ಮಸೂರ ಅವರೆ

ಮಸೂರದ ಸ್ಟೆಂಫಿಲಿಯಮ್ ಅಂಗಮಾರಿ

Pleospora herbarum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ, ತಿಳಿ ಮಾಸಲು ಬಣ್ಣದ ಕಲೆಗಳು ಇಡೀ ಶಾಖೆಗಳನ್ನು ಆವರಿಸಿಕೊಳ್ಳುತ್ತವೆ.
  • ಹೆಚ್ಚಿನ ಸಾಪೇಕ್ಷ ಆರ್ದ್ರತೆಗಳಲ್ಲಿ, ರೋಗಪೀಡಿತ ಎಲೆಗಳು ಬೂದು ಬಣ್ಣದಿಂದ ಕಪ್ಪು ಬಣ್ಣವನ್ನು ಪಡೆಯುತ್ತವೆ.
  • ಕೆಲವು ದಿನಗಳಲ್ಲೇ ಸಸ್ಯಗಳು ಎಲೆಗಳನ್ನು ಕಳೆದುಕೊಳ್ಳಬಹುದು.
  • ದೂರದಿಂದ, ಹೊಲಗಳಲ್ಲಿ ಅನಿಯಮಿತ ಕಂದು ಬಣ್ಣದ ತೇಪೆಗಳನ್ನು ಗಮನಿಸಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮಸೂರ ಅವರೆ

ಮಸೂರ ಅವರೆ

ರೋಗಲಕ್ಷಣಗಳು

ಸ್ಟೆಂಫಿಲಿಯಮ್ ರೋಗವು ಆರಂಭದಲ್ಲಿ ಎಲೆಗಳು ಅಥವಾ ಚಿಗುರೆಲೆಗಳ ಮೇಲೆ ಸಣ್ಣ, ತಿಳಿ ಮಾಸಲು ಕಲೆಗಳಾಗಿ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಬೊಟ್ರಿಟಿಸ್ ರೋಗದ ಲಕ್ಷಣಗಳನ್ನು ಹೋಲುತ್ತವೆ. ಅಂತಿಮವಾಗಿ, ಈ ಗಾಯಗಳು ದೊಡ್ಡದಾದ, ಅನಿಯಮಿತ ಆಕಾರದ ಗಾಯಗಳನ್ನು ಉಂಟುಮಾಡುತ್ತವೆ. ಅವು ಸಂಪೂರ್ಣ ಶಾಖೆಗಳನ್ನು ಆವರಿಸುತ್ತವೆ. ಕ್ಲೋರೊಟಿಕ್ ಅಥವಾ ಕಪ್ಪಾದ ಎಲೆಗಳು ಮೇಲಾವರಣದ ಮೇಲ್ಭಾಗದಲ್ಲಿ ವಿಶೇಷವಾಗಿ ಎದ್ದು ಕಾಣುತ್ತವೆ. ಆರಂಭದಲ್ಲಿ, ಕಾಂಡಗಳು ಹಸಿರಾಗಿರುತ್ತವೆ ಆದರೆ ರೋಗವು ಮತ್ತಷ್ಟು ಮುಂದುವರೆದಂತೆ, ಅವು ಅಂತಿಮವಾಗಿ ತೆಳು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ನಂತರ ಕಂದು ಬಣ್ಣಕ್ಕೆ ಬರುತ್ತವೆ. ಹೆಚ್ಚಿನ ಸಾಪೇಕ್ಷ ಆರ್ದ್ರತೆಗಳಲ್ಲಿ, ರೋಗಪೀಡಿತ ಎಲೆಗಳು ಬೂದು ಬಣ್ಣದಿಂದ ಕಪ್ಪು ಬಣ್ಣವನ್ನು ಪಡೆಯುತ್ತವೆ. ಅವು ನೆಲಕ್ಕೆ ಬೀಳುತ್ತಿದ್ದಂತೆ, ಭವಿಷ್ಯದ ಸೋಂಕುಗಳಿಗೆ ಅವು ಹೊಸ ಇನಾಕ್ಯುಲಮ್ ಅನ್ನು ಒದಗಿಸುತ್ತವೆ. ಎಷ್ಟೋ ವೇಳೆ, ಕೆಲವೇ ದಿನಗಳಲ್ಲಿ ಸಸ್ಯಗಳು ಕೇವಲ ತುದಿ ಎಲೆಗಳನ್ನು ಮಾತ್ರ ಉಳಿಸಿಕೊಳ್ಳಬಹುದು. ದೂರದಿಂದ ನೋಡಿದಾಗ, ಹೊಲಗಳಲ್ಲಿ ಅನಿಯಮಿತ ಕಂದು ಬಣ್ಣದ ತೇಪೆಗಳನ್ನು ಗಮನಿಸಬಹುದು.

Recommendations

ಜೈವಿಕ ನಿಯಂತ್ರಣ

ಸ್ಟೆಂಫಿಲಿಯಮ್ ಎಲೆ ಅಂಗಮಾರಿಯ ಜೈವಿಕ ನಿಯಂತ್ರಣಕ್ಕಾಗಿ ಸಾಂಪ್ರದಾಯಿಕ ಶಿಲೀಂಧ್ರನಾಶಕಗಳಿಗೆ ಹತ್ತಿರವಾದ ಪರಿಣಾಮಕಾರಿತ್ವವನ್ನು ಹೊಂದಿರುವ ಆಜಾಡಿರಾಕ್ಟಾ ಇಂಡಿಕಾ (ಬೇವು) ಮತ್ತು ದತೂರಾ ಸ್ಟ್ರಾಮೋನಿಯಮ್ (ಜಿಮ್ಸನ್‌ವೀಡ್) ನ ಜಲೀಯ ಸಾರಗಳನ್ನು ಬಳಸಬಹುದು. ಹಸಿರುಮನೆ ಪರಿಸ್ಥಿತಿಗಳಲ್ಲಿ, ಟ್ರೈಕೊಡರ್ಮಾ ಹರ್ಜಿಯಾನಮ್ ಮತ್ತು ಸ್ಟ್ಯಾಚಿಬೊಟ್ರಿಸ್ ಚಾರ್ಟಾರಮ್ ಅನ್ನು ಆಧರಿಸಿದ ಉತ್ಪನ್ನಗಳ ತಡೆಗಟ್ಟುವ ಅಥವಾ ಗುಣಪಡಿಸುವ ಬಳಕೆಯಿಂದ ರೋಗದ ಸಂಭವ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದು (ಎರಡೂ ಸಂದರ್ಭಗಳಲ್ಲಿ ಸುಮಾರು 70%).

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳೊಂದಿಗೆ ಜೈವಿಕ ಚಿಕಿತ್ಸೆಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮಸೂರದ ಸ್ಟೆಂಫಿಲಿಯಮ್ ಅಂಗಮಾರಿಯ ವಿರುದ್ಧ ಪರಿಣಾಮಕಾರಿಯಾಗಲು ಬೆಳೆಯುವ ಋತುವಿನ ಕೊನೆಯ ಮೂರನೇ ಹಂತದಲ್ಲಿ ಶಿಲೀಂಧ್ರನಾಶಕವನ್ನು ರೋಗ ತಡೆಗಟ್ಟುವ ರೀತಿಯಲ್ಲಿ ಹಾಕಬೇಕು. ಮೊದಲಿನ ಚಿಕಿತ್ಸೆಗಳು ಪರಿಣಾಮಕಾರಿಯಾಗಿರುವುದಿಲ್ಲ. ಸಕ್ರಿಯ ಪದಾರ್ಥಗಳ ದ್ರಾವಣ ಅಜೋಕ್ಸಿಸ್ಟ್ರೋಬಿನ್ + ಡಿಫೆನೊಕೊನಜೋಲ್, ಬೊಸ್ಕಾಲಿಡ್ + ಪೈರಾಕ್ಲೋಸ್ಟ್ರೋಬಿನ್, ಕ್ಲೋರೊಥಲೋನಿಲ್, ಐಪ್ರೊಡಿಯೋನ್, ಮ್ಯಾಂಕೋಜೆಬ್ ಮತ್ತು ಪ್ರೊಕ್ಲೋರಾಜ್ ಇವುಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಶಿಲೀಂಧ್ರಕ್ಕೆ (ತಂಪಾದ ಮತ್ತು ಶುಷ್ಕ ಹವಾಮಾನ) ಪರಿಸ್ಥಿತಿಗಳು ಪ್ರತಿಕೂಲವಾಗಿದ್ದಾಗ ಚಿಕಿತ್ಸೆಯನ್ನು ಮಾಡಬೇಕು. ಸಾಮಾನ್ಯವಾಗಿ, ಉತ್ಪನ್ನಗಳ ಪರ್ಯಾಯ ಬಳಕೆಯಿಂದ ಶಿಲೀಂಧ್ರನಾಶಕಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಬಹುದು.

ಅದಕ್ಕೆ ಏನು ಕಾರಣ

ಮಸೂರದ ಸ್ಟೆಂಫಿಲಿಯಮ್ ಅಂಗಮಾರಿಯು ಪ್ಲೆಸ್ಪೊರಾ ಹರ್ಬರಮ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದನ್ನು ಮೊದಲು ಸ್ಟೆಂಫಿಲಿಯಮ್ ಹರ್ಬರಮ್ ಎಂದು ಕರೆಯಲಾಗುತ್ತಿತ್ತು, ಇದರಿಂದಾಗಿ ಈ ರೋಗದ ಹೆಸರು ಬಂದಿದೆ. ಹೊಲದಲ್ಲಿನ ಬೀಜಗಳು ಅಥವಾ ಸಸ್ಯದ ಸೋಂಕಿತ ಅವಶೇಷಗಳ ಮೇಲೆ ಇವು ಬದುಕುಳಿಯುತ್ತದೆ ಎಂದು ಭಾವಿಸಲಾಗಿದೆ. ಮಸೂರದ ಹೊರತಾಗಿ, ಈ ಶಿಲೀಂಧ್ರವು ವ್ಯಾಪಕವಾದ ಇತರ ಅಗಲ ಎಲೆಯ ಸಸ್ಯಗಳಿಗೆ ಸೋಂಕು ತರುತ್ತದೆ. ಋತುವಿನ ಕೊನೆಯಲ್ಲಿ ಎಲೆಗಳ ತೇವದ ಅವಧಿಯು ದೀರ್ಘವಾಗಿರುವುದು ಈ ರೋಗದ ಬೆಳವಣಿಗೆಗೆ ಅವಶ್ಯಕವಾಗಿದೆ. ರೋಗಲಕ್ಷಣಗಳ ಸಂಭವ ಮತ್ತು ತೀವ್ರತೆಯು ತಾಪಮಾನವನ್ನು ಅವಲಂಬಿಸಿರುತ್ತದೆ. 22 -30 °C ವ್ಯಾಪ್ತಿಯು ಸೂಕ್ತವಾಗಿರುತ್ತದೆ. ಈ ಪರಿಸ್ಥಿತಿಗಳಲ್ಲಿ, ಸೋಂಕನ್ನು ಪ್ರಚೋದಿಸಲು 8 ರಿಂದ 12 ಗಂಟೆಗಳ ಎಲೆಗಳ ತೇವಾಂಶವು ಸಾಕಾಗುತ್ತದೆ. ಅಷ್ಟೇನೂ ಸೂಕ್ತವಲ್ಲದ ಪರಿಸ್ಥಿತಿಗಳಲ್ಲಿ, ಉದಾಹರಣೆಗೆ 15 ರಿಂದ 20 °C ವಾಯು ತಾಪಮಾನ ಇದ್ದಾಗ, ತೇವಾಂಶದ ಅವಧಿಯು ಗಣನೀಯವಾಗಿ ಹೆಚ್ಚಾಗಬೇಕಾಗುತ್ತದೆ (24 ಗಂಟೆ ಅಥವಾ ಹೆಚ್ಚು). ಹಳೆಯ ಸಸ್ಯಗಳು ಎಳೆಯ ಸಸ್ಯಗಳಿಗಿಂತ ಹೆಚ್ಚಾಗಿ ರೋಗಕ್ಕೆ ಒಳಗಾಗುವ ಸಾಧ್ಯತೆಯಿದೆ. ಅದರಲ್ಲೂ ವಿಶೇಷವಾಗಿ ಅವು ಸಾರಜನಕ ಒತ್ತಡದಲ್ಲಿದ್ದಾಗ.


ಮುಂಜಾಗ್ರತಾ ಕ್ರಮಗಳು

  • ಸಾಧ್ಯವಾದರೆ ಪ್ರಮಾಣೀಕೃತ ಮೂಲದಿಂದ ಶುದ್ಧ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಿ.
  • ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ (ಹಲವಾರು ಲಭ್ಯವಿದೆ).
  • ಉತ್ತಮವಾಗಿ ಗಾಳಿಯಾಡುವಂತೆ ಸಸ್ಯ ಸಾಂದ್ರತೆಯನ್ನು ಕಡಿಮೆ ಮಾಡಿ.
  • ನಾಟಿ ಮಾಡುವ ಮೊದಲು ಹೊಲದಲ್ಲಿ ಒಳಚರಂಡಿ ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  • ರೋಗದ ತೀವ್ರತೆಯನ್ನು ಹೆಚ್ಚಿಸುವ ಅತಿಯಾದ ಸಾರಜನಕ ಬಳಕೆಯನ್ನು ತಪ್ಪಿಸಿ.
  • ಸುಗ್ಗಿಯ ನಂತರ ಉಳುಮೆ ಮೂಲಕ ಸಸ್ಯದ ಅವಶೇಷಗಳನ್ನು ತೆಗೆದುಹಾಕಿ ಮತ್ತು ಹೂತುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ