ಸೇಬು

ಸೇಬಿನ ಮಾರ್ಸೋನಿನಾ ಬ್ಲಾಚ್ (ಕಪ್ಪು ಚುಕ್ಕೆ)

Diplocarpon mali

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಅಪರೂಪವಾಗಿ ಹಣ್ಣುಗಳಲ್ಲಿ ಸೋಂಕು ಉಂಟಾಗುತ್ತದೆ.
  • ಎಲೆಗಳ ಮೇಲೆ ಸಣ್ಣ ಕಲೆಗಳು.
  • ಅಕಾಲಿಕ ಎಲೆ ಉದುರುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೇಬು

ರೋಗಲಕ್ಷಣಗಳು

ಬೇಸಿಗೆಯ ಕೊನೆಯಲ್ಲಿ, ಬೆಳೆದ ಎಲೆಗಳ ಮೇಲಿನ ಮೇಲ್ಮೈಯಲ್ಲಿ ಕಪ್ಪು ಕಲೆಗಳು (5-10 ಮಿಮೀ) ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ವಸಂತ ಮತ್ತು ಬೇಸಿಗೆಯ ಆರಂಭದಲ್ಲಿ ಮಳೆಯ ನಂತರ ರೋಗಲಕ್ಷಣಗಳು ಏಕರೂಪವಾಗಿ ಗೋಚರಿಸುತ್ತವೆ. ಸೇಬು ಸಸ್ಯಗಳ ಹಳೆಯ ಎಲೆಗಳಲ್ಲಿ ಹೊಸ ಎಲೆಗಳಿಗಿಂತ ಬೇಗ ಮಚ್ಚೆಗಳು ಉಂಟಾಗುತ್ತವೆ. ಚುಕ್ಕೆಗಳು ಸಾಮಾನ್ಯವಾಗಿ ಬೂದುಬಣ್ಣ, ಕಂದುಬಣ್ಣದ ತುದಿಯಲ್ಲಿ ನೇರಳೆ ಬಣ್ಣದ ಛಾಯೆಯನ್ನು ಹೊಂದಿರುತ್ತವೆ. ರೋಗದ ಲಕ್ಷಣಗಳು ಎಲೆಯ ಮೇಲಿನ ಮೇಲ್ಮೈಯಲ್ಲಿ ಕಡು ಹಸಿರು ವೃತ್ತಾಕಾರದ ತೇಪೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇದು 5-10 ಮಿಮೀ ಕಂದು ಎಲೆಯ ಚುಕ್ಕೆಗಳನ್ನು ಉಂಟುಮಾಡುತ್ತದೆ ಮತ್ತು ಇದು ಸರಿಯಾದ ಸಮಯದಲ್ಲಿ ಕಡು ಕಂದು ಬಣ್ಣಕ್ಕೆ ತಿರುಗುತ್ತದೆ. ಪ್ರೌಢಾವಸ್ಥೆಯಲ್ಲಿ, ಇದು ಎಲೆಗಳ ಕೆಳಗಿನ ಮೇಲ್ಮೈಯಲ್ಲಿಯೂ ಬೆಳೆಯುತ್ತದೆ. ವಾಣಿಜ್ಯ ತಳಿಗಳ ಮೇಲೆ ವಿವಿಧ ಗಾತ್ರದ (3-5 ಮಿಮೀ ವ್ಯಾಸದ) ವೃತ್ತಾಕಾರದ ಗಾಢ ಕಂದು ಬಣ್ಣದ ಚುಕ್ಕೆಗಳನ್ನು ಉಂಟುಮಾಡುವ ಮೂಲಕ ಶಿಲೀಂಧ್ರವು ಹಣ್ಣಿನ ಮೇಲೆ ದಾಳಿ ಮಾಡುತ್ತದೆ. ಸಣ್ಣ ಅಲೈಂಗಿಕ ಫ್ರುಟಿಂಗ್ ಘಟಕಗಳು ಹೆಚ್ಚಾಗಿ ಮೇಲ್ಮೈಯಲ್ಲಿ ಗೋಚರಿಸುತ್ತವೆ. ಹೆಚ್ಚಿನ ಗಾಯಗಳು ರೂಪುಗೊಂಡಾಗ, ಅವು ಒಟ್ಟುಗೂಡುತ್ತವೆ. ಆದರೆ ಸುತ್ತಮುತ್ತಲಿನ ಭಾಗಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ರೀತಿಯ ತೀವ್ರವಾದ ಮುತ್ತಿಕೊಳ್ಳುವಿಕೆಯು ಎಲೆ ಉದುರುವಿಕೆಗೆ ಕಾರಣವಾಗುತ್ತದೆ. ಇದು ಸಾಮಾನ್ಯವಲ್ಲವಾದರೂ, ಶಿಲೀಂಧ್ರವು ಹಣ್ಣಿನಲ್ಲೂ ಸಹ ಸೋಂಕು ಉಂಟುಮಾಡಬಹುದು.

Recommendations

ಜೈವಿಕ ನಿಯಂತ್ರಣ

ಪ್ರತಿ ವರ್ಷಕ್ಕೆ ಆಮ್ಲ-ಜೇಡಿಮಣ್ಣಿನ ಮೈಕೋ-ಸಿನ್, ಅಥವಾ ಫಂಗುರಾನ್ (ತಾಮ್ರದ ಹೈಡ್ರಾಕ್ಸೈಡ್), ಕ್ಯುರಾಶಿಯೊ (ನಿಂಬೆ ಸಲ್ಫರ್) ಅಥವಾ ಸಲ್ಫರ್ ನ ಪ್ರತಿ ಉತ್ಪನ್ನದ 10-12 ಸ್ಪ್ರೇಗಳನ್ನು ಸಿಂಪಡಿಸಿ. ಅಲ್ಲದೆ, ಚಳಿಗಾಲದಲ್ಲಿ ಎಲೆಗಳಿಗೆ ಯೂರಿಯಾವನ್ನು ಹಾಕುವುದರಿಂದ ಪ್ರಾಥಮಿಕ ಇನೊಕ್ಯುಲಮ್ ಮಟ್ಟವನ್ನು ಕಡಿಮೆ ಮಾಡಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳನ್ನು ಗುಣಪಡಿಸುವ ವಿಧಾನಕ್ಕಿಂತ ತಡೆಗಟ್ಟುವ ರೀತಿಯಲ್ಲಿ ಬಳಸುವುದು ಹೆಚ್ಚು ಉಪಯುಕ್ತವಾಗಿದೆ. ಮ್ಯಾಂಕೋಜೆಬ್, ಡೋಡಿನ್ ಮತ್ತು ಟ್ರೈಫ್ಲೋಕ್ಸಿಸ್ಟ್ರೋಬಿನ್‌ನಂತಹ ಸಕ್ರಿಯ ಪದಾರ್ಥಗಳೊಂದಿಗೆ ಶಿಲೀಂಧ್ರನಾಶಕಗಳನ್ನು ಬಳಸಿ. ಇದು ರೋಗ ಉಂಟುಮಾಡುವ ಸಂಭವವನ್ನು ಕಡಿಮೆ ಮಾಡುತ್ತದೆ. ತಾಮ್ರ-ಆಕ್ಸಿಕ್ಲೋರೈಡ್ ಅನ್ನು ಕೊಯ್ಲಿನ ನಂತರ ಹಾಕಬಹುದು. ಪರಿಣಾಮಕಾರಿ ನಿಯಂತ್ರಣ ಮತ್ತು ಕೀಟ ನಿರೋಧಕತೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು, ಶಿಲೀಂಧ್ರನಾಶಕಗಳನ್ನು ಡೋಡಿನ್ + ಹೆಕ್ಸಾಕೊನಜೋಲ್, ಜಿನೆಬ್ + ಹೆಕ್ಸಾಕೊನಜೋಲ್, ಮ್ಯಾಂಕೋಜೆಬ್ + ಪೈರಾಕ್ಲೋಸ್ಟ್ರೋಬಿನ್ ಸಂಯೋಜನೆಯಲ್ಲಿ ಬಳಸಿ. ತಡೆಗಟ್ಟುವ ಸಿಂಪಡಿಕೆಗಳಾದ, ಮ್ಯಾಂಕೋಜೆಬ್ (0.3%), ಕಾಪರ್ ಆಕ್ಸಿಕ್ಲೋರೈಡ್ (0.3%), ಝಿನೆಬ್ (0.3%), ಮತ್ತು HM 34.25SL (0.25%), ಡೋಡಿನ್ (0.075%) ಮತ್ತು ಡಿಥಿಯಾನಾನ್ (0.05%) ತೋಟದಲ್ಲಿ ಸಂಪೂರ್ಣ ರೋಗ ನಿಯಂತ್ರಣವನ್ನು ಒದಗಿಸಿವೆ.

ಅದಕ್ಕೆ ಏನು ಕಾರಣ

ಈ ರೋಗವು ಡಿಪ್ಲೋಕಾರ್ಪಾನ್ ಮಾಲಿಯ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಶಿಲೀಂಧ್ರಗಳು ಸ್ಪಷ್ಟ ಗೋಚರ ಲಕ್ಷಣಗಳನ್ನು ಪ್ರದರ್ಶಿಸಲು ಸುಮಾರು 40 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರಾಥಮಿಕ ಸೋಂಕುಗಳು ಸಾಮಾನ್ಯವಾಗಿ ಚಳಿಗಾಲದ ಎಲೆಗಳ ಮೇಲೆ ಉತ್ಪತ್ತಿಯಾಗುವ ಆಸ್ಕೋಸ್ಪೋರ್‌ಗಳಿಂದ ಪ್ರಾರಂಭವಾಗುತ್ತವೆ. ಬೀಜಕ ಬಿಡುಗಡೆಗೆ ಸಾಮಾನ್ಯವಾಗಿ ಮಳೆ ಬೇಕಾಗುತ್ತದೆ. ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳೆಂದರೆ 23.5 °C ಮತ್ತು 20 ಮಿಮೀ ಮಳೆ. ಇದರ ಅಭಿವೃದ್ಧಿಗೆ ದೈನಂದಿನ ತಾಪಮಾನ 25 °C ಮತ್ತು 20 ಮಿಮೀ ಮಳೆಯ ಅಗತ್ಯವಿದೆ. ಸೇಬು ಹಣ್ಣಿನ ಬೆಳವಣಿಗೆಯ ಹಂತಗಳಲ್ಲಿ ಬರುವ ಈ ರೋಗಕ್ಕೆ 20-22 °C ವರೆಗಿನ ತಾಪಮಾನ ಮತ್ತು ಹೆಚ್ಚಿನ ಮಳೆ ಕಾರಣವಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಯಾವುದೇ ಸೇಬು ತಳಿಗಳು ಮಾರ್ಸೋನಿನಾ ಬ್ಲಾಚ್‌ಗೆ ನಿರೋಧಕವಾಗಿಲ್ಲ, ಆದಾಗ್ಯೂ, ಗ್ರಾನ್ನಿ ಸ್ಮಿತ್ ಮತ್ತು ಗಿಬ್ಸನ್‌ನ ಗೋಲ್ಡನ್ ಸ್ವಲ್ಪಮಟ್ಟಿಗೆ ನಿರೋಧಕವಾಗಿದೆ.
  • ರಾಯಲ್ ಡೆಲಿಶಿಯಸ್, ಗೋಲ್ಡನ್ ಡೆಲಿಶಿಯಸ್ ಮತ್ತು ಸ್ಕಾರ್ಲೆಟ್ ಸ್ಪರ್ ಅನ್ನು ಬೆಳೆಸಬೇಡಿ ಏಕೆಂದರೆ ಅವುಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ.
  • ಶರತ್ಕಾಲದಲ್ಲಿ ಬಿದ್ದ ಎಲೆಗಳನ್ನು ನಾಶಪಡಿಸುವ ಮೂಲಕ ಡಿಪ್ಲೋಕಾರ್ಪಾನ್ ಮಾಲಿ ಬೀಜಕಗಳನ್ನು ನಾಶಮಾಡಿ.
  • ಎಲೆಗಳನ್ನು ಸುಡುವ ಮತ್ತು ಹೂತುಹಾಕುವ ಸರಿಯಾದ ನೈರ್ಮಲ್ಯ ಕ್ರಮವನ್ನು ಅಭ್ಯಾಸ ಮಾಡಿ.
  • ತೋಟದ ನೈರ್ಮಲ್ಯ ಮತ್ತು ಸಮರುವಿಕೆಯ ಮೂಲಕ ರೋಗದ ಸಂಭವವನ್ನು ನಿಯಂತ್ರಿಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ