ಮಾವು

ಮಾವಿನ ವಿರೂಪತೆ

Fusarium mangiferae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಚಿಗುರುಗಳು, ಎಲೆಗಳು ಮತ್ತು ಹೂವುಗಳ ಅಸಹಜ ಬೆಳವಣಿಗೆ.
  • ಗೊಂಚಲಿನಂತಹ ರೂಪ.
  • ಕುಂಠಿತ ಬೆಳವಣಿಗೆ.
  • ವಿರೂಪತೆಯಲ್ಲಿ ಎರಡು ವಿಧಗಳು: ಸಸ್ಯಕ ಮತ್ತು ಪುಷ್ಪಕ ವಿರೂಪತೆ.
  • ಹೂವುಗಳು ಮತ್ತು ಸಸ್ಯಕ ಚಿಗುರುಗಳಲ್ಲಿ ಅಸ್ವಸ್ಥತೆ ವ್ಯಾಪಕವಾಗಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಫ್ಯುಸಾರಿಯಮ್ ಮ್ಯಾಂಗಿಫೆರಾ ಎಂಬ ಶಿಲೀಂಧ್ರ ಪ್ರಭೇದದಿಂದ ಈ ರೋಗ ಉಂಟಾಗುತ್ತದೆ. ಸಸ್ಯಕ ವಿರೂಪತೆಯು ಸಾಮಾನ್ಯವಾಗಿ ಯುವ ಸಸಿಗಳಲ್ಲಿ ಕಂಡುಬರುತ್ತದೆ. ಸಸಿಗಳು ಸಣ್ಣ ಚಿಪ್ಪುಗಳಂತಹ ಎಲೆಗಳಿರುವ ಸಣ್ಣ ಚಿಗುರುಗಳನ್ನು ಉತ್ಪಾದಿಸುತ್ತದೆ. ಇದು ಚಿಗುರಿನ ತುದಿಯಲ್ಲಿ ಗೊಂಚಲಿನಂತಹ ರೂಪವನ್ನು ನೀಡುತ್ತದೆ. ಸಸಿ ಕುಂಠಿತಗೊಂಡು ಅಂತಿಮವಾಗಿ ಸಾಯುತ್ತದೆ. ಪುಷ್ಪಮಂಜರಿಯ ವಿರೂಪದಲ್ಲಿ ಹೂಗೊಂಚಲಿನಲ್ಲಿನ ವ್ಯತ್ಯಾಸವನ್ನು ಕಾಣಬಹುದು. ಹೆಚ್ಚು ವಿರೂಪಗೊಂಡ ಹೂಗೊಚಲುಗಳು ಸಾಂದ್ರವಾಗಿರುತ್ತವೆ ಮತ್ತು ಕಿಕ್ಕಿರಿದು ತುಂಬಿರುತ್ತವೆ. ಬಾಧಿತ ಸಸ್ಯಗಳು ದಟ್ಟ ಚಿಗುರುಗಳು ಮತ್ತು ಹೂವುಗಳೊಂದಿಗೆ ಅಸಹಜತೆಯನ್ನು ಬೆಳೆಸಿಕೊಳ್ಳುತ್ತವೆ. ಬೆಳೆಯುತ್ತಿರುವ ಬಿಂದುಗಳಾದ ಎಲೆ ಮತ್ತು ಕಾಂಡ ಮೊಗ್ಗುಗಳು ಸಣ್ಣ ಇಂಟರ್ನೋಡ್‌ಗಳು ಮತ್ತು ಮುರಿಯುವ ಎಲೆಗಳೊಂದಿಗೆ ವಿರೂಪ ಚಿಗುರುಗಳನ್ನು ಉತ್ಪತ್ತಿ ಮಾಡುತ್ತವೆ. ಆರೋಗ್ಯಕರ ಸಸ್ಯಗಳಲ್ಲಿ ಇರುವುದಕ್ಕಿಂತ ಎಲೆಗಳು ಗಮನಾರ್ಹವಾಗಿ ಚಿಕ್ಕದಾಗಿರುತ್ತವೆ. ಒಂದೇ ಸಸ್ಯದಲ್ಲಿ ಸಾಮಾನ್ಯ ಮತ್ತು ವಿರೂಪಗೊಂಡ ಬೆಳವಣಿಗೆ ಏಕಕಾಲದಲ್ಲಿ ಕಂಡುಬರಬಹುದು.

Recommendations

ಜೈವಿಕ ನಿಯಂತ್ರಣ

ಸೋಂಕನ್ನು ಕಡಿಮೆ ಮಾಡಲು ದತೂರ ಸ್ಟ್ರಾಮೋನಿಯಂ (ಆಲ್ಕಲಾಯ್ಡ್ಸ್), ಕ್ಯಾಲೊಟ್ರೊಪಿಸ್ ಜಿಜಾಂಟಿಯಾ ಮತ್ತು ಬೇವಿನ ಮರ (ಆಜಾದಿರಾಕ್ಟಿನ್) ಗಳ ಎಲೆ ಸಾರವನ್ನು ಬಳಸಿ. ಟ್ರೈಕೊಡರ್ಮಾ ಹಾರ್ಜಿಯಾನಮ್ ರೋಗಕಾರಕದ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸಹ ಪರಿಣಾಮಕಾರಿಯಾಗಿದೆ. ರೋಗಪೀಡಿತ ಸಸ್ಯಗಳನ್ನು ನಾಶಪಡಿಸಬೇಕು. ರೋಗ ಮುಕ್ತ ನೆಡು ವಸ್ತುಗಳನ್ನು ಬಳಸಿ. ಸೋಂಕಿತ ಮರಗಳಿಂದ ಸಯಾನ್ ಸ್ಟಿಕ್ ಗಳನ್ನು ಬಳಸಬಾರದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕ್ಯಾಪ್ಟನ್ 0.1% ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಂತ್ರಣ ಕ್ರಮವಾಗಿ ಫೋಲಿಡಾಲ್ ಅಥವಾ ಮೆಟಾಸಿಸ್ಟಾಕ್ಸ್‌ನ ಕೀಟನಾಶಕಗಳನ್ನು ಸಿಂಪಡಿಸಿ. ಹೂಬಿಡುವ ಹಂತದಲ್ಲಿ ಕಾರ್ಬೆಂಡಜಿಮ್ 0.1% ಅನ್ನು 10, 15, ಅಥವಾ 30 ದಿನಗಳ ಅಂತರದಲ್ಲಿ ಸಿಂಪಡಿಸಿ. ನಾಫ್ಥಲೀನ್ ಅಸಿಟಿಕ್ ಆಸಿಡ್ (ಎನ್‌ಎಎ) @ 100 ಅಥವಾ 200 ಪಿಪಿಎಂ ಮುಂದಿನ ಋತುವಿನಲ್ಲಿ ರೋಗದ ಸಂಭವವನ್ನು ಕಡಿಮೆ ಮಾಡುತ್ತದೆ. ಝಿಂಕ್, ಬೋರಾನ್ ಮತ್ತು ತಾಮ್ರದ ಟ್ರೇಸ್ ಅಂಶಗಳನ್ನು ಸಿಂಪಡಿಸುವುದರಿಂದ ಹೂಬಿಡುವ ಮೊದಲು ಮತ್ತು ಹಣ್ಣಿನ ಕೊಯ್ಲು ಮಾಡಿದ ನಂತರ ವಿರೂಪತೆಯ ಸಂಭವವನ್ನು ನಿಯಂತ್ರಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ.

ಅದಕ್ಕೆ ಏನು ಕಾರಣ

ರೋಗವು ಮುಖ್ಯವಾಗಿ ಸೋಂಕಿತ ಸಸ್ಯ ವಸ್ತುಗಳ ಮೂಲಕ ಹರಡುತ್ತದೆ. ಅತಿಯಾದ ಮಣ್ಣಿನ ತೇವಾಂಶ, ಮಿಟೆ ಮುತ್ತಿಕೊಳ್ಳುವಿಕೆ, ಶಿಲೀಂಧ್ರಗಳ ಸೋಂಕು, ವೈರಸ್, ಸಸ್ಯನಾಶಕಗಳು ಮತ್ತು ಇತರ ವಿಷಕಾರಿ ಸಂಯುಕ್ತಗಳು ಶಿಲೀಂಧ್ರಗಳ ಉತ್ಪಾದನೆಯಲ್ಲಿ ನೆರವಾಗುತ್ತವೆ. ಕಬ್ಬಿಣ, ಸತು ಮತ್ತು ತಾಮ್ರದ ಕೊರತೆಯು ಸಹ ವಿರೂಪಕ್ಕೆ ಕಾರಣವಾಗಬಹುದು. ಪೀಡಿತ ತೋಟಗಳಲ್ಲಿ ಈ ರೋಗ ನಿಧಾನವಾಗಿ ಹರಡುತ್ತದೆ. 10 - 15 °C ತಾಪಮಾನವು ಹೂಬಿಡುವ ಸಮಯದಲ್ಲಿ ರೋಗ ಬೆಳವಣಿಗೆಯನ್ನು ಬೆಂಬಲಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡಲು ರೋಗ ಮುಕ್ತ ಸಸಿಗಳನ್ನು ಆಯ್ಕೆಮಾಡಿ.
  • ವಿರೂಪಗೊಂಡ ಸಸ್ಯ ಭಾಗಗಳ ಯಾವುದೇ ಚಿಹ್ನೆಗಳಿಗಾಗಿ ನಿಮ್ಮ ಹಣ್ಣಿನ ತೋಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ವಿರೂಪಗೊಂಡ ಹೂಗೊಂಚಲುಗಳ ಸಮರುವಿಕೆಯು ನಂತರದ ವರ್ಷಗಳಲ್ಲಿ ಹೂಗೊಂಚಲುಗಳ ವಿರೂಪತೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
  • ಪೀಡಿತ ಸಸ್ಯ ಭಾಗಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಹೂಬಿಡುವ ಮೊದಲು ಮತ್ತು ಹಣ್ಣನ್ನು ಕೊಯ್ಲು ಮಾಡಿದ ನಂತರ ಝಿಂಕ್, ಬೋರಾನ್ ಮತ್ತು ತಾಮ್ರದಂತಹ ಸೂಕ್ಷ್ಮ ಅಂಶಗಳನ್ನು ಸಿಂಪಡಿಸುವುದು ವಿರೂಪತೆಯ ಸಂಭವವನ್ನು ನಿಯಂತ್ರಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ.
  • ಕೇಸ್ ಸ್ಟಡಿಯೊಂದರಲ್ಲಿ ಸಾರಜನಕದ ಪ್ರಮಾಣವನ್ನು ಹೆಚ್ಚಿಸುವುದರಿಂದ ಹೂಗೊಂಚಲು ವಿರೂಪತೆ ಕಡಿಮೆಯಾಗುತ್ತದೆ ಎಂಬುದು ಕಂಡು ಬಂದಿದೆ.
  • ಶಿಲೀಂಧ್ರ ಹರಡುವುದನ್ನು ತಪ್ಪಿಸಲು ಹಣ್ಣಿನ ತೋಟ ಮತ್ತು ಉಪಕರಣಗಳ ಉತ್ತಮ ನೈರ್ಮಲ್ಯ, ನಿರ್ವಹಣೆ ಅಗತ್ಯ.
  • ರೋಗದ ಹರಡುವಿಕೆಯನ್ನು ಕಡಿಮೆ ಮಾಡಲು ನಿಮ್ಮ ಸಮರುವಿಕೆಯ ಉಪಕರಣಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ