ಸೂರ್ಯಕಾಂತಿಯ ಬ್ಲೈಟ್ (ಕರಕುಲು ರೋಗ)

ಸೂರ್ಯಕಾಂತಿ

ಸೂರ್ಯಕಾಂತಿಯ ಬ್ಲೈಟ್ (ಕರಕುಲು ರೋಗ)

Alternaria helianthi

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಇದು ಭೂಮಿಯ ಮೇಲಿರುವ ಗಿಡದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.
  • ಗಿಡದ ಮೇಲೆ ವಿವಿಧ ಆಕಾರದ ಕಡು ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.
  • ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಕಾಂಡದ ಸುತ್ತಳತೆ ಮತ್ತು ಹೂವಿನ ವ್ಯಾಸ ಕಡಿಮೆಯಾಗುತ್ತದೆ.
  • ಇದರಿಂದ ಬೀಜದ ಇಳುವರಿಯಲ್ಲಿ ಭಾರಿ ಕುಸಿತ ಉಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಸೂರ್ಯಕಾಂತಿಯ ಬ್ಲೈಟ್ (ಕರಕುಲು ರೋಗ)

ಸೂರ್ಯಕಾಂತಿ

ರೋಗಲಕ್ಷಣಗಳು

ಪೋಷಕ ಸಸ್ಯದ ಎಲೆಗಳು, ಎಲೆತೊಟ್ಟುಗಳು, ಕಾಂಡ, ಪುಷ್ಪಪಾತ್ರೆ ಮತ್ತು ದಳಗಳ ಮೇಲೆ ಕಂದು ಬಣ್ಣದ ಮಚ್ಚೆಗಳು ಕಂಡುಬರಬಹುದು. ಈ ಶಿಲೀಂಧ್ರವು ಸಸಿ ಬಾಧೆ ಮತ್ತು ಹೂಗೊಂಚಲು ಕೊಳೆತ ರೋಗವನ್ನು ಉಂಟುಮಾಡುತ್ತದೆ. ಎಲೆಗಳ ಮೇಲೆ, ಗಾಯಗಳು ಕಡು ಕಂದು ಬಣ್ಣದಲ್ಲಿದ್ದು, ತಿಳಿ ಅಂಚು ಮತ್ತು ಹಳದಿ ವಲಯವನ್ನು ಹೊಂದಿರುತ್ತವೆ. ರೋಗವು ಉಲ್ಬಣಗೊಂಡಂತೆ, ಇವುಗಳ ಗಾತ್ರವು ಸುಮಾರು 2-3 ಸೆಂ.ಮೀ ವ್ಯಾಸಕ್ಕೆ ಹೆಚ್ಚಾಗುತ್ತದೆ ಮತ್ತು ಅಂತಿಮವಾಗಿ ಒಂದಕ್ಕೊಂದು ಸೇರಿ ಅನಿಯಮಿತ ಆಕಾರದ ಗಾಯವನ್ನು ಉಂಟುಮಾಡುತ್ತವೆ, ಇದು ಎಲೆಗಳು ಕರಕಲಾಗಲು ಮತ್ತು ಬಾಡಿಹೋಗಲು ಕಾರಣವಾಗುತ್ತದೆ. ಇವುಗಳ ಸುತ್ತಲೂ ಹಸಿರುರಹಿತ ವಲಯವಿದ್ದು, ಮಧ್ಯಭಾಗದಲ್ಲಿ ಬೂದು-ಬಿಳಿ ಸತ್ತ ಅಂಗಾಂಶದ ಕೇಂದ್ರವಿರುತ್ತದೆ. ಮಚ್ಚೆಗಳು ಮೊದಲು ಕೆಳಗಿನ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ತರುವಾಯ ಮಧ್ಯದ ಹಾಗೂ ಮೇಲಿನ ಎಲೆಗಳಿಗೆ ಹರಡುತ್ತವೆ. ಕಾಂಡಗಳ ಮೇಲೆ, ಗಾಯಗಳು ವೃತ್ತಾಕಾರದ, ಉದ್ದನೆಯ ಅಥವಾ ಪಟ್ಟಿಯಂತಹ ಕಪ್ಪು ಮಚ್ಚೆಗಳಾಗಿ ಕಂಡುಬರುತ್ತವೆ. ಪುಷ್ಪಪಾತ್ರೆ ಮತ್ತು ದಳಗಳ ಮೇಲೆ, ಮಚ್ಚೆಗಳು ಎಲೆಗಳ ಮೇಲಿರುವಂತೆಯೇ ಇರುತ್ತವೆ ಆದರೆ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ (0.5-2 ಸೆಂ.ಮೀ ವ್ಯಾಸ) ಮತ್ತು ಒಂದಕ್ಕೊಂದು ಸೇರಿಕೊಳ್ಳುತ್ತವೆ. ಸೋಂಕಿನ ಪರಿಣಾಮವಾಗಿ ಎಲೆಗಳು ಕರಕಲಾಗುವುದು ಮತ್ತು ಉದುರುವುದು, ಹೂವುಗಳು ಮತ್ತು ಬೀಜದ ಗೊಂಚಲುಗಳ ನಾಶ, ಸೊರಗುವಿಕೆ, ಕಾಂಡ ಬಿರುಕು ಬಿಡುವುದು ಮತ್ತು ಅಂತಿಮವಾಗಿ ಸಸ್ಯದ ಸಾವು ಸಂಭವಿಸುತ್ತದೆ. ಕೆಲವು ಬಾರಿ ಹೂಗೊಂಚಲುಗಳು ಕೊಳೆಯುವುದು ಕೂಡ ಸಂಭವಿಸುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಚಳಿಗಾಲದಲ್ಲಿ ಕೊಯ್ಲು ಮಾಡಿದ ನಂತರ ಮಣ್ಣಿನ ಸ್ವಯಂ-ಶುದ್ಧೀಕರಣ ಸಾಮರ್ಥ್ಯವನ್ನು ಹೆಚ್ಚಿಸಲು, ಟ್ರೈಕೊಡರ್ಮಾ ಜಾತಿಗಳನ್ನು ಆಧರಿಸಿದ ಜೈವಿಕ ಉತ್ಪನ್ನಗಳನ್ನು ಅಥವಾ ಫೈಟೊಪಾಥೋಜೆನ್‌ಗಳಂತಹ (ಬ್ಯಾಸಿಲಸ್ ಜಾತಿಗಳು, ಸ್ಯೂಡೋಮೊನಾಸ್ ಜಾತಿಗಳು) ಜೈವಿಕ ನಿಯಂತ್ರಣ ಏಜೆಂಟ್‌ಗಳನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಮುನ್ನೆಚ್ಚರಿಕೆ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳ ಜೊತೆಗೆ ಸಮಗ್ರ ನಿರ್ವಹಣೆಯನ್ನು ಅನುಸರಿಸಿ. ಲಭ್ಯವಿದ್ದರೆ ಬಿತ್ತನೆಗಾಗಿ ಇಮಾಜಲಿಲ್ ಮತ್ತು ಟೆಬುಕೊನಜೋಲ್‌ಯುಕ್ತ(ವ್ಯವಸ್ಥಿತ ಶಿಲೀಂಧ್ರನಾಶಕಗಳು) ಶಿಲೀಂಧ್ರನಾಶಕಗಳಿಂದ ಸಂಸ್ಕರಿಸಿದ ಬೀಜಗಳನ್ನು ಬಳಸಿ. ಬೆಳೆಯ ಸಸ್ಯಕ ಅವಧಿಯಲ್ಲಿ ಸೈಮೋಕ್ಸಾನಿಲ್ (ಸ್ಥಳೀಯ ವ್ಯವಸ್ಥಿತ ಶಿಲೀಂಧ್ರನಾಶಕ), ಬೋಸ್ಕಲಿಡ್ ಮತ್ತು ಟೆಬುಕೊನಜೋಲ್ (ವ್ಯವಸ್ಥಿತ ಶಿಲೀಂಧ್ರನಾಶಕ) ಒಳಗೊಂಡಿರುವ ಔಷಧಗಳ ಬಳಕೆಯಿಂದ ರೋಗವನ್ನು ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಇದು 'ಆಲ್ಟರ್ನೇರಿಯಾ ಹೆಲಿಯಾಂಥಿ' ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ರೋಗಕಾರಕವು ಬೀಜಗಳು ಮತ್ತು ಗಿಡದ ಅವಶೇಷಗಳಲ್ಲಿ ಬದುಕಿರುತ್ತದೆ. ಗಿಡವು ಮೊಳಕೆಯೊಡೆಯುವ ಹಂತದಿಂದ ಕೊಯ್ಲಿನವರೆಗೆ ಯಾವಾಗ ಬೇಕಾದರೂ ಸೋಂಕಿಗೆ ಒಳಗಾಗಬಹುದು. ಬೆಚ್ಚಗಿನ, ಒಣ ಹವಾಮಾನ ಮತ್ತು ಆಗಾಗ್ಗೆ ಮಳೆಯಾಗುವ ಸಂದರ್ಭದಲ್ಲಿ ಈ ರೋಗ ವೇಗವಾಗಿ ಹರಡುತ್ತದೆ. ಅತಿಯಾದ ಸಾರಜನಕ ಗೊಬ್ಬರದ ಬಳಕೆಯು ಗಿಡದ ಹಾನಿಯನ್ನು ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • 3-4 ವರ್ಷಗಳ ಪರ್ಯಾಯ ಬೆಳೆ ಯೋಜನೆಯನ್ನು ರೂಪಿಸಿ.
  • ಆಮ್ಲೀಯ ಮಣ್ಣಿನಲ್ಲಿ ಸುಣ್ಣವನ್ನು ಬಳಸಿ.
  • ಮಣ್ಣಿನಲ್ಲಿ ಉತ್ತಮವಾಗಿ ನೀರು ಬರಿದಾಗಲು ಮತ್ತು ಗಿಡದ ಅವಶೇಷಗಳನ್ನು ತೆಗೆದುಹಾಕಲು ಒಂಟಿ ಸಾಲಿನ ನೇಗಿಲಿನಿಂದ ಆಳವಾಗಿ ಉಳುಮೆ ಮಾಡಿ.
  • ಮಣ್ಣಿನ ಗಟ್ಟೆ ಹೊರಪದರ ತೆಗೆದು ಮಣ್ಣಿನ ಗಾಳಿಯಾಡುವಿಕೆಯನ್ನು ಸುಧಾರಿಸಲು ಸಾಲುಗಳ ನಡುವೆ ಎಡೆಹೊಡೆಯಿರಿ.
  • ರಂಜಕ ಮತ್ತು ಪೊಟ್ಯಾಸಿಯಮ್ ಗೊಬ್ಬರಗಳೊಂದಿಗೆ ಸಮತೋಲಿತ ಪೋಷಕಾಂಶಗಳನ್ನು ಒದಗಿಸಿ.
  • ತಡವಾಗಿ ಬಿತ್ತನೆ ಮಾಡುವುದರಿಂದ ರೋಗದ ಬಾಧೆಯನ್ನು ಕಡಿಮೆ ಮಾಡಬಹುದು.
  • ಲಭ್ಯವಿರುವ ರೋಗ ನಿರೋಧಕ ತಳಿಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ