ಶುಂಠಿ

ಶುಂಠಿಯ ಎಲೆ ಚುಕ್ಕೆ ರೋಗ

Phyllosticta zingiberis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ನೀರಿನಲ್ಲಿ ನೆನೆಸಿದಂತಹ ಎಲೆ ಚುಕ್ಕೆಗಳು.
  • ಕಪ್ಪು ಅಂಚು ಇರುವ ಮತ್ತು ಹಳದಿ ವಲಯದಿಂದ ಆವೃತ್ತವಾದ ಬಿಳಿ ಚುಕ್ಕೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಶುಂಠಿ

ಶುಂಠಿ

ರೋಗಲಕ್ಷಣಗಳು

ರೋಗವು ಎಳೆಯ ಎಲೆಗಳ ಮೇಲೆ ಸಣ್ಣ, ಅಂಡಾಕಾರದ ನೀರಿನಲ್ಲಿ ನೆನೆಸಿದಂತಹ ಕಲೆಗಳಾಗಿ ಪ್ರಾರಂಭವಾಗುತ್ತದೆ. ನಂತರ ಅವು ಹಳದಿ ಹೊರ ವರ್ತುಲದಿಂದ ಸುತ್ತುವರಿದ ಗಾಢ ಅಂಚುಗಳೊಂದಿಗೆ ಮಧ್ಯದಲ್ಲಿ ಬಿಳಿಯಾಗುತ್ತವೆ. ಕಲೆಗಳು ಹಿಗ್ಗುತ್ತವೆ, ಒಗ್ಗೂಡುತ್ತವೆ ಮತ್ತು ದೊಡ್ಡ ನೆಕ್ರೋಟಿಕ್ ಗಾಯಗಳನ್ನು ರೂಪಿಸುತ್ತವೆ. ಎಲೆಯ ಹೆಚ್ಚಿನ ಭಾಗಗಳು ಕಲೆಗಳಿಂದ ಮುಚ್ಚಿದಾಗ, ಅದು ಒಣಗುತ್ತದೆ ಮತ್ತು ಅಂತಿಮವಾಗಿ ಸಾಯುತ್ತದೆ.

Recommendations

ಜೈವಿಕ ನಿಯಂತ್ರಣ

ಈ ರೋಗದ ವಿರುದ್ಧ ಲಭ್ಯವಿರುವ ಯಾವುದೇ ಜೈವಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ತಿಳಿದಿಲ್ಲ. ರೋಗಲಕ್ಷಣಗಳ ಸಂಭವನೀಯತೆ ಅಥವಾ ಗುರುತ್ವವನ್ನು ಕಡಿಮೆ ಮಾಡಲು ಯಾವುದೇ ಯಶಸ್ವಿ ವಿಧಾನದ ಬಗ್ಗೆ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರೋಗವನ್ನು ಮೊದಲು ಗಮನಿಸಿದಾಗ ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸಿ ಅಥವಾ ಹೆಕ್ಸಾಕೋನಜೋಲ್ (0.1%), ಪ್ರೊಪಿಕೊನಜೋಲ್ (0.1%) ಅಥವಾ ಕಾರ್ಬೆಂಡಜಿಮ್ + ಮ್ಯಾಂಕೋಜೆಬ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ಬಳಸಿ ಮತ್ತು ನಂತರ 20 ದಿನಗಳ ಅಂತರದಲ್ಲಿ ಎರಡು ಬಾರಿ ಎಲೆಗಳ ಸಿಂಪಡಣೆಯನ್ನು ಪುನರಾವರ್ತಿಸಿ.

ಅದಕ್ಕೆ ಏನು ಕಾರಣ

ಮಣ್ಣಿನಿಂದ ಹರಡುವ ಶಿಲೀಂಧ್ರ ಫಿಲೋಸ್ಟಿಕ್ಟಾ ಜಿಂಜಿಬೆರಿಸ್ ನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಮಣ್ಣಿನಲ್ಲಿರುವ ಬೀಜಕಗಳು ಅಥವಾ ಸೋಂಕಿತ ಸಸ್ಯ ಅವಶೇಷಗಳಿಂದ ಪ್ರಾಥಮಿಕ ಸೋಂಕು ಸಂಭವಿಸುತ್ತದೆ. ಗಾಳಿ ಮತ್ತು ಮಳೆಯ ತುಂತುರುಗಳು ದ್ವಿತೀಯಕ ಸೋಂಕಿಗೆ ಕಾರಣವಾಗುತ್ತವೆ. ರೋಗಕಾರಕವು ಹೆಚ್ಚಿನ ಆರ್ದ್ರತೆ ಮತ್ತು 20 ° C ರಿಂದ 28° C ನಡುವಿನ ತಾಪಮಾನದತ್ತ ಹೆಚ್ಚಿನ ಒಲವು ತೋರುತ್ತದೆ. ಈ ರೋಗವು ರೈಜೋಮ್‌ಗಳ ಸಂಖ್ಯೆ ಮತ್ತು ಗಾತ್ರದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಎರಡು ವಾರ ಹಳೆಯ ಎಲೆಗಳು ಹೆಚ್ಚಾಗಿ ರೋಗಕ್ಕೆ ಒಳಗಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಮಧ್ಯಮ ನಿರೋಧಕ ತಳಿಗಳನ್ನು ಬೆಳೆಸಿ.
  • ಎಲೆಗಳನ್ನು ತೆಗೆಯಿರಿ ಮತ್ತು/ಅಥವಾ ಸೋಂಕಿತ ಸಸ್ಯಗಳನ್ನು ಬೇರುಸಹಿತ ಕಿತ್ತುಹಾಕಿ ಅದನ್ನು ನಾಶಮಾಡಿ.
  • ಮಣ್ಣಿನ ಸಿಡಿಯುವಿಕೆಯನ್ನು ಕಡಿಮೆ ಮಾಡಲು ಸರಿಯಾದ ಹಸಿರು ಹಸಿಗೊಬ್ಬರವನ್ನು ಬಳಸಿ.
  • ರೋಗವನ್ನು ಕಡಿಮೆ ಮಾಡಲು ನೆರಳು ಒದಗಿಸಿ.
  • ಬೆಳೆ ಸರದಿ ರೋಗದ ಸಂಭವವನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ