ಹೂಕೋಸು

ಬಿಳಿ ತುಕ್ಕು

Albugo candida

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಯ ಮೇಲಿನ ಮಸುಕಾದ ಕಲೆಗಳು ಬಿಳಿಯಾಗುತ್ತವೆ.
  • ನಂತರ ಹೊಳೆಯುವ ಬೆಳೆದ ಗಂಟುಗಳಾಗಿ ಬೆಳೆಯುತ್ತವೆ.
  • ಎಲೆಗಳ ಕೆಳಗಿನ ಭಾಗದಲ್ಲಿ ಸಣ್ಣ ಪುಡಿಯಂತಹ ಬೀಜಕಗಳು ಕಂಡುಬರುತ್ತವೆ.
  • ಕಾಂಡಗಳು ಮತ್ತು ಹೂವುಗಳು ಮೇಲೆ ಸಹ ಪರಿಣಾಮ ಬೀರುತ್ತವೆ.
  • ತೀವ್ರವಾಗಿ ಬಾಧಿತ ಸಸ್ಯ ಭಾಗಗಳು ಮುರುಟುತ್ತವೆ ಮತ್ತು ಸಾಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಎಲೆಕೋಸು
ಹೂಕೋಸು

ಹೂಕೋಸು

ರೋಗಲಕ್ಷಣಗಳು

ಬಿಳಿ ತುಕ್ಕು ಸ್ಥಳೀಯವಾಗಿ ಅಥವಾ ವ್ಯವಸ್ಥಿತವಾಗಿ ಸಸ್ಯಕ್ಕೆ ಸೋಂಕು ತರುತ್ತದೆ. ಸೋಂಕಿನ ಪ್ರಕಾರವನ್ನು ಆಧರಿಸಿ ರೋಗಲಕ್ಷಣಗಳು ಬದಲಾಗುತ್ತವೆ. ಸ್ಥಳೀಯ ಸೋಂಕು ಗುಳ್ಳೆಗಳಂತೆ ಕಂಡುಬರುತ್ತದೆ. ಇದು ಆರಂಭಿಕ ಹಂತಗಳಲ್ಲಿ ಎಲೆಗಳು, ಸಣ್ಣ ಕಾಂಡಗಳು ಮತ್ತು ಹೂವಿನ ಭಾಗಗಳ ಕೆಳಭಾಗದಲ್ಲಿ ಕಂಡುಬರುತ್ತದೆ. ಗಂಟುಗಳು ಸುಮಾರು 1 ರಿಂದ 2 ಮಿಮೀ ವ್ಯಾಸವಿರುತ್ತವೆ. ಮತ್ತು ಬಿಳಿ ಅಥವಾ ಕೆನೆ ಹಳದಿ ಬಣ್ಣದಲ್ಲಿರುತ್ತವೆ. ರೋಗಲಕ್ಷಣಗಳು ಮುಂದುವರೆದಂತೆ, ಎಲೆಗಳ ಕೆಳಭಾಗದಲ್ಲಿನ ಬಿಳಿ ಗುಳ್ಳೆಗಳಿಗೆ ಅನುಗುಣವಾಗಿ ಎಲೆಯ ಮೇಲಿನ ಮೇಲ್ಮೈಯಲ್ಲಿ ತಿಳಿ ಹಸಿರು ಮತ್ತು ಹಳದಿ ಬಣ್ಣಗಳ ವೃತ್ತಾಕಾರದ ಕಲೆಗಳು ಕಾಣಿಸಿಕೊಳ್ಳುತ್ತವೆ. ವ್ಯವಸ್ಥಿತ ಸೋಂಕಿನ ಸಂದರ್ಭದಲ್ಲಿ, ರೋಗವು ಸಸ್ಯದ ಅಂಗಾಂಶದುದ್ದಕ್ಕೂ ಬೆಳೆಯುತ್ತದೆ. ಇದರ ಪರಿಣಾಮವಾಗಿ ಅಸಹಜ ಬೆಳವಣಿಗೆ, ಪೀಡಿತ ಸಸ್ಯಗಳ ವಿರೂಪತೆ ಅಥವಾ ಗಾಯಗಳ ರಚನೆ ಕಂಡುಬರುತ್ತದೆ.

Recommendations

ಜೈವಿಕ ನಿಯಂತ್ರಣ

ಬೇವು, ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಸ್ಯದ ಸಾರಗಳನ್ನು ಬಳಸಿ. ನೀಲಗಿರಿಯ ತೈಲವು ವಿಶಾಲವಾದ ಆಂಟಿಫಂಗಲ್ ಚಟುವಟಿಕೆಗಳನ್ನು ಹೊಂದಿದೆ ಮತ್ತು ಎಲೆ ಮತ್ತು ತೆನೆ ಹಂತದಲ್ಲಿ ಬಿಳಿ ತುಕ್ಕು ರೋಗದ ವಿರುದ್ಧ ಪರಿಣಾಮಕಾರಿಯಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೀಜ ಸಂಸ್ಕರಣೆಗಾಗಿ ಮ್ಯಾಂಕೋಜೆಬ್ ಅಥವಾ ಮೆಟಾಲಾಕ್ಸಿಲ್ ಮತ್ತು ಮ್ಯಾಂಕೋಜೆಬ್ ಗಳನ್ನು ಬಳಸಿ. ಇವುಗಳನ್ನು ಮಣ್ಣಿಗೆ ಹಾಕಬೇಕು ಮತ್ತು ತರುವಾಯ ಎಲೆಗಳಿಗೆ ಹಾಕಬೇಕು. ಬೆಳೆಗಳ ದೀರ್ಘತೆ ಮತ್ತು ಅನುಭವಿಸಿದ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಇವುಗಳನ್ನು ಎಷ್ಟು ಬಾರಿ ಬಳಸಬೇಕೆಂಬುದು ಕೂಡ ಬದಲಾಗುತ್ತದೆ. ಸಮಶೀತೋಷ್ಣ ಪರಿಸರದಲ್ಲಿ ಒಂದು ಬೆಳೆ ಚಕ್ರದಲ್ಲಿ ಒಂದು ಮಣ್ಣಿನ ಅನ್ವಯಿಕೆ ಮತ್ತು ಕನಿಷ್ಠ 1-2 ಎಲೆಗಳ ಅನ್ವಯಿಕೆಗಳನ್ನು ಸೂಚಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ಎಲೆಗಳ ರೋಗವು ಅಲ್ಬುಗೊ ಅಥವಾ ಪುಸ್ತುಲಾದ ಶಿಲೀಂಧ್ರದಿಂದ ಉಂಟಾಗುತ್ತದೆ. ಬ್ರಾಸಿಕಾಸ್ ನಂತಹ ಕೆಲವು ಸಸ್ಯಗಳಲ್ಲಿ, ಬಿಳಿ ಗುಳ್ಳೆ ಮತ್ತು ಡೌನಿ ಶಿಲೀಂಧ್ರ ಒಟ್ಟಿಗೆ ಸಂಭವಿಸಬಹುದು. ಗುಳ್ಳೆಗಳು ಬಿಳಿ ಪುಡಿ ಬೀಜಕಗಳನ್ನು ಹೊಂದಿರುತ್ತವೆ. ಅದು ಬಿಡುಗಡೆಯಾದಾಗ ಗಾಳಿಯ ಮೂಲಕ ಹರಡುತ್ತದೆ. ಬಿಳಿ ತುಕ್ಕು ಮೊಳಕೆಯೊಡೆಯಲು ಅನುಕೂಲವಾದ ಪರಿಸ್ಥಿತಿಗಳೆಂದರೆ 13 ° C ನಿಂದ 25 ° C ತಾಪಮಾನ , ಕನಿಷ್ಟ ಎರಡು ಮೂರು ಗಂಟೆಗಳವರೆಗೆ ಎಲೆಗಳ ತೇವಾಂಶ ಮತ್ತು 90% ಕ್ಕಿಂತ ಹೆಚ್ಚು ಆರ್ದ್ರತೆ, ಹೆಚ್ಚಿನ ಮಣ್ಣಿನ ತೇವಾಂಶ ಮತ್ತು ಆಗಾಗ್ಗೆ ಮಳೆ. ಮಣ್ಣಿನಲ್ಲಿನ ಊಸ್ಪೋರ್ ಗಳು ಮತ್ತು ಸುತ್ತಮುತ್ತಲಿನ ದೀರ್ಘಕಾಲಿಕ ಕಳೆ ಆಶ್ರಯದಾತ ಸಸ್ಯಗಳಲ್ಲಿರುವ ಸ್ಪೊರಾಂಜಿಯಾ ಪ್ರಾಥಮಿಕ ಹರಡುವಿಕೆಗೆ ಅನುಕೂಲಕರವಾಗಿದೆ. ದ್ವಿತೀಯಕ ಹರಡುವಿಕೆಯನ್ನು, ಗಾಳಿಯಿಂದ ಮತ್ತು ಮಳೆಯ ತುಂತುರುವಿನಿಂದ ಹರಡುವ ಕೋನಿಡಿಯಾ (ಸ್ಪೊರಾಂಜಿಯಾ) ಅಥವಾ ನೆರೆಯ ಸಸ್ಯಗಳಿಗೆ ಸೋಂಕು ತಗುಲಿಸುವ ಅಟನಾಮಸ್ ಝೂಸ್ಪೋರ್ ಗಳು (ಕೀಟಗಳು) ಪ್ರೋತ್ಸಾಹಿಸುತ್ತದೆ. ಇದು ಬ್ರಾಸಿಕಾ ಕುಟುಂಬದ ಅನೇಕ ಜಾತಿಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಕ್ರೂಸಿಫೆರಸ್ ತರಕಾರಿಗಳು, ಅಲಂಕಾರಿಕ ಸಸ್ಯಗಳು ಮತ್ತು ಹಲವಾರು ಕಳೆಗಳ ಮೇಲೂ ಪರಿಣಾಮ ಬೀರುತ್ತದೆ. ಬೀಜಕಗಳು ಕನಿಷ್ಠ ಮೂರು ವರ್ಷಗಳವರೆಗೆ ಮಣ್ಣಿನಲ್ಲಿ ಉಳಿಯಬಹುದು.


ಮುಂಜಾಗ್ರತಾ ಕ್ರಮಗಳು

  • ರೋಗ ಮುಕ್ತ ಮತ್ತು ಪ್ರಮಾಣೀಕೃತ ಬೀಜಗಳನ್ನು ಬಿತ್ತಿ ಮತ್ತು ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬೆಳೆಸಿ.
  • ಆಳವಾದ ಉಳುಮೆ ಮತ್ತು ಬೇಗ ಬಿತ್ತನೆ ಅಭ್ಯಾಸ ಮಾಡಿ.
  • ಸಸ್ಯಗಳನ್ನು ಹತ್ತಿರ ಹತ್ತಿರ ನೆಡುವುದನ್ನು ತಪ್ಪಿಸಿ.
  • ಇದು ಹೆಚ್ಚಿನ ಆರ್ದ್ರತೆ ಮತ್ತು ಸೋಂಕನ್ನು ಉತ್ತೇಜಿಸುತ್ತದೆ.
  • ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳಿ.
  • ಪೀಡಿತ ಸಸ್ಯ ಭಾಗಗಳನ್ನು ತೆಗೆದುಹಾಕಿ, ಮತ್ತು ತೀವ್ರವಾಗಿ ಸೋಂಕಿತವಾದ ಸಸ್ಯ ವಸ್ತುಗಳನ್ನು ವಿಲೇವಾರಿ ಮಾಡಿ.
  • ಕಳೆ ನಿಯಂತ್ರಣ ಮತ್ತು ಇತರ ನೈರ್ಮಲ್ಯ ಕ್ರಮಗಳನ್ನು ಬಳಸಿ.
  • ಕ್ರೂಸಿಫೆರಸ್ ಅಲ್ಲದ ಆತಿಥೇಯ ಸಸ್ಯಗಳೊಂದಿಗೆ ಮೂರು ವರ್ಷಗಳ ಬೆಳೆ ಸರದಿ ಸಾಮಾನ್ಯವಾಗಿ ಪರಿಣಾಮಕಾರಿಯಾಗಿದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ