ಸೇಬು

ಸೇಬಿನ ಸೂಟಿ ಬ್ಲಾಚ್

Phyllachora pomigena

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣಿನ ಮೇಲ್ಮೈಯಲ್ಲಿ ಗಾಢ ಹಸಿರು ಬಣ್ಣದಿಂದ ಹಿಡಿದು ಕಪ್ಪು ಮಸಿ ಬಣ್ಣದವರೆಗಿನ ಶಿಲೀಂಧ್ರಗಳ ಬೆಳವಣಿಗೆ.
  • ವೃತ್ತಾಕಾರದಿಂದ ಅನಿಯಮಿತ ಪ್ರತ್ಯೇಕ ತೇಪೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೇಬು

ರೋಗಲಕ್ಷಣಗಳು

ಅನಿಯಮಿತ ಆಕಾರದ ಬಾಹ್ಯರೇಖೆಯೊಂದಿಗೆ ಹಣ್ಣಿನ ಮೇಲ್ಮೈಯಲ್ಲಿ ಕಂದು ಬಣ್ಣದಿಂದ ಮಂದ ಕಪ್ಪು ಬಣ್ಣದ ಮಸಿ ಮಚ್ಚೆಗಳಿರುತ್ತವೆ ಮತ್ತು ಇದು 5 ಮಿಮೀ ವ್ಯಾಸ ಅಥವಾ ಇನ್ನೂ ದೊಡ್ಡದಾಗಿರಬಹುದು. ಕಲೆಗಳು ಸಂಪೂರ್ಣ ಹಣ್ಣನ್ನು ಮುಚ್ಚಲು ಒಟ್ಟಿಗೆ ಬರಬಹುದು. ಮಸಿ ಮಚ್ಚೆಯು ಹಣ್ಣಿನ ಮೇಲ್ಮೈಯಲ್ಲಿ ಮಸಿ ಅಥವಾ ಮೋಡದಂತಹ ಕಲೆಗಳಾಗಿ ಕಾಣಿಸಿಕೊಳ್ಳುತ್ತದೆ. ಮಚ್ಚೆಗಳು ಅನಿರ್ದಿಷ್ಟ ಬಾಹ್ಯರೇಖೆಯೊಂದಿಗೆ ಆಲಿವ್ ಹಸಿರು ಬಣ್ಣದ್ದಾಗಿರುತ್ತವೆ. ಮಚ್ಚೆಗಳು ಸಾಮಾನ್ಯವಾಗಿ ಒಂದು ಇಂಚಿನ ನಾಲ್ಕನೇ ಒಂದು ಭಾಗದ ವ್ಯಾಸ ಹೊಂದಿರುತ್ತವೆ ಅಥವಾ ಅದಕ್ಕಿಂತ ದೊಡ್ಡದಾಗಿರುತ್ತವೆ ಮತ್ತು ಈ ಮಚ್ಚೆಗಳು ಕೆಲವೊಮ್ಮೆ ಇಡೀ ಹಣ್ಣನ್ನೇ ಅವರಿಸಿಬಿಡುತ್ತವೆ. 'ಸ್ಮಡ್ಜ್' ಕಾಣಿಸಿಕೊಳ್ಳುವಿಕೆಯು ನೂರಾರು ಅತೀ ಸಣ್ಣ, ಡಾರ್ಕ್ ಪೈಕ್ನಿಡಿಯಾದ ಉಪಸ್ಥಿತಿಯಿಂದ ಉಂಟಾಗುತ್ತದೆ. ಅದು ಸಡಿಲವಾದ, ಹೆಣೆದಿರುವ ಡಾರ್ಕ್ ಹೈಫೆಯ ಸಮೂಹದಿಂದ ಪರಸ್ಪರ ಸಂಪರ್ಕ ಹೊಂದಿರುತ್ತದೆ. ಮಸಿ ಮಚ್ಚೆ ಫಂಗಸ್ ಸಾಮಾನ್ಯವಾಗಿ ಹೊರಪೊರೆಯ ಹೊರ ಮೇಲ್ಮೈಗೆ ಸೀಮಿತವಾಗಿರುತ್ತದೆ. ಅಪರೂಪದ ಸಂದರ್ಭಗಳಲ್ಲಿ, ಹೈಫೆಯು ಹೊರಚರ್ಮದ ಕೋಶ ಗೋಡೆಗಳು ಮತ್ತು ಹೊರಪೊರೆಗಳ ನಡುವೆ ತೂರಿಕೊಳ್ಳುತ್ತದೆ.

Recommendations

ಜೈವಿಕ ನಿಯಂತ್ರಣ

ಬೇಸಿಗೆಯಲ್ಲಿ ತೆಂಗಿನ ಸಾಬೂನು ಚಿಕಿತ್ಸೆಯು ರೋಗವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸ್ಟ್ರೋಬಿಲುರಿನ್ ಶಿಲೀಂಧ್ರನಾಶಕ, ಕ್ರೆಕ್ಸಿಮ್ ಮೀಥೈಲ್ ಅಥವಾ ಟ್ರೈಫ್ಲೋಕ್ಸಿಸ್ಟ್ರೋಬಿನ್ ಸ್ಪ್ರೇಗಳು ಮಸಿ ಮಚ್ಚೆಯನ್ನು ನಿಯಂತ್ರಿಸಲು ಎಷ್ಟರಮಟ್ಟಿಗೆ ಸಹಕಾರಿ ಎಂದು ಪರೀಕ್ಷಿಸಲಾಗಿದೆ. ಮತ್ತು ಥಿಯೋಫನೇಟ್-ಮೀಥೈಲ್. ಕ್ಯಾಪ್ಟನ್(, ಇನ್‌ಸ್ಪೈರ್ ಸೂಪರ್ ಮತ್ತು ಇತರ ಪೂರ್ವ ಮಿಶ್ರಣಗಳು) ಉತ್ತಮ ನಿಯಂತ್ರಣವನ್ನು ಒದಗಿಸುತ್ತವೆ ಎಂದು ನಂಬಲಾಗಿದೆ. ಆದರೆ ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಮ್ಯಾಂಕೋಜೆಬ್ 75% WG (3G/L) ನೀರನ್ನು ಸಿಂಪಡಿಸಿ ಮತ್ತು 10 L ಸ್ಪ್ರೇ ದ್ರವ/ಮರಕ್ಕೆ ಬಳಸಿ.

ಅದಕ್ಕೆ ಏನು ಕಾರಣ

ಈ ರೋಗವು ಫಿಲಾಕೋರಾ ಪೊಮಿಜೆನಾ (ಹಲವಾರು ಸಂಬಂಧವಿಲ್ಲದ ಶಿಲೀಂಧ್ರಗಳು) ದಿಂದ ಉಂಟಾಗುತ್ತದೆ. ಶಿಲೀಂಧ್ರಗಳ ಬೀಜಕಗಳು ತೋಟದ ಒಳಗೆ ಗಾಳಿಯ ಮೂಲಕ ಬರುತ್ತವೆ. ನಿರಂತರ ಮಳೆ ಮತ್ತು ಹೆಚ್ಚಿನ ಆರ್ದ್ರತೆಯೊಂದಿಗೆ ಸಾಮಾನ್ಯ ಬೇಸಿಗೆಗಿಂತ ಹೆಚ್ಚಿನ ತಾಪಮಾನವು ರೋಗದ ಏಕಾಏಕಿ ಉಲ್ಬಣಕ್ಕೆ ಕಾರಣವಾಗುತ್ತದೆ. ಶಿಲೀಂಧ್ರಗಳ ಬೆಳವಣಿಗೆಯು ಬಣ್ಣಗೆಡಿಸಬಹುದು. ಇದು ವ್ಯಾಪಕ ಶ್ರೇಣಿಯ ಮರ ಮತ್ತು ಮೂಲಿಕಾಸಸ್ಯಗಳ ಎಲೆಗಳು, ಕೊಂಬೆಗಳು ಮತ್ತು ಹಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಬೀಜಕಗಳು ವಸಂತಕಾಲದಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ ಉತ್ಪಾದನೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಹಣ್ಣಿನ ತೋಟ ಮತ್ತು ಸುತ್ತಮುತ್ತಲಿನ ಮುಳ್ಳುಗಿಡಗಳಿಂದ ಬ್ರಾಂಬಲ್‌ಗಳಂತಹ ಪರ್ಯಾಯ ಅತಿಥೇಯಗಳನ್ನು ತೆಗೆದುಹಾಕಿ.
  • ಮರದ ಮೇಲಾವರಣವನ್ನು ತೆರೆಯಲು ಮತ್ತು ಗಾಳಿಯ ಚಲನೆಯನ್ನು ಸುಗಮಗೊಳಿಸಲು ಮತ್ತು ಮಳೆಯ ನಂತರ ಹಣ್ಣುಗಳನ್ನು ಒಣಗಿಸಲು ಬೇಸಿಗೆಯಲ್ಲಿ ಮರಗಳನ್ನು ಕತ್ತರಿಸಿ.
  • ರೋಗದ ಸಂಭವವನ್ನು ತಡೆಯಲು ಮತ್ತು ಹಣ್ಣಿನ ಗೊಂಚಲುಗಳನ್ನು ಪ್ರತ್ಯೇಕಿಸಲು ಮರಗಳನ್ನು ತೆಳುವಾಗಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ