ದ್ರಾಕ್ಷಿ

ಬುಡ ಕೊಳೆತ

Cylindrocarpon

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಇಂಟರ್ನೋಡ್ ಗಳು(ಗಂಟುಗಳ ನಡುವಣ ಸ್ಥಳ) ಸಣ್ಣದಾಗುತ್ತವೆ.
  • ಎಲೆಯ ಗಾತ್ರ ಮತ್ತು ಎಲೆಗಳು ಕಡಿಮೆಯಾಗುತ್ತವೆ.
  • ಎಲೆಗಳು ಹಳದಿಯಾಗುತ್ತವೆ ಮತ್ತು ಬಾಡುತ್ತವೆ.
  • ಬೇರುಗಳು ಮತ್ತು ತೊಗಟೆಯ ಮೇಲೆ ಕಪ್ಪಾದ ಗಾಯಗಳು ನೆಲದಿಂದ ಸ್ವಲ್ಪ ಮೇಲೆ ಕಾಣಿಸಿಕೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಎಳೆಯ ಬಳ್ಳಿಗಳು ಬಾಧಿತವಾಗುತ್ತವೆ ಮತ್ತು ಸಣ್ಣ ಇಂಟರ್ನೋಡ್‌ಗಳ ಲಕ್ಷಣಗಳನ್ನು ತೋರಿಸುತ್ತವೆ. ಎಲೆಗಳ ಗಾತ್ರ ಮತ್ತು ಎಲೆಗಳು ಕಡಿಮೆಯಾಗುತ್ತವೆ. 3 ರಿಂದ 5 ವರ್ಷ ವಯಸ್ಸಿನ ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ಒಣಗುತ್ತವೆ ಮತ್ತು ಅಂತಿಮವಾಗಿ ಅಕಾಲಿಕವಾಗಿ ಉದುರುತ್ತವೆ. ಬೇರುಗಳು ಕಡಿಮೆಯಾಗುತ್ತವೆ ಮತ್ತು ಗುಳಿಬೀಳುತ್ತವೆ. ಕಪ್ಪು ಗಾಯಗಳು ಅವುಗಳ ಮೇಲೆ ಕಂಡುಬರುತ್ತವೆ. ಇವು ಸಂಪೂರ್ಣ ಸಸ್ಯದ ಬಾಡುವಿಕೆ ಮತ್ತು ಸಾಯುವಿಕೆಗೆ(ಡೈ ಬ್ಯಾಕ್) ಕಾರಣವಾಗುತ್ತದೆ. ಬೇರಿನ ಅಂಗಾಂಶವು ನೇರಳೆ ಬಣ್ಣಕ್ಕೆ ತಿರುಗುವುದು ಸಾಮಾನ್ಯವಾಗಿದೆ. ಬಾಧಿತ ಬಳ್ಳಿಗಳು ಸಣ್ಣ ಗಾತ್ರದ ಕಾಂಡಗಳು, ಸಣ್ಣ ಇಂಟರ್ನೋಡ್‌ಗಳು, ಅಸಮವಾದ ಮರದ ಪಕ್ವತೆಯೊಂದಿಗೆ ಕಡಿಮೆ ಚೇತನವನ್ನು ತೋರಿಸುತ್ತವೆ. ಬಾಧಿತ ಬಳ್ಳಿಗಳ ಒಳಭಾಗ ಕೂಡ ಸಣ್ಣದಾಗಿರುತ್ತದೆ ಮತ್ತು ಬಣ್ಣ ಕಳೆದುಕೊಳ್ಳುತ್ತದೆ. ಎಳೆಯ ಬಳ್ಳಿಗಳು ಹೆಚ್ಚು ಬೇಗ ಪರಿಣಾಮಕ್ಕೆ ಒಳಗಾಗುತ್ತವೆ ಆದರೆ ಹಳೆಯ ಬಳ್ಳಿಗಳು ನಿಧಾನವಾಗಿ ಅವನತಿಯನ್ನು ತೋರಿಸುತ್ತವೆ. ಎಳೆಯ ಬಳ್ಳಿಗಳು ದಾಳಿಗೊಳಗಾದಾಗ, ಅವು ಬೇಗನೆ ಸಾಯುತ್ತವೆ. ಆದರೆ ಬಳ್ಳಿಗಳು ಬಲಿತಂತೆ , ಸೋಂಕು ನಿಧಾನ ಅವನತಿಗೆ ಕಾರಣವಾಗುತ್ತದೆ ಮತ್ತು ಬಳ್ಳಿಗಳು ಸಾಯಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

Recommendations

ಜೈವಿಕ ನಿಯಂತ್ರಣ

ತಡೆಗಟ್ಟುವ ಕ್ರಮವಾಗಿ ಸಮರುವಿಕೆಯ ಗಾಯಗಳ ಮೇಲೆ, ಪ್ರಸರಣ ಸಾಮಾಗ್ರಿಗಳ ತುದಿಗಳು ಮತ್ತು ಕಸಿಯ ಕೂಡುವಿಕೆಯ ಸ್ಥಳಗಳಲ್ಲಿ ಟ್ರೈಕೋಡರ್ಮಾ ಎಸ್ಪಿಯನ್ನು ಹಚ್ಚಿ. ಸುಪ್ತ ನರ್ಸರಿ ಬಳ್ಳಿಗಳನ್ನು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬಿಸಿನೀರು ಮತ್ತು ಟ್ರೈಕೋಡರ್ಮಾದೊಂದಿಗೆ ಸಂಸ್ಕರಿಸಿ. ಸಸ್ಯಗಳಿಗೆ ಪೋಷಕಾಂಶಗಳ ಕೊರತೆಯಿಂದ ಒತ್ತಡವಿರುವ ಸಂದರ್ಭಗಳಿಗೆ ಸಸ್ಯಗಳ ಪ್ರತಿರೋಧವನ್ನು ಹೆಚ್ಚಿಸಲು ಟ್ರೈಕೋಡರ್ಮಾ ಎಸ್ಪಿಪಿ., ಮೈಕೋರೈಜೆ ಮತ್ತು ಗೊಬ್ಬರಗಳ ಮೂಲಕ ಮಣ್ಣಿನ ತಿದ್ದುಪಡಿ ಮಾಡಿದರೆ ಪರಿಣಾಮಕಾರಿಯಾಗುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಇಂದಿನವರೆಗೆ, ಈ ಶಿಲೀಂಧ್ರಗಳ ವಿರುದ್ಧ ಹೋರಾಡುವ ಯಾವುದೇ ರಾಸಾಯನಿಕ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ.

ಅದಕ್ಕೆ ಏನು ಕಾರಣ

ದ್ರಾಕ್ಷಿಯಲ್ಲಿ ಕಪ್ಪು ಬುಡ ಕೊಳೆಯುವಿಕೆಯ ಲಕ್ಷಣಗಳು ಸಿಲಿಂಡ್ರೋಕಾಪಾನ್‌ನ ಹಲವಾರು ಮಣ್ಣಿನಿಂದ ಹರಡುವ ಶಿಲೀಂಧ್ರಗಳಿಂದ ಉಂಟಾಗುತ್ತವೆ. ಮುಖ್ಯವಾಗಿ 2 ರಿಂದ 8 ವರ್ಷಗಳ ನಡುವಿನ ಎಳೆಯ ದ್ರಾಕ್ಷಿ ಬಳ್ಳಿಗಳು ಶಿಲೀಂಧ್ರಗಳಿಂದ ಬಾಧಿತವಾಗುತ್ತವೆ. ಶಿಲೀಂಧ್ರಗಳು ಗಾಯಗಳು ಅಥವಾ ಬೇರುಗಳಲ್ಲಿನ ನೈಸರ್ಗಿಕ ತೆರೆಯುವಿಕೆಗಳ ಮೂಲಕ ಬಳ್ಳಿಯನ್ನು ಪ್ರವೇಶಿಸುತ್ತವೆ. ದ್ರಾಕ್ಷಿಗಳಿಗೆ ನೀರು ಅಥವಾ ಪೋಷಕಾಂಶ ಕಡಿಮೆ ಇದ್ದಾಗ ರೋಗಕ್ಕೆ ಹೆಚ್ಚಾಗಿ ಒಳಗಾಗುತ್ತವೆ. ಎಳೆಯ ಸಸ್ಯಗಳ ಮೇಲೆ ಹೆಚ್ಚಿನ ಹಣ್ಣಿನ ಹೊರೆಗಳು, ಕಳಪೆ ಒಳಚರಂಡಿ ಮತ್ತು ದಟ್ಟವಾದ ಒತ್ತಾದ ಮಣ್ಣು ಸಹ ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಬಳ್ಳಿಗಳನ್ನು ಚೆನ್ನಾಗಿ ನೀರು ಬರಿದಾಗುವ ಮಣ್ಣಿನಲ್ಲಿ ಅಥವಾ ಎತ್ತರದ ಮಡುಗಳಲ್ಲಿ ನೆಡಬೇಕು.
  • ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ ಬಳ್ಳಿಗಳನ್ನು ಮಾತ್ರ ನೆಡಬೇಕು.
  • ಹನಿ ನೀರಾವರಿ ಮತ್ತು ಸರಿಯಾಗಿ ಗೊಬ್ಬರವನ್ನು ಬಳಸುವ ಮೂಲಕ ಸಸ್ಯದ ಒತ್ತಡವನ್ನು ತಪ್ಪಿಸಿ.
  • ಬಳ್ಳಿಗಳೊಳಗೆ ರೋಗ ಪ್ರವೇಶಿಸದಂತೆ ರಕ್ಷಿಸಲು ಸಮರುವಿಕೆ ಅಥವಾ ಗಾಯಗಳನ್ನು ಕಸಿ ಮಾಡುವ ಕಟ್ಟುನಿಟ್ಟಾದ ನೈರ್ಮಲ್ಯ ನಿರ್ವಹಣೆಯನ್ನು ಅಭ್ಯಾಸ ಮಾಡಿ.
  • ಕಸಿ ಮಾಡಿದ ತಕ್ಷಣ ಸಸ್ಯ ಬೆಳವಣಿಗೆಯ ನಿಯಂತ್ರಕಗಳು ಅಥವಾ ಶಿಲೀಂಧ್ರನಾಶಕಗಳನ್ನು ಹೊಂದಿರುವ ಮೇಣಗಳಲ್ಲಿ ನಿಮ್ಮ ಬಳ್ಳಿಗಳನ್ನು ಅದ್ದಿ.
  • ಸಾಧ್ಯವಾದರೆ, ಮತ್ತೆ ಗಿಡ ನೆಡುವ ಮೊದಲು ಸ್ವಲ್ಪ ಸಮಯ ನೆಲವನ್ನು ಖಾಲಿ ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ