ಹುರುಳಿ

ಉದ್ದಿನ ಎಲೆ ಕ್ರಿಂಕಲ್ ವೈರಸ್

ULCV

ವೈರಸ್

5 mins to read

ಸಂಕ್ಷಿಪ್ತವಾಗಿ

  • ತ್ರಿದಳ ಎಲೆಗಳಲ್ಲಿ ಮೂರನೆಯ ಎಲೆಯ ಗಾತ್ರ ದೊಡ್ಡದಾಗುತ್ತದೆ ಮತ್ತು ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತದೆ.
  • ಎಲೆಗಳು ಕುಗ್ಗುತ್ತಿರುವ ಮತ್ತು ಸುಕ್ಕಾಗುತ್ತಿರುವ ಲಕ್ಷಣಗಳು ಕಾಣುತ್ತವೆ ಹಾಗೂ ಒರಟಾಗಿ ತೊಗಲಿನಂತೆ ಕಾಣುತ್ತವೆ.
  • ಸೋಂಕಿತ ಗಿಡಗಳಲ್ಲಿ ಹೂಗಳ ಸ್ವರೂಪ ಅಸಹಜವಾಗಿರುತ್ತದೆ.
  • ಗಿಡದ ಬೆಳವಣಿಗೆ ಕುಂಠಿತವಾಗಿರುತ್ತದೆ.
  • ಬೀಜಕೋಶ ಮತ್ತು ಬೀಜ ರಚನೆಯ ಗುಣಮಟ್ಟ ತೀವ್ರವಾಗಿ ಕುಸಿದು, ಇಳುವರಿಯಲ್ಲಿ ಭಾರಿ ನಷ್ಟಕ್ಕೆ ಕಾರಣವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಹುರುಳಿ

ರೋಗಲಕ್ಷಣಗಳು

ಸೋಂಕಿಗೊಳಗಾದ ಬೀಜಗಳಿಂದ ಬೆಳೆದ ಮೊಳಕೆಗಳ ತ್ರಿದಳ ಎಲೆಗಳ ಮೂರನೆಯ ಎಲೆಯು ಸಾಮಾನ್ಯಕ್ಕಿಂತ ದೊಡ್ಡದಾಗಿರುತ್ತದೆ. ಈ ಎಲೆಗಳು ಸಾಮಾನ್ಯಕ್ಕಿಂತ ಹೆಚ್ಚೇ ತಿಳಿ ಹಸಿರು ಬಣ್ಣದ್ದಾಗಿರುತ್ತವೆ. ಎಲೆ ತೊಟ್ಟುಗಳು ಚಿಕ್ಕದಾಗಿರಬಹುದು ಮತ್ತು ಎಲೆ ನಾಳಗಳು ದಪ್ಪವಾಗಿದ್ದು ಅವುಗಳು ಸಾಮಾನ್ಯ ಬಣ್ಣದಲ್ಲಿರದೆ ವಿಶಿಷ್ಟವಾದ ಕೆಂಪು ಬಣ್ಣದಲ್ಲಿರುತ್ತವೆ. ನೆಟ್ಟ ಒಂದು ತಿಂಗಳ ನಂತರ, ಎಲೆಗಳ ಮುದುಡುವಿಕೆ ಮತ್ತು ಸುಕ್ಕುಗಟ್ಟುವಿಕೆ ಪ್ರಾರಂಭವಾಗುತ್ತದೆ. ಎಲೆಗಳು ಒರಟಾಗಿ ತೊಗಲಿನಂತಿರುತ್ತವೆ. ಬೆಳವಣಿಗೆಯ ನಂತರದ ಹಂತಗಳಲ್ಲಿ ಕೀಟ ವಾಹಕಗಳ ಮೂಲಕ ಸೋಂಕಿಗೊಳಗಾದ ಗಿಡಗಳ ಎಳೆಯ ಎಲೆಗಳಲ್ಲಿ ಸಾಮಾನ್ಯವಾಗಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಬೆಳೆದ ಎಲೆಗಳು ರೋಗ-ಮುಕ್ತವಾಗಿ ಉಳಿದಿರುತ್ತವೆ. ಎಲೆಗಳಲ್ಲಿ ಕ್ಲೋರೋಸಿಸ್ (ಕ್ಲೋರೋಫಿಲ್ ಕೊರತೆಯಿಂದಾಗಿ ಬಣ್ಣಗೆಡುವ ಪ್ರಕ್ರಿಯೆ) ಎದ್ದುಕಾಣುತ್ತದೆ ಹಾಗೂ ಹೂವುಗಳು ವಿರೂಪಗೊಂಡಿರುತ್ತವೆ. ಸಣ್ಣ ಹೂವಿನ ಮೊಗ್ಗುಗಳು ಮತ್ತು ಕುಂಠಿತಗೊಂಡ ಬೆಳವಣಿಗೆಯನ್ನು ಗಮನಿಸಬಹುದು. ಕೆಲವು ಹೂವುಗಳಲ್ಲಿ, ಬಣ್ಣಗೆಟ್ಟ ಮತ್ತು ಗಾತ್ರ ಮೀರಿದ ಬೀಜಗಳು ಕಾಣುತ್ತವೆ. ಪರಾಗ ಫಲವತ್ತತೆ ಮತ್ತು ಬೀಜಕೋಶ ರಚನೆಯ ಗುಣಮಟ್ಟ ತೀವ್ರವಾಗಿ ಕುಸಿದು, ಇಳುವರಿಯಲ್ಲಿ ಭಾರಿ ನಷ್ಟಕ್ಕೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ವಿವಿಧ ಸಾವಯವ ವಿಧಾನಗಳು ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಸ್ಯೂಡೋಮೊನಸ್ ಫ್ಲೂರಸೇನ್ಸಿನ ತಳಿಗಳ ಬೀಜಕಗಳನ್ನು ಮಣ್ಣು ಅಥವಾ ಎಲೆಗಳ ಮೇಲೆ ಸಿಂಪಡಿಸುವುದರಿಂದ ವಾಹಕಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ತಾಜಾ ಮಜ್ಜಿಗೆ ಮತ್ತು ಕ್ಯಾಸೀನ್ (ಹಾಲು ಮತ್ತು ಗಿಣ್ಣಿನಲ್ಲಿರುವ ಒಂದು ಪ್ರೊಟೀನ್) ರೋಗವು ಹರಡುವುದರ ಮೇಲೆ ಪರಿಣಾಮ ಬೀರುತ್ತವೆ ಎಂದು ಕಂಡುಬಂದಿದೆ. ಮಿರಾಬಿಲಿಸ್ ಜಲಾಪಾ, ಕ್ಯಾಥರಾಂನ್ಸ್ ರೋಸಿಯಸ್, ಡಾಟುರಾ ಮೆಟಲ್, ಬೋಗನ್ವಿಲಾ ಸ್ಪೆಕ್ಟಾಬಿಲಿಸ್, ಬೋರ್ಹವಿಯಾ ಡಿಫ್ಯೂಸಾ ಮತ್ತು ಅಜದಿರಾಚ ಇಂಡಿಕ ಮುಂತಾದ ಗಿಡಗಳ ಸಾರ ಹೊಲದಲ್ಲಿ ವೈರಸ್ ದಾಳಿಯಾಗುವುದರ ಮೇಲೆ ಪರಿಣಾಮ ಬೀರಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ವೈರಸ್ ವಿರುದ್ಧ ಯಾವುದೇ ರಾಸಾಯನಿಕ ಚಿಕಿತ್ಸೆ ಲಭ್ಯವಿಲ್ಲವಾದರೂ ವಾಹಕಗಳ ಸಂಖ್ಯೆಯನ್ನು ನಿಯಂತ್ರಿಸಲು ವ್ಯವಸ್ಥಿತ ಕೀಟನಾಶಕಗಳನ್ನು ಬಳಸಿಕೊಳ್ಳಬಹುದು. ಇಮಿಡಾಕ್ಲೋಪ್ರಿಡ್, ಅಲಥ್ರಿನ್, ಪೆರ್ಮೆತ್ರಿನ್, ಕಾರ್ಬರಿಲ್ ಅಥವಾ ಫಿನಾತ್ರಿನ್ಗಳನ್ನು ಹೊಂದಿರುವ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು. ಆಸೆಫೇಟ್ ಅಥವಾ ಡಿಮೀಥೊಯೆಟೆಕನ್ ಆಧಾರಿತ ಉತ್ಪನ್ನಗಳು ಸಹ ಕೆಲಸ ಮಾಡಬಹುದು. ಸಂಯುಕ್ತ 2,4-ಡಿಕ್ಸೋಹೆಕ್ಸಾಹೈಡ್ರೊ 1,3,5-ಟ್ರೈಯಾಜಿನ್ (DHT) ವೈರಸ್ ಹರಡುವಿಕೆಯನ್ನು ತಡೆಗಟ್ಟುತ್ತದೆ ಮತ್ತು ವೈರಸ್ ದಾಳಿಯಾದಾಗಿನಿಂದ ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗಿನ ಅವಧಿಯನ್ನು ಹೆಚ್ಚಿಸುತ್ತದೆ.

ಅದಕ್ಕೆ ಏನು ಕಾರಣ

ವೈರಸ್ ಹೆಚ್ಚಾಗಿ ಬೀಜದಿಂದ ಹರಡುತ್ತದೆ. ಬೀಜದಲ್ಲಿರುವ ಸೋಂಕು ಮೊಳಕೆಗಳಲ್ಲಿ ಪ್ರಾಥಮಿಕ ಸೋಂಕಿಗೆ ಕಾರಣವಾಗುತ್ತದೆ. ಗಿಡದಿಂದ ಗಿಡಕ್ಕೆ ದ್ವಿತೀಯ ಸೋಂಕು ಕೆಲವು ಗಿಡಹೇನುಗಳು (ಉದಾಹರಣೆಗೆ, ಆಫಿಸ್ ಕ್ರ್ಯಾಕ್ಸಿವೊರಾ ಮತ್ತು ಎ. ಗೊಸ್ಸಿಪಿ), ಬಿಳಿಯ ಮಿಡತೆ (ವೈಟ್ ಫ್ಲೈ - ಬೆಮಿಸಿಯಾ ಟಾಬಾಕಿ) ಮತ್ತು ಎಲೆ ತಿನ್ನುವ ಬೀಟಲ್ (ಹೆನೋಸ್ಪಿಲಾಚ್ನಾ ಡೋಡೆಕ್ಯಾಸ್ಟಿಗ್ಮಾ) ನಂತಹ ಗಿಡದ ರಸ ಹೀರುವ ಕೀಟಗಳ ಮೂಲಕ ಹರಡುತ್ತದೆ. ವೈರಸ್ ಹರಡುವಿಕೆ ಮತ್ತು ರೋಗದ ತೀವ್ರತೆಯು ಗಿಡದ ಸಹಿಷ್ಣುತೆ, ತೋಟಗಳಲ್ಲಿನ ವಾಹಕಗಳು ಮತ್ತು ಹವಾಮಾನ ಪರಿಸ್ಥಿತಿಗಳ ಮೇಲೆ ಅವಲಂಬಿಸಿದೆ. ವೈರಸ್ ಸೋಂಕು ತಗುಲಿದ ಸಮಯವನ್ನು ಅವಲಂಬಿಸಿ, 35 ರಿಂದ 81% ವರೆಗೆ ಧಾನ್ಯದ ಇಳುವರಿಯನ್ನು ಕಡಿಮೆ ಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಗಿಡಗಳಿಂದ ಪಡೆದ ಬೀಜಗಳನ್ನು ಅಥವಾ ಪ್ರಮಾಣೀಕೃತ ರೋಗ-ಮುಕ್ತ ಬೀಜಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ರೋಗದ ವಾಹಕಗಳ ಚಿಹ್ನೆಗಾಗಿ ಗಿಡಗಳ ಅಥವಾ ತೋಟದ ಮೇಲ್ವಿಚಾರಣೆ ಮಾಡಿ.
  • ಸೋಂಕು ತಗುಲಿದಂತೆ ಕಾಣುವ ಗಿಡಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಹೂತುಹಾಕಿ.
  • ನಿಮ್ಮ ಕೃಷಿಪ್ರದೇಶದ ಬಳಿ ವಿಪರೀತ ಕಳೆ ಬೆಳೆಯುವುದನ್ನು ತಪ್ಪಿಸಿ (ಕಳೆಯು ಪರ್ಯಾಯ ಆಶ್ರಯದಾತ ಗಿಡವಾಗಿ ಕೆಲಸ ಮಾಡುತ್ತದೆ).
  • ರೋಗ ಹರಡುವುದನ್ನು ಕಡಿಮೆಗೊಳಿಸಲು ಮೆಕ್ಕೆ ಜೋಳ, ಹುಲ್ಲುಜೋಳ ಮತ್ತು ಸಜ್ಜೆ ಸಿರಿಧಾನ್ಯ (ಬಾಜ್ರಾ) ಮುಂತಾದ ಬೆಳೆಗಳನ್ನು ಹೊಲದ ಸುತ್ತಲೂ ಬೆಳೆಸಿ.
  • ಈ ಬೆಳೆಗಳು ಪ್ರಧಾನ ಬೆಳೆಗೆ ರಕ್ಷಣೆಯಾಗಿ ಕೆಲಸ ಮಾಡುತ್ತವೆ.
  • ಕೊಯ್ಲಿನ ನಂತರ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಸುಟ್ಟು ಹಾಕಿ.
  • ವಾಹಕಗಳ ದಾಳಿಗೆ ಒಳಗಾಗದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ