ದ್ರಾಕ್ಷಿ

ದ್ರಾಕ್ಷಿಯ ಎಲೆ ಸುರುಳಿ ವೈರಸ್

GLD

ವೈರಸ್

5 mins to read

ಸಂಕ್ಷಿಪ್ತವಾಗಿ

  • ಕೆಂಪು ದ್ರಾಕ್ಷಿ ಬಳ್ಳಿಯ ಪ್ರಭೇದಗಳಲ್ಲಿ ನಾಳಗಳ ನಡುವಿನ ಎಲೆಯ ಅಂಗಾಂಶಗಳು ಕೆಂಪು ಬಣ್ಣಕ್ಕೂ ಮತ್ತು ಬಿಳಿ ದ್ರಾಕ್ಷಿಯ ಪ್ರಭೇದಗಳಲ್ಲಿ ಹಳದಿ ಬಣ್ಣಕ್ಕೂ ತಿರುಗುತ್ತವೆ.
  • ಎಲೆಗಳು ಕೆಳಕ್ಕೆ ಸುರುಳಿ ಸುತ್ತುವುದು ಮತ್ತು ಅಂಚುಗಳು ಬಟ್ಟಲಾಕಾರ ತಳೆಯುವುದು ಸಹಾ ಕಂಡುಬರುತ್ತದೆ.
  • ಬಳ್ಳಿಗಳ ಬೆಳವಣಿಗೆ ಕುಂಠಿತವಾಗಬಹುದು, ಕಾಂಡಗಳು ಸಣ್ಣದಾಗಬಹುದು ಮತ್ತು ಮೇಲ್ಛಾವಣೆ ಸಣ್ಣದಾಗುವ ಸಾಧ್ಯತೆ ಇದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ವಿವಿಧ ದ್ರಾಕ್ಷಿ ತಳಿಗಳು ವೈರಸ್ ಗಳಿಗೆ ಒಳಗಾಗುವ ಪ್ರಮಾಣವನ್ನು ಅವಲಂಬಿಸಿ ರೋಗಲಕ್ಷಣಗಳು ವ್ಯತ್ಯಾಸಗೊಳ್ಳುತ್ತವೆ ಮತ್ತು ಬೇಸಿಗೆಯ ಕೊನೆಯಲ್ಲಿ ಅಥವಾ ಶರತ್ಕಾಲದಲ್ಲಿ ಇವು ಅತೀ ಹೆಚ್ಚಾಗಿ ಕಂಡುಬರುತ್ತವೆ. ಕೆಂಪು-ಸಿಪ್ಪೆ ಪ್ರಭೇದಗಳಲ್ಲಿ, ನಾಳಗಳ ನಡುವಿನ ಎಲೆಯ ಅಂಗಾಂಶಗಳು ಕಡು ಕೆಂಪು ಮತ್ತು ನೇರಳೆ ಬಣ್ಣಕ್ಕೆ ತಿರುಗುತ್ತವೆ ಮತ್ತು ಅಂಚುಗಳು ಕೆಳಕ್ಕೆ ಮಡಚಿಕೊಂಡು, ಬಟ್ಟಲಿನ ಆಕಾರ ಪಡೆಯುತ್ತವೆ, ಬಿಳಿ ಪ್ರಭೇದಗಳಲ್ಲಿ, ಎಲೆಯ ಅಂಗಾಂಶವು ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಎಲೆಯ ಅಂಚು ಸುರುಳಿ ಸುತ್ತಿ ಬಟ್ಟಲಿನಾಕಾರ ಪಡೆಯುತ್ತದೆ. ಸಾಮಾನ್ಯವಾಗಿ, ಮುಖ್ಯ ನಾಳ ಹಸಿರು ಬಣ್ಣದಲ್ಲೇ ಉಳಿಯಬಹುದು. ಅಥವಾ ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಎಲೆಯ ಅಂಗಾಂಶಗಳು ಬಣ್ಣ ಕಳೆದುಕೊಳ್ಳಬಹುದು. ಬಳ್ಳಿಗಳ ಬೆಳವಣಿಗೆ ಕುಂಠಿತವಾಗುತ್ತದೆ. ಗಿಡ್ಡ ಕಾಂಡಗಳು ಮತ್ತು ಸಣ್ಣ ಮೇಲ್ಚಾವಣಿಯನ್ನು ಹೊಂದಿರುತ್ತವೆ. ಕಾಲಾನಂತರ, ರೋಗದಿಂದ ಹಣ್ಣಾಗುವುದು ತಡವಾಗಬಹುದು ಮತ್ತು ಅಸಮವಾಗಬಹುದು. ಜೊತೆಗೆ, ಸಕ್ಕರೆ ಅಂಶದಲ್ಲಿ ಇಳಿಕೆ, ಹಣ್ಣು ಬಣ್ಣ ಕಳೆದುಕೊಳ್ಳುವುದು ಮತ್ತು ಆಮ್ಲೀಯತೆಯ ಹೆಚ್ಚಳಕ್ಕೆ ಕಾರಣವಾಗಬಹುದು. ವರ್ಷ ಕಳೆದಂತೆ, ದ್ರಾಕ್ಷಿಬಳ್ಳಿಗಳ ಸಂಖ್ಯೆ ಕುಸಿಯುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದರಿಂದಾಗಿ ದ್ರಾಕ್ಷಿತೋಟಗಳ ಜೀವಿತಾವಧಿ ಕಡಿಮೆಯಾಗುತ್ತದೆ. ಇದು ಪ್ರಪಂಚದಾದ್ಯಂತ ದ್ರಾಕ್ಷಿತೋಟಗಳನ್ನು ಕಾಡುವ ಗಂಭೀರ ರೋಗವಾಗಿದೆ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ದ್ರಾಕ್ಷಿಬಳ್ಳಿ ಎಲೆ ಸುರುಳಿ ರೋಗದ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ಕಾಯಿಲೆ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದೇ ಮಾಹಿತಿ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ವೈರಲ್ ರೋಗಗಳಿಗೆ ರಾಸಾಯನಿಕ ಸಂಯುಕ್ತಗಳಿಂದ ಚಿಕಿತ್ಸೆ ಮಾಡಲಾಗುವುದಿಲ್ಲ. ಹನಿ ನೀರಾವರಿ ಇರುವ ದ್ರಾಕ್ಷಿತೋಟಗಳಲ್ಲಿ, ಇಮಿಡಾಕ್ಲೋರಿಡ್ ಅನ್ನು ಯಾವುದೇ ಋತುವಿನ ಯಾವುದೇ ಸಮಯದಲ್ಲಾದರೂ ಹುಡಿ ತಿಗಣೆಗಳ ವಿರುದ್ಧ ಬಳಸಬಹುದು. ಹನಿ ನೀರಾವರಿ ಇಲ್ಲದ ತೋಟಗಳಲ್ಲಿ ಥಿಯಾಮೆತಾಕ್ಸಮ್, ಅಸೆಟಾಮಿಪ್ರಿಡ್, ಮತ್ತು ಡೈನೋಟೆಫುರನ್ ಉತ್ಪನ್ನಗಳನ್ನು ಒಳಗೊಂಡಿರುವ ಎಲೆ ಸಿಂಪಡಣೆಗಳನ್ನು ಕಾಂಡ ಮತ್ತು ಮುಖ್ಯ ರೆಂಬೆಗಳಿಗೆ ಹಾಕಬಹುದು. ಇತರ ಸಾಂಸ್ಕೃತಿಕ ಮತ್ತು ಜೈವಿಕ ಆಚರಣೆಗಳು ಹುಡಿ ತಿಗಣೆಗಳು ಮತ್ತು ಮೃದು ಹುರುಪೆಗಳನ್ನು ನಿಯಂತ್ರಿಸಲು ಲಭ್ಯವಿವೆ.

ಅದಕ್ಕೆ ಏನು ಕಾರಣ

ದ್ರಾಕ್ಷಿ ಎಲೆ ಸುರುಳಿ ರೋಗದ ರೋಗಲಕ್ಷಣಗಳು ಹತ್ತು ವಿಭಿನ್ನ ವೈರಸ್ ಗಳಿಂದ ಉಂಟಾಗುತ್ತವೆ. ಈ ವೈರಸ್ ಗಳನ್ನು ಒಟ್ಟಾಗಿ ದ್ರಾಕ್ಷಿಬಳ್ಳಿ -ಎಲೆ ಸುರುಳಿ ಸಂಬಂಧಿತ ವೈರಸ್ ಎಂದು ಕರೆಯಲಾಗುತ್ತದೆ. ಸಸ್ಯಭಾಗದಿಂದ ಪ್ರಸರಣ, ಸೋಂಕಿತ ಸಸ್ಯ ವಸ್ತುಗಳ ಸಾಗಣೆ ಮತ್ತು ಕಸಿ ಮಾಡುವುದು ಇವುಗಳು ದೂರದ ಸ್ಥಳಗಳಿಗೂ ಈ ರೋಗವನ್ನು ಹರಡುವ ಅತ್ಯಂತ ಸಾಮಾನ್ಯ ವಿಧಾನವಾಗಿದೆ. ಇದಲ್ಲದೆ, ಎರಡು ಕೀಟ ವಾಹಕಗಳು, ಹುಡಿ ತಿಗಣೆಗಳು ಮತ್ತು ಮೃದು ಹುರುಪೆ, ಸ್ಥಳೀಯವಾಗಿ ಬಳ್ಳಿಗಳಿಂದ ಬಳ್ಳಿಗಳಿಗೆ ಮತ್ತು ಕೆಲವೊಮ್ಮೆ ದ್ರಾಕ್ಷಿತೋಟಗಳ ನಡುವೆ ಅವುಗಳನ್ನು ವರ್ಗಾಯಿಸುತ್ತವೆ. ಈ ವೈರಸ್ ಗಳು ಯಾಂತ್ರಿಕವಾಗಿ ಹರಡುವುದು ತಿಳಿದು ಬಂದಿಲ್ಲ. ಉದಾಹರಣೆಗೆ ಸಮರುವಿಕೆಗೆ ಬಳಸುವ ಉಪಕರಣಗಳು ಅಥವಾ ಕೊಯ್ಲಿನಿಂದ. ಜೊತೆಗೆ, ಬೀಜಗಳಿಂದಲೂ ಇವು ಹರಡುವ ಬಗ್ಗೆ ತಿಳಿದಿಲ್ಲ. ಫಾಸ್ಫರಸ್ ಮತ್ತು ಪೊಟ್ಯಾಸಿಯಮ್ ಕೊರತೆಗಳ ಲಕ್ಷಣಗಳು ದ್ರಾಕ್ಷಿ ಎಲೆ ಸುರುಳಿ ರೋಗದ ಲಕ್ಷಣಗಳನ್ನು ಹೋಲುತ್ತವೆ. ಆದ್ದರಿಂದ, ನಿರ್ವಹಣೆಯ ಬಗ್ಗೆ ನಿರ್ಧಾರ-ತೆಗೆದುಕೊಳ್ಳುವ ಮೊದಲು ಇದೇ ಸೋಂಕು ಎಂಬುದನ್ನು ದೃಢೀಕರಿಸಿಕೊಳ್ಳಬೇಕು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ದೇಶದಲ್ಲಿ ಅನ್ವಯವಾಗುವ ಸಂಪರ್ಕ ತಡೆ ನಿಬಂಧನೆಗಳನ್ನು ಪರಿಶೀಲಿಸಿ.
  • ಎಲೆ ಸುರುಳಿ ವೈರಸ್ ನಿಂದ ಮುಕ್ತವಾಗಿದೆ ಎಂದು ಪ್ರಮಾಣೀಕರಿಸಲ್ಪಟ್ಟ ಸಸ್ಯ ವಸ್ತುಗಳನ್ನೇ ಆಯ್ಕೆಮಾಡಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆರಿಸಿ.
  • ರೋಗದ ಲಕ್ಷಣಗಳಿಗಾಗಿ ದ್ರಾಕ್ಷಿತೋಟವನ್ನು ನಿಯಮಿತವಾಗಿ ಪರಿಶೀಲಿಸಿ.
  • ದ್ರಾಕ್ಷಿ ತೋಟಗಳಲ್ಲಿ ಎಲೆ ಸುರುಳಿ ರೋಗದೊಂದಿಗೆ ಹುಡಿ ತಿಗಣೆಗಳು (ಮಿಲಿ ಬಗ್ಸ್) ಮತ್ತು ಮೃದು ಹುರುಪೆಯ ಇರುವಿಕೆಗಾಗಿ ಪರೀಕ್ಷಿಸಿ.
  • ಸಂದೇಹವಿದ್ದಲ್ಲಿ, ನಿಮ್ಮ ಬಳ್ಳಿಗಳನ್ನು ಪ್ರಯೋಗಾಲಯದಲ್ಲಿ ವೈರಸ್ ಗಾಗಿ ಪರೀಕ್ಷಿಸಿ.
  • ವೈರಸ್-ಸೋಂಕಿತ ಬಳ್ಳಿಗಳನ್ನು ಬೇರು ಸಮೇತ ತೆಗೆದುಹಾಕಿ ಮತ್ತು ನಾಶಮಾಡಿ.
  • ಬೇರುಕಾಂಡಗಳು ಸೋಂಕಿಗೆ ಒಳಗಾಗಿರಬಹುದಾದ್ದರಿಂದ ಮೇಲು-ಕಸಿ ಮಾಡುವುದನ್ನು ತಪ್ಪಿಸಿ.
  • ಇತರ ದ್ರಾಕ್ಷಿತೋಟಗಳಿಗೆ ಸಂಭಾವ್ಯ ಸೋಂಕು ಇರುವ ಸಸ್ಯಜನ್ಯಗಳನ್ನು ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ