ಸೂರ್ಯಕಾಂತಿಯ ಬೂದಿ ರೋಗ

ಸೂರ್ಯಕಾಂತಿ

ಸೂರ್ಯಕಾಂತಿಯ ಬೂದಿ ರೋಗ

Golovinomyces cichoracearum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಕಾಂಡಗಳ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಪುಡಿಯಂತಹ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.
  • ರೋಗ ಪೀಡಿತ ಎಲೆಗಳು ಹಳದಿಯಾಗಿ ನಂತರ ಒಣಗಿ ಹೋಗಬಹುದು.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಸೂರ್ಯಕಾಂತಿಯ ಬೂದಿ ರೋಗ

ಸೂರ್ಯಕಾಂತಿ

ರೋಗಲಕ್ಷಣಗಳು

ಮೊದಲು ಕೆಳಗಿನ ಹಳೆಯ ಎಲೆಗಳ ಮೇಲ್ಭಾಗದಲ್ಲಿ ಬಿಳಿ ಪುಡಿಯಂತಹ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ಕ್ರಮೇಣ ವಿಸ್ತರಿಸಿ ಇಡೀ ಎಲೆಯ ಮೇಲ್ಮೈಯನ್ನು ಆವರಿಸುತ್ತವೆ. ರೋಗ ತೀವ್ರವಾಗಿದ್ದಾಗ ಕಾಂಡ ಮತ್ತು ಎಲೆಗಳ ಕೆಳಭಾಗದಲ್ಲೂ ಈ ಪುಡಿಯಂತಹ ಪದರ ಹರಡಬಹುದು. ಪೀಡಿತ ಎಲೆಗಳು ಮೊದಲು ಹಳದಿಯಾಗಿ, ನಂತರ ಕಂದು ಬಣ್ಣಕ್ಕೆ ತಿರುಗಿ ಸಾಯಬಹುದು. ತೀವ್ರವಾಗಿ ಸೋಂಕಿತಗೊಂಡ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಬೇಗ ಮುಪ್ಪಾಗಬಹುದು. ರೋಗದ ನಂತರದ ಹಂತದಲ್ಲಿ ಬಿಳಿ ಮಚ್ಚೆಗಳ ಒಳಗೆ ಸಣ್ಣ ಕಪ್ಪು ಬಣ್ಣದ ಗುಂಡಗಿನ ರಚನೆಗಳು ಕಾಣಿಸಿಕೊಳ್ಳಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೋಗದ ಆರಂಭಿಕ ಹಂತದಲ್ಲಿ ಜೈವಿಕ ನಿಯಂತ್ರಣ ಏಜೆಂಟ್‌ಗಳಾದ ಟ್ರೈಕೋಡರ್ಮಾ ಪ್ರಭೇದಗಳು, ಬೆಸಿಲಸ್ ಸಬ್ಟಿಲಿಸ್ , ಗಂಧಕದ ಉತ್ಪನ್ನಗಳು, ಪೊಟ್ಯಾಸಿಯಮ್ ಬೈಕಾರ್ಬನೇಟ್ ದ್ರಾವಣ ಅಥವಾ ಬೇವಿನ ಎಣ್ಣೆಯ ಸಿಂಪಡಣೆಯು ರೋಗ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ರಾಸಾಯನಿಕಗಳ ಜೊತೆಗೆ ಜೈವಿಕ ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಒಳಗೊಂಡ ಸಮಗ್ರ ನಿರ್ವಹಣೆಯನ್ನು ಅನುಸರಿಸಿ. ರೋಗದ ಲಕ್ಷಣಗಳು ಕಂಡ ತಕ್ಷಣ ಅಥವಾ ಮುನ್ನೆಚ್ಚರಿಕೆಯಾಗಿ ಶಿಲೀಂಧ್ರನಾಶಕಗಳನ್ನು ಬಳಸುವುದು ಹೆಚ್ಚು ಪರಿಣಾಮಕಾರಿ. ರೋಗಕಾರಕವು ಸಸ್ಯದಾದ್ಯಂತ ತ್ವರಿತವಾಗಿ ಹರಡುವುದರಿಂದ, ಔಷಧ ಸಿಂಪಡಿಸುವಾಗ ಗಿಡದ ಎಲ್ಲಾ ಭಾಗಗಳಿಗೆ ತಗುಲುವಂತೆ ಸಿಂಪಡಿಸಿ. ಶಿಲೀಂಧ್ರಗಳು ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದನ್ನು ತಡೆಯಲು, ಬೇರೆ ಬೇರೆ ಗುಂಪಿನ ಶಿಲೀಂಧ್ರನಾಶಕಗಳನ್ನು ಅದಲು ಬದಲಾಗಿ ಬಳಸಿ.

ಅದಕ್ಕೆ ಏನು ಕಾರಣ

ಹೆಚ್ಚಿನ ಶಿಲೀಂಧ್ರ ರೋಗಗಳಿಗಿಂತ ಭಿನ್ನವಾಗಿ, ಈ ರೋಗವು ಬೆಚ್ಚಗಿನ ಮತ್ತು ಕಡಿಮೆ ತೇವಾಂಶವಿರುವ ಒಣ ಹವಾಮಾನದಲ್ಲಿ ಹರಡುತ್ತದೆ. ಹಗಲು ಹೊತ್ತಿನ ಶಾಖ ಮತ್ತು ರಾತ್ರಿಯ ತಂಪು ಹವಾಮಾನವು ರೋಗ ಹರಡಲು ಪೂರಕವಾಗಿವೆ. ಇದು ಗಾಳಿಯ ಮೂಲಕ ಸುಲಭವಾಗಿ ಹರಡುತ್ತದೆ. ಈ ಶಿಲೀಂಧ್ರಕ್ಕೆ ಸೋಂಕು ಹರಡಲು ಎಲೆಯ ಮೇಲೆ ನೀರಿನ ಅವಶ್ಯಕತೆಯಿಲ್ಲ. ಇದು ಬೆಳೆ ಇಲ್ಲದ ಸಮಯದಲ್ಲಿ ಹೊಲದ ಕಸಕಡ್ಡಿಗಳಲ್ಲಿ ಮತ್ತು ಕಾಡು ಸೂರ್ಯಕಾಂತಿಯಂತಹ ಆಶ್ರಯದಾತ ಕಳೆಗಳಲ್ಲಿ ಬದುಕಿರುತ್ತದೆ. ಗಾಳಿಯ ಸಂಚಾರವಿಲ್ಲದ ದಟ್ಟವಾದ ಬೆಳೆಗಳಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚು.


ಮುಂಜಾಗ್ರತಾ ಕ್ರಮಗಳು

  • ದೃಢೀಕೃತ ಬೀಜಗಳನ್ನು ಮತ್ತು ಹೆಚ್ಚು ರೋಗ ನಿರೋಧಕ ಶಕ್ತಿಯಿರುವ ತಳಿಗಳನ್ನು ಬಳಸಿ.
  • ಗಾಳಿಯ ಸಂಚಾರ ಸುಗಮವಾಗಿರಲು ಗಿಡಗಳನ್ನು ತೀರಾ ಹತ್ತಿರ ಹತ್ತಿರ ನೆಡಬೇಡಿ (ದಟ್ಟಣೆಯನ್ನು ತಪ್ಪಿಸಿ).
  • ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಬೆಳೆ ಪರ್ಯಾಯ ಕ್ರಮ ಅನುಸರಿಸಿ.
  • ಕೊಯ್ಲಿನ ನಂತರ ಸೋಂಕಿತ ಗಿಡದ ಅವಶೇಷಗಳನ್ನು ನಾಶಪಡಿಸಿ.
  • ಅತಿಯಾದ ಸಾರಜನಕ ಗೊಬ್ಬರದ ಬಳಕೆಯನ್ನು ತಪ್ಪಿಸಿ.
  • ಕೆಳಗಿನ ಎಲೆಗಳ ಮೇಲೆ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತಿವೆಯೇ ಎಂದು ಹೊಲದಲ್ಲಿ ನಿಯಮಿತವಾಗಿ ಪರೀಕ್ಷಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ