ಹುರುಳಿ

ಚಪ್ಪರದವರೆಯ ಚಾಕೊಲೇಟ್ ಚುಕ್ಕೆ ರೋಗ

Botrytis fabae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು ಮತ್ತು ಹೂವುಗಳ ಮೇಲೆ ಹಲವಾರು ಸಣ್ಣ ಕೆಂಪು-ಕಂದು ಚುಕ್ಕೆಗಳು.
  • ಅವುಗಳು ದೊಡ್ಡದಾಗುತ್ತಿದ್ದಂತೆ, ಎಲ್ಲವೂ ಸೇರಿ ಒಂದಾಗಿ ಎಲೆಗಳ ಮೇಲ್ಲೈ ಮೇಲೆ ಚಾಕೊಲೇಟ್-ಬಣ್ಣದ ಗಾಯಗಳನ್ನು ಉಂಟುಮಾಡುತ್ತವೆ.
  • ಹೆಚ್ಚು ಆಕ್ರಮಣಕಾರಿ ರೂಪದಲ್ಲಿದ್ದಾಗ (ಆದರೆ ಅಪರೂಪ) ಎಲೆಗಳನ್ನು ಕಪ್ಪಾಗಿಸುತ್ತದೆ ಮತ್ತು ಚಾಕೊಲೇಟ್ ಬಣ್ಣದ ಪುಡಿಯನ್ನು ಎಲೆಗಳ ಮೇಲೆ ಹರಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹುರುಳಿ

ರೋಗಲಕ್ಷಣಗಳು

ಈ ರೋಗವು ನಿರ್ದಿಷ್ಟವಾಗಿ ಚಪ್ಪರದವರೆಗೆ ಬರುತ್ತದೆ ಮತ್ತು ಮುಖ್ಯವಾಗಿ ಎಲೆಗಳ ಮೇಲೆ, ಆದರೆ ಕಾಂಡಗಳು ಮತ್ತು ಹೂವುಗಳ ಮೇಲೂ ಹಲವಾರು ಸಣ್ಣ ಕೆಂಪು-ಕಂದು ಚುಕ್ಕೆಗಳ ಉಪಸ್ಥಿತಿಯಿಂದ ಕಂಡುಬರುತ್ತದೆ. ಅವು ದೊಡ್ಡದಾಗುತ್ತಿದ್ದಂತೆ, ಒಂದು ಬೂದುಬಣ್ಣದ, ಕೊಳೆತ ಕೇಂದ್ರವು ಸುತ್ತಲೂ ಕೆಂಪು-ಮಿಶ್ರಿತ ಕಂದು ಅಂಚಿನೊಂದಿಗೆ ಬೆಳೆಯುತ್ತದೆ. ಈ ಕಲೆಗಳು ಎಲೆಗಳ ಮೇಲ್ಲೈ ಮೇಲೆ ಒಂದಾಗಿ ಸೇರಿ ಚಾಕೊಲೇಟ್-ಬಣ್ಣದ ಗಾಯಗಳನ್ನು ಉಂಟುಮಾಡುತ್ತವೆ. ಹೆಚ್ಚು ಆಕ್ರಮಣಕಾರಿ ರೂಪದಲ್ಲಿದ್ದಾಗ (ಆದರೆ ಅಪರೂಪ) ಇದು ಎಲೆಗಳನ್ನು ಮತ್ತು ಕಾಂಡವನ್ನು ಕಪ್ಪಾಗಿಸುತ್ತದೆ ಮತ್ತು ಚಾಕೊಲೇಟ್ ಬಣ್ಣದ ಪುಡಿ ಎಲೆಗಳ ಮೇಲೆ ಹರಡಿರುವ ರೂಪ ಉಂಟು ಮಾಡುತ್ತದೆ. ಮುಂದೆ, ಇದು ಸಸ್ಯದ ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತದೆ ಅಥವಾ ಭಾಗಶಃ ಅಥವಾ ಪೂರ್ತಿ ಚಿಗುರು ವ್ಯವಸ್ಥೆಯ ಸಾವಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಹೂವಿನ ಮೊಗ್ಗುಗಳ ಬೆಳವಣಿಗೆ ಸ್ಥಗಿತಗೊಳ್ಳಬಹುದು. ಚಪ್ಪರದವರೆಯನ್ನು ತಿನ್ನಬಹುದು. ಆದರೆ ಬೀಜಕೋಶಗಳು ಬಣ್ಣ ಕಳೆದುಕೊಂಡಿರುತ್ತವೆ. ರೋಗದ ಸಾಂಕ್ರಾಮಿಕತೆಯಿಂದ ಆಗುವ ಹಾನಿಯ ಹೆಚ್ಚಿನ ಭಾಗಕ್ಕೆ ಮೊದಲ ತರಹದ ದಾಳಿ ಕಾರಣವಾಗಿದೆ.

Recommendations

ಜೈವಿಕ ನಿಯಂತ್ರಣ

ಇಂದಿನವರೆಗೆ ಯಾವುದೇ ಆರ್ಥಿಕವಾಗಿ ಲಾಭದಾಯಕವಾದ ನಿಯಂತ್ರಣ ವಿಧಾನ ಕಂಡುಬಂದಿಲ್ಲ. ಆದರೆ, ಬೆಳೆ ದುರ್ಬಲಗೊಳ್ಳದಂತೆ ಅಥವಾ ಯಾವುದೇ ರೀತಿಯಲ್ಲಿ ದಾಳಿಗೆ ಹೆಚ್ಚು ಒಳಗಾಗದಂತೆ ಕಾಳಜಿ ವಹಿಸಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ನಿಯಂತ್ರಣ ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈವರೆಗೂ, ಚಪ್ಪರದವರೆಯ ಚಾಕೊಲೇಟ್ ಚುಕ್ಕೆಗಳಿಗೆ ವಿರುದ್ಧವಾಗಿ ಯಾವುದೇ ಆರ್ಥಿಕವಾಗಿ ಕಾರ್ಯಸಾಧ್ಯವಾದ ನಿಯಂತ್ರಣ ಕ್ರಮವಿಲ್ಲ. ಕೆಲವು ಸಂದರ್ಭಗಳಲ್ಲಿ, ಹೂಬಿಡುವ ಅವಧಿಯಲ್ಲಿ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವ ಮೂಲಕ ಇಳುವರಿಯ ದೃಷ್ಟಿಯಿಂದ ಕೆಟ್ಟ ಹಾನಿಯನ್ನು ತಪ್ಪಿಸಬಹುದು.

ಅದಕ್ಕೆ ಏನು ಕಾರಣ

ಫಾಬಾ ಬೀನ್ಸ್ ಮೇಲಿನ ರೋಗಲಕ್ಷಣಗಳು ಮುಖ್ಯವಾಗಿ ಶಿಲೀಂಧ್ರ ಬಾಟ್ರಿಟಿಸ್ ಫ್ಯಾಬೇ ಮೂಲಕ ಉಂಟಾಗುತ್ತವೆ. ಬಾಟ್ರಿಟಿಸ್ ನ ಇತರ ಪ್ರಭೇದಗಳು ಸಹ ರೋಗಕ್ಕೆ ಕಾರಣವಾಗಬಹುದು. ಚುಕ್ಕೆಗಳ ಮಧ್ಯಭಾಗದಲ್ಲಿರುವ ಮೃತ ಅಂಗಾಂಶಗಳ ಮೇಲೆ ಬೀಜಕಗಳು ರೂಪುಗೊಳ್ಳುತ್ತವೆ ಮತ್ತು ಸೋಂಕನ್ನು ಆರೋಗ್ಯಕರ ಸಸ್ಯಗಳಿಗೆ ಹರಡುತ್ತವೆ. ಈ ಬೀಜಕಗಳು ಅನುಕೂಲಕರ ಸ್ಥಿತಿಗಳಲ್ಲಿ ಒಂದು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಕಾಲ ಎಲೆಯ ಮೇಲ್ಮೈಯಲ್ಲಿ ಉಳಿಯಬಲ್ಲವು. ಹೆಚ್ಚಿನ ತೇವಾಂಶ, ಆಗಾಗ್ಗೆ ಬೀಳುವ ಮಳೆ, ದೀರ್ಘಕಾಲದ ಎಲೆಯ ತೇವಾಂಶ ಮತ್ತು 15 - 22 ಡಿಗ್ರಿ ಸೆಲ್ಶಿಯಸ್ ತಾಪಮಾನವು ಸೋಂಕಿಗೆ ಅತ್ಯುತ್ತಮವಾಗಿರುತ್ತದೆ. ಎಲೆಯ ತೇವಾಂಶ ಆವಿಯಾಗುವ ಪ್ರಮಾಣವನ್ನು ಹೆಚ್ಚಿಸುವ ಯಾವುದೇ ಅಂಶಗಳು (ಗಾಳಿ, ಒಣ ಹವಾಮಾನ) ಸೋಂಕನ್ನು ಕಡಿಮೆ ಮಾಡುತ್ತದೆ ಅಥವಾ ತಡೆಯುತ್ತದೆ. ಆಮ್ಲೀಯ ಮಣ್ಣು, ದಟ್ಟವಾದ ಬಿತ್ತನೆ, ಪೊಟ್ಯಾಸಿಯಮ್ ಅಥವಾ ಫಾಸ್ಪರಸ್ ಕೊರತೆಗಳು ಅಥವಾ ಮಣ್ಣಿನಲ್ಲಿ ನೀರು ನಿಲ್ಲುವಂತಹ ವಿಷಯಗಳು ಬೆಳೆಗಳನ್ನು ದುರ್ಬಲಗೊಳಿಸಬಲ್ಲ ಇತರ ಪರಿಸ್ಥಿತಿಗಳಾಗಿದ್ದು, ರೋಗಕ್ಕೆ ಅಥವಾ ಅದರ ಆಕ್ರಮಣಶೀಲ ಸ್ವರೂಪ ಕಾಣಿಸಿಕೊಳ್ಳಲು ಸಹಕಾರಿಯಾಗಬಲ್ಲವು. ಮೇಲಾಶ್ರಯ ಇರುವ ಪ್ರದೇಶಗಳಲ್ಲಿ ಬೆಳೆದ ಬೆಳೆಗಳು ಮತ್ತು ಚಳಿಗಾಲದ -ಬಿತ್ತನೆಯ ಬೆಳೆಗಳು ಸಹ ಹೆಚ್ಚು ರೋಗಕ್ಕೆ ಒಳಗಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಬೀಜಗಳನ್ನು ಬಳಸಿ.
  • ನಾಟಿ ಮಾಡುವಾಗ ಬೀಜ ಅಥವಾ ಸಸಿಗಳನ್ನು ಒಂದರಿಂದ ಒಂದು ಸಾಕಷ್ಟು ದೂರದಲ್ಲಿ ನೆಡಿ.
  • ಫಾಬಾ ಬೀನ್ಸ್ ಕಲ್ಟರ್ ಗಾಗಿ ಇತ್ತೀಚೆಗೆ ಬಳಸಿದ ಜಮೀನಿನ ಬಳಕೆ ತಪ್ಪಿಸಿ.
  • ರೋಗಕ್ಕೆ ಹೆಚ್ಚಿನ ಮಟ್ಟದ ಪ್ರತಿರೋಧವನ್ನು ಒಡ್ಡುವ ಪ್ರಭೇದಗಳನ್ನು ಬಳಸಿ.
  • ಅಗತ್ಯವಿದ್ದರೆ ಸುಣ್ಣ ಸೇರಿಸುವ ಮೂಲಕ ಮಣ್ಣಿನ ಸರಿಯಾದ pH ಪಡೆಯಿರಿ.
  • ಸಮತೋಲಿತ ರಸಗೊಬ್ಬರ ಬಳಕೆಯನ್ನು ಖಚಿತಪಡಿಸಿಕೊಳ್ಳಿ.
  • ಹೆಚ್ಚಿನ ಪ್ರಮಾಣದಲ್ಲಿ ನೈಟ್ರೋಜನ್ ರಸಗೊಬ್ಬರಗಳನ್ನು ಬಳಸಬೇಡಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಸುಗ್ಗಿಯ ನಂತರ ಸಸ್ಯದ ಅವಶೇಷಗಳನ್ನು ಸಂಗ್ರಹಿಸಿ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ