ಇತರೆ

ಕುಕುರ್ಬಿಟ್ಸ್ ನ ಲೀಫ್ ಬ್ಲೈಟ್ (ಎಲೆ ರೋಗ)

Alternaria cucumerina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ, ವೃತ್ತಾಕಾರದ, ತೆಳು ಹಳದಿ ಬಣ್ಣದ ಕಲೆಗಳಿದ್ದು ಅವುಗಳ ಮಧ್ಯಭಾಗವು ಬಿಳಿ ಬಣ್ಣದ್ದಾಗಿರುತ್ತದೆ.
  • ಅವು ನಂತರ ತಿಳಿ ಕಂದು ಬಣ್ಣಕ್ಕೆ ತಿರುಗಿ ಅಗಲವಾಗುತ್ತವೆ ಮತ್ತು ಕೇಂದ್ರೀಕೃತ ಉಂಗುರಗಳನ್ನು ತೋರಿಸುತ್ತದೆ.
  • ಹಣ್ಣಿನ ಸಿಪ್ಪೆಯ ಮೇಲೆ ಗಾಢ ಆಲಿವ್- ಕಪ್ಪು ಬಣ್ಣದ ಪುಡಿ ಹರಡಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು

ಇತರೆ

ರೋಗಲಕ್ಷಣಗಳು

ರೋಗಲಕ್ಷಣಗಳು ಮೊದಲನೆಯದಾಗಿ ಸಸ್ಯದ ಮಧ್ಯ ಮತ್ತು ಮೇಲ್ಭಾಗದಲ್ಲಿರುವ ಹಳೆಯ ಎಲೆಗಳ ಮೇಲೆ ಸಣ್ಣ, ವೃತ್ತಾಕಾರದ, ಬಿಳಿಯ ಕೇಂದ್ರಗಳೊಂದಿಗೆ ತೆಳು ಕೆಂಚು ಬಣ್ಣದ ಕಲೆಗಳಾಗಿ ಕಂಡುಬರುತ್ತವೆ. ಈ ಕಲೆಗಳು ದೊಡ್ಡದಾಗುತ್ತ, ತಿಳಿ ಕಂದು ಬಣ್ಣಕ್ಕೆ ತಿರುಗಿ ಸ್ವಲ್ಪ ವಿರೂಪತೆಯನ್ನು ಉಂಟುಮಾಡುತ್ತವೆ. ಕಲೆಗಳೊಳಗಿರುವ ಸಣ್ಣ ಎಲೆ ಸಿರೆಗಳು ಗಾಢವಾಗುತ್ತವೆ. ಇದರಿಂದಾಗಿ ಎಲೆಗಳು ಬಲೆಯಂತೆ ಕಾಣಿಸಿಕೊಳ್ಳುತ್ತದೆ. ಕಾಲಾನಂತರದಲ್ಲಿ, ಕೇಂದ್ರೀಕೃತ ಉಂಗುರಗಳ ಬೆಳವಣಿಗೆಯು ಮೇಲಿನ ಎಲೆಯ ಮೇಲ್ಮೈಯಲ್ಲಿ ಮಾತ್ರ ಗೋಚರಿಸುತ್ತದೆ. ಇದರಿಂದಾಗಿ ಕಲೆಯು ಟಾರ್ಗೆಟ್ -ತರಹದ ನೋಟವನ್ನು ನೀಡುತ್ತದೆ. ಈ ವೃತ್ತಾಕಾರದ ಕಲೆಗಳು ಅಂತಿಮವಾಗಿ ಸಂಪೂರ್ಣ ಎಲೆಯನ್ನು ಆವರಿಸುತ್ತದೆ ಮತ್ತು ವಿಪರ್ಣನವನ್ನು ಉಂಟುಮಾಡಬಹುದು. ವೃತ್ತಾಕಾರದ, ಕಂದು ಗುಳಿಬಿದ್ದ ಗಾಯಗಳು ಸೋಂಕಿತ ಹಣ್ಣುಗಳ ಮೇಲೆ ಕಾಣಿಸಿಕೊಳ್ಳುತ್ತವೆ, ನಂತರ ಅದು ಆಲಿವ್- ಕಪ್ಪುಬಣ್ಣದ ಪುಡಿಯಿಂದ ಆವರಿಸುತ್ತದೆ. ಸುಗ್ಗಿ/ ಕಟಾವಿನಲ್ಲಿ ಗುರುತಿಸದ ಸೋಂಕಿತ ಹಣ್ಣು, ಶೇಖರಣೆಯ ಸಮಯದಲ್ಲಿ ಅಥವಾ ಸಾಗಣೆಯ ಸಮಯಗಳಲ್ಲಿ ನಷ್ಟವನ್ನು ಉಂಟುಮಾಡಬಹುದು. ಸಸ್ಯದ ಇತರ ಭಾಗಗಳ ಮೇಲೆ ನೇರವಾಗಿ ಪರಿಣಾಮ ಆಗುವುದಿಲ್ಲ.

Recommendations

ಜೈವಿಕ ನಿಯಂತ್ರಣ

ನಾಟಿಯ ನಂತರ ಒಣಹುಲ್ಲಿನ ಹಸಿಗೊಬ್ಬರ ಹಾಕುವುದರಿಂದ ಅದು ಎ ಕ್ಯುಕುಮೆರಿನಾದ ಬೀಜಕಗಳು ಮಣ್ಣಿನಿಂದ ಕೆಳಗಿನ ಎಲೆಗಳಿಗೆ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಅಜೋಕ್ಸಿಸ್ಟ್ರೋಬಿನ್, ಬೊಸ್ಕ್ಯಾಲ್ಡ್, ಕ್ಲೋರೊಥಲೋನಿಲ್, ಕಾಪರ್ ಹೈಡ್ರಾಕ್ಸೈಡ್, ಮನ್ಕೊಜೆಬ್, ಮನೆಬ್ ಅಥವಾ ಪೊಟ್ಯಾಸಿಯಮ್ ಬೈಕಾರ್ಬನೇಟ್ ಹೊಂದಿರುವ ಶಿಲೀಂಧ್ರನಾಶಕಗಳು ಈ ರೋಗವನ್ನು ನಿಯಂತ್ರಿಸಬಹುದು. ಆದರೂ, ಕ್ಲೋರೊಥಲೋನಿಲ್ ಉತ್ಪನ್ನಗಳನ್ನು ಹೊಂದಿರುವ ಉತ್ಪನ್ನಗಳು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿ ಎಂದು ತೋರುತ್ತದೆ. ಪದಾರ್ಥಗಳು ಅವುಗಳ ಬಳಕೆಯ ವೇಳಾಪಟ್ಟಿ ಮತ್ತು ಎಷ್ಟುಬಾರಿ ಬಳಸಬೇಕು ಎಂಬ ವಿಷಯದಲ್ಲಿ ಭಿನ್ನವಾಗಿರುತ್ತವೆ. ಆಯಾ ಬಳಕೆಯ ಸೂಚನೆಗಳನ್ನು ಮೊದಲೇ ಅಧ್ಯಯನ ಮಾಡಿ ಖಚಿತಪಡಿಸಿಕೊಳ್ಳಿ.

ಅದಕ್ಕೆ ಏನು ಕಾರಣ

ಕಲ್ಲಂಗಡಿ ಮತ್ತು ಸಂಬಂಧಿತ ಕುಕುರ್ಬಿಟ್ ಪ್ರಭೇದಗಳಲ್ಲಿ ಈ ರೋಗಲಕ್ಷಣಗಳು, ಮಣ್ಣಿನಿಂದ ಹುಟ್ಟಿದ ಶಿಲೀಂಧ್ರ ಆಲ್ಟರ್ನೇರಿಯಾ ಕ್ಯುಕುಮೆರಿನಾದಿಂದ ಉಂಟಾಗುತ್ತವೆ. ಇದು ಮಣ್ಣಿನಲ್ಲಿ ಅಥವಾ ಕಳೆ ಮತ್ತು ಇತರ ಕುಕುರ್ಬಿಸ್ಟ್ ಆಶ್ರಯದಾತ ಸಸ್ಯಗಳಲ್ಲಿ ಉಳಿದುಕೊಂಡಿರುತ್ತದೆ. ಮಳೆಯ ಎರಚಲು, ವಿಪರೀತ ನೀರಾವರಿ, ಗಾಳಿ, ಸಾಗುವಳಿ, ಉಪಕರಣಗಳು ಮತ್ತು ಹೊಲದ ಕೆಲಸಗಾರರಿಂದ ರೋಗ ಹರಡಬಹುದು. ಈ ರೋಗವು ಇಬ್ಬನಿ, ಮಳೆ ಅಥವಾ ತುಂತುರು ನೀರಾವರಿಗಳ ತೇವಾಂಶದಿಂದ ಮತ್ತು ಬೆಚ್ಚಗಿನ ತಾಪಮಾನಗಳಲ್ಲಿ ಹೆಚ್ಚಾಗುತ್ತದೆ. ಸೋಂಕು ಎರಡರಿಂದ- ಎಂಟು ಘಂಟೆಗಳ ಎಲೆ ಆರ್ದ್ರತೆಯಿಂದ ಪ್ರಾರಂಭವಾಗಬಹುದು ಹಾಗು ಎಲೆ ಆರ್ದ್ರತೆಯ ಅವಧಿ ಹೆಚ್ಚಿದಂತೆ ಸೋಂಕಿನ ಮಟ್ಟವು ಹೆಚ್ಚಾಗುತ್ತದೆ. ಮಳೆಯ ಪ್ರಮಾಣಕ್ಕಿಂತ ಹೆಚ್ಚಾಗಿ, ಎಷ್ಟು ಬಾರಿ ಮಳೆಯಾಯಿತು ಎಂಬುದು ಮತ್ತು ಹಿಮದ ಅವಧಿಗಳು ರೋಗದ ಬೆಳವಣಿಗೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ದುರದೃಷ್ಟವಶಾತ್, ಈ ರೋಗಕ್ಕೆ ಯಾವುದೇ ನಿರೋಧಕ ಪ್ರಭೇದಗಳು ಲಭ್ಯವಿಲ್ಲ.
  • ರೋಗದ ರೋಗಲಕ್ಷಣಗಳನ್ನು ಗುರುತಿಸಲು ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • 1-2 ವರ್ಷಗಳ ಕಾಲ ಕುಕುರ್ಬಿಟ್ಗಳನ್ನು ಹೊರತುಪಡಿಸಿದ ಜಾತಿಗಳೊಂದಿಗೆ ಸರದಿ ಬೆಳೆ ಮಾಡಿ.
  • ಬೆಳೆ ಒತ್ತಡ ಕನಿಷ್ಠವಾಗುವಂತೆ ಕಡಿಮೆ ಮಾಡಿ ಉದಾಹರಣೆಗೆ: ಸಮತೋಲಿತ ಪೋಷಕಾಂಶವನ್ನು ಒದಗಿಸಿ.
  • ಉಪಕರಣಗಳು ಮತ್ತು ಸಾಧನಗಳಲ್ಲಿ ನೈರ್ಮಲ್ಯದ ಮಟ್ಟವನ್ನು ಕಾಪಾಡಿಕೊಳ್ಳಿ.
  • ಸಾಧ್ಯವಾದರೆ ಓವರ್ಹೆಡ್ ಸಿಂಪಡಿಕೆಗಳ ಬದಲಿಗೆ ಹನಿ ನೀರಾವರಿ ಬಳಸಿ.
  • ಸಸ್ಯಗಳು ತೇವವಿದ್ದಾಗ ಅದರ ಮೇಲೆ ಕೆಲಸ ಮಾಡಬೇಡಿ.
  • ಋತುವಿನ ಕೊನೆಯಲ್ಲಿ ಸಸ್ಯ ಉಳಿಕೆಗಳನ್ನು ತೆಗೆದುಹಾಕಿ.
  • ಆಳವಾಗಿ ಗುಂಡಿ ತೋಡುವ ಮೂಲಕ ಅದನ್ನು ಹೂತು ಹಾಕಿ ಅಥವಾ ದೂರದಲ್ಲಿ ಸುಟ್ಟುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ