ಹತ್ತಿ

ಕಾಟನಿ ಬಂಚಿ ಟಾಪ್

Cotton Bunchy Top Virus

ವೈರಸ್

5 mins to read

ಸಂಕ್ಷಿಪ್ತವಾಗಿ

  • ಸಣ್ಣ ಎಲೆಗಳು, ಸಣ್ಣ ಆಂತರಿಕ ಗೆಣ್ಣು ಮತ್ತು ಸಣ್ಣ ಬೀಜಗಳು.
  • ತೊಗಲು ರೀತಿಯ ಮತ್ತು ಗಡುಸಾದ ಎಲೆಯ ಅಂಗಾಂಶಗಳು.
  • ಬೇರುಗಳ ಮೇಲೆ ಕೂದಲು ಬೆಳೆದು ಅವು ಗಾಢ ಕಂದು ಬಣ್ಣಕ್ಕೆ ತಿರುಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಎಲೆಗಳಲ್ಲಿ ಸಾಮಾನ್ಯವಾಗಿ ಸಣ್ಣ ತೊಟ್ಟುಗಳಿರುತ್ತವೆ ಮತ್ತು ಅಂಚುಗಳ ಉದ್ದಕ್ಕೂ ತಿಳಿ, ಹಳದಿ-ಹಸಿರು ಕೋನೀಯ ಮಾದರಿಗಳು ಬೆಳೆಯುತ್ತವೆ. ಆರೋಗ್ಯಕರ ಸಸ್ಯಗಳಲ್ಲಿರುವ ಎಲೆಗಳಿಗೆ ಹೋಲಿಸಿದರೆ ಅವು ತೊಗಲು ರೀತಿ ಮತ್ತು ಗಡುಸಾದಂತೆ ಕಾಣಿಸುತ್ತವೆ. ನಂತರದ ಬೆಳವಣಿಗೆಯಿಂದ ಸಣ್ಣ ಎಲೆಗಳು, ಸಣ್ಣ ಆಂತರಿಕ ಗೆಣ್ಣು ಮತ್ತು ಸಣ್ಣ ಬೀಜಗಳು ಕಂಡುಬರುತ್ತವೆ. ಸೋಂಕು ಆರಂಭಿಕ ಹಂತದಲ್ಲಿ (ಉದಾಹರಣೆಗೆ ಸಸಿ ಹಂತ) ಉಂಟಾದರೆ, ಇಡೀ ಸಸ್ಯದ ಬೆಳವಣಿಗೆ ಕುಂಠಿತವಾಗಿರುತ್ತದೆ ಮತ್ತು ಸಾಂದ್ರವಾಗಿರುತ್ತದೆ. ಬೇರುಗಳ ಮೇಲೆ ಕೂದಲು ಬೆಳೆದು ಅವು ಗಾಢ ಕಂದು ಬಣ್ಣಕ್ಕೆ ತಿರುಗುತ್ತವೆ (ಸಾಮಾನ್ಯವಾಗಿ ತಿಳಿ ಹಳದಿ-ಕಂದು ಬಣ್ಣ) ಮತ್ತು ದ್ವಿತೀಯ ಬೇರಿನ ಶಾಖೆಗಳಲ್ಲಿ ಸಣ್ಣ ಗಂಟುಗಳು ಬರುತ್ತವೆ. ಸೋಂಕಿತ ಸಸ್ಯಗಳಲ್ಲಿ ಬೀಜಗಳ ಸಂಖ್ಯೆ ಕಡಿಮೆಯಿರುತ್ತದೆ ಮತ್ತು ಅಂತಿಮವಾಗಿ ಇಳುವರಿಯ ಕಡಿಮೆಯಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಗಿಡಹೇನುಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಪರಭಕ್ಷಕ ಲೇಡಿ ಬಗ್ ಗಳು, ಲೇಸ್ವಿಂಗ್ ಗಳು, ಸೋಲ್ಜರ್ ಜೀರುಂಡೆಗಳು ಮತ್ತು ಪ್ಯಾರಾಸಿಟಾಯ್ಡ್ ಕಣಜಗಳಂತಹ ಪ್ರಯೋಜನಕಾರಿ ಕೀಟಗಳು ಪ್ರಮುಖವಾದ ಏಜೆಂಟ್ಗಳಾಗಿವೆ. ಸೊಂಕು ಕಡಿಮೆ ಇದ್ದ ಸಂದರ್ಭದಲ್ಲಿ, ಸರಳ ಮೃದುವಾದ ಕೀಟನಾಶಕ ಸೋಪ್ ದ್ರಾವಣ ಅಥವಾ ಸಸ್ಯ ತೈಲಗಳ ಆಧಾರಿತ ದ್ರಾವಣಗಳನ್ನು ಬಳಸಿ. ಗಿಡಹೇನುಗಳು ಒದ್ದೆಯಾಗಿದ್ದಾಗ ಶಿಲೀಂಧ್ರಗಳ ರೋಗಗಳಿಗೆ ಕೂಡಾ ಅವು ಸೂಕ್ಷ್ಮವಾಗಿರುತ್ತವೆ. ಸೋಂಕಿತ ಸಸ್ಯಗಳ ಮೇಲೆ ನೀರನ್ನು ಸಿಂಪಡಿಸಿದರೂ ಸಹ ಅವುಗಳನ್ನು ತೆಗೆದುಹಾಕಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸೈಪರ್ಮೆಥರಿನ್ ಅಥವಾ ಕ್ಲೋರಿಪಿರಿಫೊಸ್ಗಳನ್ನು ಹೊಂದಿರುವ ಕೀಟನಾಶಕಗಳನ್ನು ಗಿಡಹೇನುಗಳ ವಿರುದ್ಧ ಎಲೆಗಳ ಮೇಲೆ ಸಿಂಪಡಿಸಬಹುದು. ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸಲು ಸಿಂಪಡಿಕೆಗಳ ನಡುವೆ ಉತ್ಪನ್ನಗಳನ್ನು ಬದಲಾಯಿಸಲು ನೆನಪಿಡಿ.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಕಾಟನಿ ಬಂಚಿ ಟಾಪ್ ವೈರಸ್ನಿಂದ ಉಂಟಾಗುತ್ತವೆ, ಇದು ಜೀವಂತ ಸಸ್ಯ ಅಂಗಾಂಶಗಳಲ್ಲಿ ಮಾತ್ರ ಬದುಕಬಲ್ಲದು. ಇದು ಹತ್ತಿ ಅಫಿಡ್ ಆಫಿಸ್ ಗೊಸ್ಸಿಪಿ ಯಿಂದ ನಿರಂತರವಾಗಿ ಹರಡುತ್ತದೆ. ಸೋಂಕಾದ ದಿನದಿಂದ ರೋಗಲಕ್ಷಣಗಳು ಸ್ಪಷ್ಟವಾಗಿ ಕಾಣುವವರೆಗೆ 3-8 ವಾರಗಳ ಸಮಯ-ವಿಳಂಬವು ಸಾಮಾನ್ಯವಾಗಿ ಇರುತ್ತದೆ. ಗಿಡಹೇನಿನ ಸಂಖ್ಯೆ ಅಧಿಕವಿರುವ ಹೊಲಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಹಿಂದಿನ ಋತುವಿನಿಂದ ಉಳಿದುಕೊಂಡಿರುವ ತಾನಾಗೇ ಬೆಳೆದ, ಪುನಃ ಬೆಳೆಯುವ ಸಸ್ಯಗಳು ಅಥವಾ ಕೂಳೆ ಕಬ್ಬುಗಳು ಸಮಸ್ಯೆಯಾಗಬಹುದು, ಏಕೆಂದರೆ ಅವುಗಳು ಗಿಡಹೇನುಗಳಿಗೆ ಆದ್ಯತೆಯ ರೋಗ ಬರುವ ಸಸ್ಯ ಮತ್ತು ರೋಗಕ್ಕೆ ನಿಧಿಯಂತೆ ಕೆಲಸ ಮಾಡುತ್ತವೆ ಮತ್ತು ಹೊಸ ಋತುವಿನಲ್ಲಿ ಸೋಂಕಿಗೆ ಮೂಲವನ್ನು ಸೃಷ್ಟಿಸುತ್ತವೆ. ಹೀಗಾಗಿ ಕೂಳೆ ಕಬ್ಬಿನ ಸುತ್ತ ಸೋಂಕಿತ ಸಸ್ಯಗಳ ತೇಪೆಗಳು ಕಂಡುಬರುವುದು ಸಾಮಾನ್ಯ. ಗಿಡಹೇನಿನ ಸಂತಾನೋತ್ಪತ್ತಿ, ಆಹಾರ ಮತ್ತು ಹರಡುವಿಕೆಗೆ ಸೂಕ್ತವಾಗಿರುವ ಹವಾಮಾನದ ಪರಿಸ್ಥಿತಿಗಳು ರೋಗವು ಹರಡುವುದಕ್ಕೆ ಅನುಕೂಲಕರ.


ಮುಂಜಾಗ್ರತಾ ಕ್ರಮಗಳು

  • ಬೆಳೆಯ ಉಳಿಕೆಗಳನ್ನು ಸಂಪೂರ್ಣವಾಗಿ ನಾಶಮಾಡಿ ಮತ್ತು ಕೂಳೆ ಕಬ್ಬನ್ನು ಹೊಲದಿಂದ ತೆಗೆದುಹಾಕಿ.
  • ಹೊಲದ ಸುತ್ತ ಮುತ್ತ ತಾನಾಗೇ ಬೆಳೆಯುವ ಹತ್ತಿ ಸಸ್ಯಗಳನ್ನು ನಿಯಂತ್ರಿಸಿ.
  • ಗಿಡಹೇನುಗಳಿಗೆ ವಿರುದ್ಧವಾದ ಉತ್ಪನ್ನಗಳನ್ನು ವಿಪರೀತವಾಗಿ ಬಳಸಬೇಡಿ, ಏಕೆಂದರೆ ಇದು ಪ್ರತಿರೋಧದ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
  • ಎಳೆ ಹತ್ತಿ ಸಸ್ಯಗಳಲ್ಲಿರಬಹುದಾದ ಗಿಡಹೇನುಗಳನ್ನು ಗುರುತಿಸಲು ಅವುಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಹೊಲದೊಳಗೆ ಗಿಡಹೇನುಗಳು ಎಷ್ಟರ ಮಟ್ಟಿಗೆ ಹರಡಬಹುದೆಂಬುದನ್ನು ತಿಳಿದುಕೊಳ್ಳಿ.
  • ಜಿಗುಟಾದ ಪಟ್ಟೆಗಳೊಂದಿಗೆ ಗಿಡಹೇನುಗಳನ್ನು ರಕ್ಷಿಸುವ ಇರುವೆಗಳನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ