ಬೆಂಡೆಕಾಯಿ

ಬೆಂಡೆಕಾಯಿಯ ಸರ್ಕೋಸ್ಪೋರಾ ಎಲೆ ಚುಕ್ಕೆ ರೋಗ

Cercospora malayensis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಯ ಕೆಳಭಾಗದಲ್ಲಿ ಅನಿಯಮಿತವಾಗಿ ಹರಡಿದ ಕಂದು ಬಣ್ಣದ ಚುಕ್ಕೆಗಳು.
  • ಒಣಗಿ ಬಾಡಿದ ಎಲೆಗಳು.
  • ಎಲೆಯುದುರುವುದು ಕಂಡು ಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬೆಂಡೆಕಾಯಿ

ರೋಗಲಕ್ಷಣಗಳು

ಶುರುವಿನಲ್ಲಿ ಎಲೆಗಳ ಕೆಳಭಾಗದಲ್ಲಿ ಅನಿಯಮಿತವಾಗಿ ಹರಡಿದ ಕಂದು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಗಿಡಕ್ಕೆ ಹತ್ತಿರವಿರುವ ಹಳೆಯ ಎಲೆಗಳಿಗೇ ಸೋಂಕು ಹೆಚ್ಚು. ಸೋಂಕು ಹೆಚ್ಚಿದಂತೆಲ್ಲ ಎಲೆಗಳು ಒಣಗಿ ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಕೊನೆಯಲ್ಲಿ ಸುರುಳಿ ಸುತ್ತಿಕೊಂಡು ಉದುರಿ ಹೋಗುತ್ತದೆ. ಸೋಂಕು ತೀವ್ರವಿದ್ದಲ್ಲಿ ಗಿಡದ ಎಲೆಗಳೆಲ್ಲ ಉದುರಿ ಹೋಗಬಹುದು. ಶುರುವಿನಲ್ಲಿ ಎಲೆಗಳ ಕೆಳಭಾಗದಲ್ಲಿ ಮಬ್ಬು ಹಳದಿ ಬಣ್ಣದ ಚುಕ್ಕೆಗಳ ರೂಪದಲ್ಲಿ ಮಸುಕಾದ ಕಲೆಗಳು ಸ್ಬಷ್ಟವಾಗಿ ಕಾಣುತ್ತವೆ. ಬಳಿಕ ತಿಳಿ ಕಂದು ಬಣ್ಣದಿಂದ ಬೂದು ಬಣ್ಣದ ಬೂಷ್ಟಿನಂಥ ಪದರ ಬೆಳೆದು ಅದು ಎಲೆಯ ಕೆಳಭಾಗವನ್ನು ಪೂರ್ತಿಯಾಗಿ ಆವರಿಸುತ್ತದೆ. ಸೋಂಕು ತೀವ್ರವಾದಾಗ ಮೃತ ಭಾಗಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಎಲೆಗಳು ಕೊನೆಯಲ್ಲಿ ಒಣಗಿ ಉದುರಿ ಹೋಗುತ್ತವೆ. ಸೋಂಕು ನೆಲಕ್ಕೆ ಹತ್ತಿರವಿರುವ ಎಲೆಗಳಿಂದ ಶುರುವಾಗಿ ಮೇಲಕ್ಕೆ ಹರಡುತ್ತಾ ಹೋದಂತೆ ಕಾಂಡ ಮತ್ತು ಹಣ್ಣಿನಲ್ಲೂ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಸಿಯಂತೆ ಕಪ್ಪಗಾದ ಚುಕ್ಕೆಗಳಿಗೆ ಕಾರಣವಾಗುವ ಪಿ. ಅಬೆಲ್ಮೋಶಿ ರೋಗಾಣುವಿನ ಲಕ್ಷಣಗಳೆಂದು ತಪ್ಪು ತಿಳಿಯುವ ಸಾಧ್ಯತೆಯಿದೆ.

Recommendations

ಜೈವಿಕ ನಿಯಂತ್ರಣ

ಜೈವಿಕ ನಿಯಂತ್ರಣದ ಯಾವುದೇ ವಿಧಾನ ತಿಳಿದು ಬಂದಿಲ್ಲ. ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುವ ಅಥವಾ ಅದರ ತೀವ್ರತೆಯನ್ನು ಕಡಿಮೆ ಮಾಡುವ ಯಾವುದಾದರೂ ವಿಧಾನ ಗೊತ್ತಿದ್ದರೆ, ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಎಲೆಯ ಕೆಳಭಾಗಕ್ಕೆ ಮಧ್ಯಾಹ್ನದ ವೇಳೆ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ. ಬಿತ್ತನೆಯಾದ ಒಂದು ತಿಂಗಳ ಬಳಿಕ ಶೇ 0.3ರಷ್ಟು ತಾಮ್ರದ ಆಕ್ಸಿ ಕ್ಲೋರೈಡ್, ಶೇ 0.25ರಷ್ಟು ಮ್ಯಾಂಕೋಝೆಬ್, ಶೇ 0.2ರಷ್ಟು ಝಿನೆಬ್ ಮುಂತಾದ ರಕ್ಷಕ ಶಿಲೀಂಧ್ರನಾಶಕಗಳನ್ನು ಎಲೆಯ ಕೆಳಭಾಗಕ್ಕೆ ಸಿಂಪಡಿಸಿ. ಸೋಂಕಿನ ತೀವ್ರತೆಗನುಸಾರವಾಗಿ ತಿಂಗಳಿಗೆರಡು ಸಲ ಇದನ್ನೇ ಪುನರಾವರ್ತಿಸಿ.

ಅದಕ್ಕೆ ಏನು ಕಾರಣ

ಸರ್ಕೋಸ್ಪೋರಾ ಮಲಾಯೆನ್ಸಿ ಮತ್ತು ಸರ್ಕೋಸ್ಪೋರಾ ಅಬೆಲ್ಮೋಶಿ ಶಿಲೀಂಧ್ರಗಳೇ ಈ ಎಲೆ ಚುಕ್ಕೆಗಳಿಗೆ ಕಾರಣ. ಮಣ್ಣಿನಲ್ಲಿರುವ ಸೋಂಕು ತಗುಲಿದ ಸಸ್ಯ ಶೇಷಗಳನ್ನು ಆಹಾರವಾಗಿಸಿಕೊಂಡು ಚಳಿಗಾಲ ಕಳೆಯುವ ಈ ಸೂಕ್ಷ್ಮಜೀವಿಯು ಗಿಡದ ಬೇರು ಮತ್ತು ನೆಲಕ್ಕೆ ಹತ್ತಿರವಿರುವ ಎಲೆಗಳ ಮೇಲೆರಗುತ್ತದೆ. ಗಾಳಿ, ಮಳೆ, ನೀರು ಮತ್ತು ಯಂತ್ರೋಪಕರಣಗಳ ಮೂಲಕವೂ ಬೀಜಕಗಳು ಹರಡುತ್ತವೆ. ತೇವಾಂಶ ಹೆಚ್ಚಿರುವ ಹವೆಯಲ್ಲಿ ಎಲೆ ಚುಕ್ಕೆಗಳು ತುಂಬ ಸಾಮಾನ್ಯ, ಏಕೆಂದರೆ ಬೆಚ್ಚಗಿನ ಒದ್ದೆ ಹವೆಯು ಶಿಲೀಂಧ್ರಕ್ಕೆ ಅನುಕೂಲಕರ. ಮಳೆ ಮತ್ತು ಅತಿಯಾದ ತೇವಾಂಶವು ಈ ರೋಗಾಣುವಿನ ಬೆಳವಣಿಗೆ ಮತ್ತು ಬೀಜಕಗಳ ಹುಟ್ಟಿಗೆ ಕಾರಣವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಬೀಜ ಪದಾರ್ಥಗಳನ್ನು ಮಾತ್ರವೇ ಬಳಸಿ ಹಾಗೂ ಎಲೆಗಳು ಗಾಳಿಗೆ ಒಣಗುವಂತೆ ಸಾಕಷ್ಟು ಅಂತರವಿಟ್ಟು ಸಸಿಗಳನ್ನು ನೆಡಿ.
  • ಹೊಲವನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ ಮತ್ತು ಸೋಂಕು ತಗುಲಿದ ಎಲೆಗಳನ್ನು ತೆಗೆದುಹಾಕಿ (ಸುಟ್ಟು ಹಾಕಬಹುದು ಕೂಡ).
  • ಉತ್ತಮ ಕಳೆ ನಿರ್ವಹಣಾ ಪದ್ಧತಿ ಪಾಲಿಸಿ.
  • ಸಾಕಷ್ಟು ನೀರು ಹಾಗೂ ಗೊಬ್ಬರಗಳನ್ನೊದಗಿಸುವ ಮೂಲಕ ಗಿಡಗಳು ಒಳ್ಳೆಯ ವಾತಾವರಣದಲ್ಲಿ ಬೆಳೆಯುವಂತೆ ನೋಡಿಕೊಳ್ಳಿ.
  • ಗಿಡಗಳಿಗೆ ಸಂಜೆಯ ಬದಲು ಬೆಳಗಿನ ಜಾವ ನೀರುಣಿಸಿ.
  • ಓವರ್ ಹೆಡ್ ನೀರಾವರಿ ಹಾಗೂ ಮಣ್ಣು ಅರ್ದಂಬರ್ಧ ಒದ್ದೆಯಾಗುವುದನ್ನು ತಪ್ಪಿಸಿ.
  • ಬೆಳೆ ಸರದಿ ವಿಧಾನ ಬಳಸಿ ಈ ಸೋಂಕು ತಗುಲದ ಗಿಡಗಳನ್ನು ಆವರ್ತಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ