ಪಿಸ್ತಾ

ಆಲ್ಟರ್ನೇರಿಯಾ ಲೇಟ್ ಬ್ಲೈಟ್

Alternaria alternata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕಪ್ಪು ಕೇಂದ್ರಗಳನ್ನು ಹೊಂದಿರುವ ಎಲೆಗಳ ಮೇಲೆ, ಕಡು ಕಂದು ಬಣ್ಣದ, ಹರಡಿದಂತಹ ಮತ್ತು ಪುಡಿ ಕಲೆಗಳು ಅಥವಾ ಮಚ್ಚೆಗಳು.
  • ಎಲೆಗಳ ಒಣಗುವಿಕೆ ಮತ್ತು ಬೇಗ ಉದುರುವಿಕೆ.
  • ಹಣ್ಣುಗಳ ಮೇಲೆ ಕಂದು, ವೃತ್ತಾಕಾರದ ನೆಕ್ರೋಟಿಕ್ ಕಲೆಗಳು, ಕೆಂಪು ಬಣ್ಣದ ಹೊರಲಯದಿಂದ ಆವೃತವಾಗಿರುತ್ತವೆ.
  • ಅವು ದೊಡ್ಡದಾಗುತ್ತಿದ್ದಂತೆ, ಅವುಗಳ ಮೇಲೆ ಶಿಲೀಂಧ್ರ ಬೆಳೆಯಲು ಪ್ರಾರಂಭಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಪಿಸ್ತಾ

ಪಿಸ್ತಾ

ರೋಗಲಕ್ಷಣಗಳು

ರೋಗಲಕ್ಷಣಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಚಿಗುರೆಲೆಗಳ ಮೇಲೆ ಸುಮಾರು 3 ರಿಂದ 7 ಮಿಮೀ ವ್ಯಾಸದ ಕೋನೀಯ ಅಥವಾ ವೃತ್ತಾಕಾರದ ಚುಕ್ಕೆಗಳ ಉಪಸ್ಥಿತಿಯಿಂದ ನಿರೂಪಿಸಲ್ಪಡುತ್ತವೆ. ಕೆಲವು ತೀವ್ರತರವಾದ ಪ್ರಕರಣಗಳಲ್ಲಿ ಅಥವಾ ವಿಶೇಷವಾಗಿ ಸೋಂಕಿಗೆ ಒಳಗಾಗುವ ಪ್ರಭೇದಗಳಲ್ಲಿ, ಚುಕ್ಕೆಗಳು 3 ಸೆಂ ವ್ಯಾಸದವರೆಗಿನ ಮಚ್ಚೆಗಳಾಗುತ್ತವೆ. ಎಲೆಯ ಮೇಲ್ಮೈಗಳ ಮುಖ್ಯ ನಾಳಗಳು ಮತ್ತು ತೊಟ್ಟುಗಳ ಮೇಲೆ ಕಪ್ಪು ಗಾಯಗಳು ಸಹ ಇರುತ್ತವೆ. ತೀವ್ರವಾದ ಸೋಂಕು ಎಲೆಗಳು ಒಣಗಲು ಮತ್ತು ಬೀಳಲು ಕಾರಣವಾಗಬಹುದು. ಬಲಿಯದ ಹಣ್ಣುಗಳ ಮೇಲೆ, ಸಣ್ಣ ಕಂದು ಅಥವಾ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಬೆಳೆದ ಹಣ್ಣುಗಳ ಮೇಲೆ, ಮಚ್ಚೆಗಳು ಸ್ವಲ್ಪ ದೊಡ್ಡದಾಗಿರುತ್ತವೆ (1 ರಿಂದ 5 ಮಿಮೀ ವ್ಯಾಸ) ಮತ್ತು ಕೆಂಪು ಬಣ್ಣದ ಹೊರವಲಯದಿಂದ ಆವೃತವಾಗಿರುತ್ತವೆ. ಹಣ್ಣುಗಳ ಮೇಲೆ ಶಿಲೀಂಧ್ರ ಬೆಳೆಯಲು ಪ್ರಾರಂಭಿಸುತ್ತದೆ. ಇದು ಅವುಗಳ ಕೊಳೆಯುವಿಕೆಗೆ ಕಾರಣವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಇದು ಉತ್ಪನ್ನದ ಗುಣಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ಪೀಡಿತ ಭಾಗಗಳನ್ನು ಕತ್ತರಿಸಿದ ನಂತರ ಮರಗಳು ಮತ್ತು ಕತ್ತರಿಸಿದ ಭಾಗಗಳ ಮೇಲೆ ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸಿ. ಪರ್ಯಾಯವಾಗಿ, ಎಲೆಗಳು ಮತ್ತು ಹಣ್ಣುಗಳ ಮೇಲೆ ಬೆಳ್ಳುಳ್ಳಿ ಅಥವಾ ಹಾರ್ಸ್ಟೇಲ್ ನ ಮಿಶ್ರಣವನ್ನು ಸಿಂಪಡಿಸಿ. ಶಿಲೀಂಧ್ರದ ಪರಭಕ್ಷಕವಾಗಿರುವ ಬ್ಯಾಸಿಲಸ್ ಸಬ್ಟಿಲಿಸ್ ಅನ್ನು ಆಧರಿಸಿದ ದ್ರಾವಣಗಳನ್ನು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ತಡೆಗಟ್ಟುವ ಕ್ರಮಗಳೊಂದಿಗೆ ಮತ್ತು ಜೈವಿಕ ಚಿಕಿತ್ಸೆಗಳಿರುವ ಸಮಗ್ರ ಕೀಟ ನಿರ್ವಹಣೆಯನ್ನು ಯಾವಾಗಲೂ ಪರಿಗಣಿಸಿ. ಈ ರೋಗದ ವಿರುದ್ಧದ ಚಿಕಿತ್ಸೆಗಳು ಬೇಸಿಗೆಯ ಆರಂಭದಲ್ಲಿ, ಹಣ್ಣುಗಳು ಹಣ್ಣಾಗುವ ಮೊದಲು ಪ್ರಾರಂಭವಾಗಬೇಕು. ಥಿಯೋಫನೇಟ್-ಮೀಥೈಲ್, ಮಾನೆಬ್, ತಾಮ್ರದ ಉತ್ಪನ್ನಗಳಂತಹ ಸಕ್ರಿಯ ಪದಾರ್ಥಗಳನ್ನು ಆಧರಿಸಿದ ಉತ್ಪನ್ನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸೋಂಕುಗಳನ್ನು ಕಡಿಮೆ ಮಾಡಲು ಕನಿಷ್ಠ ಎರಡು ಚಿಕಿತ್ಸೆಗಳ ಅಗತ್ಯವಿದೆ. ಚಿಕಿತ್ಸೆಗಳ ಪರಿಣಾಮಕಾರಿತ್ವವು ಬಳಕೆ ಸಮಯ, ಮರದ ವಯಸ್ಸಿಗೆ ಹೊಂದಾಣಿಕೆ ಮತ್ತು ಶಿಫಾರಸು ಮಾಡಲಾದ ಪ್ರಮಾಣನ್ನೇ ಬಳಸುವುದನ್ನು ಅವಲಂಬಿಸಿರುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಆಲ್ಟರ್ನೇರಿಯಾ ಆಲ್ಟರ್ನೇಟಾದ ಜೊತೆಗೆ ಆಲ್ಟರ್ನೇರಿಯಾ ಕುಲದ ಮೂರು ಶಿಲೀಂಧ್ರಗಳ ಗುಂಪಿನಿಂದ ಉಂಟಾಗುತ್ತವೆ. ಅವು ಮಣ್ಣಿನಲ್ಲಿ ಅಥವಾ ಸಸ್ಯದ ಅವಶೇಷಗಳ ಮೇಲೆ ಸುಪ್ತಾವಸ್ಥೆಯನ್ನು ಕಳೆಯುತ್ತವೆ. ಪರಿಸ್ಥಿತಿಗಳು ಅನುಕೂಲಕರವಾದಾಗ, ಅವು ಬೀಜಕಗಳನ್ನು ಉತ್ಪಾದಿಸುತ್ತವೆ. ಆ ಬೀಜಕಗಳು ಗಾಳಿ, ಮಳೆಯಿಂದ ಸೋಂಕಿಗೆ ಒಳಗಾಗುವ ಮರಗಳ ಮೇಲೆ ಸಾಗಿಸಲ್ಪಡುತ್ತವೆ. ಇಬ್ಬನಿ ಉಂಟಾಗುವುದು, ಪರ್ಯಾಯವಾದ ಆರ್ದ್ರ ಮತ್ತು ಬಿಸಿಲಿನ ಅವಧಿಗಳು ಮತ್ತು ಪೋಷಕಾಂಶಗಳ ಕೊರತೆ ಸೇರಿದಂತೆ ಹೆಚ್ಚಿನ ಆರ್ದ್ರತೆಗೆ ಸಂಬಂಧಿಸಿದ ಹೆಚ್ಚಿನ ತಾಪಮಾನಗಳು ಪಿಸ್ತಾದಲ್ಲಿ ರೋಗದ ಬೆಳವಣಿಗೆಗೆ ಪ್ರಮುಖ ಅಂಶಗಳಾಗಿವೆ. ಬೊಟ್ರಿಯೊಸ್ಫೇರಿಯಾ ಡೋಥಿಡಿಯಾದಿಂದ ಉಂಟಾಗುವ ಪ್ಯಾನಿಕ್ಲ್ ಮತ್ತು ಚಿಗುರು ರೋಗವನ್ನು ಹೋಲುವ ರೋಗಲಕ್ಷಣಗಳು ಇರುವುದರಿಂದ ಗೊಂದಲವಾಗಬಹುದು. ಈ ಗೊಂದಲ ನಿವಾರಿಸಲು , ಆರ್ದ್ರ ಪರಿಸ್ಥಿತಿ ಇರುವಾಗ ಸೋಂಕಿತ ಎಲೆಗಳನ್ನು ಉಜ್ಜಿ: ಅದು ಬೆರಳುಗಳನ್ನು ಕಪ್ಪಾಗಿಸಿದರೆ, ಇದು ಆಲ್ಟರ್ನೇರಿಯಾ ಆಲ್ಟರ್ನಾಟಾದಿಂದ ಉಂಟಾಗುವ ಲೇಟ್ ಬ್ಲೈಟ್ ರೋಗ.


ಮುಂಜಾಗ್ರತಾ ಕ್ರಮಗಳು

  • ಸೋಂಕಿಗೆ ಕಡಿಮೆ ಒಳಗಾಗುವ ಪ್ರಭೇದಗಳು ಮತ್ತು ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಬೀಜಗಳನ್ನು ಬಳಸಿ.
  • ಮೇಲಾವರಣದಲ್ಲಿ ಗಾಳಿಯಾಡುವುದನ್ನು ಉತ್ತೇಜಿಸಲು ಗಿಡಗಳು ಹತ್ತಿರ ಹತ್ತಿರ ನೆಡುವುದನ್ನು ತಪ್ಪಿಸಿ.
  • ರೋಗದ ಮೊದಲ ಚಿಹ್ನೆಗಳನ್ನು ಪತ್ತೆಹಚ್ಚಲು ನಿಯಮಿತವಾಗಿ ತೋಟವನ್ನು ಪರೀಕ್ಷಿಸಿ.
  • ಹಣ್ಣಿನ ನೆಲದ ಮೇಲೆ ಕಳೆಗಳನ್ನು ನಿರ್ವಹಿಸಿ.
  • ಮೊದಲ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪೀಡಿತ ಭಾಗಗಳನ್ನು ಕತ್ತರಿಸಿ ಸುಟ್ಟುಹಾಕಿ.
  • ಸುಪ್ತಾವಸ್ಥೆಯ ಸಮಯದಲ್ಲಿ ಮರಗಳ ನಡುವೆ ಚೆನ್ನಾಗಿ ಗಾಳಿಯಾಡುವಂತೆ ಮೇಲಾವರಣಗಳನ್ನು ಸಮರಿ.
  • ವಿಶೇಷವಾಗಿ ಹಣ್ಣು ಪಕ್ವವಾಗುವ ಸಮಯದಲ್ಲಿ ತುಂತುರು ಮೂಲಕ ನೀರಾವರಿ ತಪ್ಪಿಸಿ.
  • ಕೊಯ್ಲಿನ ನಂತರದ ಬೆಳೆಗಳ ಅವಶೇಷಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟುಹಾಕಿ.
  • ಎಲ್ಲಕ್ಕಿಂತ ಹೆಚ್ಚಾಗಿ, ಈ ಸಸ್ಯದ ಭಾಗಗಳನ್ನು ಮಿಶ್ರಗೊಬ್ಬರ ಮಾಡಬೇಡಿ.
  • ಏಕೆಂದರೆ ಅವು ರೋಗವನ್ನು ಮತ್ತೊಂದು ಋತುವಿಗೆ ಒಯ್ಯುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ