ಸೋಯಾಬೀನ್

ಸೋಯಾಬೀನಿನ ಸೂಕ್ಷ್ಮ ಶಿಲೀಂಧ್ರ

Erysiphe diffusa

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಆರಂಭದಲ್ಲಿ, ಮೇಲಿನ ಎಲೆಗಳ ಮೇಲ್ಭಾಗದಲ್ಲಿ ಬಿಳಿ, ಪುಡಿ ರೀತಿಯ ಬೂಷ್ಟು ಬೆಳೆಯುತ್ತದೆ, ನಂತರ ಅದು ಅಗಲವಾಗಿ ಮೇಲ್ಭಾಗ ಮತ್ತು ಕೆಳಭಾಗಗಳಿಗೂ ಹರಡುತ್ತದೆ.
  • ಇದು ಬೀಜಕೋಶಗಳು ಮತ್ತು ಕಾಂಡಗಳ ಮೇಲೆ ಕೂಡ ಬೆಳೆಯಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಸೂಕ್ಷ್ಮ ಶಿಲೀಂಧ್ರ ಮೊದಲಿಗೆ ಮೇಲಿನ ಸೋಯಾಬೀನ್ ಎಲೆಗಳ ಮೇಲ್ಭಾಗದಲ್ಲಿ ಬಿಳಿ ಬಣ್ಣದ, ಪುಡಿ ರೀತಿಯ ಬೂಷ್ಟು ಬೆಳೆದಿರುವ ಸಣ್ಣ ವೃತ್ತಾಕಾರದ ಕಲೆಗಳಾಗಿ ಕಾಣಿಸಿಕೊಳ್ಳುತ್ತದೆ. ಸೋಂಕಿತ ಭಾಗಗಳು ಎಲೆಗಳ ಮೇಲೆ ದೊಡ್ಡ ಕಲೆಗಳಾಗಿ ಹರಡುತ್ತವೆ, ಎಲೆಗಳ ಮೇಲಿನ ಮತ್ತು ಕೆಳಗಿನ ಭಾಗಗಳಿಗೂ ಸಹ ಹರಡುತ್ತವೆ. ಬೂಷ್ಟು ಬೆಳವಣಿಗೆಯನ್ನು ಕಾಂಡಗಳು ಮತ್ತು ಬೀಜಕೋಶಗಳಲ್ಲಿಯೂ ಸಹ ಗಮನಿಸಬಹುದು. ಸೋಂಕು ತೀವ್ರವಾದ ಸಮಯದಲ್ಲಿ, ಸೋಯಾಬೀನ್ ಸಸ್ಯದ ಎಲ್ಲಾ ಭಾಗಗಳಲ್ಲಿ ಬಿಳಿ ಬಣ್ಣದಿಂದ ತಿಳಿ-ಬೂದು ಬಣ್ಣದ ಪುಡಿಯ ಬೂಷ್ಟನ್ನು ಕಾಣಬಹುದು. ಕೆಲವು ಸೋಯಾಬೀನ್ ಪ್ರಭೇದಗಳಲ್ಲಿ ಎಲೆಗಳು ಬಿಳಿಚಿಕೊಂಡಂತಾಗುತ್ತವೆ ಅಥವಾ ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಎಲೆಗಳ ಕೆಳಭಾಗದಲ್ಲಿ ತುಕ್ಕು ಹಿಡಿದಂತಿರುವ ಕಲೆಗಳು ಕಂಡುಬರುತ್ತವೆ. ಅತಿಯಾಗಿ ಸೋಂಕಾಗಿರುವ ಸಸ್ಯಗಳು ಅಕಾಲಿಕವಾಗಿ ಉದುರಬಹುದು. ತೀವ್ರವಾಗಿ ಸೋಂಕಿಗೊಳಗಾದ ಬೀಜಕೋಶಗಳಲ್ಲಿ ಸಾಮಾನ್ಯವಾಗಿ ಸೊರಗಿರುವ, ಅಲ್ಪ ಬೆಳೆದಿರುವ, ವಿರೂಪಗೊಂಡ ಮತ್ತು ಚಪ್ಪಟೆಯಾದ ಹಸಿರು ಬೀಜಗಳನ್ನು ಕಾಣಬಹುದು.

Recommendations

ಜೈವಿಕ ನಿಯಂತ್ರಣ

ಸಣ್ಣ ಕೃಷಿ ಪ್ರದೇಶಗಳಿಗೆ, ಹಾಲು-ನೀರಿನ ದ್ರಾವಣಗಳು ನೈಸರ್ಗಿಕ ಶಿಲೀಂಧ್ರನಾಶಕಗಳಾಗಿ ಕೆಲಸ ಮಾಡುತ್ತವೆ. ಪ್ರತಿ ಎರಡನೇ ದಿನದಂದು ಎಲೆಗಳ ಮೇಲೆ ಈ ದ್ರಾವಣವನ್ನು ಹಾಕಿ. ಬೆಳ್ಳುಳ್ಳಿ ಅಥವಾ ಸೋಡಿಯಂ ಬೈಕಾರ್ಬನೇಟ್ ದ್ರಾವಣಗಳೂ ಸಹ ತೃಪ್ತಿಕರ ಫಲಿತಾಂಶಗಳನ್ನು ನೀಡಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ತೇವಮಾಡಬಲ್ಲ ಸಲ್ಫರ್, ಟ್ರೈಫ್ಲುಮಿಝೋಲ್, ಮಿಕ್ಲೊಬುಟನಿಲ್ ಆಧಾರಿತ ಶಿಲೀಂಧ್ರನಾಶಕಗಳು, ಕೆಲವು ಬೆಳೆಗಳಲ್ಲಿ ಶಿಲೀಂಧ್ರದ ಬೆಳವಣಿಗೆಯನ್ನು ನಿಯಂತ್ರಿಸುವಂತೆ ತೋರುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಎರಿಸಿಫೆ ಡಿಫ್ಯೂಸಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ. ಅದರ ಬೀಜಕಗಳು ಮುಖ್ಯವಾಗಿ ಗಾಳಿಯಿಂದ ಆರೋಗ್ಯಕರ ಅಂಗಾಂಶಗಳಿಗೆ ಹರಡುತ್ತವೆ. ಅವು ಕುಡಿಯೊಡೆದು ಅಂಗಾಂಶಗಳಿಗೆ ಕೊರೆದುಕೊಂಡು ಹೋದ ನಂತರ, ಈ ಬೀಜಕಗಳು ಜೀವಾಂಕುಳಿನ ಕೊಳವೆಗಳನ್ನು ರೂಪಿಸುತ್ತವೆ ಮತ್ತು ಆಧಾರ ರಚನೆಯ ಮೂಲಕ ತಮ್ಮನ್ನು ಎಲೆ ಕೋಶಗಳಿಗೆ ಅಂಟಿಕೊಳ್ಳುತ್ತವೆ. ಅಂತಿಮವಾಗಿ, ಇದು ಎಪಿಡರ್ಮಿಸ್ ಸೊಯಾಬೀನ್ ಲೀಫ್ (ವೈಟ್ ಕವರಿಂಗ್) ಅನ್ನು ಮೀರಿ ಬೆಳೆಯುವ ಆಹಾರ ರಚನೆ ಮತ್ತು ಬೆಳವಣಿಗೆಗೆ ಕಾರಣವಾಗುತ್ತದೆ. ಗಾಳಿಯಿಂದ ಹರಡುವ ಬೀಜಕಗಳು ಹೊಸ ಸೋಂಕನ್ನು ಪ್ರಾರಂಭಿಸುತ್ತವೆ ಮತ್ತು ಸೋಯಾಬೀನ್ ಸಸ್ಯಗಳು ಪಕ್ವವಾಗುವವರೆಗೂ ರೋಗ ಚಕ್ರವನ್ನು ಪುನರಾವರ್ತಿಸುತ್ತವೆ. ರೋಗ ಬೆಳವಣಿಗೆ 30 °ಸಿ ಗಿಂತ ಅಧಿಕ ತಾಪಮಾನದಲ್ಲಿ ನಿರ್ಬಂಧಿತವಾಗಿರುತ್ತದೆ ಮತ್ತು ತಂಪಾದ ತಾಪಮಾನದಲ್ಲಿ ಹೆಚ್ಚಾಗುತ್ತದೆ. ಮಳೆಹನಿಯು ರೋಗದ ಮೇಲೆ ಪರಿಣಾಮ ಬೀರುವುದಿಲ್ಲ. ಸೋಯಾಬೀನ್ ಸಸ್ಯಗಳು ಯಾವುದೇ ಬೆಳವಣಿಗೆಯ ಹಂತದಲ್ಲಿ ಸೋಂಕಿಗೆ ತುತ್ತಾಗುತ್ತವಾದರೂ, ಮಧ್ಯ-ಕೊನೆಯ ಋತುವಿನ ಸಂತಾನೋತ್ಪತ್ತಿ ಹಂತಗಳಲ್ಲಿ ರೋಗಲಕ್ಷಣಗಳು ಅಪರೂಪವಾಗಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸರಿಯಾಗಿ ಗಾಳಿಯಾಡುವ ಸಲುವಾಗಿ ಸಾಕಷ್ಟು ಅಂತರವಿರುವಂತೆ ಬೆಳೆಗಳನ್ನು ನೆಡಿ.
  • ನಾಟಿ ಮಾಡಲು ನಿರೋಧಕ ಅಥವಾ ಚೇತರಿಸಿಕೊಳ್ಳುವ ಪ್ರಭೇದಗಳನ್ನು ಆಯ್ಕೆ ಮಾಡಿ.
  • ರೋಗದ ಲಕ್ಷಣಗಳನ್ನು ಕಂಡುಹಿಡಿಯಲು ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • ಮೊದಲ ಕಲೆಗಳು ಕಾಣಿಸಿಕೊಂಡಾಗಲೇ ಸೋಂಕಿತ ಎಲೆಗಳನ್ನು ತೆಗೆದುಹಾಕಿ.
  • ಸೋಂಕಿತ ಸಸ್ಯಗಳನ್ನು ಮುಟ್ಟಿದ ನಂತರ ಆರೋಗ್ಯಕರ ಸಸ್ಯಗಳನ್ನು ಮುಟ್ಟಬೇಡಿ.
  • ಕೊಯ್ಲಿನ ನಂತರ ಮತ್ತು ನಾಟಿ ಮಾಡುವುದಕ್ಕಿಂತ ಮೊದಲು ಉಳುಮೆ ಮಾಡಿದರೆ ಅದು ಬೆಳೆಗಳ ಉಳಿಕೆಗಳನ್ನು ಮತ್ತು ರೋಗಕಾರಕಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ