Verticillium dahliae
ಶಿಲೀಂಧ್ರ
ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಕೆಳಗಿನ ಎಲೆಗಳಿಂದ ಪ್ರಾರಂಭವಾಗುತ್ತದೆ. ಲಕ್ಷಣಗಳು ಹೆಚ್ಚಾಗಿ ಗಿಡದ ಒಂದು ಬದಿಯಲ್ಲಿ ಅಥವಾ ಎಲೆಯ ಅರ್ಧ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ನೀರು ಕೊಟ್ಟರೂ ಸಹ ಪೀಡಿತ ಗಿಡಗಳು ಹಗಲಿನಲ್ಲಿ ಬಾಡಿದಂತೆ ಕಾಣುತ್ತವೆ. ಗಿಡ ಬೆಳೆದಂತೆ ಕಾಂಡದ ಮೇಲೆ ಮತ್ತು ಒಳಭಾಗದಲ್ಲಿ ಸಣ್ಣ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳಬಹುದು. ತೀವ್ರವಾಗಿ ಸೋಂಕಿತಗೊಂಡ ಗಿಡಗಳು ಆರೋಗ್ಯವಂತ ಗಿಡಗಳಿಗಿಂತ ಮೊದಲೇ ಬೆಳೆದು, ಒಣಗಿ ಸಾಯುತ್ತವೆ. ಇದರಿಂದ ಇಳುವರಿ ಮತ್ತು ಬೀಜದ ಗುಣಮಟ್ಟ ಕುಸಿಯುತ್ತದೆ.
ಪ್ರಸ್ತುತ ಯಾವುದೇ ಸಂಪೂರ್ಣ ಪರಿಣಾಮಕಾರಿ ಜೈವಿಕ ನಿಯಂತ್ರಣ ಕ್ರಮಗಳು ಲಭ್ಯವಿಲ್ಲ. ಮಣ್ಣಿಗೆ ಕಾಂಪೋಸ್ಟ್‌ನಂತಹ ಸಾವಯವ ಪದಾರ್ಥಗಳನ್ನು ಸೇರಿಸುವುದರಿಂದ ರೋಗಕಾರಕಗಳನ್ನು ತಡೆಯುವ ಉಪಕಾರಿ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಿಸಬಹುದು. ಸೋಲರೈಸೇಷನ್: ಅತಿ ಹೆಚ್ಚು ಬಿಸಿಲಿರುವ ಸಮಯದಲ್ಲಿ ಒದ್ದೆಯಾದ ಮಣ್ಣನ್ನು ಪ್ಲಾಸ್ಟಿಕ್‌ನಿಂದ ಮುಚ್ಚುವುದರ ಮೂಲಕ ಮಣ್ಣಿನ ಮೇಲ್ಪದರದಲ್ಲಿರುವ ಶಿಲೀಂಧ್ರಗಳನ್ನು ನಾಶಪಡಿಸಬಹುದು.
ಒಮ್ಮೆ ಗಿಡಕ್ಕೆ ಸೋಂಕು ತಗುಲಿದ ಮೇಲೆ ಅದನ್ನು ಗುಣಪಡಿಸಲು ಯಾವುದೇ ಸಂಪೂರ್ಣ ಪರಿಣಾಮಕಾರಿ ಶಿಲೀಂಧ್ರನಾಶಕಗಳಿಲ್ಲ. ಹಾಗಾಗಿ ವರ್ಟಿಸಿಲಿಯಮ್ ವಿಲ್ಟ್‌ಗೆ ರಾಸಾಯನಿಕ ನಿಯಂತ್ರಣದ ಆಯ್ಕೆಗಳು ಸೀಮಿತವಾಗಿವೆ. ಬಿತ್ತನೆ ಮಾಡುವ ಮೊದಲು ಶಿಲೀಂದ್ರ ನಾಶಕಗಳ ಮೂಲಕ ಬೀಜೋಪಚಾರ ಮಾಡುವುದು ಸಹಾಯಕಾರಿಯಾಗಬಹುದು. ರೋಗವು ಮಣ್ಣಿನಿಂದ ಹರಡುವುದರಿಂದ ಎಲೆಗಳ ಮೇಲೆ ಸಿಂಪಡಿಸುವ ಔಷಧಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ, ಚಿಕಿತ್ಸೆಗಳನ್ನು ಬಿತ್ತನೆ ಸಮಯದಲ್ಲೇ ಮಾಡಿ. ರಾಸಾಯನಿಕ ನಿಯಂತ್ರಣವನ್ನು ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳ ಜೊತೆ ಪೂರಕವಾಗಿ ಮಾತ್ರ ಬಳಸಬೇಕು, ಏಕೈಕ ಪರಿಹಾರವಾಗಿ ಅಲ್ಲ.
ಇದು ಮಣ್ಣಿನಲ್ಲಿ ವಾಸಿಸುವ 'ವರ್ಟಿಸಿಲಿಯಮ್ ಡಹ್ಲಿಯಾ' ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ಶಿಲೀಂಧ್ರವು ಆಶ್ರಯದಾತ ಗಿಡವಿಲ್ಲದಿದ್ದರೂ ಮಣ್ಣಿನಲ್ಲಿ ಬದುಕಬಲ್ಲದು. ಇದು ಬೇರುಗಳ ಮೂಲಕ ಗಿಡವನ್ನು ಪ್ರವೇಶಿಸಿ ನೀರಿನ ಸಂಚಾರವನ್ನು ತಡೆಯುತ್ತದೆ. ಮಣ್ಣು, ಉಪಕರಣಗಳು, ಬೆಳೆಯ ಅವಶೇಷಗಳು ಮತ್ತು ಬೀಜಗಳ ಮೂಲಕ ಇದು ಹರಡುತ್ತದೆ. ತಂಪಾದ ಮಣ್ಣಿನ ತಾಪಮಾನ (15°C ನಿಂದ 25°C), ಬೆಳೆಯ ಆರಂಭದ ಹಂತದಲ್ಲಿ ಮಣ್ಣಿನಲ್ಲಿ ಹೆಚ್ಚಿನ ತೇವಾಂಶ ಮತ್ತು ನಂತರದ ಒಣ ಹವಾಮಾನ ಹಾಗು ಸಾವಯವ ವಸ್ತುಗಳಿಲ್ಲದ ಹಗುರ ಮಣ್ಣು ಈ ರೋಗ ಹರಡಲು ಪೂರಕವಾಗಿವೆ.