ಕಬ್ಬು

ಕಬ್ಬಿನ ಎಲೆಯ ಬ್ಯಾಕ್ಟೀರಿಯ ಬ್ಲೈಟ್ ರೋಗ

Acidovorax avenae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮಧ್ಯನಾಳ ಮತ್ತು ಎಲೆಗಳ ತಳಭಾಗದಲ್ಲಿ ನೀರಿನ-ಹಸಿರು ಪಟ್ಟೆಗಳು ಬೆಳೆಯುತ್ತವೆ.
  • ಇಡೀ ಎಲೆಯ ಸುತ್ತಲೂ ಕೆಂಪು ಬಣ್ಣದ ಪಟ್ಟೆಗಳು ಹರಡುತ್ತವೆ.
  • ಎಲೆಗಳು ಮುದುಡುತ್ತವೆ ಮತ್ತು ಕೊಳೆಯುತ್ತವೆ.
  • ಬೇರಿನ ಬೆಳವಣಿಗೆ ಕಡಿಮೆಯಾಗುತ್ತದೆ.
  • ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಕಬ್ಬು

ರೋಗಲಕ್ಷಣಗಳು

ಈ ರೋಗವು ಹೆಚ್ಚಾಗಿ ಎಳೆಯ ಮತ್ತು ಮಧ್ಯ ವಯಸ್ಸಿನ ಎಲೆಗಳಲ್ಲಿ ಕಂಡುಬರುತ್ತದೆ. ಉದ್ದ, ಕಿರಿದಾದ, ಒಂದೇ ತರಹದ ಮತ್ತು ನೀರಿನ-ಹಸಿರು ಪಟ್ಟೆಗಳು ಮೊದಲು ಮಧ್ಯನಾಳದ ಬಳಿ ಮತ್ತು ಎಲೆಯ ಮೇಲ್ಮೈ ತಳದಲ್ಲಿ ಸಂಭವಿಸುತ್ತವೆ. ಕಾಯಿಲೆಯ ನಂತರದ ಹಂತಗಳಲ್ಲಿ, ಪಟ್ಟೆಗಳು ಇಡೀ ಎಲೆದಾದ್ಯಂತ ಒಗ್ಗೂಡಿ ಹರಡುತ್ತದೆ. ಮೊದಲು ತೆಳುವಾಗಿ ಮತ್ತು ನಂತರ ಗಾಢ -ಕೆಂಪು ಬಣ್ಣಕ್ಕೆ (ನೆಕ್ರೋಟಿಕ್) ತಿರುಗುತ್ತವೆ. ಎಲೆಗಳು ಮುದುಡುತ್ತದೆ, ಕೊಳೆಯುತ್ತವೆ ಮತ್ತು ಗಾಢವಾದ ಅಹಿತಕರ ವಾಸನೆಯನ್ನು ಹೊರಸೂಸುತ್ತವೆ. ಕೊಳೆಯುವಿಕೆಯು ಕಾಂಡದೊಳಗೆ ಮುಂದುವರೆದಂತೆ, ದೊಡ್ಡ ಕುಳಿಗಳು ಗೆಣ್ಣುಗಳ ನಡುವೆ ರೂಪಗೊಳ್ಳುತ್ತವೆ. ಕಾಯಿಲೆಯ ನಂತರದ ಹಂತಗಳಲ್ಲಿ, ಮೇಲ್ಭಾಗಗಳು ಮತ್ತು ಹೂಗೊಂಚಲುಗಳು ಆಗಾಗ್ಗೆ ಒಡೆಯುತ್ತವೆ ಮತ್ತು ನೆಲಕ್ಕೆ ಬೀಳುತ್ತವೆ, ಈ ಲಕ್ಷಣವನ್ನು ಮೇಲ್ತುದಿ ಕೊಳೆತ ಎಂದು ಕರೆಯಲಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಆಸಿಡೋವೊರಾಕ್ಸ್ ಅವೆನ್ಯೂ ವಿರುದ್ಧ ಈಗ ಯಾವುದೇ ಪರ್ಯಾಯ ಚಿಕಿತ್ಸೆ ಲಭ್ಯವಿರುವ ಬಗ್ಗೆ ತಿಳಿದಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಪ್ರಾಥಮಿಕ ಸೋಂಕನ್ನು ತಪ್ಪಿಸಲು 15 ರಿಂದ 20 ನಿಮಿಷಗಳ ಕಾಲ ಸರಿಯಾದ ಶಿಲೀಂಧ್ರನಾಶಕಗಳೊಂದಿಗೆ ಬೀಜಗಳ ಚಿಕಿತ್ಸೆ ನಡೆಸಬಹುದು.

ಅದಕ್ಕೆ ಏನು ಕಾರಣ

ಬ್ಯಾಕ್ಟೀರಿಯಾವು ಹೆಚ್ಚಿನ ಆರ್ದ್ರತೆ ಮತ್ತು ಹೆಚ್ಚಿನ ತಾಪಮಾನವನ್ನು ಬಯಸುತ್ತದೆ. ಪ್ರಾಥಮಿಕ ಪ್ರಸರಣವು ಮಣ್ಣು ಮತ್ತು ರೋಗಗ್ರಸ್ತ ಸೆಟ್ ಗಳು ಮೂಲಕ ನಡೆಯುತ್ತದೆ. ದ್ವಿತೀಯಕ ಸಂವಹನವು ವಾಯು, ಮಳೆ ನೀರಿನ ಸಿಂಪಡಿಕೆ ಮತ್ತು ಮಣ್ಣಿನ ಮೂಲಕ ನಡೆಯುತ್ತದೆ


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಬೀಜ ನರ್ಸರಿಯಿಂದ ಆರೋಗ್ಯಕರ ನೆಡುವ ವಸ್ತುಗಳನ್ನು ಸಂಗ್ರಹಿಸಿ.
  • ಹಸಿರು ಗೊಬ್ಬರದ ಬೆಳೆಗಳೊಂದಿಗೆ ವ್ಯಾಪಕ ಬೆಳೆ ಸರದಿ ಅಳವಡಿಸಿ.
  • ರೋಗದ ವ್ಯಾಪ್ತಿಯನ್ನು ಕಡಿಮೆ ಮಾಡಲು ನಿಮ್ಮ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಿ.
  • ಸಾರಜನಕ ಗೊಬ್ಬರವನ್ನು ಮಿತವಾಗಿ ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ