ಪಿಸ್ತಾ

ಪಿಸ್ತಾದ ಎಲೆ ಚುಕ್ಕೆ

Pseudocercospora pistacina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಚಿಗುರೆಲೆಗಳ ಎರಡೂ ಬದಿಗಳಲ್ಲಿ ಒಣ ಕಂದು ಬಣ್ಣದ ಚುಕ್ಕೆಗಳು.
  • ಎಲೆಯ ಮೇಲ್ಮೈ ಗಳ ಬಣ್ಣಗೆಡುವಿಕೆ ಅಥವಾ ಕಂದಾಗುವಿಕೆ, ಅದು ಕ್ರಮೇಣ ಕಮಧ್ಯನಾಳದ ಕಡೆಗೆ ವಿಸ್ತರಿಸುತ್ತದೆ.
  • ಎಲೆಗಳ ಒಣಗುವಿಕೆ ಮತ್ತು ಅಕಾಲಿಕ ಉದುರುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಪಿಸ್ತಾ

ಪಿಸ್ತಾ

ರೋಗಲಕ್ಷಣಗಳು

ಈ ರೋಗವು ಚಿಗುರೆಲೆಗಳ ಎರಡೂ ಬದಿಗಳಲ್ಲಿ ಕಂದು ಬಣ್ಣದಿಂದ ಗಾಢ ಕಂದು ಬಣ್ಣದ, ವೃತ್ತಾಕಾರದಿಂದ ಅನಿಯಮಿತಾಕಾರದ, ನೆಕ್ರೋಟಿಕ್ ಕಲೆಗಳನ್ನು ಉಂಟುಮಾಡುತ್ತದೆ. ಎಲೆಗಳ ಮೇಲೆ, ಈ ಚುಕ್ಕೆಗಳು ಹಲವಾರು ಇರಬಹುದು ಮತ್ತು 1 ರಿಂದ 2 ಮಿಮೀ ವ್ಯಾಸವನ್ನು ತಲುಪಬಹುದು. ಕಾಲಾನಂತರದಲ್ಲಿ, ಎಲೆಯ ಮೇಲ್ಮೈ ಕ್ರಮೇಣ ತೆಳು ಹಸಿರು ಮತ್ತು ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ಅಂಚುಗಳಿಂದ ಪ್ರಾರಂಭವಾಗಿ ಮಧ್ಯನಾಳದ ಕಡೆಗೆ ವಿಸ್ತರಿಸುತ್ತದೆ. ತೀವ್ರವಾದ ಸೋಂಕುಗಳು ಎಲೆಗಳು ಒಣಗಲು ಮತ್ತು ಅಕಾಲಿಕವಾಗಿ ಬೀಳಲು ಕಾರಣವಾಗಬಹುದು. ಹಣ್ಣುಗಳ ಮೇಲೆ ಸಣ್ಣ ಕಲೆಗಳು ಸಹ ರೂಪುಗೊಳ್ಳಬಹುದು. ಈ ಕಾಯಿಲೆ ತೀವ್ರವಾದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಅಕಾಲಿಕ ವಿರೂಪವನ್ನು ಉಂಟುಮಾಡಬಹುದು ಮತ್ತು ಮರದ ಶಕ್ತಿಯನ್ನು ಕಡಿಮೆ ಮಾಡಬಹುದು. ದಾಳಿಯ ಆಕ್ರಮಣವು ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಕಂಡುಬರುವ ಕಳೆದ ವರ್ಷದ ಎಲೆಯ ಕಸದಲ್ಲಿನ ಇನಾಕ್ಯುಲಮ್‌ನಿಂದ ಪ್ರಾರಂಭವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಮೊದಲ ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ, ತಾಮ್ರ ಅಥವಾ ಸಲ್ಫರ್ ಆಧಾರಿತ ಉತ್ಪನ್ನಗಳೊಂದಿಗೆ ಸಿಂಪಡಣೆ ಮಾಡಿ. ಎಳೆಯ ಹಣ್ಣುಗಳಿಗೆ ಫೈಟೊಟಾಕ್ಸಿಕ್ ಹಾನಿಯನ್ನು ತಪ್ಪಿಸಲು ಹಣ್ಣುಗಳು ಸುಮಾರು 1 ಸೆಂ.ಮೀ ಗಾತ್ರವನ್ನು ತಲುಪಿದ ನಂತರ ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳಿರುವ ಸಮಗ್ರ ಕೀಟ ನಿರ್ವಹಣೆಯನ್ನು ಯಾವಾಗಲೂ ಪರಿಗಣಿಸಿ. ಮೊದಲ ಕಲೆಗಳು ಕಾಣಿಸಿಕೊಂಡ ನಂತರದಿಂದ, ಸಕ್ರಿಯ ಘಟಕಾಂಶವಾದ ಥಿಯೋಫನೇಟ್-ಮೀಥೈಲ್ ಹೊಂದಿರುವ ಉತ್ಪನ್ನಗಳೊಂದಿಗೆ 2 ಅಥವಾ 3 ಬಾರಿ ಸಿಂಪಡಿಸಿ. ಝಿನೆಬ್, ಮ್ಯಾಂಕೋಜೆಬ್, ಕ್ಲೋರೋಥಲೋನಿಲ್ ಅಥವಾ ತಾಮ್ರದ ಶಿಲೀಂಧ್ರನಾಶಕಗಳನ್ನು ಆಧರಿಸಿದ ಶಿಲೀಂಧ್ರನಾಶಕಗಳೊಂದಿಗಿನ ಚಿಕಿತ್ಸೆಗಳು ಸಹ ಪರಿಣಾಮಕಾರಿಯಾಗುತ್ತವೆ. ಆದರೆ ಅತ್ಯಂತ ಚಿಕ್ಕ ಹಣ್ಣುಗಳಿಗೆ ಫೈಟೊಟಾಕ್ಸಿಕ್ ಹಾನಿಯನ್ನು ತಪ್ಪಿಸಲು ಹಣ್ಣುಗಳು 1 ಸೆಂ.ಮೀ ಗಾತ್ರವನ್ನು ತಲುಪಿದ ನಂತರ ಇದನ್ನು ಬಳಸಬೇಕು. ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸಲು ವಿವಿಧ ಸಕ್ರಿಯ ಪದಾರ್ಥಗಳನ್ನು ಪರ್ಯಾಯವಾಗಿ ಬಳಸಿ. ರೋಗದ ಕಾಣಿಸುವಿಕೆಯನ್ನು ತಡೆಗಟ್ಟಲು ಮೊಗ್ಗು ಮೊಳೆಯುವಾಗಿನಿಂದ ಸಹ ತಡೆಗಟ್ಟುವ ಚಿಕಿತ್ಸೆಗಳು ಪರಿಣಾಮಕಾರಿ.

ಅದಕ್ಕೆ ಏನು ಕಾರಣ

ಮೆಡಿಟರೇನಿಯನ್ ಪ್ರದೇಶದಲ್ಲಿ ಮೈಕೋಸ್ಫೇರೆಲ್ಲಾ ಕುಲದ ಹಲವಾರು ಶಿಲೀಂಧ್ರಗಳಿಂದ ಮುಖ್ಯವಾಗಿ ಎಂ. ಪಿಸ್ಟಾಸಿನಾದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಹಿಂದಿನ ಋತುಗಳಲ್ಲಿ ಮರದ ಮೇಲೆ ಸೋಂಕಿಗೆ ಒಳಗಾದ ಮಣ್ಣಿನ ಕಸದ ಮೇಲೆ ಬಿದ್ದ ಎಲೆಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ಈ ಎಲೆಗಳಿಂದ ಶಿಲೀಂಧ್ರದ ಇನಾಕ್ಯುಲಮ್ ಮೂಲಕ ಪ್ರಾಥಮಿಕ ಮಾಲಿನ್ಯವಾಗುತ್ತದೆ. ಮಳೆಯ ತುಂತುರುಗಳು ಬೀಜಕಗಳ ಪ್ರಸರಣಕ್ಕೆ ಸಹಾಯ ಮಾಡುತ್ತವೆ. ದ್ವಿತೀಯಕ ಸೋಂಕುಗಳು ಇತರ ವಿಧದ ಬೀಜಕಗಳಿಂದ ಉಂಟಾಗುತ್ತವೆ. ಇದು ಋತುವಿನ ಅಂತ್ಯದವರೆಗೆ ಮಳೆ ಅಥವಾ ಸ್ಪ್ರಿಂಕ್ಲರ್ ನೀರಿನಿಂದ ಹರಡುತ್ತದೆ. 20 °C ಮತ್ತು 24 °C ನಡುವಿನ ಹೆಚ್ಚಿನ ತಾಪಮಾನ, ಆರ್ದ್ರ ವಾತಾವರಣ ಮತ್ತು ಮಂಜು ರೋಗಕಾರಕಗಳ ಪ್ರಸರಣ ಮತ್ತು ಹೆಚ್ಚುವಿಕೆಗೆ ಅನುಕೂಲಕರವಾದ ಪರಿಸ್ಥಿತಿಗಳಾಗಿವೆ.


ಮುಂಜಾಗ್ರತಾ ಕ್ರಮಗಳು

  • ಮೊದಲ ಕಲೆಗಳನ್ನು ಕಂಡುಹಿಡಿಯಲು ನಿಯಮಿತವಾಗಿ ಹಣ್ಣಿನ ತೋಟವನ್ನು ಪರೀಕ್ಷಿಸಿ.
  • ಬಿದ್ದ ಎಲೆಗಳನ್ನು ಸಂಗ್ರಹಿಸಿ ಸುಟ್ಟು ಹಾಕಿ.
  • ಸಸ್ಯಗಳ ನೈಸರ್ಗಿಕ ಪ್ರತಿರೋಧವನ್ನು ಸುಧಾರಿಸಲು ಮರಗಳನ್ನು ಫಲವತ್ತಾಗಿಸಿ ಅಥವಾ ಸಾವಯವ ವಸ್ತು ಬಳಸಿ ನಿಮ್ಮ ಮಣ್ಣನ್ನು ಉತ್ಕೃಷ್ಟಗೊಳಿಸಿ.
  • ಉತ್ತಮ ಗಾಳಿಯಾಡುವ ಮೇಲಾವರಣ ಪಡೆಯಲು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸುಪ್ತಾವಸ್ಥೆಯ ಸಮಯದಲ್ಲಿ ಪ್ರತಿ ವರ್ಷ ನಿಯಮಿತ ಸಮರುವಿಕೆಯನ್ನು ಯೋಜಿಸಿ.
  • ಪರ್ಯಾಯ ಆತಿಥೇಯ ಸಸ್ಯಗಳು ಮತ್ತು ಕಳೆಗಳಿಂದ ತೋಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿ.
  • ರೋಗಕಾರಕದ ಹರಡುವಿಕೆಯನ್ನು ತಡೆಗಟ್ಟಲು ಆರ್ದ್ರ ವಾತಾವರಣದಲ್ಲಿ ರೋಗಪೀಡಿತ ಸಸ್ಯಗಳನ್ನು ಮುಟ್ಟಬೇಡಿ.
  • ತುಂತುರು ನೀರಾವರಿ ವ್ಯವಸ್ಥೆಗಳನ್ನು ಬಳಸಬೇಡಿ.
  • ಶರತ್ಕಾಲದ ಕೊನೆಯಲ್ಲಿ ಮತ್ತು ಚಳಿಗಾಲದ ಆರಂಭದಲ್ಲಿ ಆಳವಾದ ಉಳುಮೆ ಮಾಡುವ ಮೂಲಕ ಸತ್ತ ಎಲೆಗಳನ್ನು ಹೂಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ