ಬಾಳೆಹಣ್ಣು

ಬಾಳೆಯ ಬ್ರಾಕ್ಟ್ ಮೊಸಾಯಿಕ್ ವೈರಸ್

BBrMV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಕೆಂಪು ಮಿಶ್ರಿತ ಕಂದು ಬಣ್ಣದ ಮೊಸಾಯಿಕ್ ಮಾದರಿಯು ಹೂವಿನ ಸಾಲುಗಳನ್ನು ಮುಚ್ಚಿರುವ ಸಣ್ಣ ಎಲೆಗಳ ಮೇಲೆ ಕಂಡುಬರುತ್ತದೆ.
  • ಹಸಿರು ಅಥವಾ ಕೆಂಪು-ಕಂದು ಬಣ್ಣದ ತಕಲಿಯಾಕಾರದ ಗಾಯಗಳು ಮತ್ತು ಗೆರೆಗಳು ಎಲೆಯ ತೊಟ್ಟುಗಳು ಮತ್ತು ಮಧ್ಯನಾಳ ಮೇಲೆ ಅಥವಾ ಹಣ್ಣಿನ ಗೊನೆ, ಗೊನೆಯ ತೊಟ್ಟುಗಳು ಮೇಲೆ ಕಂಡುಬರುತ್ತವೆ.
  • ಕಾಂಡದ ಆಂತರಿಕ ಅಂಗಾಂಶಗಳು ಬಣ್ಣ ಕಳೆದುಕೊಳ್ಳುತ್ತವೆ.
  • ಗೊನೆ ಮತ್ತು ಹಣ್ಣುಗಳು ವಿರೂಪಗೊಳ್ಳಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ರೋಗದ ಸ್ಪಷ್ಟ ಲಕ್ಷಣಗಳೆಂದರೆ ಕೆಂಪುಮಿಶ್ರಿತ ಕಂದು ಬಣ್ಣದ ಮೊಸಾಯಿಕ್ ಮಾದರಿಗಳು ಹೂಗೊಂಚಲುಗಳ ಪತ್ರಕಗಳ(ಬ್ರಾಕ್ಟ್) ಮೇಲೆ ಕಾಣಿಸಿಕೊಳ್ಳುತ್ತವೆ. ಹೂಗೊಂಚಲಿನ ತೊಟ್ಟಿನ ಮೇಲೆ ಹೂಗಳ ಸಾಲುಗಳನ್ನು ಆವರಿಸಿರುವ ಚಿಕ್ಕ ಎಲೆಗಳಿಗೆ ಪತ್ರಕ( ಬ್ರಾಕ್ಟ್) ಎಂದು ಹೆಸರು. ಎಳೆಯ ಸಸ್ಯಗಳಲ್ಲಿ, ಕ್ಲೊರೋಟಿಕ್ ಅಥವಾ ಕೆಂಪು-ಕಂದು ಬಣ್ಣದ ತಕಲಿಯಾಕಾರದ ಗಾಯಗಳು ಮತ್ತು ಗೆರೆಗಳು ಎಲೆಯ ತೊಟ್ಟುಗಳು ಅಥವಾ ಮಧ್ಯ ನಾಳದ ಮೇಲೆ ಕಾಣಬಹುದು. ಕೆಲವೊಮ್ಮೆ, ಅವು ಎಲೆಯ ಮೇಲೆ ನಾಳದ ಉದ್ದಕ್ಕೂ ಸಮಾನಾಂತರವಾಗಿ ಅಥವಾ ಹಣ್ಣಿನ ಗೊನೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಸತ್ತ ಎಲೆಗಳನ್ನು ಎಳೆದು ತೆಗೆದಾಗ, ಆಂತರಿಕ ಅಂಗಾಂಶಗಳಲ್ಲಿ ಕಡು ಕಂದು ಕಲೆಗಳು ಅಥವಾ ಗೆರೆಗಳು ಗೋಚರಿಸುತ್ತವೆ. ಗೊನೆಗಳ ಬೆಳವಣಿಗೆಯಲ್ಲಿ ದೋಷಗಳು ಮತ್ತು ವಿರೂಪಗೊಂಡ ಹಣ್ಣುಗಳು ಕೂಡ ಈ ರೋಗದ ಲಕ್ಷಣಗಳಾಗಿವೆ. ವೈರಸ್ ತ್ವರಿತವಾಗಿ ಮತ್ತು ತೀವ್ರವಾಗಿ ಸೋಂಕನ್ನು ಹರಡಬಹುದು. ಇದರಿಂದ, ಹಣ್ಣಿನ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗಿ ನಷ್ಟಕ್ಕೆ ಕಾರಣವಾಗಬಹುದು.

Recommendations

ಜೈವಿಕ ನಿಯಂತ್ರಣ

ಜೈವಿಕ ನಿಯಂತ್ರಣ ಶಿಲೀಂಧ್ರ ಏಜೆಂಟ್ ವೆರ್ಟಿಸಿಲಿಯಮ್ ಲೆಕಾನಿಯನ್ನು ಗಿಡಹೇನುಗಳ ಸಂಖ್ಯೆ ನಿಯಂತ್ರಿಸಲು ಬಳಸಬಹುದು. ಅವುಗಳ ಸಂಖ್ಯೆ ಅಷ್ಟು ಅಧಿಕವಾಗಿಲ್ಲದಾಗ ಕೀಟನಾಶಕ ಸಾಬೂನುಗಳನ್ನು ಕೂಡಾ ಗಿಡಹೇನುಗಳನ್ನು ನಿಯಂತ್ರಿಸಲು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗವನ್ನು ಮೊದಲು ಪರಿಗಣಿಸಿ. ವೈರಸ್ ರೋಗಗಳಿಗೆ ನೇರ ರಾಸಾಯನಿಕ ಚಿಕಿತ್ಸೆ ಯಾವುದೂ ಇಲ್ಲ. ಆದಾಗ್ಯೂ, ಕೀಟನಾಶಕಗಳ ಬಳಕೆ ಮೂಲಕ ಒಂದು ಹಂತದವರೆಗೆ ಗಿಡಹೇನುಗಳ ಸಂಖ್ಯೆಯನ್ನು ನಿಯಂತ್ರಿಸಬಹುದು (ಉದಾಹರಣೆಗೆ - ಸೈಪರ್ ಮೆತ್ರಿನ್, ಅಸಿಟಮೈಡ್, ಕ್ಲೋರ್ ಪೈರಿಫೋಸ್ ) ಸಸ್ಯನಾಶಕಗಳನ್ನು ಕಡಿದ ಮರಗಳಿಂದ ಚಿಗುರುತ್ತಿರುವ ಸಸಿಗಳನ್ನು ಅಥವಾ ಸೋಂಕಿತ ಸಸ್ಯಗಳನ್ನು ಕೊಲ್ಲಲು ಬಳಸಬಹುದು.

ಅದಕ್ಕೆ ಏನು ಕಾರಣ

ವಿವಿಧ ಬೆಳವಣಿಗೆಯ ಹಂತಗಳಲ್ಲಿ ಬಾಳೆ ಮರಗಳನ್ನು ಬಾಧಿಸುವ ವೈರಸ್ ನಿಂದ ಈ ಲಕ್ಷಣಗಳು ಉಂಟಾಗುತ್ತವೆ. ಹಲವಾರು ಜಾತಿಯ ಗಿಡಹೇನುಗಳಿಂದ ಇವು ನಿರಂತರವಾಗಿ ಹರಡುತ್ತವೆ. ಸೋಂಕು ತಗುಲಿದ ಸಸ್ಯಗಳನ್ನು ತಿನ್ನುವಾಗ ಒಳಸೇರುವ ಈ ವೈರಸ್ ಗಳು ರೋಗವಾಹಕದೊಳಗೆ ಕೇವಲ ಸ್ವಲ್ಪ ಕಾಲ ಮಾತ್ರ ಬದುಕುಳಿಯುತ್ತವೆ. ತೋಟಗಳ ನಡುವೆ ಸೋಂಕಿತ ಸಸ್ಯಗಳನ್ನು ಸಾಗಿಸುವುದು ರೋಗ ಪ್ರಸರಣದ ಮತ್ತೊಂದು ಮಾರ್ಗವಾಗಿದೆ. ಹೂವುಗಳ ಪತ್ರಕಗಳ ಮೇಲೆ ಕಂಡುಬರುವ ವಿಶಿಷ್ಟವಾದ ಮೊಸಾಯಿಕ್ ಕಲೆಗಳಿಂದ ಈ ರೋಗಕ್ಕೆ ಈ ಹೆಸರು ಬಂದಿದೆ.


ಮುಂಜಾಗ್ರತಾ ಕ್ರಮಗಳು

  • ಬೀಜಗಳು ಅಥವಾ ಸಸಿಗಳನ್ನು ಪ್ರಮಾಣೀಕೃತ ರೋಗ-ಮುಕ್ತ ಮೂಲಗಳಿಂದಲೇ ಪಡೆಯಿರಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ಬೆಳೆಯನ್ನು ಪರಿಶೀಲಿಸಿ.
  • ಬೇರೆ ಬೇರೆ ತೋಟಗಳಲ್ಲಿ ಕೆಲಸ ಮಾಡುವಾಗ ಶುದ್ಧವಾದ ಉಪಕರಣಗಳು ಮತ್ತು ಸಲಕರಣೆಗಳನ್ನು ಬಳಸಿ.
  • ಶಂಕಿತ ರೋಗಲಕ್ಷಣಗಳಿರುವ ಸಸ್ಯಗಳನ್ನು ಕಿತ್ತು ನಾಶಪಡಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ