ದ್ರಾಕ್ಷಿ

ದ್ರಾಕ್ಷಿಯ ತುಕ್ಕು ರೋಗ

Phakopsora euvitis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಯ ಕೆಳಭಾಗದಲ್ಲಿ ಕಿತ್ತಳೆ-ಕಂದು ಬಣ್ಣದ ಪುಡಿಯಂತಹ ರಾಶಿಗಳು.
  • ಅಕಾಲಿಕ ಎಲೆ ಉದುರುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಆರಂಭದಲ್ಲಿ ಕಿತ್ತಳೆ-ಕಂದು ಬಣ್ಣದ ಪುಡಿಯಂತಹ ರಾಶಿಗಳನ್ನು ಎಲೆಯ ಕೆಳಭಾಗದಲ್ಲಿ ಕಾಣಬಹುದು. ಸಣ್ಣ ಹಳದಿಯಿಂದ ಕಂದು ಬಣ್ಣದ ಗಾಯಗಳು ನಂತರ ಎಲೆಗಳ ಎರಡೂ ಬದಿಗಳಲ್ಲಿ ಕಂಡುಬರುತ್ತವೆ. ರೋಗವು ಬೆಳೆದಂತೆ ಕಿತ್ತಳೆ ಬಣ್ಣದ ರಾಶಿಗಳು ಗಾಢ-ಕಂದು ಬಣ್ಣವಾಗಿ ಬಹುತೇಕ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಉದ್ದವಾದ ಗಾಯಗಳನ್ನು ರೂಪಿಸುತ್ತವೆ. ದೊಡ್ಡ ಮಟ್ಟದ ಮುತ್ತಿಕೊಳ್ಳುವಿಕೆಯಿಂದ ಇಡೀ ಮರವು ಹಳದಿ ಅಥವಾ ಕಂದು ಬಣ್ಣವಾಗುತ್ತದೆ. ಮತ್ತು ಅಂತಿಮವಾಗಿ ಅಕಾಲಿಕ ಎಲೆ ಉದುರುವಿಕೆಗೆ ಕಾರಣವಾಗುತ್ತದೆ. ಮುಂದಿನ ಬೆಳವಣಿಗೆಯ ಋತುವಿನಲ್ಲಿ ಚಿಗುರುಗಳು ಕಳಪೆ ಬೆಳವಣಿಗೆಯನ್ನು ಹೊಂದಿದ್ದು, ಬಳ್ಳಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ರೋಗವು ಕಳಪೆ ಚಿಗುರಿನ ಬೆಳವಣಿಗೆಗೆ ಕಾರಣವಾಗಬಹುದು. ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇಳುವರಿ ನಷ್ಟವನ್ನು ಉಂಟುಮಾಡಬಹುದು.

Recommendations

ಜೈವಿಕ ನಿಯಂತ್ರಣ

ಗಂಧಕ ಹೊಂದಿರುವ ಎಲೆ ಸಿಂಪಡಕ ಶಿಲೀಂಧ್ರನಾಶಕವನ್ನು ಬಳಸಿ. ಶಿಲೀಂಧ್ರನಾಶಕವು ರೋಗಕಾರಕದ ವಿರುದ್ಧ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಮಳೆಯ ವಾತಾವರಣದಲ್ಲಿ ಸಿಂಪಡಿಸುವುದನ್ನು ತಪ್ಪಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೋರ್ಡೆಕ್ಸ್ ಮಿಶ್ರಣ, ಕ್ಯಾಪ್ಟಾಫೋಲ್, ಡಿಫೋಲೇಟನ್, ಪ್ರೋಪಿಕೊನಜೋಲ್, ಟೆಬುಕೊನಜೋಲ್ ಅಥವಾ ಅಜೋಕ್ಸಿಸ್ಟ್ರೋಬಿನ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ಬಳಸಿ. ಇದು ರೋಗದ ಸಂಭವವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ನಂತರದ ಬೆಳವಣಿಗೆಯ ಋತುಗಳಲ್ಲಿ ಹದಿನೈದು ದಿನಗಳ ಅಂತರದಲ್ಲಿ ಬೇಕೋರ್ (0.1%) 3-4 ಸಿಂಪಡಣೆಗಳನ್ನು ಮಾಡುವ ಮೂಲಕ ದ್ರಾಕ್ಷಿತೋಟಗಳಲ್ಲಿ ತುಕ್ಕುರೋಗ ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಫಾಕೋಪ್ಸೊರಾ ವಿಟಿಸ್ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಶಿಲೀಂಧ್ರಗಳ ಬೀಜಕಗಳು ಸಸ್ಯದ ಅವಶೇಷಗಳು ಮತ್ತು ಪರ್ಯಾಯ ಅತಿಥೇಯ ಸಸ್ಯಗಳ ಮೇಲೆ ಉಳಿದುಕೊಳ್ಳುತ್ತವೆ ಮತ್ತು ಗಾಳಿಯ ಮೂಲಕ ಹರಡುತ್ತವೆ. ತುಕ್ಕುರೋಗದ ರೋಗಕಾರಕವು ಎಲೆಯ ಕೆಳಗಿನ ಮೇಲ್ಮೈಯಲ್ಲಿ ಕಿತ್ತಳೆ ಬಣ್ಣದ ಕಣಗಳ ರೂಪದಲ್ಲಿ ಕಂಡುಬರುವ ಕಲೆಗಳಲ್ಲಿ ಬೆಳವಣಿಗೆಯಾಗುತ್ತದೆ. ಯೂರಿಡಿನೋಸ್ಪೋರ್‌ಗಳ ಹಳದಿ ಕಿತ್ತಳೆ ಬಣ್ಣದ ರಾಶಿಗಳು ಎಲೆಯ ಕೆಳಗಿನ ಭಾಗದಲ್ಲಿ ಉತ್ಪತ್ತಿಯಾಗುತ್ತವೆ. ಮೇಲಿನ ಮೇಲ್ಮೈಯಲ್ಲಿ ಗಾಢವಾದ ನೆಕ್ರೋಟಿಕ್ ಕಲೆಗಳು ಕಂಡುಬರುತ್ತವೆ. 20 ° C ಗಿಂತ ಹೆಚ್ಚಿನ ತಾಪಮಾನ ಮತ್ತು ಆರ್ದ್ರ ವಾತಾವರಣವು ರೋಗದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ಬೀಜಕಗಳು ಗಾಳಿ ಮತ್ತು ವಾಯು ಪ್ರವಾಹಗಳಿಂದ ಸುಲಭವಾಗಿ ಸಾಗಿ ಹೋಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ಎಲೆಯ ಕೆಳಭಾಗದಲ್ಲಿ ತುಕ್ಕಿನಂತಹ ರೋಗಲಕ್ಷಣಗಳಿಗಾಗಿ ನಿಮ್ಮ ಬಳ್ಳಿಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಸೋಂಕಿತ ಸಸ್ಯದ ಭಾಗಗಳನ್ನು ಸಂಗ್ರಹಿಸಿ ಸುಟ್ಟುಹಾಕಿ.
  • ಉತ್ತಮ ಗಾಳಿಯ ಪ್ರಸರಣವನ್ನು ಒದಗಿಸಲು ಬಳ್ಳಿಗಳನ್ನು ಸಮರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ