸಿಪ್ಪೆಯಲ್ಲಿ, ಪರ್ಯಾಯ ಆಶ್ರಯದಾತ ಗಿಡಗಳಲ್ಲಿ, ಮತ್ತು ಗಿಡದ ಅವಶೇಷಗಳಲ್ಲಿ ಅನೇಕ ವರ್ಷಗಳ ಕಾಲ ಸುಪ್ತವಾಗಿ ಉಳಿಯುತ್ತದೆ. ಮಳೆಯಾಗುತ್ತಿರುವ, ಒದ್ದೆಯಾದ ಮತ್ತು ಬೆಚ್ಚಗಿನ ವಾತಾವರಣದ ಪರಿಸ್ಥಿತಿಗಳು (25-35 °C) ಮತ್ತು ತೇವಾಂಶವು ಇದಕ್ಕೆ ಅನುಕೂಲಕರ. ಗಾಳಿಯಿಂದುಂಟಾಗುವ ಮಳೆಯಿಂದ, ಮಳೆ ರಾಚುವಾಗ ಹಾಗೂ ಕೀಟಗಳ (ಮಿಡತೆ ಮತ್ತು ಬೀನ್ ಜೀರುಂಡೆಗಳು) ಮೂಲಕ ವ್ಯಾಪಕವಾಗಿ ಹರಡುತ್ತದೆ. ಗಿಡಗಳ ಮೇಲಿರುವ ನೈಸರ್ಗಿಕ ಬಿರುಕುಗಳು ಮತ್ತು ಗಾಯಗಳು ಕೂಡಾ ಸೋಂಕು ಹರಡಲು ಕಾರಣವಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ, ರೋಗ-ಮುಕ್ತ ಬೀಜಗಳನ್ನು ಬಳಸಿ.
  • ಚೇತರಿಸಿಕೊಳ್ಳುವ, ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗದ ಕುರುಹುಗಳಿಗಾಗಿ ಗಿಡಗಳನ್ನು ಅಥವಾ ತೋಟಗಳನ್ನು ಪರಿಶೀಲಿಸಿ.
  • ಈ ಪ್ರದೇಶಕ್ಕೆ ಸೂಕ್ತವಾದ ಸಸಿ ನೆಡುವ ಸಮಯವನ್ನು ಖಚಿತಪಡಿಸಿಕೊಳ್ಳಿ.
  • ಸ್ಪ್ರಿಂಕ್ಲರ್ ನೀರಾವರಿ ಮಾಡಬೇಡಿ.
  • ನಿಮ್ಮ ಸಾಧನಗಳು ಮತ್ತು ಉಪಕರಣಗಳನ್ನು ಸ್ವಚ್ಛವಾಗಿರಿಸಿ.
  • ಸೋಂಕು ತಗುಲಿದ ಗಿಡಗಳನ್ನು ತೆಗೆದು ಸುಟ್ಟು ನಾಶ ಮಾಡಿ.
  • ಈ ಸೋಂಕಿಗೆ ಆಶ್ರಯ ನೀಡದ ಬೆಳೆಗಳೊಂದಿಗೆ (ಮೆಕ್ಕೆ ಜೋಳ) ನಿರ್ದಿಷ್ಟ ಸಮಯಕ್ಕೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ