ಬಾಳೆಹಣ್ಣು

ಬಾಳೆಯ ಸ್ಟ್ರೀಕ್ ವೈರಸ್

Banana Streak Virus

ವೈರಸ್

5 mins to read

ಸಂಕ್ಷಿಪ್ತವಾಗಿ

  • ಎಲೆಯ ಮಧ್ಯಭಾಗದಿಂದ ಅಂಚಿನವರೆಗೂ, ಹಳದಿ ಗೆರೆಗಳು ಕಾಣುತ್ತವೆ.
  • ನಂತರದಲ್ಲಿ ಇವು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ.
  • ನಡು ನಡುವೆ ಹಳದಿ ಕಲೆಗಳಿರುತ್ತವೆ.
  • ಎಲೆಯು ಅಂಚಿನಲ್ಲಿ ಸಾಯಲು ಆರಂಭಿಸಿ ಮಧ್ಯನಾಳ ಮತ್ತು ತೊಟ್ಟಿನ ಕಡೆಗೆ ಸಾಗುತ್ತದೆ.
  • ಸಸ್ಯದ ಬೆಳವಣಿಗೆ ಸಾಮಾನ್ಯವಾಗಿ ಕುಂಠಿತವಾಗಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಬಾಳೆಹಣ್ಣು

ರೋಗಲಕ್ಷಣಗಳು

ಸೋಂಕು ಉಂಟುಮಾಡಿರುವ ವೈರಸ್ ನ ವಿಧ ಮತ್ತು ಪ್ರಮಾಣ, ಸಸ್ಯದ ಪ್ರಭೇದ, ಪರಿಸರ ಸ್ಥಿತಿಗಳ ಆಧಾರದ ಮೇಲೆ ರೋಗಲಕ್ಷಣಗಳು ವ್ಯಾಪಕವಾಗಿ ಬದಲಾಗಬಹುದು. ಅತ್ಯಂತ ಸಾಮಾನ್ಯ ರೋಗಲಕ್ಷಣವೆಂದರೆ ಎಲೆಯ ಮಧ್ಯಭಾಗದಿಂದ ಆರಂಭಿಸಿ ಅಂಚಿನ ಕಡೆ ಸಾಗುವ ಉದ್ದನೆಯ ಅಥವಾ ತುಂಡು ತುಂಡಾದ ಹಳದಿ ಪಟ್ಟೆಗಳು. ಈ ಗೆರೆಗಳು ನಂತರ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಹಳದಿ ಕಲೆ ಅಥವಾ ಕಣ್ಣಿನ ಆಕಾರದ ಮಾದರಿಗಳು ಈ ಗೆರೆಗಳ ನಡುವೆ ಕಾಣಿಸಿಕೊಳ್ಳುತ್ತದೆ. ಎಲೆಗಳ ಮೇಲೆ ನೆಕ್ರೋಸಿಸ್ ಕಾಣಲಾರಂಭಿಸುತ್ತದೆ. ಅಂಚುಗಳಲ್ಲಿ ಕೊಳೆತ ಆರಂಭವಾಗಿ, ಕೆಲವೊಮ್ಮೆ ಮಧ್ಯನಾಳ ಮತ್ತು ತೊಟ್ಟನ್ನೂ ಕೂಡ ಬಾಧಿಸುತ್ತದೆ. ಕೆಲವೊಮ್ಮೆ, ಕಾಂಡದ ಆಂತರಿಕ ಅಂಗಾಂಶಗಳು ಕೂಡ ಕೊಳೆಯುವಿಕೆಯಿಂದ ಪರಿಣಾಮಕ್ಕೊಳಗಾಗುತ್ತದೆ. ನಂತರದಲ್ಲಿ, ರೋಗಲಕ್ಷಣಗಳು ಕಡಿಮೆ ತಾಪಮಾನ ಮತ್ತು ಹಗಲು ಕಡಿಮೆ ಇರುವ ಪರಿಸ್ಥಿತಿಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಎಲ್ಲ ಎಲೆಗಳೂ ಬಾಧಿತವಾಗುವುದಿಲ್ಲ. ಆದರೆ ಸಸ್ಯದ ಬೆಳವಣಿಗೆ ಸಾಮಾನ್ಯವಾಗಿ ಕುಂಠಿತವಾಗುತ್ತದೆ. ಗೊನೆ ಮತ್ತು ಹಣ್ಣುಗಳ ಗಾತ್ರ ಸಣ್ಣದಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಪರಾವಲಂಬಿ ಕಣಜಗಳು, ಲೇಸ್ ವಿಂಗ್ಸ್ ಅಥವಾ ಹೂವರ್ ನೊಣಗಳು ಮತ್ತು ಲೇಡಿಬರ್ಡ್ ನಂತಹ ಜೈವಿಕ ನಿಯಂತ್ರಣ ಏಜೆಂಟ್ ಗಳನ್ನು ಬಿಳಿ ತಿಗಣೆಗಳ ಸಂಖ್ಯೆಯನ್ನು ನಿಯಂತ್ರಿಸಲು ಬಳಸಬಹುದು. ಸಂಖ್ಯೆಯು ಸಣ್ಣದಾಗಿದ್ದರೆ ಖನಿಜ ತೈಲಗಳು ಅಥವಾ ಬೇವಿನ ಎಣ್ಣೆಯನ್ನು ಎಲೆಗಳ ಮೇಲೆ ಸಿಂಪಡಿಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ವೈರಲ್ ರೋಗಗಳಿಗೆ ರಾಸಾಯನಿಕ ಚಿಕಿತ್ಸೆ ಇಲ್ಲ. ಬಿಳಿ ತಿಗಣೆಗಳ ಮೇಲಿರುವ ಮೇಣದ ರಕ್ಷಣಾತ್ಮಕ ಹೊದಿಕೆಯಿಂದಾಗಿ ಅವುಗಳನ್ನು ಕೊಲ್ಲುವುದು ಕಷ್ಟಕರವಾಗಿದೆ. ಡೆಲ್ಟಾಮೆಥ್ರಿನ್ ನಂತಹ ಕೀಟನಾಶಕಗಳೊಂದಿಗೆ ಚಿಕಿತ್ಸೆ ಮಾಡುವ ಮೂಲಕ ಬಿಳಿತಿಗಣೆಗಳ ಸಂಖ್ಯೆಯನ್ನು ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ರೋಗವು ವೈರಸ್ ಗಳ ಸಂಕೀರ್ಣದಿಂದ ಉಂಟಾಗುತ್ತದೆ. ಈ ರೋಗಲಕ್ಷಣಗಳ ಸ್ವರೂಪವು, ಸಸ್ಯಗಳಲ್ಲಿನ ವೈರಲ್ ಕಣಗಳ ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. ತಾಪಮಾನ ಮತ್ತು ಸಾಮಾನ್ಯ ಹವಾಮಾನ ಪರಿಸ್ಥಿತಿ ಕೂಡ ಸೋಂಕಿನ ಲಕ್ಷಣದ ಮೇಲೆ ಪರಿಣಾಮ ಬೀರುತ್ತವೆ. ಈ ವೈರಸ್ ಮರದಿಂದ ಮರಕ್ಕೆ ಅಥವಾ ಹೊಲಗಳ ಮಧ್ಯೆ ಹಲವಾರು ಜಾತಿಯ ಬಿಳಿ ತಿಗಣೆ( ಮಿಲಿಬಗ್) ಗಳ (ಸ್ಯೂಡೋಕೋಕ್ಸಿಡೆ) ಮೂಲಕ ಹರಡುತ್ತದೆ. ಸೋಂಕಿತ ಸಸಿ ಅಥವಾ ಬೀಜಗಳ ಬಳಕೆಯಿಂದಲೂ ಈ ರೋಗ ದೂರದವರೆಗೆ ಹರಡುತ್ತದೆ. ಇದು ಮಣ್ಣಿನಿಂದ ಹುಟ್ಟಿಕೊಳ್ಳುವ ರೋಗವಲ್ಲ. ಮತ್ತು ಹೊಲದಲ್ಲಿ ಕೆಲಸ ಮಾಡುವಾಗ ಆಗುವ ಯಾಂತ್ರಿಕ ಗಾಯಗಳ ಮೂಲಕ ಸಸ್ಯಗಳಿಗೆ ಆ ರೋಗ ಹರಡುವುದಿಲ್ಲ. ಇದು ಬಾಳೆಹಣ್ಣು ಮತ್ತು ಸಂಬಂಧಿತ ಪ್ರಭೇದದ ಗಿಡಗಳ ಮೇಲೆ ಪರಿಣಾಮ ಬೀರುವ, ವಿಶ್ವದಾದ್ಯಂತ ಇರುವ ಸಮಸ್ಯೆಯಾಗಿದೆ. ಇದರಿಂದ ಸಸ್ಯದ ಬೆಳವಣಿಗೆ, ಹಣ್ಣಿನ ಇಳುವರಿ ಮತ್ತು ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಉಪಕರಣಗಳು ಅಥವಾ ಕತ್ತರಿಸುವ ಯಾಂತ್ರಿಕ ಸಾಧನಗಳ ಮೂಲಕ ವೈರಸ್ ಹರಡುವುದು ಅಸಂಭವ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ವೈರಸ್ ಮುಕ್ತ ಸಸಿಗಳನ್ನು ಬಳಸಿ.
  • ಸೋಂಕಿತ ಸಸ್ಯಗಳನ್ನು ಕತ್ತರಿಸಿ ನಾಶ ಮಾಡಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ