ಸೋಯಾಬೀನ್

ಹುರುಳಿಯ ಗೋಲ್ಡನ್ ಮೊಸಾಯಿಕ್ ವೈರಸ್

BGMV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಪ್ರಕಾಶಮಾನವಾದ ಹಳದಿ, ಕ್ಲೋರೋಟಿಕ್ ನಾಳಗಳು ಎಲೆಗೆ ಒಂದು ವಿಶಿಷ್ಟವಾದ ಬಲೆಯ-ರೀತಿಯ ರೂಪವನ್ನು ನೀಡುತ್ತವೆ.
  • ಕಡು ಹಸಿರು ಬಣ್ಣದ ಅಂಗಾಂಶಗಳೊಂದಿಗೆ ಹಳದಿ ನಾಳಗಳು ವಿರುದ್ಧವಾಗಿ ಕಾಣುವುದರಿಂದ ಈ ರೂಪ ಬರುತ್ತದೆ.
  • ಕ್ಲೋರೋಸಿಸ್ ನಂತರ ಎಲೆಗಳ ಉಳಿದ ಭಾಗಕ್ಕೆ ಹರಡಿ, ಹಳದಿಯ ವಿಭಿನ್ನ ಛಾಯೆಗಳ ಮಚ್ಚೆಯ ಮಾದರಿಯೊಂದಿಗೆ ಎಲೆಯನ್ನು ಆವರಿಸುತ್ತದೆ.
  • ಎಲೆಗಳು ತಿರುಚಾಗಿ, ಸುರುಳಿಯಾಗಿ, ಗಟ್ಟಿಯಾಗಿ ಮತ್ತು ತೊಗಲಿನಂತೆ ಆಗಬಹುದು.
  • ಬೀಜಕೋಶಗಳು ವಿಸ್ತರಿಸಲು ವಿಫಲಾಗುತ್ತವೆ ಮತ್ತು ಕೆಳಗೆ ಸುರುಳಿಯಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು


ಸೋಯಾಬೀನ್

ರೋಗಲಕ್ಷಣಗಳು

ಮೊದಲ ರೋಗಲಕ್ಷಣಗಳು ಸಾಮಾನ್ಯವಾಗಿ ಮೂರು ಎಳೆಯ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೊಸದಾಗಿ ಹೊರಹೊಮ್ಮಿದ ಎಲೆಗಳಲ್ಲಿ ಪ್ರಕಾಶಮಾನವಾದ ಹಳದಿ, ಕ್ಲೋರೊಟಿಕ್ ನಾಳಗಳು ಕಂಡುಬರುತ್ತವೆ. ನಾಳ ಕ್ಲೋರೋಸಿಸ್ ಮತ್ತಷ್ಟು ಹರಡುತ್ತದೆ ಮತ್ತು ಎಲೆಗೆ ಒಂದು ವಿಶಿಷ್ಟವಾದ ಬಲೆಯ-ರೀತಿಯ ರೂಪವನ್ನು ನೀಡುತ್ತದೆ. ಕಡು ಹಸಿರು ಬಣ್ಣದ ಅಂಗಾಂಶಗಳೊಂದಿಗೆ ಹಳದಿ ನಾಳಗಳು ವಿರುದ್ಧವಾಗಿ ಕಾಣುವುದರಿಂದ ಈ ರೂಪ ಬರುತ್ತದೆ. ಕ್ಲೋರೋಸಿಸ್, ನಂತರ ಎಲೆಗಳ ಉಳಿದ ಭಾಗಕ್ಕೆ ಹರಡಿ, ಹಳದಿಯ ವಿಭಿನ್ನ ಛಾಯೆಗಳ ಮಚ್ಚೆಯ ಮಾದರಿಯೊಂದಿಗೆ ಎಲೆಯನ್ನು ಆವರಿಸುತ್ತದೆ. ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಹೊರಹೊಮ್ಮಿದ ಎಲೆಗಳು ತಿರುಚಾಗಿ, ಸುರುಳಿಯಾಗಿ, ಗಟ್ಟಿಯಾಗಿ ಮತ್ತು ತೊಗಲಿನಂತೆ ಆಗಬಹುದು. ಬಹಳ ಆರಂಭಿಕ ಹಂತದಲ್ಲಿ ಸೋಂಕಿಗೆ ಒಳಗಾದ ಸಸ್ಯಗಳಲ್ಲಿ ಕಡಿಮೆ ಬೀಜಗಳು ಮತ್ತು ಕಳಪೆ ಬೀಜ ಉತ್ಪಾದನೆ ಮತ್ತು ಕಳಪೆ ಬೀಜದ ಗುಣಮಟ್ಟ ಇರುತ್ತದೆ.

Recommendations

ಜೈವಿಕ ನಿಯಂತ್ರಣ

ಇರೆಸಿನ್ ಹೆರ್ಬಿಸ್ಟಿ (ಹರ್ಬ್ಸ್ಟ್ ನ ಬ್ಲಡ್ ಲೀಫ್ ) ಮತ್ತು ಫೈಟೊಲಕ್ಕಾ ಥೈರಿಸ್ಫ್ಲೋರಾಗಳ ಎಲೆಗಳ ಸಾರಗಳನ್ನು ಬಳಸುವುದರಿಂದ ಭಾಗಶಃ ವೈರಸ್ ಸೋಂಕನ್ನು ತಡೆಗಟ್ಟಬಹುದು. ಮತ್ತು ಜಮೀನಿನಲ್ಲಿ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರಯೋಜನಕಾರಿ ಶಿಲೀಂಧ್ರಗಳಾದ ಬೆವೆರಿಯಾ ಬಾಸ್ಸಿಯಾನದ ಸಾರಗಳು ವಯಸ್ಕ ಕೀಟ, ಮೊಟ್ಟೆಗಳು ಮತ್ತು ಬೆಮಿಸಿಯಾ ಟಾಬಾಸಿಗಳ ಮರಿಹುಳುಗಳ ವಿರುದ್ಧ ಕೀಟನಾಶಕ ಗುಣಗಳನ್ನು ಹೊಂದಿರುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವೈರಸ್ ಸೋಂಕಿನ ರಾಸಾಯನಿಕ ನಿಯಂತ್ರಣ ಸಾಧ್ಯವಿಲ್ಲ. ಬಿಳಿಯ ನೊಣದ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಕೆಲವೇ ಕೆಲವು ಚಿಕಿತ್ಸೆಗಳು ಪರಿಣಾಮಕಾರಿ.

ಅದಕ್ಕೆ ಏನು ಕಾರಣ

ಬೆಮಿಸಿಯ ಟಾಬಾಸಿ ಎಂಬ ಬಿಳಿ ನೊಣದ ಮೂಲಕ ವೈರಸ್ ನಿರಂತರವಾಗಿ ಹರಡುತ್ತದೆ. ಹೊಲದ ಕೆಲಸದ ಸಮಯದಲ್ಲಿ ಯಾಂತ್ರಿಕ ಗಾಯದ ಮೂಲಕವೂ ಸಹ ಸಸ್ಯಗಳು ಸೋಂಕಿಗೆ ಒಳಗಾಗಬಹುದು. ವೈರಸ್ ಸಸ್ಯದಿಂದ ಸಸ್ಯಕ್ಕೆ ವ್ಯವಸ್ಥಿತವಾಗಿ ವರ್ಗಾವಣೆ ಆಗುವುದಿಲ್ಲ, ಅಥವಾ ಅದು ಬೀಜ- ಅಥವಾ ಪರಾಗದಿಂದ ಹರಡುವ ಸೋಂಕು ಕೂಡ ಅಲ್ಲ. ತಾವಾಗಿಯೇ ಬೆಳೆದ ಸಸ್ಯಗಳು ಅಥವಾ ಆಶ್ರಯದಾತ ಕಳೆಗಳು ಕ್ಷೇತ್ರದಲ್ಲಿ ಕಂಡುಬಂದಾಗ ಹುರುಳಿ ಸಾಮಾನ್ಯವಾಗಿ ಸೋಂಕಿಗೆ ಒಳಗಾಗುತ್ತದೆ. ಸಸ್ಯಗಳ ಸಾರಿಗೆ ಅಂಗಾಂಶಗಳಲ್ಲಿ ಈ ವೈರಸ್ ಸಂಖ್ಯಾಭಿವೃದ್ದಿ ಮಾಡುತ್ತದೆ. ರೋಗ ಮೊದಲು ನಾಳಗಳ ಮೇಲೆ ಏಕೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ಗೋಚರ ಲಕ್ಷಣಗಳು ಮತ್ತು ಅವುಗಳ ತೀವ್ರತೆಯು ಸುಮಾರು 28 °C ನಷ್ಟಿರುವ ಹೆಚ್ಚಿದ ತಾಪಮಾನಗಳಲ್ಲಿ ಅಧಿಕವಿರುತ್ತದೆ. ತಂಪಾದ ಪರಿಸ್ಥಿತಿಗಳು (ಸುಮಾರು 22 °C) ವೈರಸ್ ಸಂಖ್ಯಾಭಿವೃದ್ಧಿ ಮತ್ತು ರೋಗಲಕ್ಷಣಗಳ ಬೆಳವಣಿಗೆಯನ್ನು ವಿಳಂಬಗೊಳಿಸಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮಾರುಕಟ್ಟೆಯಲ್ಲಿ ನಿರೋಧಕ ಪ್ರಭೇದಗಳಿವೆಯೇ ಪರೀಕ್ಷಿಸಿ.
  • ಜಮೀನು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆಗಳು ಮತ್ತು ಪರ್ಯಾಯ ಆಶ್ರಯಾದಾತ ಸಸ್ಯಗಳನ್ನು ತೆಗೆದುಹಾಕಿ.
  • ನೊಣಗಳು ಮೇಲ್ಛಾವಣಿ ಪ್ರವೇಶಿಸದಂತೆ ತಡೆಗಟ್ಟಲು ಸಸ್ಯ ಸಾಂದ್ರತೆಯನ್ನು ಹೆಚ್ಚಿಸಿ.
  • ಬಿಳಿ ನೊಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮಲ್ಚ್ ಗಳನ್ನು ಬಳಸಬಹುದು.
  • ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ