ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ನ ಬ್ಯಾಕ್ಟೀರಿಯಾದ ಸ್ಪಾಟ್

Xanthomonas alfalfae subsp. citrumelonis

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಪ್ರಾಥಮಿಕವಾಗಿ ಇದು ಟ್ರೈಫಾಲಿಯೇಟ್ ಕಿತ್ತಳೆ ಮತ್ತು ಅದರ ಮಿಶ್ರತಳಿಗಳ ರೋಗ.
  • ಉದಾ.
  • ನರ್ಸರಿ ಪರಿಸ್ಥಿತಿಯಲ್ಲಿ ಸ್ವಿಂಗಿಲ್ ಸಿಟ್ರುಮೆಲೊ.
  • ಚಪ್ಪಟೆಯಾದ ಅಥವಾ ಗುಳಿಬಿದ್ದ, ಕಂದು ಬಣ್ಣದ ನೆಕ್ರೋಟಿಕ್ ಕೇಂದ್ರಗಳೊಂದಿಗೆ ದುಂಡಗಿನ ಗಾಯಗಳು.
  • ಸಾಮಾನ್ಯವಾಗಿ ಆ ಗಾಯಗಳ ಮಧ್ಯಭಾಗ ಉದುರುತ್ತವೆ ಮತ್ತು ಆ ಜಾಗದಲ್ಲಿ "ಶಾಟ್-ಹೋಲ್ " ಉಳಿಯುತ್ತದೆ.
  • ನೀರು-ತುಂಬಿದ ಅಂಚುಗಳು ಮತ್ತು ಹಳದಿ ಬಣ್ಣದ ಹರಡಿದ ಪ್ರಭಾಲಯ.
  • ತೀವ್ರವಾಗಿ ಸೋಂಕಿತ ಎಲೆಗಳು ಕ್ಲೋರೋಟಿಕ್ ಆಗುತ್ತವೆ ಅಥವಾ ಸುಟ್ಟಂತಾಗುತ್ತವೆ ಮತ್ತು ಮುಂಚಿತವಾಗಿಯೇ ಉದುರಬಹುದು.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಈ ರೋಗವು ಪ್ರಾಥಮಿಕವಾಗಿ ಮೂರು ಪದರದ (ಟ್ರೈಫೋಲಿಯೇಟ್) ಕಿತ್ತಳೆ ಮತ್ತು ಅದರ ಮಿಶ್ರತಳಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ, ಉದಾ. ನರ್ಸರಿ ಪರಿಸ್ಥಿತಿಯಲ್ಲಿ ಸ್ವಿಂಗಿಲ್ ಸಿಟ್ರುಮೆಲೊ. ಇದರಿಂದಾಗುವ ಗಾಯಗಳು ಇತರ ಕಿತ್ತಳೆ ಪ್ರಭೇದಗಳಲ್ಲಿನ ಸಿಟ್ರಸ್ ಕ್ಯಾಂಕರ್ ಗಾಯಗಳನ್ನು ಹೋಲುತ್ತವೆ. ಆದರೆ ಅವು ಚಪ್ಪಟೆಯಾಗಿರುತ್ತವೆ ಅಥವಾ ಗುಳಿಬಿದ್ದಿರುತ್ತವೆ ಮತ್ತು ಊದಿರುವುದಿಲ್ಲ. ಎಲೆಗಳ ಮೇಲೆ, ಈ ರೋಗದ ಗುರುತೆಂದರೆ, ಕಂದು ಬಣ್ಣದ ನೆಕ್ರೋಟಿಕ್ ಕೇಂದ್ರಗಳೊಂದಿಗೆ ದುಂಡಗಿನ ಗಾಯಗಳು, ಸಾಮಾನ್ಯವಾಗಿ ಆ ಗಾಯಗಳ ಮಧ್ಯಭಾಗ ಒಡೆಯುತ್ತದೆ ಅಥವಾ ಉದುರುತ್ತವೆ ಮತ್ತು ಆ ಜಾಗದಲ್ಲಿ "ಶಾಟ್-ಹೋಲ್ " ಉಳಿಯುತ್ತದೆ. ಅವುಗಳ ಸುತ್ತ ನೀರು-ತುಂಬಿದ ಅಂಚುಗಳು ಮತ್ತು ಹಳದಿ ಬಣ್ಣದ ಹರಡಿದ ಪ್ರಭಾಲಯವಿರುತ್ತದೆ. ಹೆಚ್ಚು ಆಕ್ರಮಣಕಾರಿ ತಳಿಗಳಿಂದ ಉತ್ಪತ್ತಿಯಾಗುವ ಗಾಯಗಳಲ್ಲಿ ಸಿಟ್ರಸ್ ಕ್ಯಾಂಕರ್ಗಿಂತಲೂ ಅಧಿಕವಾದ ನೀರು-ತುಂಬಿದ ಅಂಚುಗಳಿರುತ್ತವೆ. ಕಾಲಾನಂತರದಲ್ಲಿ, ಅವುಗಳು ಅಗಲವಾಗುತ್ತವೆ ಮತ್ತು ಒಂದಾಗುತ್ತವೆ ಮತ್ತು ಅವು ಅನಿಯಮಿತ ತೆಳು ಕಂದು ಬಣ್ಣದ ತೇಪೆಗಳಿಗೆ ಕೋನೀಯವಾಗಿರುತ್ತವೆ. ತೀವ್ರವಾಗಿ ಸೋಂಕಿತ ಎಲೆಗಳು ಕ್ಲೋರೋಟಿಕ್ ಆಗುತ್ತವೆ ಅಥವಾ ಸುಟ್ಟಂತಾಗುತ್ತವೆ ಮತ್ತು ಮುಂಚಿತವಾಗಿಯೇ ಉದುರಬಹುದು.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಕ್ಸಂಥಾಮೊನಸ್ ಆಲ್ಫಲ್ಫೆ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಿಟ್ರಸ್ನ ಬ್ಯಾಕ್ಟೀರಿಯಾದ ಸ್ಪಾಟ್ ನ ನಿಯಂತ್ರಣಕ್ಕಾಗಿ ಸಂಪೂರ್ಣವಾಗಿ ಯಶಸ್ವಿಯಾದ ಸಿಂಪಡಿಕೆ ಕಾರ್ಯಕ್ರಮಗಳು ಇಲ್ಲ. ನಿರೋಧಕ ಕ್ರಮಗಳು ಮತ್ತು ರಾಸಾಯನಿಕ ಚಿಕಿತ್ಸೆಗಳ ಸಂಯೋಜನೆಯು ಅದರ ಪ್ರಮಾಣವನ್ನು ಕಡಿಮೆ ಮಾಡಲು ಅವಶ್ಯಕವಾಗಿದೆ. ತಾಮ್ರ ಆಧಾರಿತ ಸಿಂಪಡಣೆಗಳನ್ನು ಪ್ರತ್ಯೇಕವಾಗಿ ಅಥವಾ ಪ್ರತಿಜೀವಕ ಅಥವಾ ರಾಸಾಯನಿಕ ಮ್ಯಾಂಕೊಜೆಬ್ ಜೊತೆಗೆ ಬಳಸಿದರೆ ಅದು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ. ಎಲೆಗಳಿಗಾಗುವ ಹಾನಿ ಮತ್ತು ಬ್ಯಾಕ್ಟೀರಿಯಾದ ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸಲು ಸಿಂಪಡಿಕೆ ಪ್ರಮಾಣವನ್ನು ಕ್ರಮೇಣವಾಗಿ ಕಡಿಮೆ ಮಾಡಬೇಕು.

ಅದಕ್ಕೆ ಏನು ಕಾರಣ

ಈ ರೋಗವು ಕ್ಸಂಥಾಮೊನಸ್ ಆಲ್ಫಲ್ಫೆ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾದ ಮೂರು ಉಪಗುಂಪುಗಳಿವೆ ಮತ್ತು ಆಶ್ರಯದಾತ ಸಸ್ಯಗಳಿಗೆ ಅವು ಉಂಟುಮಾಡುವ ರೋಗಲಕ್ಷಣಗಳ ತೀವ್ರತೆ ಆಧರಿಸಿ ಬದಲಾಗುತ್ತವೆ. ಅವುಗಳು ನೈಸರ್ಗಿಕವಾಗಿ ಬೀಸುವ ಗಾಳಿ-ಮಳೆ, ಇಬ್ಬನಿ ಅಥವಾ ತುಂತುರು ನೀರಾವರಿ ಮೂಲಕ ನರ್ಸರಿ ಪ್ರದೇಶಗಳಲ್ಲಿ ಹರಡುತ್ತವೆ. ಅವುಗಳು ನರ್ಸರಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಮರದಿಂದ ಮರಕ್ಕೆ ಯಾಂತ್ರಿಕವಾಗಿಯೂ ಸಹ ಹರಡಬಹುದು, ಮುಖ್ಯವಾಗಿ ಎಲೆಗಳು ಒದ್ದೆಯಾಗಿದ್ದಾಗ. ಎಲೆಗಳ ಮೇಲಿರುವ ನೈಸರ್ಗಿಕ ರಂಧ್ರಗಳು ಅಥವಾ ತೊಗಟೆಯಲ್ಲಿರುವ ಉಬ್ಬು ತೂತುಗಳು ಬ್ಯಾಕ್ಟೀರಿಯಾಕ್ಕೆ ಪ್ರವೇಶ ಜಾಗಗಳಾಗಿವೆ. ಆದಾಗ್ಯೂ, ಎಳೆ ಮರಗಳನ್ನು ತೋಪುಗಳಿಗೆ ಸ್ಥಳಾಂತರಿಸಿದಾಗ ಬ್ಯಾಕ್ಟೀರಿಯಾವು ಸಾಯುತ್ತದೆ, ಮತ್ತು ರೋಗಲಕ್ಷಣಗಳು ಕ್ರಮೇಣ ಮರೆಯಾಗುತ್ತವೆ. ಬೆಚ್ಚಗಿನ ತಾಪಮಾನ (14 ರಿಂದ 38 °C), ಸ್ವಲ್ಪ ಮಳೆ, ಅಧಿಕ ಇಬ್ಬನಿ, ಮತ್ತು ಬಿರುಗಾಳಿಯ ಹವಾಮಾನವು ರೋಗದ ಬೆಳವಣಿಗೆ ಮತ್ತು ಹರಡುವಿಕೆಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ಹವಾಮಾನವು ಉಷ್ಣವಾಗಿದ್ದಾಗ ಮತ್ತು ಒಣಗಿದ್ದಾಗ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಸೋಂಕಿನ ಪ್ರಕ್ರಿಯೆಯು ದುರ್ಬಲಗೊಳ್ಳುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲದಿಂದ ಆರೋಗ್ಯಕರ ನಾಟಿ ವಸ್ತುಗಳನ್ನು ಬಳಸಿ.
  • ರೋಗಕ್ಕೆ ಸ್ವಲ್ಪ ಮಟ್ಟಿನ ಪ್ರತಿರೋಧ ಹೊಂದಿರುವ ಪ್ರಭೇದಗಳನ್ನು ಆಯ್ಕೆಮಾಡಿ.
  • ಗಾಳಿಯ ಪ್ರಸರಣ ಇಲ್ಲದ ಮತ್ತು ಮಣ್ಣಿನ ಹೊರಹರಿವು ಇರುವ ಜಾರು ಪ್ರದೇಶ ಅಥವಾ ನೆರಳಿನ ಪ್ರದೇಶಗಳನ್ನು ಬಳಸಬೇಡಿ.
  • ಗಾಳಿಯ ಪ್ರಸರಣಕ್ಕೆ ಅನುವು ಮಾಡಿಕೊಡಲು ಮತ್ತು ಮರದ ಶಕ್ತಿಯನ್ನು ಪೋಷಿಸುವುದಕ್ಕಾಗಿ ಮರಗಳ ಎತ್ತರವನ್ನು ಆಗಾಗ್ಗೆ ಕತ್ತರಿಸಿ.
  • ಹೊಸ ತೋಟಗಳಲ್ಲಿ ಕಸುವು ಕಾಪಾಡಿಕೊಳ್ಳಿ.
  • ಬಲವಾದ ಗಾಳಿಯ ಕಾರಣಗಳಿಂದ ಮಣ್ಣಿನ ಕಣಗಳು ಬೀಸುವ ಮೂಲಕ ಅಂಗಾಂಶಗಳಿಗಾಗುವ ಹಾನಿಗಳನ್ನು ಕಡಿಮೆ ಮಾಡಲು ವೇಗವಾಗಿ ಬೆಳೆಯುವ ಮರಗಳೊಂದಿಗೆ ಕೃತಕ ಅಥವಾ ನೈಸರ್ಗಿಕ ಗಾಳಿತಡೆ ಅಥವಾ ಬೇಲಿಗಳನ್ನು ಬಳಸಿ.
  • ಮಳೆ ಅಥವಾ ಇಬ್ಬನಿಯಿಂದ ಎಲೆಗಳು ಒದ್ದೆಯಾದಾಗ ಹಣ್ಣಿನ ತೋಟಗಳಲ್ಲಿ ಕೆಲಸ ಮಾಡಬೇಡಿ ಅಥವಾ ಮರಗಳನ್ನು ಕತ್ತರಿಸಬೇಡಿ.
  • ತೊಗಟೆಯ ಮೇಲೆ ಎಲ್ಲಿ ರೋಗಲಕ್ಷಣಗಳು ಕಂಡುಬರುತ್ತವೋ ಆ ಭಾಗದಿಂದ ಕೆಲವು ಸೆಂಟಿಮೀಟರ್ ಕೆಳಗೆ ಕತ್ತರಿಸುವ ಮೂಲಕ ಸೋಂಕಿತ ಚಿಗುರುಗಳನ್ನು ತೆಗೆದುಹಾಕಿ.
  • ಲೀಫ್ ಮೈನರ್ ಗಳಂತಹ ಸೋಂಕನ್ನು ಪ್ರೋತ್ಸಾಹಿಸುವ ಮತ್ತು ಎಲೆಗಳನ್ನು ಹಾಳುಮಾಡುವ ಕೀಟಗಳನ್ನು ನಿಯಂತ್ರಿಸಿ.
  • ಹೊಲದ ಕೆಲಸದ ನಂತರ ಉಪಕರಣಗಳು ಮತ್ತು ಸಾಧನಗಳನ್ನು ಸ್ವಚ್ಛಮಾಡಿ.
  • ನಿಮ್ಮ ದೇಶದಲ್ಲಿರಬಹುದಾದ ಸಂಭವನೀಯ ಸಂಪರ್ಕ ನಿಬಂಧನೆಗಳ ಬಗ್ಗೆ ಪರಿಶೀಲಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ