ಇತರೆ

ಬ್ಯಾಕ್ಟೀರಿಯಾದ ಕ್ಯಾಂಕರ್

Pseudomonas syringae pv. syringae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ನೀರಿನಲ್ಲಿ-ನೆನೆದಂತಹ ಕಲೆಗಳು.
  • ಕಲೆಗಳು ಒಣಗುತ್ತವೆ ಮತ್ತು ಉದುರುತ್ತವೆ - "ಶಾಟ್ ಹೋಲ್ಸ್".
  • ಹಣ್ಣುಗಳ ಮೇಲೆ ಗಾಢ ಕಂದು, ಚಪ್ಪಟೆ ಕಲೆಗಳು.
  • ಶಾಖೆಗಳ ತೊಗಟೆಯ ಮೇಲೂ ಪರಿಣಾಮವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಸೇಬು
ಜಲ್ದರು ಹಣ್ಣು
ಚೆರ್ರಿ
ಪೀಚ್
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಎಲೆಗಳ ಸೋಂಕುಗಳು ಚಿಕ್ಕದಾದ, ಗುಂಡಾದ, ನೀರಿನಲ್ಲಿ ನೆನೆದಂತಹ ಸುಮಾರು 1-3 ಮಿಮೀ ವ್ಯಾಸದ ಚುಕ್ಕೆಗಳಂತೆ ಕಾಣುತ್ತವೆ. ಎಲೆಗಳು ಬೆಳೆದಂತೆ, ಕಲೆಗಳು ಕಂದು ಬಣ್ಣಕ್ಕೆ ತಿರುಗಿ, ಒಣಗುತ್ತವೆ ಮತ್ತು ಪಡಸಾಗುತ್ತವೆ. ಅಂತಿಮವಾಗಿ, ಸೋಂಕಿತ ಪ್ರದೇಶಗಳು ಉದುರಿಹೋಗುತ್ತವೆ ಮತ್ತು ಎಲೆಗಳು 'ಶಾಟ್-ಹೋಲ್' (ತೂತು) ರೀತಿಯಾಗುತ್ತವೆ ಅಥವಾ ಹರಿದಂತೆ ಕಾಣುತ್ತವೆ. ಸೋಂಕಿತ ಹಣ್ಣಿನ ಮೇಲೆ ಚಪ್ಪಟೆಯಾದ, ಆಳವಲ್ಲದ, ಗಾಢ-ಕಂದು ಬಣ್ಣದ ಚುಕ್ಕೆಗಳು ಬೆಳೆಯುತ್ತವೆ. ಕೆಳಭಾಗದ ಅಂಗಾಂಶವು ಗಾಢ-ಕಂದು ಬಣ್ಣದಿಂದ ಕಪ್ಪು ಬಣ್ಣದ್ದಾಗಿರುತ್ತದೆ ಮತ್ತು ಕೆಲವೊಮ್ಮೆ ಸ್ಪಂಜಿನಂತಿರುತ್ತದೆ. ಸೋಂಕಿತ ಹೂವುಗಳು ನೀರಿನಲ್ಲಿ ನೆನೆದಂತೆ ಕಾಣುತ್ತವೆ, ಕಂದು ಬಣ್ಣಕ್ಕೆ ತಿರುಗುತ್ತವೆ, ಒಣಗುತ್ತವೆ ಮತ್ತು ರೆಂಬೆಯ ಮೇಲೆ ನೇತಾಡುತ್ತವೆ. ವಿಶಿಷ್ಟವಾದ ಕ್ಯಾಂಕರ್‌ಗಳು ಸೋಂಕಿತ ಸ್ಪರ್ ಗಳ ತಳದಲ್ಲಿ ಬೆಳೆಯುತ್ತವೆ. ಆಗಾಗ್ಗೆ ಅಂಟಾದ ಸ್ರವಿಸುವಿಕೆಯೂ ಇರುತ್ತದೆ. ಸೋಂಕಿತ ಪ್ರದೇಶಗಳು ಸ್ವಲ್ಪ ಗುಳಿ ಬಿದ್ದಂತೆ ಇದ್ದು, ಗಾಢ ಕಂದು ಬಣ್ಣದಲ್ಲಿರುತ್ತವೆ. ಕ್ಯಾಂಕರ್‌ಗಳನ್ನು ಮೊದಲು ಚಳಿಗಾಲದ ಕೊನೆಯಲ್ಲಿ ಅಥವಾ ವಸಂತಕಾಲದ ಆರಂಭದಲ್ಲಿ ಗಮನಿಸಬಹುದು. ವಸಂತ ಋತುವಿನಲ್ಲಿ, ಕ್ಯಾಂಕರ್ಗಳು ತೊಗಟೆಯ ಮೂಲಕ ಒಡೆದು ಹೊರಬರುವ ಅಂಟನ್ನು ಉತ್ಪಾದಿಸುತ್ತವೆ. ಚಳಿಗಾಲದ ಕ್ಯಾಂಕರ್ಗಳು ಅದೇ ರೀತಿ ಇರುತ್ತವೆ, ಆದರೆ ಸಾಮಾನ್ಯವಾಗಿ ಮೃದುವಾದ, ತೇವವಾದ, ಗುಳಿಬಿದ್ದ ಮತ್ತು ಹುಳಿ ವಾಸನೆಯನ್ನು ಹೊಂದಿರುತ್ತವೆ. ಸೋಂಕು ಶಾಖೆಯ ಸುತ್ತಲೂ ಹರಡಿದರೆ ಅದು ವೇಗವಾಗಿ ಸಾಯುತ್ತದೆ.

Recommendations

ಜೈವಿಕ ನಿಯಂತ್ರಣ

ತಾಮ್ರದ ಸಂಯುಕ್ತಗಳು ಅಥವಾ ಬೋರ್ಡೆಕ್ಸ್ ಮಿಶ್ರಣವನ್ನು ಹೊಂದಿರುವ ಸಾವಯವ ಬ್ಯಾಕ್ಟೀರಿಯಾನಾಶಕಗಳು ಶರತ್ಕಾಲ ಮತ್ತು ವಸಂತಕಾಲದಲ್ಲಿ ರೋಗದ ಕ್ಯಾಂಕರ್ ಹಂತದ ಪರಿಣಾಮಕಾರಿ ನಿಯಂತ್ರಣವನ್ನು ಒದಗಿಸುತ್ತದೆ. ರಿಂಗ್ ನೆಮಟೋಡ್ಗಳನ್ನು ನಿಯಂತ್ರಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬ್ಯಾಕ್ಟೀರಿಯಾದ ಕ್ಯಾಂಕರ್ ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ತಾಮ್ರದ ಬ್ಯಾಕ್ಟೀರಿಯಾನಾಶಕಗಳನ್ನು ಶಿಫಾರಸು ಮಾಡಲಾಗುತ್ತದೆ. ಕ್ಯುಪ್ರಿಕ್ ಹೈಡ್ರಾಕ್ಸೈಡ್‌ಗೆ ಫೆರಿಕ್ ಕ್ಲೋರೈಡ್ ಅಥವಾ ಮ್ಯಾಂಕೋಜೆಬ್ ಅನ್ನು ಸೇರಿಸುವುದರಿಂದ ವರ್ಷಗಳಲ್ಲಿ ಪ್ರತಿರೋಧವನ್ನು ಬೆಳೆಸಿಕೊಳ್ಳುವ ತಳಿಗಳು ಉತ್ತಮ ನಿಯಂತ್ರಣವನ್ನು ಒದಗಿಸುತ್ತದೆ.

ಅದಕ್ಕೆ ಏನು ಕಾರಣ

ಬ್ಯಾಕ್ಟೀರಿಯಾದ ಕ್ಯಾಂಕರ್ ಎನ್ನುವುದು ಪ್ಲಮ್, ಚೆರ್ರಿಗಳು ಮತ್ತು ಸಂಬಂಧಿತ ಪ್ರುನಸ್ ಜಾತಿಗಳ ಎಲೆಗಳು ಮತ್ತು ಕಾಂಡಗಳಿಗೆ ಸೋಂಕು ತಗುಲಿಸುವ ಎರಡು ನಿಕಟ ಸಂಬಂಧಿ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗವಾಗಿದೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಎಲೆಗಳ ಮೇಲ್ಮೈಯಲ್ಲಿ ವಾಸಿಸುತ್ತವೆ. ವಸಂತಕಾಲದಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಆರ್ದ್ರ ವಾತಾವರಣದಲ್ಲಿ, ಇದು ಎಲೆಯ ನೈಸರ್ಗಿಕ ರಂಧ್ರಗಳ ಮೂಲಕ ಒಳಗೆ ಪ್ರವೇಶಿಸಬಹುದು. ಹಾಗೇ ಎಳೆಯ ಎಲೆಗಳಲ್ಲಿ ಸೋಂಕುಗಳನ್ನು ಉಂಟುಮಾಡುತ್ತದೆ. ಎಲೆಯು ಬೆಳೆದಂತೆ, ಈ ಸೋಂಕುಗಳು ರೋಗಗ್ರಸ್ತ ಅಂಗಾಂಶಗಳ ಸಣ್ಣ ತೇಪೆಗಳಾಗಿ ಬಹಿರಂಗಗೊಳ್ಳುತ್ತವೆ. ಅದು ಕ್ರಮೇಣ ನೆಕ್ರೋಟಿಕ್ ಆಗುತ್ತದೆ. ಎಲೆಯ ನಿರಂತರ ಬೆಳವಣಿಗೆಯು ಈ ಸತ್ತ ಭಾಗಗಳು ಹರಿದು ಬೀಳುವುದಕ್ಕೆ ಕಾರಣವಾಗುತ್ತದೆ. ಎಲೆ ಬೀಳುವ ಸಮಯದಲ್ಲಿ ಗಾಯಗಳು ಅಥವಾ ಎಲೆಗಳ ಕಲೆಗಳ ಮೂಲಕ ಬ್ಯಾಕ್ಟೀರಿಯಾವು ಅಂಗಾಂಶಗಳಿಗೆ ಪ್ರವೇಶಿಸಿದಾಗ ಚಿಗುರುಗಳ ಮೇಲೆ ಕ್ಯಾಂಕರ್ಗಳು ಬೆಳೆಯುತ್ತವೆ. ಅಂಗಾಂಶಗಳು ನಿರೋಧಕವಾಗಿರುವಾಗ ಮತ್ತು ಶರತ್ಕಾಲ ಮತ್ತು ಚಳಿಗಾಲದಲ್ಲಿ ತಾಪಮಾನವು ಕಡಿಮೆಯಿರುವಾಗ, ಹೆಚ್ಚು ಕಡಿಮೆ ಬೇಸಿಗೆಯುದ್ದಕ್ಕೂ ಕ್ಯಾಂಕರ್‌ಗಳು ಸುಪ್ತವಾಗಿರುತ್ತವೆ. ವಸಂತಕಾಲದಲ್ಲಿ, ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಪುನರಾರಂಭಿಸುತ್ತದೆ ಮತ್ತು ಸೋಂಕುಗಳು ವೇಗವಾಗಿ ಹರಡುತ್ತವೆ, ತೊಗಟೆಯನ್ನು ಕೊಲ್ಲುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ನರ್ಸರಿಗಳಿಂದ ಮಾತ್ರ ಬೀಜಗಳು ಅಥವಾ ಚಿಗುರುಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ರೋಗದಿಂದ ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿರಿ.
  • ಆರ್ದ್ರತೆಯನ್ನು ಕಡಿಮೆ ಮಾಡಲು ಗಾಳಿಯಾಡುವ ಸ್ಥಳಗಳನ್ನು ಆರಿಸಿ.
  • ನಿಯಮಿತವಾಗಿ ರೋಗದ ಲಕ್ಷಣಗಳಿಗಾಗಿ ಹಣ್ಣಿನ ತೋಟವನ್ನು ಮೇಲ್ವಿಚಾರಣೆ ಮಾಡಿ.
  • ಸಾರಜನಕ-ಹೆಚ್ಚಿರುವ ರಸಗೊಬ್ಬರಗಳನ್ನು ಬಳಸಬೇಡಿ.
  • ಆದರೂ, ಅಗತ್ಯಕ್ಕೆ ತಕ್ಕಂತೆ ನೆಲವನ್ನು ಫಲವತ್ತಾಗಿಸಿ.
  • ಆರೋಗ್ಯಕರ ಮರದಿಂದ ಎಲ್ಲಾ ಹುಣ್ಣಾದ ಪ್ರದೇಶಗಳನ್ನು ಕತ್ತರಿಸಿ ತೆಗೆಯಿರಿ.
  • ಸುಗ್ಗಿಯಾದಂತೆಯೇ ಬೇಗನೆ ಸಮರುವಿಕೆ ಮಾಡಿ ಇದರಿಂದ ಗಾಯಗಳು ಉತ್ತಮವಾಗಿ ವಾಸಿಯಾಗುತ್ತವೆ.
  • ಎರಡೂ ಸಂದರ್ಭಗಳಲ್ಲಿ, ಸಮರಿದ ಭಾಗವನ್ನು ಸರಿಯಾದ ಪೇಂಟ್ ನಿಂದ ಸೀಲ್ ಮಾಡಿ.
  • ಪೀಡಿತ ಮರದ ವಸ್ತುಗಳನ್ನು ಸುಡುವ ಮೂಲಕ ಅಥವಾ ನೆಲದಡಿಯಲ್ಲಿ ಹೂಳುವ ಮೂಲಕ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ