ಕಲ್ಲಂಗಡಿ

ರಿಂಗ್ ಸ್ಪಾಟ್ ವೈರಸ್

PRSV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ಕಡು ಹಸಿರು ಉಂಗುರಗಳು ಕಾಣಿಸಿಕೊಳ್ಳುತ್ತವೆ.
  • ಎಲೆಗಳ ಮೇಲೆ ಹಳದಿ ಮೊಸಾಯಿಕ್ ಮಾದರಿಗಳು ಕಂಡುಬರುತ್ತವೆ.
  • ಕಾಂಡಗಳು ಮತ್ತು ಗೆಲ್ಲುಗಳ ಮೇಲೆ ನೀರಿನಲ್ಲಿ-ನೆನೆಸಿದಂತಹ ಕಲೆಗಳು ಮತ್ತು ಗೆರೆಗಳು ಗೋಚರಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಪಪ್ಪಾಯಿ
ಇನ್ನಷ್ಟು

ಕಲ್ಲಂಗಡಿ

ರೋಗಲಕ್ಷಣಗಳು

ಸೋಂಕಿನ ಸಮಯದಲ್ಲಿ ಸಸ್ಯದ ವಯಸ್ಸು, ಸಸ್ಯದ ಚಟುವಟಿಕೆ ಮತ್ತು ವೈರಸ್ ನ ಸಾಮರ್ಥ್ಯವನ್ನು ಅವಲಂಬಿಸಿ ರೋಗಲಕ್ಷಣಗಳು ಕೊಂಚ ಬದಲಾಗಬಹುದು. ಗಾಢ-ಹಸಿರು ಗುಳ್ಳೆಗಳಂತಹ ರಚನೆಗಳು ಮೊದಲಿಗೆ ಎಲೆಗಳಲ್ಲಿ ಕಂಡುಬರುತ್ತವೆ. ನಂತರ, ಇವು ವಿಭಿನ್ನ ಹಸಿರು ಛಾಯೆಗಳಲ್ಲಿ ಮಚ್ಚೆಯ ಮಾದರಿಯಲ್ಲಿ ಬೆಳೆಯುತ್ತವೆ. ರೋಗದ ನಂತರದ ಹಂತಗಳಲ್ಲಿ, ಎಲೆಗಳು ತೆಳ್ಳಗಾಗುತ್ತವೆ ಮತ್ತು ಹಳದಿ ಮತ್ತು ಕಂದು ಬಣ್ಣದ ನಿರ್ಜೀವ ಚುಕ್ಕೆಗಳನ್ನು ಮೊಸಾಯಿಕ್ ಮಾದರಿಯಲ್ಲಿ ಪಡೆಯುತ್ತವೆ. ಎಲೆಯ ಗಾತ್ರ ಗಣನೀಯವಾಗಿ ಕಡಿಮೆಯಾಗುತ್ತದೆ ಇದರ ಪರಿಣಾಮವಾಗಿ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಮೇಲಾವರಣ ಸಣ್ಣದಾಗುತ್ತದೆ. ನೀರಿನಲ್ಲಿ-ನೆನೆಸಿದಂತಹ ಕ್ಲೋರೋಟಿಕ್ ಕಲೆಗಳು ಮತ್ತು ಜಿಡ್ಡಿನಂತಹ ಗೆರೆಗಳು ಸಹ ಕಾಂಡಗಳು ಮತ್ತು ತೊಟ್ಟುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸೋಂಕಿಗೊಳಗಾದ ಹಣ್ಣುಗಳ ಮೇಲೆ ಅನೇಕ, ಗಾಢ ಹಸಿರು ಬಣ್ಣದ, ಗುಳಿ ಬಿದ್ದಂತಹ, ಜಿಡ್ಡಿನ ಉಂಗುರದಂತಹ ರಚನೆಗಳು ಕಾಣಿಸಿಕೊಳ್ಳುತ್ತವೆ. ಹಣ್ಣುಗಳ ಗಾತ್ರ ಕಡಿಮೆ ಇರುತ್ತದೆ ಮತ್ತು ಆಕಾರ ವಿರೂಪವಾಗಿರುತ್ತದೆ. ಆರಂಭಿಕ ಹಂತದಲ್ಲೇ ಸೋಂಕು ತಗುಲಿದರೆ, ಹಣ್ಣುಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಗಿಡಹೇನುಗಳು ವೈರಸ್ ಅನ್ನು ತೆಗೆದುಕೊಂಡು, ಹರಡುವುದನ್ನು ತಡೆಗಟ್ಟಲು 1% ಸಾಂದ್ರತೆಯಲ್ಲಿ ಬಿಳಿ ಎಣ್ಣೆ ಮಿಶ್ರಣವನ್ನು ಸಿಂಪಡಿಸಿ. ಕೆಲವು ರೀತಿಯ ಬ್ಯಾಕ್ಟೀರಿಯಾಗಳು, ಯೀಸ್ಟ್ಗಳು, ಆಕ್ಟಿನೊಮೈಸೆಟ್ಸ್ ಮತ್ತು ದ್ಯುತಿಸಂಶ್ಲೇಷಕ ಬ್ಯಾಕ್ಟೀರಿಯಾಗಳು ಸೇರಿದಂತೆ ಹಲವು ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಮಿಶ್ರಣಗಳು ರೋಗ ಪ್ರಕರಣಗಳನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಜೊತೆಯಾಗಿರುವ ಸಮಗ್ರ ಮಾರ್ಗವನ್ನು ಮೊದಲು ಪರಿಗಣಿಸಿ. ವೈರಲ್ ಸೋಂಕುಗಳಿಗೆ ನೇರ ರಾಸಾಯನಿಕ ಚಿಕಿತ್ಸೆ ಇಲ್ಲ. ಆದಾಗ್ಯೂ, ಡಿ-ಮೆಥೊಯೇಟ್ ಅಥವಾ ಅಜಡಿರಾಕ್ಟಿನ್ ಗಳನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಗಿಡಹೇನುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಮೊದಲ ಲಕ್ಷಣಗಳು ಕಾಣಿಸಿಕೊಂಡ ನಂತರ ಪ್ರತಿ ಹದಿನೈದು ದಿನಗಳಿಗೊಮ್ಮೆ ಇದನ್ನು ಸಿಂಪಡಿಸಿ.

ಅದಕ್ಕೆ ಏನು ಕಾರಣ

ಈ ವೈರಸ್ ಅನೇಕ ಗಿಡಹೇನುಗಳ ಮೂಲಕ ಅನಿಯಮಿತವಾಗಿ ಹರಡುತ್ತದೆ. ಇದು ಗಿಡಹೇನುಗಳಲ್ಲಿ ಸಂತಾನಭಿವೃದ್ದಿ ಮಾಡುವುದಿಲ್ಲವಾದ್ದರಿಂದ, ಸಸ್ಯದಿಂದ ಸಸ್ಯಕ್ಕೆ ಹರಡುವ ಕ್ರಿಯೆಯು ಅಲ್ಪ ಕಾಲಾವಧಿಯಲ್ಲಿ (ಒಂದು ನಿಮಿಷಕ್ಕಿಂತಲೂ ಕಡಿಮೆ) ಆಗಬೇಕು. ಕಲ್ಲಂಗಡಿ ಮತ್ತು ಇತರ ಕುಕುರ್ಬಿಟ್ ಜಾತಿಯ ಸಸ್ಯಗಳನ್ನು ಈ ವೈರಸ್ ಪರ್ಯಾಯ ಆತಿಥೇಯ ಸಸ್ಯಗಳಾಗಿ ಹೊಂದಿದ್ದರೂ, ಇವುಗಳ ಆದ್ಯತೆ ಪಪ್ಪಾಯ ಆಗಿರುತ್ತದೆ. ರೆಕ್ಕೆಗಳುಳ್ಳ ಗಿಡಹೇನುಗಳ ಸಂಖ್ಯೆ ಅತಿಯಾಗಿರುವ ಕಾಲದಲ್ಲೇ ಸೋಂಕು ತಗುಲಿದರೆ ರೋಗ ತೋಟದಲ್ಲಿ ಅತೀ ವೇಗವಾಗಿ ಹರಡಬಹುದು. ತಂಪು ಹವಾಮಾನ ಎಲೆಗಳ ಮೇಲಿನ (ಮೊಸಾಯಿಕ್ ಮಾದರಿ ಮತ್ತು ವಿರೂಪತೆ) ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಪಡೆಯಿರಿ.
  • ನಿರೋಧಕ ಸಸ್ಯಗಳು ಲಭ್ಯವಿದೆಯೇ ಪರಿಶೀಲಿಸಿ.
  • ರೋಗ ಮುಕ್ತ ಪ್ರದೇಶಗಳಲ್ಲಿ ಸಸಿ ನೆಡಿ.
  • ತೋಟದ ಸುತ್ತ ಮೆಕ್ಕೆ ಜೋಳ ಅಥವಾ ಹೈಬಿಸ್ಕಸ್ ಸಬ್ದಾರಿಫಾ ಗಳಂತಹ ಆಶ್ರಯದಾತವಲ್ಲದ ಸಸ್ಯಗಳನ್ನು ನೆಡಿ.
  • ಒಂದೇ ಪ್ರದೇಶದಲ್ಲಿ ವಿವಿಧ ಕುಕುರ್ಬಿಟ್ ಗಿಡಗಳನ್ನು ಬೆಳೆಯುವುದನ್ನು ತಪ್ಪಿಸಿ.
  • ಗಿಡಹೇನುಗಳ ಗರಿಷ್ಟ ಸಂಖ್ಯೆಯನ್ನು ತಪ್ಪಿಸುವಂತೆ ನಾಟಿಯ ಸಮಯವನ್ನು ಹೊಂದಿಸಿ.
  • ವೈರಸ್ ನಿಂದ ಹಾನಿಗೊಳಗಾದ ಸಸ್ಯದ ಭಾಗಗಳನ್ನು ತೆಗೆದುಹಾಕಿ.
  • ಜಮೀನು ಮತ್ತು ಅದರ ಸುತ್ತಲೂ ಕಳೆಗಳನ್ನು ನಿಯಂತ್ರಿಸಿ.
  • ವೈರಸ್ ಅನ್ನು ಹರಡುವ ಕೀಟಗಳನ್ನು ತಡೆಗಟ್ಟಲು ಪರದೆಗಳನ್ನು ಬಳಸಿ.
  • ರೋಗಲಕ್ಷಣಗಳು ಮತ್ತಷ್ಟು ಹದಗೆಡದಂತೆ ತಡೆಯಲು ಉತ್ತಮ ರಸಗೊಬ್ಬರಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ