ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಬೂದಿರೋಗ

Leveillula taurica

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಒರೆಸಿ ತೆಗೆಯಬಹುದಾದಂಥ ನುಣ್ಣನೆಯ ಹಿಟ್ಟಿನಂತಹ ಪದರ ಕಾಣಿಸಿಕೊಳ್ಳುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಲೆವೆಯುಲ್ಲಾ ಎಲೆಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಕಾಂಡ ಮತ್ತು ಹಣ್ಣುಗಳು ಕೆಲವೊಮ್ಮೆ ತೊಂದರೆಗೆ ಒಳಗಾಗುತ್ತವೆ. ಮೊದಲ ಲಕ್ಷಣಗಳೆಂದರೆ ಎಲೆಗಳ ಕೆಳಭಾಗದಲ್ಲಿ ಪುಡಿಯಾದ, ಬಿಳಿ ಚುಕ್ಕೆಗಳು ಮತ್ತು ಎಲೆಗಳ ಮೇಲ್ಭಾಗದಲ್ಲಿ ವಿವಿಧ ಸಾಂಧ್ರತೆಯ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಮುಂದೆ, ಬಿಳಿಯ ಬಣ್ಣದ ಪುಡಿಯಾದ ಚುಕ್ಕೆಗಳು ಎಲೆಗಳ ಮೇಲ್ಭಾಗದಲ್ಲೂ ಕಾಣಿಸಿಕೊಳ್ಳುತ್ತದೆ. ಕಾಯಿಲೆಯು ಮುಂದುವರಿದಂತೆ, ಸೋಂಕಿತ ಭಾಗಗಳು ಸೊರಗಿ, ಎಲೆಗಳು ಉದುರಿಹೋಗಿ ಗಿಡವು ಸಾಯುತ್ತದೆ.

Recommendations

ಜೈವಿಕ ನಿಯಂತ್ರಣ

ಉದ್ಯಾನಗಳಿಗೆ, ಹಾಲು-ನೀರಿನ ದ್ರಾವಣಗಳು ನೈಸರ್ಗಿಕ ಶಿಲೀಂಧ್ರನಾಶಕಗಳಾಗಿ ಕೆಲಸ ಮಾಡುತ್ತವೆ. ಪ್ರತಿ ಎರಡು ದಿನಕ್ಕೊಮ್ಮೆಯಂತೆ ಎಲೆಗಳಿಗೆ ಇದನ್ನು ಸಿಂಪಡಿಸಿ. ಬೂದಿರೋಗದ ವಿಧಗಳು ಪ್ರತಿ ಆಶ್ರಯದಾತ ಬೆಳೆಯಲ್ಲೂ ಭಿನ್ನವಾಗಿರುತ್ತದೆ, ಹಾಗಾಗಿ ಈ ಪರಿಹಾರವು ಎಲ್ಲಾ ಬೆಳೆಗಳ ಮೇಲೂ ಪರಿಣಾಮಕಾರಿಯಾಗಿ ಕೆಲಸ ಮಾಡದಿರಬಹುದು. ಯಾವುದೇ ಸುಧಾರಣೆ ಕಾಣದಿದ್ದರೆ, ಬೆಳ್ಳುಳ್ಳಿ ಅಥವಾ ಸೋಡಿಯಂ ಬೈಕಾರ್ಬನೇಟ್ ದ್ರಾವಣವನ್ನು ಪ್ರಯತ್ನಿಸಿ. ವಾಣಿಜ್ಯ ಸಾವಯವ ಚಿಕಿತ್ಸೆಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಬೂದಿ ರೋಗದಿಂದ ಹಾನಿಗೊಳಗಾಗುವ ಬೆಳೆಗಳ ಸಂಖ್ಯೆಯನ್ನು ಪರಿಗಣಿಸಿದರೆ ಯಾವುದೇ ನಿರ್ದಿಷ್ಟ ರಾಸಾಯನಿಕ ಚಿಕಿತ್ಸೆಯನ್ನು ಸೂಚಿಸುವುದು ಕಷ್ಟ. ನೀರಲ್ಲಿ ಬೆರೆಸಬಹುದಾದ ಸಲ್ಫರ್ ( ವೆಟ್ಟಬಲ್ ಸಲ್ಫರ್ ), ಟ್ರೈಫ್ಲುಮಿಝಾಲ್, ಮೈಕ್ಲೊಬ್ಯುಟಾನಿಲ್ ಆಧರಿಸಿದ ಶಿಲೀಂಧ್ರನಾಶಕಗಳು ಕೆಲವು ಬೆಳೆಗಳಲ್ಲಿ ಶಿಲೀಂಧ್ರದ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ.

ಅದಕ್ಕೆ ಏನು ಕಾರಣ

ಶಿಲೀಂಧ್ರದ ಬೀಜಕಗಳು ಎಲೆ ಮೊಗ್ಗುಗಳು ಮತ್ತು ಗಿಡದ ಅವಶೇಷಗಳೊಳಗೆ ಚಳಿಗಾಲವನ್ನು ಕಳೆಯುತ್ತವೆ. ಗಾಳಿ, ನೀರು ಮತ್ತು ಕೀಟಗಳ ಮೂಲಕ ಬೀಜಕಗಳು ಹತ್ತಿರದ ಗಿಡಗಳಿಗೆ ಹರಡುತ್ತವೆ. ಇದು ಶಿಲೀಂಧ್ರವಾಗಿದ್ದರೂ ಸಹ, ಬೂದಿ ರೋಗವು ಒಣ ಹವೆಯಲ್ಲಿ ಕೂಡ ಸಾಮಾನ್ಯವಾಗಿ ಬೆಳೆಯಬಹುದು. ಇದು 10-12 °C ನಡುವಿನ ಉಷ್ಣಾಂಶದಲ್ಲಿ ಬದುಕಿಕೊಳ್ಳುತ್ತದೆಯಾದರೂ 30 °C ಉಷ್ಣತೆ ಇದಕ್ಕೆ ಅನುಕೂಲಕರ. ಡೌನಿ ಮಿಲ್ಡ್ಯೂ ರೋಗಕ್ಕೆ ಭಿನ್ನವಾಗಿ, ಸಣ್ಣ ಪ್ರಮಾಣದ ಮಳೆ ಮತ್ತು ನಿಯಮಿತ ಬೆಳಗಿನ ಇಬ್ಬನಿಯು ಪೌಡರಿ ಮಿಲ್ಡ್ಯೂ ರೋಗ ಹರಡುವ ವೇಗವನ್ನು ವರ್ಧಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಚೆನ್ನಾಗಿ ಗಾಳಿಯಾಡಲು ಅವಕಾಶವಿರುವಂತೆ ಗಿಡಗಳ ನಡುವೆ ಸಾಕಷ್ಟು ಅಂತರ ಬಿಡಿ.
  • ಚುಕ್ಕೆಗಳು ಕಂಡ ಕೂಡಲೇ ಸೋಂಕಿತ ಎಲೆಗಳನ್ನು ತೆಗೆದುಹಾಕಿ.
  • ಸೋಂಕಿತ ಗಿಡಗಳನ್ನು ಮುಟ್ಟಿದ ನಂತರ ಆರೋಗ್ಯಕರ ಗಿಡಗಳನ್ನು ಮುಟ್ಟಬೇಡಿ.
  • ಮಣ್ಣನ್ನು ಮುಚ್ಚುವಂತೆ ಹೊದಿಕೆ ಅಥವಾ ಒಣ ಎಲೆಗಳನ್ನು ಉಪಯೋಗಿಸಿದರೆ ಬೀಜಕಗಳು ಮಣ್ಣಿನಿಂದ ಎಲೆಗೆ ಹರಡದಂತೆ ತಡೆಯಬಹುದು.
  • ಕೆಲವೊಮ್ಮೆ ಸರದಿ ಬೆಳೆ ಕೂಡ ಕೆಲಸ ಮಾಡುತ್ತದೆ.
  • ಸಮತೋಲಿತ ಪೋಷಕಾಂಶ ಪೂರೈಕೆಯೊಂದಿಗೆ ಮಣ್ಣನ್ನು ಫಲವತ್ತಾಗಿರಿಸಿ.
  • ತೀವ್ರವಾದ ತಾಪಮಾನ ಬದಲಾವಣೆಗಳನ್ನು ತಪ್ಪಿಸಿ.
  • ಕೊಯ್ಲಿನ ನಂತರ ಸಸ್ಯಾವಶೇಷಗಳನ್ನು ಉತ್ತು ಬಿಡಿ ಅಥವಾ ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ