ಭತ್ತ

ಭತ್ತದ ದುಂಡಾಣು ಅಂಗಮಾರಿ

Xanthomonas oryzae pv. oryzae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಬೂದು ಹಸಿರು ಬಣ್ಣದ ಗೆರೆಗಳು.
  • ಎಲೆಗಳು ಹಳದಿಯಾಗಿ ಬಾಡುವುದು.
  • ಎಲೆಗಳಿಂದ ಹಾಲಿನಂತಹ ಸ್ರವಿಸುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಸಸಿಗಳ ಮೇಲೆ, ಮೊದಲು ಸೋಂಕಿತ ಎಲೆಗಳು ಹಳದಿಯಿಂದ ಹುಲ್ಲಿನ ಬಣ್ಣಕ್ಕೆ ತಿರುಗುತ್ತವೆ ಮತ್ತು ನಂತರ ಸೊರಗುತ್ತವೆ ಹಾಗು ಸಾಯುತ್ತವೆ. ಪ್ರೌಢ ಸಸ್ಯಗಳ ಮೇಲೆ ರೋಗ ಉಂಟಾಗುವ ಅವಧಿಗಳೆಂದರೆ ಮುಖ್ಯವಾಗಿ ಟಿಲ್ಲರಿಂಗ್ ಹಂತದಿಂದ ಪ್ಯಾನಿಕಲ್ ರಚನೆಯವರೆಗೆ. ಎಲೆಗಳ ಮೇಲೆ, ಬೂದು-ಹಸಿರು ಬಣ್ಣದ ನೀರಿನಲ್ಲಿ-ನೆನೆಸಿದಂತಹ ತಿಳಿ ಹಸಿರು ಬಣ್ಣದ ಗೆರೆಗಳು ಕಾಣುತ್ತವೆ. ನಂತರ, ಈ ಗಾಯಗಳು ವಿಲೀನಗೊಂಡು ಅಸಮ ಅಂಚುಗಳೊಂದಿಗೆ ದೊಡ್ಡ ಹಳದಿ-ಬಿಳಿ ಗಾಯಗಳನ್ನು ರೂಪಿಸುತ್ತವೆ. ಎಲೆಗಳು ಹಳದಿಯಾಗುತ್ತವೆ ಮತ್ತು ಕ್ರಮೇಣವಾಗಿ ಸೊರಗುತ್ತವೆ ಮತ್ತು ಸಾಯುತ್ತವೆ. ಸೋಂಕಿನ ಅಂತಿಮ ಹಂತದಲ್ಲಿ, ಹಾಲಿನಂತಹ ಬ್ಯಾಕ್ಟೀರಿಯಾದ ಸ್ರವಿಕೆ ಎಲೆಗಳಿಂದ ಸುರಿಯುತ್ತಿರುವುದನ್ನು ಗಮನಿಸಬಹುದು. ಈ ಸ್ರವಿಕೆಯ ಹನಿಗಳು ನಂತರ ಒಣಗಬಹುದು ಮತ್ತು ಬಿಳಿಯ ಪದರಗಳನ್ನುಂಟು ಮಾಡಬಹುದು. ಈ ಒಂದು ವೈಶಿಷ್ಟ್ಯವು ಈ ರೋಗವನ್ನು ಕೆಲವು ಕಾಂಡ ಕೊರಕಗಳಿಂದ ಉಂಟಾದ ಹಾನಿಯಿಂದ ಬೇರ್ಪಡಿಸಿ ಗುರುತಿಸಲು ನೆರವಾಗಬಹುದು. ಬ್ಯಾಕ್ಟೀರಿಯಾದ ರೋಗ (ಬ್ಲೈಟ್) ಭತ್ತದ ಅತಿ ಗಂಭೀರ ರೋಗಗಳಲ್ಲಿ ಒಂದಾಗಿದೆ.

Recommendations

ಜೈವಿಕ ನಿಯಂತ್ರಣ

ಇದುವರೆಗೂ, ಭತ್ತದ ದುಂಡಾಣು ಅಂಗಮಾರಿ ರೋಗವನ್ನು ತಡೆಯಲು ಯಾವುದೇ ಜೈವಿಕ ಉತ್ಪನ್ನಗಳು ವಾಣಿಜ್ಯವಾಗಿ ಲಭ್ಯವಿಲ್ಲ. ತಾಮ್ರವನ್ನಾಧರಿಸಿದ ಉತ್ಪನ್ನಗಳನ್ನು ಹಾಕುವುದರಿಂದ ರೋಗಲಕ್ಷಣಗಳು ಸುಧಾರಣೆಗೊಳ್ಳಬಹುದು ಅಥವಾ ಕಡಿಮೆಯಾಗಬಹುದು ಆದರೆ ಇದು ರೋಗವನ್ನು ನಿಯಂತ್ರಿಸುವುದಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಪರಿಗಣಿಸಿ. ಬ್ಯಾಕ್ಟೀರಿಯಾದ ರೋಗವನ್ನು ನಿವಾರಿಸಲು, ಅಧಿಕೃತ ಪ್ರತಿಜೀವಕ ಮತ್ತು ತಾಮ್ರದ ಆಕ್ಸಿಕ್ಲೋರೈಡ್ ಅಥವಾ ತಾಮ್ರದ ಸಲ್ಫೇಟ್ ಚಿಕಿತ್ಸೆಯನ್ನು ಸೂಚಿಸಲಾಗಿದೆ. ಕೆಲವು ದೇಶಗಳಲ್ಲಿ ಪ್ರತಿಜೀವಕದ ಬಳಕೆಯನ್ನು ತೀವ್ರವಾಗಿ ನಿರ್ಬಂಧಿಸಲಾಗಿರುತ್ತದೆ ಆದ್ದರಿಂದ, ನಿಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಕ್ಸಾಂತೋಮೊನಾಸ್ ಓರಿಜೇ ಪಿವಿ. ಓರಿಜೇ ಬ್ಯಾಕ್ಟೀರಿಯಾದಿಂದ ಉಂಟಾಗುತ್ತವೆ. ಇದು ಹುಲ್ಲು ಕಳೆಗಳಲ್ಲಿ ಅಥವಾ ಸೋಂಕಿತ ಸಸ್ಯಗಳ ಕೂಳೆಗಳಲ್ಲಿ ಬದುಕುತ್ತದೆ. ಈ ರೋಗಕಾರಕಗಳು ಗಾಳಿಯಿಂದ ಮತ್ತು ಮಳೆ ಎರಚಲು ಅಥವಾ ನೀರಾವರಿಯ ನೀರಿನಿಂದ ಹರಡುತ್ತವೆ. ಹೀಗಾಗಿ, ಪ್ರತಿಕೂಲ ಹವಾಮಾನದಲ್ಲಿ (ಸತತ ಮಳೆ, ಗಾಳಿ), ಹೆಚ್ಚಿನ ಆರ್ದ್ರತೆ (70% ಗಿಂತ ಹೆಚ್ಚು) ಮತ್ತು ಬೆಚ್ಚಗಿನ ತಾಪಮಾನಗಳಲ್ಲಿ (25 ಸೆ ಇಂದ 34 ಸೆ) ರೋಗದ ಸಂಭಾವ್ಯತೆ ಮತ್ತು ತೀವ್ರತೆ ಹೆಚ್ಚಾಗುತ್ತದೆ. ಅತಿಯಾದ ಸಾರಜನಕ ರಸಗೊಬ್ಬರ ಬಳಕೆ ಅಥವಾ ಅತಿ ಹತ್ತಿರದಲ್ಲಿ ನೆಡುವಿಕೆಯೂ ಸಹ ರೋಗಕ್ಕೆ ಅನುಕೂಲಕರವಾಗಿವೆ. ಇದು ವಿಶೇಷವಾಗಿ ರೋಗಕ್ಕೆ ತುತ್ತಾಗಬಹುದಾದ ತಳಿಗಳಲ್ಲಿ ಕಂಡುಬರುತ್ತದೆ. ಎಷ್ಟು ಬೇಗ ಈ ರೋಗ ಉಂಟಾಗುತ್ತದೆಯೋ ಅಷ್ಟು ಹೆಚ್ಚಿನ ಮಟ್ಟದ ಇಳುವರಿ ನಷ್ಟ ಉಂಟಾಗುತ್ತದೆ. ತೆನೆ ಬೆಳವಣಿಗೆಯ ಅವಧಿಯಲ್ಲಿ ಸಸ್ಯಗಳು ಸೋಂಕಿತವಾದರೆ ಇಳುವರಿ ಮೇಲೆ ಪರಿಣಾಮ ಇರುವುದಿಲ್ಲ ಆದರೆ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳು ಹಾಳಾಗಿರುತ್ತವೆ. ಈ ರೋಗವು ಉಷ್ಣವಲಯ ಮತ್ತು ಸಮಶಿತೋಷ್ಣವಲಯದ ಪರಿಸರಗಳಲ್ಲಿ ವಿಶೇಷವಾಗಿ ನೀರಾವರಿ ಮಾಡಿದ ಮತ್ತು ಜವುಗು ಕೆಳನಾಡುಗಳಲ್ಲಿ ಉಂಟಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕೇವಲ ಆರೋಗ್ಯಕರ ಬೀಜಗಳನ್ನು ಪ್ರಮಾಣೀಕೃತ ಮೂಲಗಳಿಂದ ಮಾತ್ರ ಬಳಸಿ.
  • ಭತ್ತದ ರೋಗ ನಿರೋಧಕ ತಳಿಗಳನ್ನು ನೆಡುವುದೇ ರೋಗಕಾರವನ್ನು ನಿಯಂತ್ರಿಸಲು ಅತಿ ದಕ್ಷವಾದ ಮತ್ತು ಯೋಗ್ಯವಾದ ಮಾರ್ಗವಾಗಿದೆ (ಮತ್ತು ಅಗ್ಗ ಕೂಡ!).
  • ಕಸಿ ಮಾಡುವಾಗ ಸಸಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ.
  • ನರ್ಸರಿ ಮತ್ತು ಗದ್ದೆಗಳಲ್ಲಿ ಅಡ್ಡ ಸೋಂಕು ತಡೆಯಲು ಉತ್ತಮ ಒಳಚರಂಡಿ ಇರುವಂತೆ ನೋಡಿಕೊಳ್ಳಿ.
  • ಬಳಕೆ ಅತಿಯಾಗದಂತೆ ತಪ್ಪಿಸಲು ಸಾರಜನಕ ರಸಗೊಬ್ಬರ ಹಾಕುವ ಪ್ರಮಾಣವನ್ನು ಸರಿಹೊಂದಿಸಿ ಮತ್ತು ಋತುವಿನುದ್ದಕ್ಕೂ ಇದನ್ನು ಹಲವು ಭಾಗಗಳಲ್ಲಿ ಹಾಕಿ.
  • ಹವಾಮಾನ ಪರಿಸ್ಥಿತಿಗಳು ಪ್ರತಿಕೂಲವಾಗಿದ್ದಾಗ ಕೊನೆಯ ಸಾರಜನಕದ ಪ್ರಮಾಣವನ್ನು ಹೆಚ್ಚುವರಿ ಪೊಟಾಶ್ ಪ್ರಮಾಣದ ಜೊತೆ ಹಾಕಿ.
  • ಸಾರಜನಕವನ್ನು ಯೂರಿಯ ರೂಪದಲ್ಲಿ ಹಾಕುವುದನ್ನು ತಪ್ಪಿಸಿ.
  • ಬದುಗಳಲ್ಲಿ ಮತ್ತು ಸುತ್ತಮುತ್ತಲಲ್ಲಿ ಕಳೆಗಳನ್ನು ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದು ಹಾಕಿ.
  • ಭತ್ತದ ಸಸಿಯ ಉಳಿಕೆ, ಕೂಳೆ, ಹುಲ್ಲು, ಕೂಳೆ ಚಿಗುರುಗಳು ಮತ್ತು ತಾವೇ ಬೆಳೆದುಕೊಂಡ ಸಸಿಗಳನ್ನು ಉಳುಮೆ ಮಾಡಿ.
  • ಏಕೆಂದರೆ ಇವು ಬ್ಯಾಕ್ಟೀರಿಯಾಗೆ ಆಶ್ರಯ ನೀಡಬಹುದು.
  • ಋತುಗಳ ಮಧ್ಯದಲ್ಲಿ ಹೊಲಗಳು ಒಣಗಲು ಬಿಡಿ.
  • ಇದರಿಂದ ಮಣ್ಣಿನಲ್ಲಿನ ಮತ್ತು ಸಸ್ಯ ಉಳಿಕೆಗಳಲ್ಲಿನ (ಪಾಳು) ರೋಗಕಾರಕ ಏಜೆಂಟುಗಳ ನಿಗ್ರಹವಾಗುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ