ಸೋಯಾಬೀನ್

ಸೋಯಾಬೀನಿನ ಡೌನಿ ಮಿಲ್ ಡ್ಯೂ

Peronospora manshurica

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಣ್ಣದಾದ, ಪೇಲವ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ ಕಂಡು ಬರುತ್ತವೆ.
  • ಹಳೆಯ ಗಾಯಗಳು ಕಂದು ಬಣ್ಣಕ್ಕೆ ತಿರುಗುತ್ತವೆ, ಗಾಯದ ಸುತ್ತಲೂ ಹಳದಿ ಉಂಗುರ ಮೂಡುತ್ತದೆ.
  • ಎಲೆಗಳ ಕೆಳಭಾಗದಲ್ಲಿ ಚುಕ್ಕೆಗಳು ಬೂದು ಬಣ್ಣದಲ್ಲಿದ್ದು ಮಸುಕುಮಸುಕಾದ ಚುಕ್ಕೆಗಳು ಕಾಣುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಸೋಂಕಿನ ಮೊದಮೊದಲ ಲಕ್ಷಣಗಳು ಎಳೆಯ ಗಿಡಗಳಲ್ಲಿ ಕಂಡು ಬಂದರೂ ಕೂಡ ಹೊಲದಲ್ಲಿ ಅದು ಕಾಣಿಸಿಕೊಳ್ಳುವುದು ಕಾಂಡ, ರೆಂಬೆ ಮತ್ತು ಎಲೆಗಳು ಬೆಳೆಯುವ ಹಂತದ ಕೊನೆಯ ಭಾಗದಲ್ಲಿ ಅಥವಾ ಸಂತಾನೋತ್ಪತ್ತಿ ಹಂತದ ಮೊದಲ ಭಾಗದಲ್ಲಿ. ಮೊದಲು ಸಣ್ಣ, ಅನಿಯಮಿತವಾದ ಪೇಲವ ಹಳದಿ ಬಣ್ಣದ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ತರುವಾಯ, ಅವು ಬೂದು ಕಂದು ಬಣ್ಣಕ್ಕೆ ತಿರುಗುತ್ತವೆ. ಹಳದಿ ಬಣ್ಣದ ಅಂಚು ಮೂಡುತ್ತದೆ. ಎಲೆಗಳ ಕೆಳಭಾಗದಲ್ಲಿ ಚುಕ್ಕೆಗಳು ಬೂದು ಬಣ್ಣದಲ್ಲಿದ್ದು ರೋಗಕಾರಕದಿಂದಾಗಿ ಮಸುಕುಮಸುಕಾಗಿ ಕಾಣುತ್ತವೆ. ಲಕ್ಷಣಗಳು ಆಗಾಗ ಗಿಡಗಳ ಕೆಳಭಾಗದಲ್ಲಿ ಕಾಣಸಿಗುತ್ತವೆ. ಬೀಜಕೋಶಗಳಿಗೆ ಸೋಂಕು ತಗುಲಿದಾಗ ಶಿಲೀಂಧ್ರದಂತೆ ಕಾಣುವ ದಪ್ಪ ಪದರವನ್ನು ಬೀಜಕೋಶಗಳ ಒಳಗೆ ನೋಡಬಹುದು. ಸೋಂಕಿತ ಬೀಜವು ಮಬ್ಬು ಬಿಳಿ ಬಣ್ಣದಲ್ಲಿದ್ದು ಭಾಗಶಃ ಅಥವಾ ಪೂರ್ತಿಯಾಗಿ ಶಿಲೀಂಧ್ರದಿಂದ ಮುಚ್ಚಲ್ಪಟ್ಟಿರುತ್ತದೆ. ಗಾಯದ ಗಾತ್ರ ಮತ್ತು ಆಕಾರವು ಎಲೆಯ ವಯಸ್ಸಿನ ಮೇಲೆ ಅವಲಂಬಿತವಾಗಿದೆ. ಹಳೆಯ ಗಾಯಗಳು ಅಥವಾ ಕಂದು ಬಣ್ಣಕ್ಕೆ ತಿರುಗಬಹುದು, ಹಳದಿ ಅಥವಾ ಹಸಿರು ಅಂಚುಗಳಿರುತ್ತವೆ. ಸೋಂಕು ತೀವ್ರವಿದ್ದಲ್ಲಿ ಎಲೆಗಳು ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿ ಅವಧಿಗೆ ಮುನ್ನವೇ ಉದುರಿ ಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ಜೈವಿಕ ನಿಯಂತ್ರಣದ ಯಾವುದೇ ವಿಧಾನ ತಿಳಿದು ಬಂದಿಲ್ಲ. ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುವ ಅಥವಾ ಅದರ ತೀವ್ರತೆಯನ್ನು ಕಡಿಮೆ ಮಾಡುವ ಯಾವುದಾದರೂ ವಿಧಾನ ಗೊತ್ತಿದ್ದರೆ, ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಮಾಂಕೊಝೆಬ್ ಅಥವಾ ಝಿನೆಬ್‍ನ ಜೊತೆ ಮೆಟಾಲಾಕ್ಸಿಲ್, ಆಕ್ಸಾಡಿಕ್ಸಿಲ್‍ನಂತಹ ಶಿಲೀಂಧ್ರನಾಶಕಗಳನ್ನು ಬೀಜ ಚಿಕಿತ್ಸೆಗೆ ಬಳಸಿ.

ಅದಕ್ಕೆ ಏನು ಕಾರಣ

ಪರ್ನೊಸ್ಪೋರಾ ಮಂಶೂರಿಕಾ ಎಂಬ ಶಿಲೀಂಧ್ರದಂತಹ ಜೀವಿಯೇ ಈ ಸೋಂಕಿಗೆ ಕಾರಣ. ಇದು ಹೊಲದಲ್ಲಿ ನೆಲಕ್ಕುದುರಿದ ಎಲೆಗಳಲ್ಲಿ ಮತ್ತು ಕೆಲವೊಮ್ಮೆ ಬೀಜಗಳಲ್ಲಿ ದಪ್ಪ ಕವಚವಿರುವ ವಿಶ್ರಾಂತ ಬೀಜಕಗಳಾಗಿ ಚಳಿಗಾಲವನ್ನು ಕಳೆಯುತ್ತವೆ. ಹೂವು ಮೂಡತೊಡಗಿದ ಮೇಲೆ ಈ ಖಾಯಿಲೆ ಬಹಳ ಸಾಮಾನ್ಯ. ಎಳೆಯ ಎಲೆಗಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು, ಹಾಗಾಗಿ ಸೋಂಕಿತ ಎಲೆಗಳು ಹೆಚ್ಚಾಗಿ ಗಿಡದ ಮೇಲ್ಭಾಗದಲ್ಲಿ ಕಾಣಸಿಗುತ್ತವೆ. ಹಳೆಯ ಸೋಯಾಬೀನ್ ಗಿಡಗಳ ಬೆಳೆದ ಎಲೆಗಳಲ್ಲಿ ಗಾಯಗಳ ಸಂಖ್ಯೆ ಹೆಚ್ಚಾಗಿ ಗಾಯದ ಗಾತ್ರ ಚಿಕ್ಕದಾಗಿರುವುದು ಕಾಣಬಹುದು. 20-22°C ಯ ಉಷ್ಣತೆ ಮತ್ತು ಹೆಚ್ಚಿನ ತೇವಾಂಶವು ಸೋಂಕಿಗೆ ಅನುಕೂಲಕರ. ಶಿಲೀಂಧ್ರವು ನೆಲಕ್ಕುದುರಿದ ಎಲೆಗಳಲ್ಲಿ ಮತ್ತು ಕೆಲವೊಮ್ಮೆ ಬೀಜಗಳಲ್ಲಿ ದಪ್ಪ ಕವಚವಿರುವ ವಿಶ್ರಾಂತ ಬೀಜಕಗಳಾಗಿ ಚಳಿಗಾಲವನ್ನು ಕಳೆಯುತ್ತದೆ. ಸೋಂಕಿನ ಉಲ್ಬಣ ಹವಾಗುಣದ ಮೇಲೆ ಅವಲಂಬಿತವಾಗಿದೆ. ತೇವಾಂಶ ಕಡಿಮೆಯಾದಾಗ ರೋಗಕಾರಕವು ಸೊರಗಿ ಸೋಂಕು ಹಬ್ಬುವುದು ತಪ್ಪುತ್ತದೆ. ಹೆಚ್ಚಿದ ತೇವಾಂಶ ಮತ್ತು ಸ್ಥಿರ ಮಳೆಯಾದ ಸಂಭವದಲ್ಲಿ ಸೋಂಕು ಪುನಃ ಉಲ್ಬಣವಾಗತೊಡಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸೋಂಕು ನಿರೋಧಕ ತಳಿಗಳ ಪ್ರಮಾಣೀಕೃತ ಬೀಜಗಳನ್ನು ಬಳಸಿ.
  • ಗಿಡಗಳ ನಡುವೆ ಅಂತರವಿರಲಿ, ರಸಗೊಬ್ಬರದ ಅತಿಯಾದ ಬಳಕೆ ಬೇಡ.
  • ಬೆಳೆ ಪರಿವರ್ತನೆ ವಿಧಾನ ಬಳಸಿ ಸೋಯಾಬೀನಿನ ಜೊತೆ ರೋಗಕಾರಕಕ್ಕೆ ಆಶ್ರಯ ಕೊಡದ ಬೆಳೆಗಳನ್ನು ಒಂದು ವರ್ಷದ ಮಟ್ಟಿಗಾದರೂ ಆವರ್ತಿಸಿದರೆ ಈ ಸೋಂಕಿನ ಸಂಭವವನ್ನು ಕಡಿಮೆಗೊಳಿಸಬಹುದು.
  • ಸೋಂಕು ತಗುಲಿದ ಬೆಳೆಯ ಅವಶೇಷವನ್ನು ಹೂತು ಹಾಕುವುದರಿಂದ ಮುಂದಿನ ವರ್ಷದಲ್ಲಿ ರೋಗಸಂಭವ ಕಡಿಮೆಯಾಗುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ