ಭತ್ತ

ಭತ್ತದ ಕಾಳಿನ ಕಾಡಿಗೆ ರೋಗ (ಕರ್ನಲ್ ಸ್ಮಟ್ ಆಫ್ ರೈಸ್)

Tilletia barclayana

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬೆಳೆಯ ಪಕ್ವತೆಯ ಸಮಯದಲ್ಲಿ ಸಾಮಾನ್ಯವಾಗಿ ಲಕ್ಷಣಗಳು ಕಂಡುಬರುತ್ತವೆ.
  • ಧಾನ್ಯಗಳ ಮೇಲೆ ಕಪ್ಪು ಬೊಬ್ಬೆಗಳು.
  • ಸಸ್ಯದ ಇತರ ಭಾಗಗಳಲ್ಲಿ ಕಪ್ಪು ಮಸಿಯ ಲೇಪನ.
  • ಈ ರೋಗವು ಧಾನ್ಯದ ಎಂಡೋಸ್ಪರ್ಮ್‌ಗಳ ಸ್ಥಳದಲ್ಲಿ ಕಪ್ಪು ಬೀಜಕಗಳನ್ನು ಉತ್ಪಾದಿಸುವ ಮೂಲಕ ಧಾನ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
  • ಈ ರೋಗದ ಕೆಲವು ವಿಧಗಳು ವಿಷವನ್ನು ಉತ್ಪತ್ತಿ ಮಾಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಭತ್ತವು ಅದರ ಪಕ್ವತೆಯ ಹಂತವನ್ನು ತಲುಪಿದಾಗ ರೋಗಲಕ್ಷಣಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ. ಸೋಂಕಿಗೆ ಒಳಗಾದಾಗ ಕಾಳಿನ ಹೊಟ್ಟು ಗಾಢ ಬಣ್ಣದ್ದಾಗುತ್ತದೆ ಮತ್ತು ಕಪ್ಪು ಬೊಬ್ಬೆಗಳು ಸಿಪ್ಪೆಯನ್ನು ಒಡೆದುಕೊಂಡು ಒಳಗೆ ಹೋಗುತ್ತವೆ. ಮುಂಜಾನೆಯಲ್ಲಿ ವಾತಾವರಣದಲ್ಲಿ ಇಬ್ಬನಿಯಾಗಿದ್ದಾಗ ಬೀಜಕಗಳನ್ನು ಹೆಚ್ಚಾಗಿ ಗಮನಿಸಬಹುದು. ಸೋಂಕಿತ ಕಾಳುಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕಪ್ಪಾಗಬಹುದು. ಬೀಜಕಗಳ ಕಪ್ಪು ಬೊಬ್ಬೆಗಳು ಹೊಟ್ಟಿನ ಮೂಲಕ ಒಳನುಗ್ಗುತ್ತವೆ, ಇದು ರಾತ್ರಿಯ ಇಬ್ಬನಿಯ ತೇವಾಂಶದಿಂದ ಊದಿಕೊಳ್ಳಬಹುದು. ಸೋಂಕಿತ ಧಾನ್ಯದಿಂದ ಚೆಲ್ಲುವ ಬೀಜಕಗಳು ಇತರ ಸಸ್ಯ ಭಾಗಗಳ ಮೇಲೆ ಬೀಳುತ್ತವೆ, ಇದು ರೋಗದ ಪತ್ತೆಗೆ ಸಹಾಯ ಮಾಡುವ ವಿಶಿಷ್ಟವಾದ ಕಪ್ಪು ಹೊದಿಕೆಯನ್ನು ರೂಪಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಕೀಟಗಳು ಮತ್ತು ರೋಗಗಳ ಪ್ರವೇಶ, ಸ್ಥಾಪನೆ ಮತ್ತು ಹರಡುವಿಕೆಯನ್ನು ತಡೆಗಟ್ಟಲು ಅತ್ಯುತ್ತಮ ಜೈವಿಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು. ಬ್ಯಾಸಿಲಸ್ ಪುಮಿಲಸ್‌ನಂತಹ ಜೈವಿಕ ಏಜೆಂಟ್‌ಗಳು ಟಿಲ್ಲೆಟಿಯಾ ಬಾರ್ಕ್ಲೇಯಾನಾದ ಶಿಲೀಂಧ್ರದ ವಿರುದ್ಧ ಬಹಳ ಪರಿಣಾಮಕಾರಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗಕ್ಕೆ ಹೆಚ್ಚಿನ ಸಾರಜನಕ ಪ್ರಮಾಣಗಳು ಉನುಕೂಲಕರ, ಆದ್ದರಿಂದ ಸೂಕ್ತ ಸಮಯದಲ್ಲಿ ಶಿಫಾರಿತ ಪ್ರಮಾಣದ ಸಾರಜನಕವನ್ನು ಮಾತ್ರ ಬಳಸಿ. ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ಬೂಟ್ ಬೆಳವಣಿಗೆಯ ಹಂತದಲ್ಲಿ ಶಿಲೀಂಧ್ರಗಳನ್ನು ಹೊಂದಿರುವ ಪ್ರೊಪಿಕೊನಜೋಲ್ ಅನ್ನು ಬಳಸಿ. ಅಜಾಕ್ಸಿಸ್ಟ್ರೋಬಿನ್, ಟ್ರಿಫ್ಲಾಕ್ಸಿಸ್ಟ್ರೋಬಿನ್ ನಂತಹ ಶಿಲೀಂಧ್ರನಾಶಕಗಳನ್ನು ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ಈ ರೋಗವು ಟಿಲ್ಲೆಟಿಯಾ ಬಾರ್ಕ್ಲೇಯಾನಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಇದನ್ನು ನಿಯೋವೊಸಿಯಾ ಹೊರಿಡಾ ಎಂದೂ ಕರೆಯುತ್ತಾರೆ. ಶಿಲೀಂಧ್ರವು ಭತ್ತದ ಹೋಟ್ಟಿನ ಜಾಗದಲ್ಲಿ ಕಪ್ಪು ಬೀಜಕಗಳಾಗಿ ಉಳಿದಿದೆ. ಅವುಗಳು ಗಾಳಿಯಿಂದ ಹರಡಬಹುದು ಮತ್ತು ಅದೇ ಬೆಳೆಯಲ್ಲಿ ಮತ್ತು ಅದರ ನೆರೆಯ ಬೆಳೆಗಳಲ್ಲಿ ಭತ್ತದ ತೆನೆಗಳಿಗೆ ಮತ್ತೆ ಸೋಂಕು ತರುತ್ತದೆ. ಸೋಂಕಿತ ಮತ್ತು ಕಲುಷಿತ ಧಾನ್ಯ, ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೇಲೆ ಶಿಲೀಂಧ್ರದ ಬೀಜಕಗಳು ಬಿದ್ದಾಗ ರೋಗ ಹರಡುತ್ತದೆ. ರೈಸ್ ಕರ್ನಲ್ ಸ್ಮಟ್ ನ ಬೀಜಕಗಳು ನೀರಿನ ಮೇಲೆ ಸಹ ತೇಲುತ್ತವೆ ಮತ್ತು ಈ ರೀತಿಯಲ್ಲೂ ಹರಡಬಹುದು. ಬೀಜಕಗಳು ಧಾನ್ಯಗಳ ಮೇಲೆ ಕನಿಷ್ಠ 3 ವರ್ಷಗಳ ಕಾಲ ಬದುಕಬಲ್ಲವು ಮತ್ತು ಪ್ರಾಣಿಗಳ ಜೀರ್ಣಾಂಗದ ಮೂಲಕವೂ ಬದುಕುಳಿದು ಹಾದುಹೋಗುತ್ತವೆ. ಹೆಚ್ಚಿನ ತಾಪಮಾನ ಮತ್ತು ತೇವಾಂಶವು ಶಿಲೀಂಧ್ರಗಳ ಬೆಳವಣಿಗೆಗೆ ಅನುಕೂಲಕರವಾಗಿದೆ. ಇಬ್ಬನಿಯಿರುವ ಮುಂಜಾನೆಯಲ್ಲಿ, ಮಸಿಯಾದ ಧಾನ್ಯಗಳು ಊದಿಕೊಳ್ಳುತ್ತವೆ ಮತ್ತು ಒಡೆಯುತ್ತವೆ, ಇದರಿಂದಾಗಿ ಹೆಚ್ಚಿನ ಬೀಜಕಗಳು ಬಿಡುಗಡೆಯಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಹೊಲಗಳಲ್ಲಿ ರೋಗಕ್ಕೆ ಅಲ್ಪವಾಗಿ ತುತ್ತಾಗುವ ತಳಿಗಳನ್ನು ಬಳಸಿ, ಉದಾಹರಣೆಗೆ, ಭತ್ತದ ಕಾಳಿನ ಕಾಡಿಗೆ ರೋಗದ ಇತಿಹಾಸವಿಲ್ಲದ ಸಣ್ಣ ಮತ್ತು ಮಧ್ಯಮ ಧಾನ್ಯ ಪ್ರಭೇದಗಳು.
  • ಮೊದಲೇ ಪ್ರಮಾಣೀಕೃತ ಭತ್ತದ ಬೀಜವನ್ನು ನೆಡಬೇಕು.
  • ಶಿಫಾರಸು ಮಾಡಿದ ಸಾರಜನಕ ಗೊಬ್ಬರದ ಪ್ರಮಾಣವನ್ನು ಮಾತ್ರ ಬಳಸಿ.
  • ಅತಿಯಾದ ಸಾರಜನಕ ಬಳಕೆಯನ್ನು ತಪ್ಪಿಸಿ, ವಿಶೇಷವಾಗಿ ಹೊಲದಲ್ಲಿ ನೀರು ನಿಲ್ಲುವುದಕ್ಕಿಂತ ಮೊದಲು.
  • ರೋಗ ಹರಡುವುದನ್ನು ತಪ್ಪಿಸಲು ಉತ್ತಮ ನೈರ್ಮಲ್ಯ ನಿರ್ವಹಣೆಯನ್ನು ಜಾರಿಗೊಳಿಸಿ.
  • ಸೋಂಕಿತ ಭತ್ತದ ಸಸ್ಯದ ಸುತ್ತ 50 ಮೀ ಚದರದವರೆಗೆ ನಿಷೇಧ ಪ್ರದೇಶವನ್ನು ಶಿಫಾರಸು ಮಾಡಬಹುದು.
  • ಸೋಂಕಿತ ಸಸ್ಯಗಳನ್ನು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸುಡುವ ಮೂಲಕ ನಿರ್ಮೂಲನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ