ತಂಬಾಕು

ತಂಬಾಕಿನ ನೀಲಿ ಬೂಷ್ಟು

Peronospora hyoscyami

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬೆಳೆದ ಎಲೆಗಳ ಮೇಲೆ ಹಳದಿ ಕಲೆಗಳು.
  • ಎಲೆಯ ಕೆಳಭಾಗದಲ್ಲಿ ಬೂದುಬಣ್ಣದ ಬೂಷ್ಟು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ತಂಬಾಕು

ತಂಬಾಕು

ರೋಗಲಕ್ಷಣಗಳು

ಒಂದು ಅಥವಾ ಗುಂಪುಗಳಲ್ಲಿ ಹಳದಿ ಚುಕ್ಕೆಗಳು ಹಳೆಯ, ಮಬ್ಬಾದ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಹೆಚ್ಚುವರಿಯಾಗಿ, ಎಲೆಗಳ ಗಾಯಗಳ ಕೆಳಭಾಗದಲ್ಲಿ ಅಗಲವಾದ ಬೂದುಬಣ್ಣದ ಬೂಷ್ಟು ಕಾಣಿಸಿಕೊಳ್ಳಬಹುದು. ಕಲೆಗಳು ಹರಡಬಹುದು ಮತ್ತು ಎಲೆಗಳು ಅಂತಿಮವಾಗಿ ಸಾಯುತ್ತವೆ. ಅಂತಿಮವಾಗಿ, ಸಸ್ಯವು ಸಾಮಾನ್ಯಕ್ಕಿಂತ ಚಿಕ್ಕದಾಗಿ ಬೆಳೆಯುತ್ತದೆ. ಕೆಲವೊಮ್ಮೆ, ಶಿಲೀಂಧ್ರವು ಕಾಂಡದ ಉದ್ದಕ್ಕೂ ಹರಡಬಹುದು. ಇದು ಯಾವ ಹಂತದಲ್ಲಾದರೂ ಸಸ್ಯವು ಬೆಳೆಯುವುದನ್ನು ನಿಲ್ಲಿಸಿ ಒಣಗುವಂತೆ ಮಾಡಬಹುದು. ಈ ಕಾಂಡಗಳ ಒಳಗೆ ಕಂದು ಬಣ್ಣದ ಗೆರೆಗಳನ್ನು ಕಾಣಬಹುದು. ನರ್ಸರಿಯಲ್ಲಿ ಈ ರೋಗದ ಚಿಹ್ನೆಯೇನೆಂದರೆ ಸತ್ತ ಅಥವಾ ಸಾಯುತ್ತಿರುವ ಚಿಗುರುಗಳು. ಮೊದಲಿಗೆ, ಎಲೆಗಳ ಮೇಲ್ಭಾಗವು ಸಾಮಾನ್ಯದಂತೆ ಕಾಣಿಸಬಹುದು. ಆದರೆ ಒಂದು ಅಥವಾ ಎರಡು ದಿನಗಳ ನಂತರ, ಹಳದಿ ಕಲೆಗಳು ಬೆಳೆಯುತ್ತವೆ. ಚಿಗುರುಗಳು ಸಾಯಲು ಪ್ರಾರಂಭವಾಗುತ್ತವೆ ಮತ್ತು ತಿಳಿ ಕಂದು ಬಣ್ಣಕ್ಕೆ ತಿರುಗುತ್ತವೆ.

Recommendations

ಜೈವಿಕ ನಿಯಂತ್ರಣ

ಪ್ರಸ್ತುತ, ನೀಲಿ ಬೂಷ್ಟು ರೋಗವನ್ನು ನಿಯಂತ್ರಿಸಲು ಯಾವುದೇ ಜೈವಿಕ ಉತ್ಪನ್ನಗಳು ಲಭ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಸಮಶೀತೋಷ್ಣ ಮತ್ತು ಉಪೋಷ್ಣವಲಯದ ತಂಬಾಕು ಪ್ರದೇಶಗಳಲ್ಲಿ ನೀಲಿ ಬೂಷ್ಟಿಗೆ ರಾಸಾಯನಿಕ ನಿಯಂತ್ರಣದ ಅಗತ್ಯವಿರುತ್ತದೆ. ಡಿಥಿಯೋಕಾರ್ಬಮೇಟ್‌ಗಳು ಅಥವಾ ರೆಸಿಡ್ಯುಯಲ್ ಚಟುವಟಿಕೆಯೊಂದಿಗೆ ವ್ಯವಸ್ಥಿತ ಉತ್ಪನ್ನಗಳನ್ನು ಬಳಸಲಾಗುತ್ತದೆ. ನಿಮ್ಮ ಪ್ರದೇಶಕ್ಕೆ ನಿಯಂತ್ರಿತ ಕೀಟನಾಶಕಗಳನ್ನು ಬಳಸಿ. ಸರಿಯಾದ ಬಳಕೆಗಾಗಿ ಯಾವಾಗಲೂ ಲೇಬಲ್ ಅನ್ನು ಅನುಸರಿಸಿ. ನಿಮ್ಮ ಆಯ್ಕೆಯ ಕೀಟನಾಶಕಕ್ಕೆ ಇರುವ ರೋಗಕಾರಕದ ಪ್ರತಿರೋಧದ ಬಗ್ಗೆ ತಿಳಿದುಕೊಳ್ಳಿ. ವ್ಯವಸ್ಥಿತ ಸೋಂಕಿನ ವಿರುದ್ಧ ರಾಸಾಯನಿಕ ಸ್ಪ್ರೇಗಳು ಪರಿಣಾಮಕಾರಿಯಾಗಿರುವುದಿಲ್ಲ.

ಅದಕ್ಕೆ ಏನು ಕಾರಣ

ಪೆರೊನೊಸ್ಪೊರಾ ಹೈಯೊಸ್ಕಿಯಾಮಿ ಎಂಬ ಸಸ್ಯ ರೋಗಕಾರಕದಿಂದ ಈ ಹಾನಿ ಉಂಟಾಗುತ್ತದೆ. ಇದು ನೀಲಿ ಬೂಷ್ಟಿಗೆ ಕಾರಣವಾಗುತ್ತದೆ. ಇದು ತಂಬಾಕು ಸಸ್ಯಗಳ ಮೇಲೆ ಪರಿಣಾಮ ಬೀರುವ ಶಿಲೀಂಧ್ರ ರೋಗವಾಗಿದೆ. ಇದು ಗಾಳಿಯಿಂದ ಹಾರಿ ಬಂದ ಬೀಜಕಗಳು ಮತ್ತು ಬಾಧಿತ ಕಸಿ ಮೂಲಕ ಹರಡುತ್ತದೆ. ಒಮ್ಮೆ ಬಂದ  ನಂತರ, ಅದು ಸಸ್ಯದ ಅಂಗಾಂಶಕ್ಕೆ ತಗುಲುವ ಮೂಲಕ ಬೆಳೆಯುತ್ತದೆ. ಸೂಕ್ತವಾದ ಪರಿಸ್ಥಿತಿಗಳಲ್ಲಿ, ಆರಂಭಿಕ ಬಾಧೆಯ ನಂತರ 7-10 ದಿನಗಳಲ್ಲಿ ಶಿಲೀಂಧ್ರವು ಮುಂದಿನ ಪೀಳಿಗೆಯ ಬೀಜಕಗಳನ್ನು ಉತ್ಪಾದಿಸುತ್ತದೆ. ಬೀಜಕಗಳನ್ನು ಉತ್ಪಾದಿಸಲು ಶಿಲೀಂಧ್ರಕ್ಕೆ ತಂಪಾದ, ಆರ್ದ್ರ ಮತ್ತು ಮೋಡ ಕವಿದ ವಾತಾವರಣದ ಅಗತ್ಯವಿರುತ್ತದೆ ಮತ್ತು ಈ ಪರಿಸ್ಥಿತಿಗಳಲ್ಲಿ ರೋಗದ ಸಾಂಕ್ರಾಮಿಕತೆ ತೀವ್ರವಾಗಬಹುದು. ಹವಾಮಾನವು ಬಿಸಿಲು, ಶೆಖೆ ಮತ್ತು ಶುಷ್ಕವಾಗಿದ್ದಾಗ, ಶಿಲೀಂಧ್ರವು ಅಷ್ಟಾಗಿ ಬದುಕುಳಿಯುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ತಂಬಾಕು ಸಸ್ಯಗಳಲ್ಲಿ ನೀಲಿ ಬೂಷ್ಟು ಬಾಧೆಯನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳು ಅತ್ಯಗತ್ಯ.
  • ತಂಬಾಕು ಸಸ್ಯಕ್ಕೆ ಬಾಧೆ ತಗುಲಿಸಲು ಮತ್ತು ಸಂತಾನೋತ್ಪತ್ತಿ ಮಾಡಲು ರೋಗಕಾರಕಕ್ಕೆ ತಂಪಾದ, ಆರ್ದ್ರ ವಾತಾವರಣದ ಅಗತ್ಯತೆ ಹೆಚ್ಚಿದೆ.
  • ಬೆಳೆಯುತ್ತಿರುವ ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
  • ನೀರುಹಾಯಿ ನೀರಾವರಿ ಮಾಡಬೇಡಿ ಇದು ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ.
  • ಹನಿ ನೀರಾವರಿಯು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ನೀರುಹಾಯಿ ನೀರಾವರಿಗೆ ಹೋಲಿಸಿದರೆ ನೀಲಿ ಬೂಷ್ಟಿನ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ಸಸ್ಯಗಳ ನಡುವೆ ಸೂಕ್ತ ಅಂತರವನ್ನು ಕಾಪಾಡಿಕೊಳ್ಳಿ ಮತ್ತು ಬೂಷ್ಟು ಹೆಚ್ಚಾಗಲು ಕಾರಣವಾಗುವ ಸಾರಜನಕ ರಸಗೊಬ್ಬರದ ಬಳಕೆಯನ್ನು ಮಿತಿಗೊಳಿಸಿ.
  • ರೋಗ ತಗುಲದ ತಳಿಗಳಿಗಾಗಿ ಹುಡುಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ