ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನಕಾಯಿ ಎಲೆ ಸುರುಳಿ ವೈರಸ್

CLCV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಎಲೆ ಅಂಚುಗಳು ಮೇಲ್ಮುಖವಾಗಿ ಸುತ್ತಿಕೊಳ್ಳುತ್ತವೆ.
  • ಸಿರೆಗಳು ಹಳದಿಯಾಗುತ್ತವೆ.
  • ಎಲೆಯ ಗಾತ್ರ ಕಡಿಮೆಯಾಗುತ್ತದೆ.
  • ಬೆಳೆದ ಎಲೆಗಳು ಗಡಸಾಗಿ ಸುಲಭವಾಗಿ ಉದುರುವಂತೆ ಆಗುತ್ತವೆ.
  • ಸಸ್ಯಗಳಲ್ಲಿ ಕುಂಠಿತತೆ.
  • ಸಣ್ಣ ಗಾತ್ರದ ಹಣ್ಣಿನ ಗೊಂಚಲುಗಳು.

ಇವುಗಳಲ್ಲಿ ಸಹ ಕಾಣಬಹುದು


ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಮೆಣಸಿನಕಾಯಿ ಎಲೆ ಸುರುಳಿ ವೈರಸ್‌ನ ಲಕ್ಷಣಗಳೆಂದರೆ ಎಲೆ ಅಂಚುಗಳು ಮೇಲ್ಮುಖವಾಗಿ ಸುತ್ತಿಕೊಳ್ಳುವುದು, ಸಿರೆಗಳು ಹಳದಿಯಾಗುವುದು ಮತ್ತು ಎಲೆಯ ಗಾತ್ರ ಕಡಿಮೆಯಾಗುವುದು. ಹೆಚ್ಚುವರಿಯಾಗಿ, ಇಂಟರ್ನೋಡ್ಗಳು ಮತ್ತು ತೊಟ್ಟುಗಳು ಚಿಕ್ಕದಾಗುವುದರಿಂದ ಎಲೆಗಳ ಸಿರೆಗಳು ಊದಿಕೊಳ್ಳುತ್ತವೆ. ಬೆಳೆದ ಎಲೆಗಳು ಗಡಸಾಗುತ್ತವೆ ಮತ್ತು ಸುಲಭವಾಗಿ ಉದುರುವಂತಾಗುತ್ತವೆ. ಆರಂಭಿಕ ಋತುವಿನಲ್ಲೇ ಸಸ್ಯಗಳು ಸೋಂಕಿಗೆ ಒಳಗಾಗಿದ್ದರೆ, ಅವುಗಳ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ, ಇದರ ಪರಿಣಾಮವಾಗಿ ಇಳುವರಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ರೋಗಕ್ಕೆ ಸೂಕ್ಷ್ಮವಿರುವ ತಳಿಗಳಲ್ಲಿ ಹಣ್ಣಿನ ರಚನೆಯು ಸಣ್ಣದಾಗಿ ಆಗುತ್ತದೆ ಮತ್ತು ವಿರೂಪಗೊಂಡಿರುತ್ತದೆ. ಥ್ರಿಪ್ಸ್ ನುಸಿ ಮತ್ತು ಮಿಟೆಗಳು ಸಸ್ಯ ತಿಂದು ಮಾಡುವ ಹಾನಿಯಂತೆಯೇ ಈ ವೈರಸ್ ಕೂಡ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ವೈರಸ್ ಹರಡುವುದನ್ನು ಕಡಿಮೆ ಮಾಡಲು ಬಿಳಿನೊಣಗಳ ಸಂಖ್ಯೆಯನ್ನು ನಿಯಂತ್ರಿಸಿ. ಬೇವಿನ ಎಣ್ಣೆ ಅಥವಾ ತೋಟಗಾರಿಕಾ ತೈಲಗಳನ್ನು (ಪೆಟ್ರೋಲಿಯಂ ಆಧಾರಿತ ತೈಲಗಳು) ಬಳಸಬಹುದು. ತೈಲಗಳು ಸಸ್ಯಗಳನ್ನು ಸಂಪೂರ್ಣವಾಗಿ ಆವರಿಸಿವೆ ಎಂದು ಖಚಿತಪಡಿಸಿಕೊಳ್ಳಿ, ಅದರಲ್ಲೂ ವಿಶೇಷವಾಗಿ ಬಿಳಿನೊಣಗಳು ಹೆಚ್ಚಾಗಿ ಕಂಡುಬರುವ ಎಲೆಗಳ ಕೆಳಭಾಗ. ಕೆಲವು ನೈಸರ್ಗಿಕ ಶತ್ರುಗಳಾದ ಲೇಸ್‌ವಿಂಗ್ಸ್, ದೊಡ್ಡ ಕಣ್ಣಿನ ತಿಗಣೆಗಳು ಮತ್ತು ಮೈನ್ಯೂಟ್ ಪೈರೇಟ್ ಬಗ್ ಗಳು ಬಿಳಿನೊಣದ ಸಂಖ್ಯೆಯನ್ನು ನಿಯಂತ್ರಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೆಣಸಿನಕಾಯಿ ಎಲೆ ಸುರುಳಿ ವೈರಸ್ ಅನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಯಾವುದೇ ಪರಿಣಾಮಕಾರಿ ವಿಧಾನಗಳಿಲ್ಲ. ಇಮಿಡಾಕ್ಲೋಪ್ರಿಡ್ ಅಥವಾ ಡೈನೋಟೆಫುರಾನ್ ನಂತಹ ರಾಸಾಯನಿಕ ನಿಯಂತ್ರಣ ವಿಧಾನಗಳನ್ನು ಅನುಸರಿಸಿ. ರೋಗವಾಹಕವನ್ನು ನಿಯಂತ್ರಿಸಲು ನಾಟಿ ಮಾಡುವ ಮೊದಲು ಸಸಿಗಳ ಮೇಲೆ ಇಮಿಡಾಕ್ಲೋಪ್ರಿಡ್ ಅಥವಾ ಲ್ಯಾಂಬ್ಡಾ-ಸಿಹಲೋಥ್ರಿನ್ ಅನ್ನು ಸಿಂಪಡಿಸಿ. ಕೀಟನಾಶಕಗಳನ್ನು ಅತಿಯಾಗಿ ಬಳಸುವುದರಿಂದ ಪ್ರಯೋಜನಕಾರಿ ಕೀಟಗಳಿಗೆ ಹಾನಿಯಾಗುತ್ತದೆ ಮತ್ತು ಅನೇಕ ಬಿಳಿನೊಣದ ಪ್ರಭೇದಗಳು ನಿರೋಧಕತೆಯನ್ನು ಬೆಳೆಸಿಕೊಳ್ಳುತ್ತವೆ. ಇದನ್ನು ತಡೆಗಟ್ಟಲು, ಕೀಟನಾಶಕಗಳ ನಡುವೆ ಸರಿಯಾದ ಸರದಿಯನ್ನು ಖಚಿತಪಡಿಸಿಕೊಳ್ಳಿ ಮತ್ತು ಆಯ್ದವುಗಳನ್ನು ಮಾತ್ರ ಬಳಸಿ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಬೆಗೊಮೊವೈರಸ್ನಿಂದ ಉಂಟಾಗುತ್ತವೆ, ಇದು ಪ್ರಾಥಮಿಕವಾಗಿ ಬಿಳಿನೊಣಗಳ ಮೂಲಕ ನಿರಂತರ ರೀತಿಯಲ್ಲಿ ಹರಡುತ್ತದೆ. ಇವುಗಳನ್ನು 1.5 ಮಿ.ಮೀ ಉದ್ದ, ಮಸುಕಾದ ಬಿಳಿ ರೆಕ್ಕೆಗಳು ಮಸುಕಾದ ಹಳದಿ ದೇಹವನ್ನು ಹೊಂದಿವೆ ಮತ್ತು ಆಗಾಗ್ಗೆ ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತವೆ ಎಂದು ನಿರೂಪಿಸಬಹುದು. ರೋಗದ ಹರಡುವಿಕೆಯು ಗಾಳಿಯ ಸ್ಥಿತಿಯನ್ನು ಅವಲಂಬಿಸಿರುತ್ತದೆ, ಇದು ಬಿಳಿನೊಣಗಳು ಎಷ್ಟು ದೂರ ಪ್ರಯಾಣಿಸಬಹುದು ಎಂಬುದನ್ನು ಸೂಚಿಸುತ್ತದೆ. ಋತುವಿನ ಮಧ್ಯದಿಂದ ಕೊನೆಯವರೆಗೆ ಬಿಳಿನೊಣಗಳು ಹೆಚ್ಚು ಸಮಸ್ಯಾತ್ಮಕವಾಗಿರುತ್ತವೆ. ರೋಗವು ಬೀಜದಿಂದ ಹರಡುವುದಿಲ್ಲವಾದ್ದರಿಂದ, ವೈರಸ್ ಭೂಪ್ರದೇಶದಲ್ಲಿ ಪರ್ಯಾಯ ಆತಿಥೇಯ ಗಿಡಗಳು (ತಂಬಾಕು ಮತ್ತು ಟೊಮೆಟೊ ಮುಂತಾದವು) ಮತ್ತು ಕಳೆಗಳ ಮೂಲಕ ಮುಂದುವರಿಯುತ್ತದೆ. ರೋಗದ ಬೆಳವಣಿಗೆಗೆ ಅನುಕೂಲಕರವಾದ ಕೆಲವು ಹೆಚ್ಚುವರಿ ಅಂಶಗಳೆಂದರೆ ಆಗತಾನೇ ಸುರಿದ ಮಳೆ, ಸೋಂಕಿತ ಕಸಿ ಮತ್ತು ಕಳೆಗಳು. ನರ್ಸರಿಗಳಲ್ಲಿ, ಸಸಿ ಮತ್ತು ಸಸ್ಯಕ ಹಂತಗಳಲ್ಲಿ ಮೆಣಸಿನಕಾಯಿ ಸಸ್ಯಗಳು ಸೋಂಕಿಗೆ ಗುರಿಯಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ಬಳಸಿ ಮತ್ತು ವೈರಸ್ ಮುಕ್ತ ಸಸ್ಯಗಳಿಂದ ಮಾತ್ರ ಬೀಜಗಳನ್ನು ಹೊರತೆಗೆಯಿರಿ.
  • ನಿಮ್ಮ ಹೊಲಗಳ ಸುತ್ತಲೂ ಮೆಕ್ಕೆಜೋಳ, ಹುಲ್ಲು ಜೋಳ ಅಥವಾ ಸಜ್ಜೆ ಮುಂತಾದ ತಡೆ ಬೆಳೆಯ ಕನಿಷ್ಠ ಎರಡು ಸಾಲುಗಳನ್ನು ಬೆಳೆಸಿಕೊಳ್ಳಿ.
  • ಬಿಳಿನೊಣಗಳ ಸಂಖ್ಯೆಯನ್ನು ನಿಯಂತ್ರಿಸಿ ಮತ್ತು ನರ್ಸರಿ ಸಸ್ಯಗಳ ಮೇಲೆ ನೈಲಾನ್ ಬಲೆಗಳನ್ನು ಹಾಕುವ ಮೂಲಕ ಅವುಗಳಿಂದ ವಿಶೇಷವಾಗಿ ಸಸಿಗಳನ್ನು ರಕ್ಷಿಸಿ.
  • ಸುರುಳಿಯಾಕಾರದ ಎಲೆಗಳು ಮತ್ತು ಕುಂಠಿತ ಬೆಳವಣಿಗೆಯ ಲಕ್ಷಣಗಳನ್ನು ಹುಡುಕುವ ಮೂಲಕ ಆರಂಭಿಕ ಸೋಂಕುಗಳನ್ನು ಕಂಡುಹಿಡಿಯಲು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಬಿಳಿನೊಣಗಳನ್ನು ಆಕರ್ಷಿಸುವ ಹಲವು ಜಿಗುಟಾದ ಹಳದಿ ಬಲೆಗಳು ಅಥವಾ ಹಾಳೆಗಳನ್ನು ನಿಮ್ಮ ಗದ್ದೆಯಲ್ಲಿ ಇರಿಸಿ.
  • ಸಸಿಗಳನ್ನು ಬಲೆಯ ಅಡಿಯಲ್ಲಿ ಬೆಳೆಸುವ ಮೂಲಕ ಕೀಟವಾಹಕವನ್ನು ನಿಯಂತ್ರಿಸಿ, ಇದು ಬಿಳಿನೊಣಗಳು ಸಸಿಯ ಮೇಲೆ ದಾಳಿ ಮಾಡುವುದನ್ನು ತಡೆಯಬಹುದು.
  • ಗದ್ದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕಳೆ ರಹಿತವಾಗಿರಿಸಿಕೊಳ್ಳಿ.
  • ಮೊದಲೇ ಸೋಂಕಿತ ಸಸ್ಯಗಳನ್ನು ಸಂಗ್ರಹಿಸಿ ಮತ್ತು ಸುಡುವ ಮೂಲಕ ನಾಶಮಾಡಿ.
  • ಕೊಯ್ಲು ಮಾಡಿದ ನಂತರ ಆಳವಾಗಿ ಉಳುಮೆ ಮಾಡಿ ಅಥವಾ ಎಲ್ಲಾ ಸಸ್ಯಾವಶೇಷಗಳನ್ನು ಸುಟ್ಟುಹಾಕಿ.
  • ಮಿಶ್ರ ಬೆಳೆ ಬೆಳೆಯುವ ಮೂಲಕ ಪ್ರಯೋಜನಕಾರಿ ಕೀಟಗಳನ್ನು ಪ್ರೋತ್ಸಾಹಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ