ಬಾಳೆಹಣ್ಣು

ಬಾಳೆಯ ಸೌತೆಕಾಯಿ ಮೊಸಾಯಿಕ್ ವೈರಸ್

CMV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಹಳದಿ ಮತ್ತು ಹಸಿರು ಮೊಸಾಯಿಕ್ ಮಾದರಿಗಳು ಎಲೆಗಳ ಮೇಲೆ ಪಟ್ಟಿಗಳಂತಹ ರಚನೆಗಳನ್ನು ಉಂಟುಮಾಡುತ್ತವೆ.
  • ಬೆಳೆಯುತ್ತಿರುವ ಎಲೆಗಳ ಅಂಚುಗಳಲ್ಲಿ ವಿರೂಪತೆ ಮತ್ತು ಕಪ್ಪಾದ ಸತ್ತ ಅಂಗಾಂಶಗಳು ಕಂಡುಬರುತ್ತವೆ.
  • ಕೊಳೆತ ಪ್ರದೇಶಗಳು ಎಲೆಯ ಕವಚಗಳು, ಆಂತರಿಕ ಅಂಗಾಂಶಗಳು ಮತ್ತು ಸೂಡೊಸ್ಟೆಮ್ ಗಳಲ್ಲಿ ಕಾಣಿಸಿಕೊಳ್ಳಬಹುದು.
  • ಸೋಂಕಿಗೊಳಗಾದ ಸಸ್ಯಗಳು ಬೆಳೆಯವುದಿಲ್ಲ ಅಥವಾ ಗೊನೆಗಳನ್ನು ಉತ್ಪಾದಿಸುವುದಿಲ್ಲ.
  • ಹಣ್ಣುಗಳು ಗಾತ್ರದಲ್ಲಿ ಸಣ್ಣದಾಗಿರುತ್ತವೆ ಮತ್ತು ಕ್ಲೋರೊಟಿಕ್ ರೇಖೆಗಳು ಅಥವಾ ಸತ್ತ ಅಂಗಾಂಶಗಳನ್ನು ಹೊಂದಿರಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಗಿಡದ ಯಾವುದೇ ಬೆಳವಣಿಗೆಯ ಹಂತದಲ್ಲಿ ಸೋಂಕು ಸಂಭವಿಸಬಹುದು ಮತ್ತು ಮುಖ್ಯವಾಗಿ ಎಲೆಗಳಲ್ಲಿ ಇದು ಕಂಡುಬರುತ್ತದೆ. ಆರಂಭದ ರೋಗಲಕ್ಷಣಗಳೆಂದರೆ ಮೊಸಾಯಿಕ್ ಮಾದರಿಯಲ್ಲಿ ನಾಳಗಳಿಗೆ ಸಮಾನಾಂತರವಾಗಿ ಕಂಡುಬರುವ ಉದ್ದನೆಯ ಅಥವಾ ತುಂಡು ತುಂಡಾದ ಪಟ್ಟೆಗಳು. ಇವು ಎಲೆಗಳಿಗೆ ಪಟ್ಟೆಪಟ್ಟೆಯ ರೂಪ ನೀಡುತ್ತವೆ. ಕಾಲಾನಂತರದಲ್ಲಿ, ಎಲೆಯ ಮುಖ್ಯಭಾಗ ಸಂಪೂರ್ಣವಾಗಿ ಅಭಿವೃದ್ಧಿಯಾಗುವುದಿಲ್ಲ ಮತ್ತು ಅಂಚುಗಳು ಅನಿಯಮಿತವಾಗಿ ವಕ್ರವಾಗಿರುತ್ತವೆ ಮತ್ತು ಸತ್ತ ಅಂಗಾಶಗಳನ್ನು ಹೊಂದಿರುತ್ತವೆ. ಹೊಸ ಎಲೆಗಳು ಸಹ ಗಾತ್ರದಲ್ಲಿ ಸಣ್ಣದಾಗಿರುತ್ತವೆ. ಕೊಳೆತ ಪ್ರದೇಶಗಳು ಎಲೆಯ ಕೋಶಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಮುಂದೆ ಸೂಡೊಸ್ಟೆಮ್ ಹಾಗು ಗೆಡ್ಡೆಗಳಿಗೆ ಹರಡಬಹುದು. ಹಳೆಯ ಎಲೆಗಳು ಕಪ್ಪು ಅಥವಾ ನೇರಳೆ ರೇಖೆಗಳ ರೂಪದಲ್ಲಿ ಸತ್ತ ಅಂಗಾಶಗಳನ್ನು ತೋರಿಸುತ್ತವೆ ಮತ್ತು ಉದುರುತ್ತವೆ. ಸೋಂಕಿಗೊಳಗಾದ ಸಸ್ಯವು ಬೆಳೆಯುವುದಿಲ್ಲ ಮತ್ತು ಗೊನೆ ಉತ್ಪಾದಿಸುವುದಿಲ್ಲ. ಹಣ್ಣುಗಳು ಹೆಚ್ಚಾಗಿ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಅವು ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣದಾಗಿರುತ್ತವೆ ಮತ್ತು ಅವುಗಳ ಮೇಲೆ ಕ್ಲೋರೋಟಿಕ್ ಗೆರೆಗಳು ಅಥವಾ ಸತ್ತ ಅಂಗಾಶಗಳು ಕಂಡುಬರುತ್ತವೆ.

Recommendations

ಜೈವಿಕ ನಿಯಂತ್ರಣ

ವೈರಸ್ ರೋಗಗಳಿಗೆ ನೇರ ಚಿಕಿತ್ಸೆ ಸಾಧ್ಯವಿಲ್ಲ, ಆದರೆ ಗಿಡಹೇನುಗಳ ಮೂಲಕ ಆಗುವ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಿದೆ. ಪ್ಯಾರಾಸಿಟಾಯ್ಡ್, ಪರಾವಲಂಬಿ ಅಥವಾ ಪರಭಕ್ಷಕ ಕೀಟಗಳು ಮತ್ತು ಶಿಲೀಂಧ್ರ ಜಾತಿಗಳು ಗಿಡಹೇನಿನ ವಿರುದ್ಧ ಪರಿಣಾಮಕಾರಿಯಾಗಿ ಬಳಸಬಹುದಾದ ನೈಸರ್ಗಿಕ ಶತ್ರುಗಳಾಗಿವೆ. 40 ° ಸಿ ನಲ್ಲಿ ಬೇರಿನ ಸಕ್ಕರ್ ಗಳನ್ನು ಒಂದು ದಿನದ ಮಟ್ಟಿಗೆ ಶುಷ್ಕ ಶಾಖ ಚಿಕಿತ್ಸೆಗೆ ಒಳಪಡಿಸುವ ಮೂಲಕ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ವೈರಲ್ ಕಾಯಿಲೆಗಳಿಗೆ ನೇರ ಚಿಕಿತ್ಸೆ ಸಾಧ್ಯವಿಲ್ಲ, ಆದರೆ ಪರ್ಯಾಯ ಆಶ್ರಯದಾತ ಸಸ್ಯಗಳು ಮತ್ತು ವಾಹಕಗಳನ್ನು ಒಂದು ಹಂತದವರೆಗೆ ನಿಯಂತ್ರಿಸಬಹುದು. ಕೀಟನಾಶಕಗಳ ಅಗತ್ಯವಿದ್ದರೆ, ಡೆಮೆಟೊನ್-ಮೀಥೈಲ್, ಡಿಮೀಥೋಯೆಟ್ ಮತ್ತು ಮ್ಯಾಲಥಿಯಾನ್ ಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸಿ. ನೆನಪಿಡಿ, ಮೇಲೆ ಪಟ್ಟಿಮಾಡಿದ ರಾಸಾಯನಿಕಗಳು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ವಿಷಕಾರಿ ಮತ್ತು ಅತೀ ವಿಷಕಾರಿ ಪರಿಣಾಮವನ್ನು ಹೊಂದಿವೆ.

ಅದಕ್ಕೆ ಏನು ಕಾರಣ

ರೋಗಲಕ್ಷಣವು ವೈರಸ್ ನಿಂದ ಉಂಟಾಗುತ್ತದೆ. ಪ್ರಾಥಮಿಕ ಸೋಂಕು ಸಾಮಾನ್ಯವಾಗಿ ಬೇರಿನ ಸಕ್ಕರ್ ನಂತಹ ಕಸಿಗಾಗಿ ಬಳಸಲ್ಪಡುವ ಸೋಂಕಿತ ಸಸ್ಯ ವಸ್ತುಗಳಿಂದ ಉಂಟಾಗುತ್ತದೆ. ಗಿಡಹೇನು ಜಾತಿಗಳು ದ್ವಿತೀಯಕ ಸೋಂಕಿನ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇತರ ಸಸ್ಯಗಳು ಅಥವಾ ತೋಟಗಳಿಗೆ ಹರಡುತ್ತವೆ. ಸೌತೆಕಾಯಿ ಮತ್ತು ಟೊಮೆಟೊ ಈ ವೈರಸ್ ನ ಸುಪ್ತ ಆಶ್ರಯದಾತ ಸಸ್ಯಗಳಾಗಿವೆ. ಅಂದರೆ, ಯಾವುದೇ ರೋಗಲಕ್ಷಣಗಳನ್ನು ತೋರಿಸದೆ ವೈರಾಣುಗಳನ್ನು ಇಟ್ಟುಕೊಂಡಿರಬಲ್ಲವು. ಆಗಾಗ್ಗೆ ಬೀಳುವ ಮಳೆ ಸೋಂಕಿಗೆ ಅನುಕೂಲಕರ. ಉದಾಹರಣೆಗೆ ಪೂರ್ವ ಮುಂಗಾರು ಮತ್ತು ಮುಂಗಾರು ನಂತರದ ಅವಧಿಗಳು. ಈ ರೋಗವು ಬಾಳೆ ಸಸ್ಯಗಳಿಗೆ ಗಂಭೀರವಾದ ಸಮಸ್ಯೆಯಾಗಿದ್ದು, ಭಾರೀ ಇಳುವರಿ ನಷ್ಟಕ್ಕೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಸ್ಥಳದಲ್ಲಿ ಸಂಪರ್ಕತಡೆ ನಿಯಮಗಳಿದ್ದರೆ ಕಟ್ಟುನಿಟ್ಟಾಗಿ ಪಾಲಿಸಿ.
  • ವಿಶ್ವಾಸಾರ್ಹ ಮೂಲಗಳಿಂದ ಆರೋಗ್ಯಕರ ಸಸಿಗಳನ್ನು ಮಾತ್ರ ಬಳಸಿ.
  • ತೋಟದೊಳಗೆ ಸೋಂಕಿಗೆ ಒಳಗಾಗುವ ಪ್ರಭೇದಗಳನ್ನು ನೆಡಬೇಡಿ.
  • ರೋಗದ ಯಾವುದೇ ಚಿಹ್ನೆಗಾಗಿ ಮತ್ತು ವಾಹಕಗಳಾದ ಗಿಡಹೇನುಗಳು ಮುಂತಾದ ಕೀಟಗಳಿಗಾಗಿ ನಿಮ್ಮ ಸಸ್ಯಗಳನ್ನು ಅಥವಾ ತೋಟವನ್ನು ಪರಿಶೀಲಿಸುತ್ತಿರಿ.
  • ಬಾಳೆ ತೋಟಗಳ ಸುತ್ತಮುತ್ತಲು ಇತರ ಆಶ್ರಯದಾತ ಸಸ್ಯಗಳಾದ ಟೊಮೆಟೊ ಮತ್ತು ಸೌತೆಕಾಯಿ ಕುಟುಂಬ, ಮೆಕ್ಕೆ ಜೋಳ ಮತ್ತು ಪ್ಯಾನಿಕಮ್ ಮತ್ತು ಡಿಜಿಟಾಲಿಯಾ ಜಾತಿಯ ಸಸ್ಯಗಳನ್ನು ಬೆಳೆಸಬೇಡಿ.
  • ಸೋಂಕಿತ ಹೊಲದಿಂದ ಗಿಡಹೇನುಗಳು ಪ್ರವೇಶಿಸುವುದನ್ನು ತಡೆಯಲು ಮೂರು- ನಾಲ್ಕು ಸಾಲುಗಳಲ್ಲಿ ಬ್ರೌನ್ ಹೆಮ್ (ಕ್ರೊಟಾಲಾರಿಯಾ ಜುನ್ಸಿಯಾ) ಮುಂತಾದ ಬೆಳೆಗಳನ್ನು ತಡೆಗೋಡೆಗಳಂತೆ ಬೆಳೆಸಿ.
  • ತೋಟದಿಂದ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ.
  • ಅವುಗಳನ್ನು ಹೂಳುವ ಅಥವಾ ಸುಡುವ ಮೂಲಕ ನಾಶಮಾಡಿ.
  • ವಿವಿಧ ತೋಟಗಳ ನಡುವೆ ಸಕ್ಕರ್ ಗಳನ್ನು ಹರಡಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ