ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಸೌತೆಕಾಯಿ ಮೊಸಾಯಿಕ್ ವೈರಸ್

CMV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಹಣ್ಣುಗಳ ಮೇಲೆ ಮೊಸಾಯಿಕ್ ಮಾದರಿಗಳು ಕಾಣಿಸಿಕೊಳ್ಳುತ್ತವೆ.
  • ಹಣ್ಣುಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಮತ್ತು ಕ್ಲೋರೋಟಿಕ್ ತೇಪೆಗಳು ಕಂಡುಬರುತ್ತವೆ.
  • ಎಲೆಗಳು ಮತ್ತು ತೊಟ್ಟುಗಳು ವಿರೂಪಗೊಂಡು ಸುಕ್ಕುಗಟ್ಟಿದಂತಾಗುತ್ತವೆ.
  • ಕುಂಠಿತಗೊಂಡ ಬೆಳವಣಿಗೆ ಮತ್ತು ಹೂವುಗಳ ಮೇಲೆ ಬಿಳಿ ಗೆರೆಗಳು.

ಇವುಗಳಲ್ಲಿ ಸಹ ಕಾಣಬಹುದು


ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಸೋಂಕಿತ ಸಸ್ಯಗಳ ಪ್ರಭೇದ ಮತ್ತು ಪರಿಸರ ಸ್ಥಿತಿಗಳನ್ನು ಅವಲಂಬಿಸಿ ರೋಗಲಕ್ಷಣಗಳು ಬದಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ವೈರಸ್ ಅಸ್ತಿತ್ವದಲ್ಲಿದ್ದರೂ, ರೋಗಲಕ್ಷಣಗಳು ಮರೆಯಲ್ಲಿರುತ್ತವೆ ಅಥವಾ ಅಡಗಿರುತ್ತವೆ. ರೋಗಕ್ಕೆ ಸೂಕ್ಷ್ಮವಾದ ಪ್ರಭೇದಗಳಲ್ಲಿ, ಎಲೆಗಳು ಮತ್ತು ಹಣ್ಣುಗಳ ಮೇಲೆ ಹಳದಿ ಬಣ್ಣದ ಅಥವಾ ತಿಳಿ ಹಸಿರು ಮತ್ತು ಹಳದಿ ಮಿಶ್ರಿತ ತೇಪೆಗಳು ಕಾಣಬಹುದು. ಕೆಲವು ಪ್ರಭೇದಗಳಲ್ಲಿ, ಸ್ಪಷ್ಟವಾದ ಉಂಗುರ ಕಲೆ ಮಾದರಿಯು ಅಥವಾ ನೆಕ್ರೋಟಿಕ್ ಗೆರೆ ಗೋಚರಿಸಬಹುದು. ಎಳೆಯ ಎಲೆಗಳು ಸುಕ್ಕುಗಟ್ಟಿ ಕಿರಿದಾದಂತೆ ಕಾಣುತ್ತವೆ ಮತ್ತು ಎಲೆಗೊಂಚಲುಗಳು ಮೃದುವಾದ ತಿಳಿ ಹಸಿರು ಬಣ್ಣದಲ್ಲಿರುತ್ತವೆ. ಇಡೀ ಸಸ್ಯದ ಬೆಳವಣಿಗೆ ತೀವ್ರವಾಗಿ ಕುಂಠಿತಗೊಂಡು, ದುರ್ಬಲವಾಗುತ್ತದೆ. ಇದು ಸಸ್ಯಕ್ಕೆ ಪೊದೆಯ ಆಕಾರ ನೀಡುತ್ತದೆ ಮತ್ತು ಸಾಮಾನ್ಯವಾಗಿ ಇದು ಅನುತ್ಪಾದಕವಾಗುತ್ತದೆ. ಅಕಸ್ಮಾತ್ ಹಣ್ಣುಗಳು ಬೆಳೆದರೂ, ಅವುಗಳ ಮೇಲೆ ಹಲವಾರು ಕಂದು ಬಣ್ಣದ ವೃತ್ತಾಕಾರದ ಗಾಯಗಳಿರುತ್ತವೆ. ಕೆಲವೊಮ್ಮೆ ಅವುಗಳ ಸುತ್ತ ಹಳದಿ ಬಣ್ಣದ ವರ್ತುಲವಿರುತ್ತದೆ.

Recommendations

ಜೈವಿಕ ನಿಯಂತ್ರಣ

ಎಲೆಗಳ ಮೇಲೆ ಖನಿಜ ತೈಲದ ದ್ರವೌಷಧಗಳನ್ನು ಸಿಂಪಡಿಸುವುದರಿಂದ ಗಿಡಹೇನುಗಳು ಆಹಾರವನ್ನು ತಿನ್ನದಂತೆ ಅದು ಹಿಮ್ಮೆಟ್ಟಿಸುತ್ತದೆ ಮತ್ತು ಈ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಮೊದಲು ಪರಿಗಣಿಸಿ. ಸಿ ಎಂ ವಿ ವಿರುದ್ಧ ಯಾವುದೇ ಪರಿಣಾಮಕಾರಿ ರಾಸಾಯನಿಕಗಳು ಇಲ್ಲ. ಅಥವಾ ಸಸ್ಯಗಳು ಸೋಂಕಿಗೆ ಒಳಗಾಗದಂತೆ ರಕ್ಷಿಸುವ ರಾಸಾಯನಿಕಗಳು ಇಲ್ಲ. ಸೈಪರ್ಮೆಥರಿನ್ ಅಥವಾ ಕ್ಲೋರಿಪಿರಿಫೊಸ್ ಗಳನ್ನು ಹೊಂದಿರುವ ಕೀಟನಾಶಕಗಳನ್ನು ಗಿಡಹೇನುಗಳ ವಿರುದ್ಧ ಎಲೆಗಳ ಮೇಲೆ ಸಿಂಪಡಿಸಬಹುದು.

ಅದಕ್ಕೆ ಏನು ಕಾರಣ

ಕುಕಂಬರ್ ಮೊಸಾಯಿಕ್ ವೈರಸ್ ನಿಂದ (ಸಿ ಎಂ ವಿ) ಈ ರೋಗಲಕ್ಷಣಗಳು ಉಂಟಾಗುತ್ತವೆ. ಇವು ವಿವಿಧ ಪ್ರಭೇದಗಳ (ಬೆಳೆಗಳು ಹಾಗೆಯೇ ಅನೇಕ ಹೂವುಗಳು, ವಿಶೇಷವಾಗಿ ಲಿಲ್ಲೀಸ್, ಡೆಲ್ಫಿನಿಯಮ್, ಪ್ರಿಮುಲಾ ಮತ್ತು ಡಾಫ್ನೆಸ್) ಮೇಲೆ ಪ್ರಭಾವ ಬೀರುತ್ತವೆ. 60-80 ವಿವಿಧ ಜಾತಿಯ ಗಿಡಹೇನುಗಳ ಮೂಲಕ ಈ ವೈರಸ್ ಹರಡುತ್ತದೆ. ಸೋಂಕಿತ ಬೀಜಗಳು ಮತ್ತು ಕಸಿಗಳು, ಕೆಲಸಗಾರರ ಕೈಗಳು ಅಥವಾ ಉಪಕರಣಗಳ ಮೂಲಕವೂ ಯಾಂತ್ರಿಕವಾಗಿ ಈ ವೈರಸ್ ಹರಡುತ್ತದೆ. CMVಯು ಬಹುವಾರ್ಷಿಕ ಹೂವಿನ ಕಳೆಗಿಡಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಎಷ್ಟೋ ಬಾರಿ ಸ್ವತಃ ಬೆಳೆ, ಬೇರುಗಳು, ಬೀಜಗಳು ಅಥವಾ ಹೂವುಗಳಲ್ಲೂ ಇದು ಇರುತ್ತವೆ. ಪ್ರಾಥಮಿಕ ಸೋಂಕುಗಳಲ್ಲಿ, ಹೊಸದಾಗಿ ಹೊರಹೊಮ್ಮಿದ ಮೊಳಕೆಯ ಒಳಗೆ ವೈರಸ್ ವ್ಯವಸ್ಥಿತವಾಗಿ ಬೆಳೆಯುತ್ತದೆ ಮತ್ತು ಮೇಲಿನ ಎಲೆಗಳನ್ನು ತಲುಪುತ್ತದೆ. ಈ ಗಿಡಗಳನ್ನು ತಿನ್ನುವ ಗಿಡಹೇನುಗಳು ವೈರಸ್ ಗಳನ್ನು ಇತರ ಅತಿಥೇಯ ಸಸ್ಯಗಳಿಗೆ ತಲುಪಿಸುತ್ತವೆ (ದ್ವಿತೀಯ ಸೋಂಕು). ಸಸ್ಯದ ಬೇರೆ ಬೇರೆ ಅಂಗಗಳ ನಡುವೆ ಹರಡಲು, ದೂರದ ಪ್ರಯಾಣಕ್ಕಾಗಿ ಆಶ್ರಯದಾತ ಸಸ್ಯಗಳ ನಾಳೀಯ ಅಂಗಾಂಶವನ್ನು ವೈರಸ್ ಬಳಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲದಿಂದ ವೈರಸ್-ಮುಕ್ತ ಬೀಜಗಳು ಮತ್ತು ಸಸಿಗಳನ್ನು ಬಳಸಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳು ಲಭ್ಯವಿದ್ದರೆ ಅವುಗಳನ್ನು ನೆಡಿ.
  • ಜಮೀನಿನ ಮೇಲ್ವಿಚಾರಣೆ ಮಾಡಿ ಮತ್ತು ರೋಗದ ಲಕ್ಷಣಗಳನ್ನು ಹೊಂದಿರುವ ಸಸ್ಯಗಳನ್ನು ತೆಗೆದುಹಾಕಿ.
  • ಮೊಸಾಯಿಕ್ ಮಾದರಿಯನ್ನು ತೋರಿಸುವ ಯಾವುದೇ ಕಳೆಗಳಿದ್ದರೂ ಅವುಗಳನ್ನು ತೆಗೆದುಹಾಕಿ.
  • ನಿಮ್ಮ ಬೆಳೆಗಳ ಬಳಿ ಬೆಳೆಯುತ್ತಿರುವ ಕಳೆಗಳನ್ನು ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ.
  • ಸಸ್ಯಕ ಪ್ರಸರಣಕ್ಕಾಗಿ ಬಳಸುವ ಉಪಕರಣಗಳು ಅಥವಾ ಸಲಕರಣೆಗಳು ಸೋಂಕುರಹಿತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಬೆಳೆಗಳ ಆರಂಭಿಕ ಬೆಳವಣಿಗೆಯ ಹಂತದಲ್ಲಿ ವಲಸಿಗ ಗಿಡಹೇನುಗಳನ್ನು ಹೊರಹಾಕಲು ತೇಲು ಹೊದಿಕೆಗಳನ್ನು ಬಳಸಿ.
  • ಗಿಡಗಳ ಈ ಹೆಚ್ಚು ದುರ್ಬಲ ಅವಧಿಯ ನಂತರ ಹೊದಿಕೆಗಳನ್ನು ತೆಗೆದುಹಾಕಿ ಪರಾಗಸ್ಪರ್ಶಕ್ಕೆ ಅನುವು ಮಾಡಿಕೊಡಿ.
  • ಗಿಡಹೇನುಗಳನ್ನು ಆಕರ್ಷಿಸುವ ಸಸ್ಯ ತಡೆಗೋಡೆಗಳನ್ನು ಬೆಳೆಸಿ.
  • ಗಿಡಹೇನುಗಳನ್ನು ಒಟ್ಟಾಗಿ ಹಿಡಿಯಲು ಜಿಗುಟು ಬಲೆಗಳನ್ನು ಬಳಸಿ.
  • ಅಲ್ಯುಮಿನಿಯಮ್ ಫಾಯಿಲ್ ನಂತಹ ಗಿಡಹೇನು ನಿರೋಧಕ ವಸ್ತುಗಳಿಂದ ನೆಲವನ್ನು ಮುಚ್ಚಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ