ಕಬ್ಬು

ಕಬ್ಬಿನ ಮೊಸಾಯಿಕ್ ವೈರಸ್

SCMV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಎಳೆಯ ಎಲೆಗಳ ಬ್ಲೇಡ್ಗಳ ಮೇಲೆ ವ್ಯವಸ್ಥಿತವಾದ ಮೊಸಾಯಿಕ್ ನಂತಹ ಮಾದರಿ.
  • ಕಿರಿದಾದ ಕ್ಲೋರೋಟಿಕ್ ಗೆರೆಗಳು ಸಿರೆಗಳಿಗೆ ಸಮಾನಾಂತರವಾಗಿ ವಿಸ್ತರಿಸುತ್ತವೆ.
  • ಹಳೆಯ ಎಲೆಗಳ ಮೇಲೆ ನೆಕ್ರೋಸಿಸ್.
  • ಹಳೆಯ ಎಲೆಗಳ ಕೆಂಪು ಬಣ್ಣದ ಭಾಗಗಳು.
  • ಕುಂಠಿತಗೊಂಡ ಬೆಳವಣಿಗೆ ಮತ್ತು ಬಂಜರು ತೊಟ್ಟುಗಳು.

ಇವುಗಳಲ್ಲಿ ಸಹ ಕಾಣಬಹುದು


ಕಬ್ಬು

ರೋಗಲಕ್ಷಣಗಳು

ಎಳೆಯ ಸಸ್ಯಗಳು ಹೆಚ್ಚು ಗೋಚರವಾಗುವಂತಹ ರೋಗಲಕ್ಷಣಗಳನ್ನು ತೋರಿಸುತ್ತವೆ. ಸೋಂಕಿಗೊಳಗಾದ ಸಸ್ಯಗಳಲ್ಲಿ ಸಾಮಾನ್ಯ ಹಸಿರು ಬಣ್ಣದಲ್ಲಿ ಹುದುಗಿರುವ ತಿಳಿಹಸಿರು ಬಣ್ಣದಿಂದ ಹಳದಿ ಬಣ್ಣದ ವಿಶಿಷ್ಟವಾದ ಮೊಸಾಯಿಕ್ ಮಾದರಿ ಹೊಂದಿರುವ ಪ್ಯಾಚುಗಳಿರುತ್ತವೆ. ಕೆಲವೊಮ್ಮೆ ಮೊಸಾಯಿಕ್ ಮಾದರಿಯು ಸಿರೆಗಳಿಗೆ ಸಮಾನಾಂತರವಾಗಿ ವಿಸ್ತರಿಸಲ್ಪಟ್ಟಿರುವ ಕಿರಿದಾದ ಕ್ಲೋರೋಟಿಕ್ ಅಥವಾ ನೆಕ್ರೋಟಿಕ್ ಗೆರೆಗಳಿಂದ ಹೆಚ್ಚಾದಂತೆ ತೋರುತ್ತದೆ. ಕೆಲವು ಸಂದರ್ಭಗಳಲ್ಲಿ, ಎಳೆಯ ತೊಟ್ಟುಗಳ ಮೇಲೂ ಸಹ ಪಟ್ಟೆಗಳನ್ನು ಗಮನಿಸಬಹುದು. ನಂತರ ಎಲೆಗಳು ಸಾಮಾನ್ಯ ಕ್ಲೋರೋಸಿಸ್ ಅನ್ನು ತೋರಿಸುತ್ತವೆ, ಮತ್ತು ಗೆರೆಗಳು ದೊಡ್ಡದಾಗುತ್ತವೆ ಮತ್ತು ಹೆಚ್ಚು ಹೇರಳವಾಗುತ್ತವೆ. ಸಸ್ಯಗಳು ಪರಿಪಕ್ವತೆಯನ್ನು ತಲಪುತ್ತಿದ್ದಂತೆ, ಎಲೆಯ ಭಾಗದಲ್ಲಿ ಭಾಗಶಃ ಕೆಂಪಾಗುವಿಕೆ ಅಥವಾ ನೆಕ್ರೋಸಿಸ್ ಸಂಭವಿಸುತ್ತದೆ. ಸೋಂಕಿನ ಸಮಯವನ್ನು ಅವಲಂಬಿಸಿ, ಸಸ್ಯಗಳು ತೀವ್ರವಾಗಿ ಕುಂಠಿತವಾಗುತ್ತವೆ ಅಥವಾ ಸಂಪೂರ್ಣವಾಗಿ ಬಂಜರು ಆಗಬಹುದು.

Recommendations

ಜೈವಿಕ ನಿಯಂತ್ರಣ

ಗದ್ದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೈರಸ್ಸಿಗೆ ಆಶ್ರಯ ನೀಡಬಹುದಾದಂತಹ ಹೋಸ್ಟಗಳಾದ ಕಳೆಗಳನ್ನು ನಿಯಂತ್ರಿಸಿ. ಈ ವೈರಸ್ ನಿಂದ ಆರೋಗ್ಯಕರ ಸಸ್ಯಗಳಿಗೆ ಸೋಂಕು ತಗುಲುವಂತೆ ಮಾಡುವ ಗಿಡಹೇನುಗಳ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ನಿಯಂತ್ರಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಗಿಡಹೇನುಗಳ ಸಂಖ್ಯೆಯನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಹಾಕಬೇಡಿ ಏಕೆಂದರೆ ಇದು ಪರಿಣಾಮಕಾರಿಯಲ್ಲ ಎಂದು ಕಂಡುಬಂದಿದೆ.

ಅದಕ್ಕೆ ಏನು ಕಾರಣ

ಗಿಡಹೇನುಗಳು ಆಹಾರ ಸೇವನೆಯ ಮೂಲಕ ವೈರಸ್ ಅನ್ನು ಹರಡುತ್ತವೆ ಮತ್ತು ಒಂದೆರಡು ದಿನಗಳಲ್ಲಿಯೇ ಆರೋಗ್ಯಕರ ಸಸ್ಯಗಳಿಗೆ ಸೋಂಕನ್ನು ತಗುಲಿಸಬಹುದು. ಸಸ್ಯದಿಂದ ಸಸ್ಯಕ್ಕೆ ಯಾಂತ್ರಿಕ ಪ್ರಸರಣ ಸಹ ಸಾಧ್ಯವಿದೆ, ಗಾಯಗಳ ಮೂಲಕ ಎಲೆಗಳಿಗೆ ವೈರಸ್ ಹರಡಬಹುದು. ಚಾಕುಗಳು ಅಥವಾ ಇತರ ಸಾಧನಗಳ ಮೂಲಕ ಯಾಂತ್ರಿಕ ಪ್ರಸರಣ ಸಾಧ್ಯವಿಲ್ಲ ಏಕೆಂದರೆ ವೈರಸ್ ಸಸ್ಯದ ಅಂಗಾಂಶಗಳ ಹೊರಭಾಗದಲ್ಲಿ ಬಹುಕಾಲ ಬದುಕುಳಿಯುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಪ್ರಮಾಣೀಕೃತ ಮೂಲಗಳಿಂದ ಸಸ್ಯಗಳ ರೋಗ ಮುಕ್ತ ಬೀಜಗಳನ್ನು ನೆಡಿ.
  • ಗಿಡಹೇನುಗಳನ್ನು ತಿನ್ನುವ ಉತ್ತಮವಾದ ಕೀಟಗಳಿರುವಂತೆ ನೋಡಿಕೊಳ್ಳಿ.
  • ಸೋಂಕಿತ ಸಸ್ಯಗಳ ಸಂಖ್ಯೆಯನ್ನು ಪರಿಶೀಲಿಸಿ.
  • ಸಸ್ಯಗಳಿಗಾಗಬಹುದಾದ ಹಾನಿ ಮತ್ತು ಗಾಯಗಳನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ