ಪಪ್ಪಾಯಿ

ಪಪ್ಪಾಯಿಯ ಎಲೆ ಸುರುಳಿ ರೋಗ

PaLCV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಮೇಲಿನ ಎಲೆಗಳು ಕೆಳಕ್ಕೆ ಮತ್ತು ಒಳಕ್ಕೆ ಸುತ್ತಿಕೊಳ್ಳುತ್ತವೆ.
  • ಹೊರ ರಚನೆಗಳ ಉಪಸ್ಥಿತಿಯಿಂದ ನಾಳಗಳು ದಪ್ಪವಾಗುತ್ತವೆ.
  • ಎಲೆಗಳು ತೊಗಲಿನಂತಾಗುತ್ತವೆ ಮತ್ತು ಗಡಸಾಗುತ್ತವೆ.
  • ಎಲೆಗಲು ಉದುರುವುದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ.
  • ಕೆಲವೇ ಕೆಲವು ಸಣ್ಣ, ವಿರೂಪ ಹಣ್ಣುಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಪಪ್ಪಾಯಿ

ರೋಗಲಕ್ಷಣಗಳು

ಈ ರೋಗದ ಸ್ಪಷ್ಟ ಲಕ್ಷಣಗಳೆಂದರೆ ಎಲೆಗಳ ಕೆಳಮುಖ ಅಥವಾ ಒಳಮುಖವಾಗಿ ಸುರುಳಿ ಸುತ್ತುವುದು. ಇತರ ರೋಗಲಕ್ಷಣಗಳೆಂದರೆ ಎಲೆಯ ನಾಳಗಳು ದಪ್ಪವಾಗುವುದು, ಕೆಲವೊಮ್ಮೆ ಹೊರ ರಚನೆಗಳ ಬೆಳವಣಿಗೆಯೊಂದಿಗೆ, ಎಲೆಗಳು ತೊಗಲಿನಂತಾಗುತ್ತವೆ, ಮತ್ತು ಗಡಸಾಗುತ್ತವೆ. ತೊಟ್ಟುಗಳು ವಿರೂಪಗೊಳ್ಳುತ್ತವೆ. ಸಾಮಾನ್ಯವಾಗಿ ತಿರುಚಿದಂತಾಗುತ್ತವೆ. ಮೇಲಿನ ಎಲೆಗಳ ಮೇಲೆ ಹೆಚ್ಚು ಪರಿಣಾಮವಾಗುತ್ತದೆ. ರೋಗದ ನಂತರದ ಹಂತಗಳಲ್ಲಿ ಎಲೆಗಳು ಉದುರಬಹುದು. ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಹೂವುಗಳು ಅಥವಾ ಹಣ್ಣುಗಳ ಉತ್ಪಾದನೆ ಕುಸಿಯುತ್ತದೆ. ಹಣ್ಣುಗಳು ಇದ್ದರೂ ಸಣ್ಣದಾಗಿದ್ದು, ಆಕಾರದಲ್ಲಿ ವಿಕೃತವಾಗಿರುತ್ತವೆ ಮತ್ತು ಅಕಾಲಿಕವಾಗಿ ಉದುರುತ್ತವೆ.

Recommendations

ಜೈವಿಕ ನಿಯಂತ್ರಣ

ಗಿಡಹೇನುಗಳು ವೈರಸ್ ತೆಗೆದುಕೊಂಡು ಅದನ್ನು ಹರಡುವುದನ್ನು ತಡೆಗಟ್ಟಲು ಬಿಳಿ ತೈಲ ಮಿಶ್ರಣವನ್ನು (1%) ಸಿಂಪಡಿಸಬಹುದು.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವಿದ್ದರೆ ಅದನ್ನು ಪರಿಗಣಿಸಿ. ವೈರಲ್ ಸೋಂಕುಗಳಿಗೆ ರಾಸಾಯನಿಕ ಚಿಕಿತ್ಸೆ ಇಲ್ಲ. ಆದರೆ, ಬಿಳಿ ನೊಣಗಳ ಸಂಖ್ಯೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಮೂಲಕ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಬಹುದು. ಬಿತ್ತನೆ ಸಂದರ್ಭದಲ್ಲಿ ಮಣ್ಣಿಗೆ ಮತ್ತು 10 ದಿನಗಳ ಅಂತರದಲ್ಲಿ ಎಲೆಗಳಿಗೆ ಡೈಮೆತೊಯೇಟ್ ಅಥವಾ ಮೆಟಾಸಿಸ್ಟಾಕ್ಸ್ ಅನ್ನು 4-5 ಬಾರಿ ಸಿಂಪಡಿಸುವುದರಿಂದ ಬಿಳಿನೊಣಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಈ ವೈರಸ್ ಅನ್ನು ಹರಡುವ ಮುಖ್ಯ ವಾಹಕವೆಂದರೆ ವೈಟ್ ಫ್ಲೈ ಬೆಮಿಸಿಯ ಟಬಾಕಿ. ಇದು ಸಸ್ಯದಿಂದ ಸಸ್ಯಕ್ಕೆ ನಿರಂತರವಾದ ರೀತಿಯಲ್ಲಿ ಹರಡುತ್ತದೆ. ಅಂದರೆ, ವೈರಸ್ ಇನ್ನೂ ವಾಹಕದಲ್ಲಿ ಸಕ್ರಿಯವಾಗಿರುವಾಗಲೇ. ಪ್ರಸರಣವು ಕೆಲವು ಸೆಕೆಂಡುಗಳಲ್ಲಿ ಸಂಭವಿಸುತ್ತದೆ. ರೋಗ ಹರಡುವ ಇತರ ವಿಧಾನಗಳೆಂದರೆ ಸೋಂಕಿತ ಸಸಿ ಅಥವಾ ಬೀಜಗಳ ಮೂಲಕ. ಹಾಗೆಯೇ ಕಸಿ ಮಾಡುವ ವಸ್ತುಗಳ ಮೂಲಕವೂ ಹರಡುತ್ತವೆ. ಪಪ್ಪಾಯಿಯ ಎಲೆ ಸುರುಳಿ ವೈರಸ್ ತೋಟದಿಂದ ತೋಟಕ್ಕೆ ಯಾಂತ್ರಿಕ ಕೆಲಸಗಳ ಮೂಲಕ ಹರಡುವುದಿಲ್ಲ. ಪರ್ಯಾಯ ಆಶ್ರಯದಾತ ಸಸ್ಯಗಳೆಂದರೆ ಟೊಮೆಟೊ ಮತ್ತು ತಂಬಾಕು ಸಸ್ಯಗಳು. ವೈರಸ್ ವ್ಯಾಪಕವಾಗಿ ಹರಡಿದೆ, ಆದರೆ ಇದುವರೆಗೆ ಸೀಮಿತ ಪ್ರಕರಣಗಳು ಮಾತ್ರ ಕಂಡುಬಂದಿವೆ. ಆದಾಗ್ಯೂ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಇದು ತೀವ್ರ ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳು ಲಭ್ಯವಿವೆಯೇ ಪರೀಕ್ಷಿಸಿ.
  • ಪಪ್ಪಾಯಗಳ ಸಾಮೀಪ್ಯದಲ್ಲಿ ಪರ್ಯಾಯ ಆಶ್ರಯದಾತ ಸಸಿಗಳನ್ನು ಬೆಳೆಸಬೇಡಿ.
  • ಪ್ರಯೋಜನಕಾರಿ ಕೀಟಗಳಿಗೆ ಅನುಕೂಲವಾಗುವಂತೆ ವ್ಯಾಪಕ ಕೀಟನಾಶಕ ಬಳಕೆಯನ್ನು ತಡೆಗಟ್ಟಿ.
  • ಸೋಂಕಿತ ಸಸ್ಯಗಳನ್ನು ಕಿತ್ತು ಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಸುಗ್ಗಿಯ ನಂತರ ಸಸ್ಯದ ಯಾವುದೇ ಉಳಿಕೆಗಳನ್ನು ಬಿಡದಂತೆ ಜಾಗರೂಕರಾಗಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ