ಹುಲ್ಲುಜೋಳ

ಹುಲ್ಲು ಜೋಳದ ತುಕ್ಕುರೋಗ

Puccinia purpurea

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ ಮಚ್ಚೆಗಳು ನಿಧಾನವಾಗಿ ಕೆನ್ನೇರಳೆ ಬಣ್ಣಕ್ಕೆ ತಿರುಗುತ್ತವೆ, ಕೆಳ ಮೇಲ್ಮೈಯಲ್ಲಿ ಸ್ವಲ್ಪ ಉಬ್ಬಿದ ಗಂಟುಗಳಾಗಿ ಬೆಳೆಯುತ್ತದೆ.
  • ಅವು ವೃತ್ತಾಕಾರದಿಂದ ಅಂಡಾಕಾರದಲ್ಲಿರುತ್ತವೆ ಮತ್ತು ಹಗುರವಾಗಿ ಹರಡಿಕೊಂಡಿರುತ್ತವೆ ಅಥವಾ ತೇಪೆಗಳಾಗುತ್ತವೆ.
  • ಎಲೆಗಳ ಕವಚ ಮತ್ತು ಹೂಗೊಂಚಲುಗಳ ಕಾಂಡಗಳಲ್ಲೂ ರೋಗಲಕ್ಷಣಗಳು ಕಂಡುಬರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹುಲ್ಲುಜೋಳ

ರೋಗಲಕ್ಷಣಗಳು

ರೋಗಲಕ್ಷಣಗಳನ್ನು ಸಾಮಾನ್ಯವಾಗಿ 1-1.5 ತಿಂಗಳು ಹಳೆಯ ಸಸ್ಯಗಳಲ್ಲಿ ಗಮನಿಸಬಹುದು. ವಿಭಿನ್ನ ಬಣ್ಣದ (ನೇರಳೆ, ಕಂದು ಅಥವಾ ಕೆಂಪು) ಸಣ್ಣ ಮಚ್ಚೆಗಳು ಮೊದಲು ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಿರೋಧಕ ಪ್ರಭೇದಗಳಲ್ಲಿ ರೋಗಲಕ್ಷಣಗಳು ಇದಕ್ಕಿಂತ ಹೆಚ್ಚಾಗಿ ಬೆಳೆಯುವುದಿಲ್ಲ. ಸೋಂಕಿಗೆ ಒಳಗಾಗುವಂತಹ ಸಸ್ಯಗಳಲ್ಲಿ, ಮಚ್ಚೆಗಳು ಬೀಜಕಗಳಿಂದ ತುಂಬಿದಂತೆ, ಅವು ಪುಡಿಯಾಗಿ, ಕೆನ್ನೇರಳೆ ಬಣ್ಣಕ್ಕೆ ತಿರುಗಿ, ಸ್ವಲ್ಪ ಉಬ್ಬಿದ ಗಂಟುಗಳಾಗಿ ಬದಲಾಗುತ್ತವೆ. ವೃತ್ತಾಕಾರದಿಂದ ಉದ್ದವಾದ ಆಕಾರದಲ್ಲಿರುತ್ತವೆ ಮತ್ತು ಹಗುರವಾಗಿ ಹರಡಿಕೊಂಡಿರುತ್ತವೆ ಅಥವಾ ತೇಪೆಗಳಾಗಿರುತ್ತವೆ. ಸಸ್ಯವು ಬೆಳೆದಂತೆ ಇವು ಇನ್ನಷ್ಟು ಗಾಢವಾಗಬಹುದು. ಸೋಂಕಿಗೆ ಹೆಚ್ಚು ಒಳಗಾಗುವ ತಳಿಗಳಲ್ಲಿ, ಗಂಟುಗಳು ಇಡೀ ಸಸ್ಯವನ್ನು ಆವರಿಸಬಹುದು ಮತ್ತು ಸೋಂಕಿತ ಜಾಗವು ಕಂದು ಬಣ್ಣದ್ದಾಗಿರುತ್ತದೆ. ಈ ಗಂಟುಗಳು ಪುಷ್ಪಮಂಜರಿಗಳ ತೊಟ್ಟು ಅಥವಾ ಎಲೆ ಕವಚದ ಕಾಂಡಗಳ ಮೇಲೂ ಕಂಡುಬರುತ್ತವೆ.

Recommendations

ಜೈವಿಕ ನಿಯಂತ್ರಣ

ಪುಸ್ಸಿನಿಯಾ ಪರ್ಪ್ಯೂರಿಯಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ಇಲ್ಲಿಯವರೆಗೆ ಲಭ್ಯವಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಯಾವುದಾದರೂ ವಿಷಯ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಮಾತು ಕೇಳಲು ನಾವು ಕಾಯುತ್ತಿದ್ದೇವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸೋಂಕಿಗೆ ಒಳಗಾಗುವ ಪ್ರಭೇದಗಳಲ್ಲಿ ಬಳಸಿದಾಗ ಶಿಲೀಂಧ್ರನಾಶಕಗಳು ಪ್ರಯೋಜನಕಾರಿಯಾಗಿವೆ. ರೋಗವನ್ನು ನಿಯಂತ್ರಿಸಲು ಹೆಕ್ಸಕೋನಜೋಲ್ (0.1%), ಡಿಫೆಂಕೊನಜೋಲ್ (0.1%) ಮತ್ತು ಪ್ರೊಪಿಕೊನಜೋಲ್ (0.1%) ಆಧಾರಿತ ಉತ್ಪನ್ನಗಳನ್ನು ಬಳಸಬಹುದು. ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ 15 ದಿನಗಳ ಅಂತರದಲ್ಲಿ ಈ ಶಿಲೀಂಧ್ರನಾಶಕಗಳ ಎರಡು ದ್ರವೌಷಧಗಳನ್ನು ಶಿಫಾರಸು ಮಾಡಲಾಗಿದೆ.

ಅದಕ್ಕೆ ಏನು ಕಾರಣ

ಈ ರೋಗವು ಪುಸ್ಸಿನಿಯಾ ಪರ್ಪ್ಯೂರಿಯಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಮಣ್ಣು ಮತ್ತು ಸೋಂಕಿತ ಅವಶೇಷಗಳಲ್ಲಿ ಅಲ್ಪಾವಧಿಯವರೆಗೆ ಮಾತ್ರ ಉಳಿದುಕೊಳ್ಳುತ್ತದೆ. ಆದ್ದರಿಂದ, ಇವು ಹುಲ್ಲುಗಳು ಅಥವಾ ಕೆಲವು ಕಳೆಗಳಂತಹ ಪರ್ಯಾಯ ಆಶ್ರಯದಾತ ಸಸ್ಯಗಳಲ್ಲಿ ಚಳಿಗಾಲವನ್ನು ಕಳೆಯಬೇಕಾಗುತ್ತದೆ. ಉದಾಹರಣೆಗೆ ಕ್ರೀಪಿಂಗ್ ವುಡ್ಸೊರೆಲ್ (ಆಕ್ಸಲಿಸ್ ಕಾರ್ನಿಕುಲಾಟಾ). ಗಾಳಿ ಮತ್ತು ಮಳೆಯಿಂದ ಬೀಜಕಗಳನ್ನು ಹೆಚ್ಚಿನ ದೂರಕ್ಕೆ ಸಾಗಿಸಬಹುದು. ಹೆಚ್ಚಿನ ಸಾಪೇಕ್ಷ ಆರ್ದ್ರತೆ (ಸುಮಾರು 100%), ಇಬ್ಬನಿ, ಮಳೆ ಮತ್ತು ತಂಪಾದ ತಾಪಮಾನ (10-12 °C) ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ. ಬಿಸಿ, ಶುಷ್ಕ ಹವಾಮಾನವು ಶಿಲೀಂಧ್ರದ ಬೆಳವಣಿಗೆಯನ್ನು ನಿಧಾನ ಮಾಡುತ್ತದೆ ಅಥವಾ ಮತ್ತು ರೋಗದ ಸಂಭವಕ್ಕೆ ಅಡ್ಡಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ತೀವ್ರವಾಗಿ ಸೋಂಕಿತ ಎಲೆಗಳು ಒಣಗಿ, ನಾಶವಾಗುವ ಸಾಧ್ಯತೆ ಇದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳು ಸ್ಥಳೀಯವಾಗಿ ಲಭ್ಯವಿದ್ದರೆ ಅವುಗಳನ್ನೇ ನೆಡಿ.
  • ಪ್ರಮಾಣೀಕೃತ ಮೂಲದಿಂದ ಆರೋಗ್ಯಕರ ಬೀಜಗಳನ್ನು ಬಳಸಿ.
  • ಸೋಂಕಿತ ಹೊಲಗಳಿಂದ ಬಂದ ಬೀಜಗಳನ್ನು ಬಳಸಬೇಡಿ.
  • ಸೋಂಕಿಗೆ ಸೂಕ್ತವಾದ ಪರಿಸ್ಥಿತಿಗಳನ್ನು ತಪ್ಪಿಸಲು ಋತುವಿನ ಆರಂಭದಲ್ಲಿ ನೆಡಬೇಕು.
  • ಬೇಗ ಬಲಿಯುವ ಸಣ್ಣ ಋತುವಿನ ಪ್ರಭೇದಗಳನ್ನು ಬಳಸಿ.
  • ರೋಗದ ಚಿಹ್ನೆಗಳಿಗಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ (ಉದಾಹರಣೆಗೆ, ಅವುಗಳನ್ನು ಸುಡುವ ಮೂಲಕ).
  • ಇತರ ಆತಿಥೇಯ ಸಸ್ಯಗಳೊಂದಿಗೆ ಅಡ್ಡ ಸೋಂಕನ್ನು ತಪ್ಪಿಸಲು ಉತ್ತಮ ಕಳೆ ನಿರ್ವಹಣೆಯನ್ನು ಯೋಜಿಸಿ.
  • ಸೋಂಕಿಗೆ ಒಳಗಾಗದ ಬೆಳೆಗಳೊಂದಿಗೆ ಸರದಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ