ಬಟಾಣಿ

ಬಟಾಣಿಯ ಕಪ್ಪುಚುಕ್ಕೆ

Mycosphaerella pinodes and Phoma medicaginis var. pinodella

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಕಾಯಿಗಳ ಮೇಲೆ ಚುಕ್ಕೆಗಳು.
  • ರೋಗಪೀಡಿತ ಎಲೆ ಮತ್ತು ಕಾಯಿಗಳ ಮೇಲೆ ಅಂಕುಡೊಂಕಾದ ದಟ್ಟ ಕಂದು ಬಣ್ಣದಿಂದ‌ ಕಪ್ಪು ಬಣ್ಣದವರೆಗಿನ ಗಾಯಗಳು ಅಥವಾ ಮಚ್ಚೆಗಳು.
  • ಗುಳಿ ಬಿದ್ದು ಕಂದು ಅಥವಾ ನೇರಳೆ-ಕಪ್ಪು ಬಣ್ಣಕ್ಕೆ ತಿರುಗಿರುವುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಬಟಾಣಿ

ಬಟಾಣಿ

ರೋಗಲಕ್ಷಣಗಳು

ಕಪ್ಪುಚುಕ್ಕೆಯು ಕಾಂಡ, ಎಲೆ, ಕಾಯಿಗಳು ಮತ್ತು ಬೀಜಗಳ ಮೇಲೆ ಗಾಯ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಆರ್ದ್ರ ವಾತಾವರಣದಲ್ಲಿ ಗಿಡದ ಎಲೆಗಳ ಅಡಿಯಲ್ಲಿ ಮೊದಲ ಲಕ್ಷಣಗಳು ಕಂಡುಬರುತ್ತವೆ. ಅಂಕುಡೊಂಕಾದ, ದಟ್ಟ ಕಂದು ಬಣ್ಣದ ಚುಕ್ಕೆಗಳು ಎಲೆಗಳ ಮೇಲೆ ಚದುರಿದಂತೆ ಇರುತ್ತವೆ. ಆರ್ದ್ರತೆ ಮುಂದುವರೆದಾಗ ಈ ಚುಕ್ಕೆಗಳು ದೊಡ್ಡದಾಗಿ ಒಂದುಗೂಡಿ ಕೆಳಗಿನ ಎಲೆಗಳು ಸಂಪೂರ್ಣವಾಗಿ ಬಿಳುಚಿಕೊಳ್ಳುತ್ತವೆ. ಕೆಳ ಕಾಂಡದ ಗಾಯಗಳು ನೇರಳೆ-ಕಪ್ಪು ಬಣ್ಣದ ಗೆರೆಗಳಂತೆ ಕಾಣುತ್ತವೆ. ಇದರಿಂದಾಗಿ ಗಿಡದ ಬುಡ ಕೊಳೆತು ಗಿಡಗಳು ನೆಲಕಚ್ಚುತ್ತವೆ. ಕಾಯಿಗಳ ಮೇಲಿರುವ ಚುಕ್ಕೆಗಳು ನೇರಳೆ-ಕಪ್ಪು ಬಣ್ಣಕ್ಕಿದ್ದು ನಂತರ ಒಂದಗೂಡಿ ಗುಳಿ ಬೀಳಬಹುದು. ರೋಗಪೀಡಿತ ಬೀಜಗಳು ಬಣ್ಣ ಕಳೆದುಕೊಂಡು ನೇರಳೆ-ಕಂದು ಬಣ್ಣಕ್ಕೆ ತಿರುಗಬಹುದು.

Recommendations

ಜೈವಿಕ ನಿಯಂತ್ರಣ

ಪ್ರತಿರೋಧಕ ಪ್ರಭೇದಗಳನ್ನ ಬೆಳೆಯಿರಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಲಭ್ಯವಿರುವ ಜೈವಿಕ ಚಿಕಿತ್ಸೆಗಳಿಂದ ಕೂಡಿದ ಸಮಗ್ರವಾದ ಮಾರ್ಗವನ್ನು ಆಯ್ದುಕೊಳ್ಳಿ. ಎಲ್ಲಾ ಬಟಾಣಿ ಬಿತ್ತನೆ ಬೀಜಗಳನ್ನ ಮ್ಯಾಂಕೊಝೆಬ್ (mancozeb) ತರದ ಶಿಲೀಂಧ್ರ ನಾಶಕಗಳಿಂದ ಅದ್ದಿ ತೆಗೆಯಬೇಕೆಂದು ಶಿಫಾರಸು ಮಾಡಲಾಗಿದೆ.

ಅದಕ್ಕೆ ಏನು ಕಾರಣ

ಈ ತೊಂದರೆಗೆ ಕಾರಣ ಮೈಕೋಸ್ಫಾರೆಲ್ಲ ಪಿನೋಡ್ಸ್, ಫೋಮ ಮೆಡಿಕಾಗಿನಿಸ್ ಎಂಬ ಶಿಲೀಂಧ್ರಗಳು. ಪಿನೊಡೆಲ್ಲ ಬೀಜಗಳ ಮೂಲಕ, ಮಣ್ಣಿನ ಮೂಲಕ ಹರಡಬಹುದು ಅಥವಾ ಬಟಾಣಿಯ ಕಸಕಡ್ಡಿಗಳಲ್ಲಿ ಜೀವಂತವಾಗಿರಬಹುದು. ಹಳೇ ಬಟಾಣಿ ಕಸಕಡ್ಡಿಗಳಲ್ಲಿ ಉತ್ಪತ್ತಿಯಾಗಿ ಸೇರಿಕೊಂಡಿರುವ ಬೀಜಕಗಳು ಗಾಳಿಯ ಮೂಲಕ ಹೊಸ ಬೆಳೆಗೆ ಅಂಟಿದಾಗ ರೋಗ ಹಿಡಿಯುತ್ತದೆ. ಗಿಡದ ಬೆಳವಣಿಗೆಯ ಯಾವುದೇ ಹಂತದಲ್ಲೂ ಸೋಂಕು ಉಂಟಾಗಬಹುದು. ಸೋಂಕಿತ ಗಿಡಗಳಲ್ಲಿ ಉತ್ಪತ್ತಿಯಾದ ಬೀಜಕಗಳು ಪಕ್ಕದ ಆರೋಗ್ಯಕರ ಗಿಡಗಳಿಗೆ ಗಾಳಿ ಮತ್ತು ಮಳೆ ಹನಿ ರಾಚುವುದರಿಂದ ಹರಡಬಹುದು. ರೋಗಪೀಡಿತ ಬೀಜಗಳನ್ನು ಬಿತ್ತುವುದರಿಂದಲೂ ರೋಗ ಹರಡಬಹುದು. ತೇವಭರಿತ ವಾತಾವರಣದಲ್ಲಿ ರೋಗ ವೇಗವಾಗಿ ಹರಡಬಹುದು. ಒಣ ವರ್ಷವಾದರೆ ರೋಗಪೀಡಿತ ಬೀಜ ನೆಟ್ಟರೂ ರೋಗದ ಗಿಡ ಹುಟ್ಟದಿರುವ ಸಾಧ್ಯತೆ ಇದೆ ಆದರೆ ತೇವಭರಿತ ಸ್ಥಿತಿಯಲ್ಲಿ ತೀವ್ರ ರೋಗದ ಸಾಧ್ಯತೆ ಹೆಚ್ಚು. ಮಣ್ಣಿನಲ್ಲಿ ಶಿಲೀಂಧ್ರ ಹಲವಾರು ವರ್ಷಗಳ ಕಾಲ ಜೀವಂತವಾಗಿರಬಲ್ಲದು.


ಮುಂಜಾಗ್ರತಾ ಕ್ರಮಗಳು

  • ಸ್ವಚ್ಛವಾದ ಉಳುಮೆ ಅನುಸರಿಸಿ.
  • ಗಿಡ ನೆಡುವಾಗ ಹೋದ ವರ್ಷದ ಬಟಾಣಿ ರಾಶಿಗಿಂತ 500 ಮೀಟರ್ ಅಂತರ ಇರುವಂತೆ ನೋಡಿಕೊಳ್ಳಿ.
  • ಹಳೆಯ ಮತ್ತು ಒಡೆದ ಬೀಜಗಳು ಮೊಳಕೆಯೊಡೆಯುವ ಕಸುವು ಕಳೆದುಕೊಂಡು ಸುಲಭವಾಗಿ ರೋಗಕ್ಕೆ ತುತ್ತಾಗುವುದರಿಂದ ಅಂತವುಗಳನ್ನು ಬಳಸಬೇಡಿ.
  • ಮೊದಲು ಬಿತ್ತುವಾಗ ಹೆಚ್ಚಿನ ದರದಲ್ಲಿ ಬೀಜ ಚೆಲ್ಲಬೇಡಿ.
  • ಇದರಿಂದ ಬೀಜಕಗಳು ರೋಗಕಾರಕಗಳಿಗೆ ಈಡಾಗುವ ಸಾಧ್ಯತೆ ಹೆಚ್ಚುತ್ತದೆ ಮತ್ತು ಗಿಡಗಳ ಪೊದೆ ಹೆಚ್ಚಾಗಿ ಗಿಡ ನೆಲಕಚ್ಚುತ್ತವೆ.
  • ಈ ಎಲ್ಲಾ ಅಂಶಗಳು ರೋಗದ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
  • ಸಾಧ್ಯವಾದಾಗೆಲ್ಲ ಬೆಳೆ ಬದಲಾಯಿಸುತ್ತಿರಿ.
  • ಒಂದೇ ಹೊಲದಲ್ಲಿ ಮೂರು ವರ್ಷದ ಅವಧಿಯಲ್ಲಿ ಬಟಾಣಿಯನ್ನ ಒಂದಕ್ಕಿಂತ ಹೆಚ್ಚು ಬಾರಿ ಬೆಳೆಯಬಾರದು.
  • ರೋಗ ಉಂಟಾದರೆ ಈ ಬದಲಾವಣೆಯ ಅವಧಿಯನ್ನ 4-5 ವರ್ಷಕ್ಕೆ ಒಂದು ಸಲದಷ್ಟು ಹೆಚ್ಚಿಸಿ.
  • ರೋಗ ಹಿಡಿದ ಬಟಾಣಿ ಕಸಕಡ್ಡಿಯನ್ನ ಮತ್ತು ತಾವಾಗೇ ಹುಟ್ಟಿದ ಗಿಡಗಳನ್ನ ಮೇಯಿಸುವುದು ಮತ್ತು ಸುಟ್ಟು ಹಾಕುವುದರ ಮೂಲಕ ನಾಶ ಪಡಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ