ಗೋಧಿ

ಧಾನ್ಯಗಳಲ್ಲಿ ಬೂದಿ ರೋಗ (ಪೌಡರಿ ಮಿಲ್ಡ್ಯೂ)

Blumeria graminis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು ಮತ್ತು ತೆನೆಗಳಲ್ಲಿ ಬಿಳಿ, ತುಪ್ಪುಳದಂತಿರುವ ತೇಪೆಗಳು ಕಂಡುಬರುತ್ತವೆ.
  • ಕೆಲವು ಬೆಳೆಗಳಲ್ಲಿ ಈ ತೇಪೆಗಳು ದೊಡ್ಡದಾಗಿ, ಉಬ್ಬಿದ ಗೆಡ್ಡೆಗಳಂತೆಯೂ ಇರಬಹುದು.
  • ರೋಗ ಹೆಚ್ಚಾದಂತೆ ಈ ತೇಪೆಯ ಭಾಗಗಳು ಬೂದು-ಕಂದು ಬಣ್ಣಕ್ಕೆ ತಿರುಗುತ್ತವೆ.
  • ಋತುವಿನ ಕೊನೆಯಲ್ಲಿ, ಪ್ರಕಾಶಮಾನವಾದ ಕಪ್ಪು ಚುಕ್ಕೆಗಳು ಈ ಬಿಳಿ ತೇಪೆಗಳ ನಡುವೆ ಕಾಣಿಸಿಕೊಳ್ಳಬಹುದು.
  • ದಟ್ಟವಾಗಿ ಬಿತ್ತಿದ ಸಸ್ಯಗಳು, ಸಾರಜನಕದ ಅತಿಯಾದ ಬಳಕೆ ಮತ್ತು ಏಕ ಬೇಸಾಯ (ಮೋನೋಕಲ್ಚರ್) ಈ ರೋಗಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಒದಗಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬಾರ್ಲಿ
ಗೋಧಿ

ಗೋಧಿ

ರೋಗಲಕ್ಷಣಗಳು

ರೋಗಲಕ್ಷಣಗಳು ಕೆಳಗಿನ ಎಲೆಗಳಿಂದ ಮೇಲಿನ ಎಲೆಗಳಿಗೆ ಹರಡುತ್ತವೆ ಮತ್ತು ಸಸ್ಯದ ಯಾವುದೇ ಬೆಳವಣಿಗೆಯ ಹಂತದಲ್ಲಿಯೂ ಕಾಣಿಸಿಕೊಳ್ಳಬಹುದು. ಎಲೆಗಳು, ಕಾಂಡಗಳು ಮತ್ತು ತೆನೆಗಳ ಮೇಲೆ ಬಿಳಿ ತುಪ್ಪುಳದಂತಿರುವ ತೇಪೆಗಳಿಂದ ಅವನ್ನು ಗುರುತಿಸಬಹುದು. ಈ ತೇಪೆಯ ಭಾಗಗಳು ನಂತರ ಸಸ್ಯದ ಅಂಗಾಂಶಗಳ ಮೇಲೆ ಹಳದಿ ಕ್ಲೋರೋಟಿಕ್ ಮಚ್ಚೆಗಳಂತೆ ಆಗುತ್ತವೆ ಮತ್ತು ಜಮೀನು ಪರಿಶೀಲನೆಯ ಸಮಯದಲ್ಲಿ ಇವು ಸುಲಭವಾಗಿ ಗಮನಕ್ಕೆ ಬರುವುದಿಲ್ಲ. ಕೆಲವು ಬೆಳೆಗಳಲ್ಲಿ, ಈ ತೇಪೆಗಳು ದೊಡ್ಡದಾದ, ಉಬ್ಬಿದ ಗೆಡ್ಡೆಗಳಾಗಿ ಬದಲಾಗಬಹುದು. ಶಿಲೀಂಧ್ರವು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಿದಂತೆ, ಈ ಬಿಳಿ ತೇಪೆಗಳು ಬೂದು-ಕಂದು ಬಣ್ಣಕ್ಕೆ ತಿರುಗುತ್ತವೆ. ಋತುವಿನ ಅಂತ್ಯದಲ್ಲಿ, ಪ್ರಕಾಶಮಾನವಾದ ಕಪ್ಪು ಕಲೆಗಳು ಈ ಬಿಳಿ ತೇಪೆಗಳ ನಡುವೆ ಕಾಣಿಸಬಹುದು. ಭೂತಗನ್ನಡಿ ಬಳಸಿ ಹತ್ತಿರದಲ್ಲಿ ನೋಡಿದಾಗ ಮಾತ್ರ ಇವು ಕಾಣುತ್ತವೆ. ಹಳೆಯ ಮತ್ತು ಕೆಳಗಿನ ಎಲೆಗಳು ಅವುಗಳ ಸುತ್ತಲೂ ಹೆಚ್ಚಿನ ಆರ್ದ್ರತೆ ಇರುವ ಕಾರಣದಿಂದಾಗಿ ಅತಿಯಾದ ರೋಗಲಕ್ಷಣಗಳನ್ನು ತೋರಿಸುತ್ತವೆ. ದಟ್ಟವಾಗಿ ಬಿತ್ತಿದ ಸಸ್ಯಗಳು, ಸಾರಜನಕದ ಅತಿಯಾದ ಬಳಕೆ ಮತ್ತು ಏಕ ಬೇಸಾಯ (ಮೋನೋಕಲ್ಚರ್) ಬೂದಿ ರೋಗಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಒದಗಿಸುತ್ತವೆ.

Recommendations

ಜೈವಿಕ ನಿಯಂತ್ರಣ

ಸಣ್ಣ ಸಾವಯವ ರೈತರು ಮತ್ತು ತೋಟಗಾರರು ಬೂದಿ ರೋಗದ ಶಿಲೀಂಧ್ರದ ವಿರುದ್ಧ ಹಾಲಿನ ದ್ರಾವಣಗಳನ್ನು ಯಶಸ್ವಿಯಾಗಿ ಬಳಸಿದ್ದಾರೆ. ಹಾಲಿಗೆ ನೀರು ಬೆರೆಸಿ (ಸಾಮಾನ್ಯವಾಗಿ 1:10) ಅದನ್ನು ಸೋಂಕಿನ ಮೊದಲ ಚಿಹ್ನೆ ತೋರುವ ಸಸ್ಯಗಳಿಗೆ ಸಿಂಪಡಿಸಬಹುದು. ತಡೆಗಟ್ಟುವಿಕೆಯ ವಿಧಾನವಾಗಿಯೂ ಸಸ್ಯಗಳಿಗೆ ಸಿಂಪಡಿಸಬಹುದಾಗಿದೆ. ರೋಗವನ್ನು ನಿಯಂತ್ರಿಸಲು ಅಥವಾ ತೊಡೆದುಹಾಕಲು ವಾರಕ್ಕೊಮ್ಮೆ ಇದನ್ನು ಪುನರಾವರ್ತಿಸುವುದು ಅಗತ್ಯವಾಗಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಕ್ರಮಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಡಿಫೆನೊಕೊನಜೋಲ್ ನೊಂದಿಗೆ ನಂತರ ಫ್ಲುಟ್ರಿಯಾಫೊಲ್, ಟ್ರಿಟಿಕೊನಜೋಲ್ ನೊಂದಿಗೆ ಬೀಜ ಸಂಸ್ಕರಣೆ ಮಾಡುವ ಮೂಲಕ ಗೋಧಿಯನ್ನು ಶಿಲೀಂಧ್ರ ಮತ್ತು ಇತರ ಶಿಲೀಂಧ್ರ ರೋಗಗಳ ವಿರುದ್ಧ ರಕ್ಷಿಸಬಹುದಾಗಿದೆ. ಫೆಂಪ್ರೊಪಿಡಿನ್, ಫೆರಾನಿಮೋಲ್, ಟೆಬಕೊನಜೋಲ್, ಸೈಪ್ರೊಕೊನಜೋಲ್ ಮತ್ತು ಪ್ರೊಪಿಕೊನಜೋಲ್ ನಂತಹ ಶಿಲೀಂಧ್ರನಾಶಕಗಳಿಂದ ಚಿಕಿತ್ಸಕ ರಾಸಾಯನಿಕ ನಿಯಂತ್ರಣ ಸಾಧ್ಯವಿದೆ. ಸಸ್ಯಗಳನ್ನು ರಕ್ಷಿಸುವ ಮತ್ತೊಂದು ಮಾರ್ಗವೆಂದರೆ ಅವುಗಳನ್ನು ಸಿಲಿಕಾನ್-ಅಥವಾ ಕ್ಯಾಲ್ಸಿಯಂ ಸಿಲಿಕೇಟ್-ಆಧಾರಿತ ಔಷಧಗಳಿಂದ ಚಿಕಿತ್ಸೆ ಮಾಡುವುದು. ರೋಗಕಾರಕದ ವಿರುದ್ಧ ಸಸ್ಯದ ಪ್ರತಿರೋಧವನ್ನು ಇದು ಬಲಪಡಿಸುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಬ್ಲುಮೆರಿಯಾ ಗ್ರ್ಯಾಮಿನಿಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ. ಇದು ಜೀವಂತ ಆಶ್ರಯದಾತ ಸಸ್ಯಗಳಲ್ಲಿ ಮಾತ್ರ ಬೆಳೆದು ಸಂತಾನೋತ್ಪತ್ತಿ ಮಾಡಬಲ್ಲ ನಿರ್ಬಂಧಿತ ಬಯೋಟ್ರೋಫ್. ಯಾವುದೇ ಆಶ್ರಯದಾತ ಸಸ್ಯಗಳು ಲಭ್ಯವಿಲ್ಲದಿದ್ದರೆ, ಋತುವಿನ ನಡುವಿನ ಕಾಲದಲ್ಲಿ ಜಮೀನಿನಲ್ಲಿರುವ ಸಸ್ಯದ ಉಳಿಕೆಗಳ ಮೇಲೆ ಸುಪ್ತ ರಚನೆಗಳ ರೂಪದಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಧಾನ್ಯಗಳ ಹೊರತಾಗಿ, ಇದು ಸಾಕಷ್ಚು ಇತರ ಸಸ್ಯಗಳನ್ನು ಆಕ್ರಮಿಸುತ್ತದೆ ಮತ್ತು ಎರಡು ಋತುಗಳ ನಡುವೆ ಸೇತುವೆಯಂತೆ ಈ ಗಿಡಗಳನ್ನು ಬಳಸುತ್ತದೆ. ಪರಿಸ್ಥಿತಿಗಳು ಅನುಕೂಲಕರವಾದಾಗ, ಇದು ಬೆಳವಣಿಗೆಯನ್ನು ಮುಂದುವರಿಸುತ್ತದೆ ಮತ್ತು ಬೀಜಕಗಳನ್ನು ಉತ್ಪಾದಿಸುತ್ತದೆ. ಇದು ನಂತರ ಆರೋಗ್ಯಕರ ಸಸ್ಯಗಳಿಗೆ ಗಾಳಿಯ ಮೂಲಕ ಹರಡುತ್ತದೆ. ಒಮ್ಮೆ ಅದು ಎಲೆಯ ಮೇಲೆ ಬಿದ್ದ ನಂತರ, ಶಿಲೀಂಧ್ರವು ಕುಡಿಯೊಡೆಯುತ್ತದೆ ಮತ್ತು ತನ್ನ ಬೆಳವಣಿಗೆಯನ್ನು ಬೆಂಬಲಿಸಲು ಅಗತ್ಯವಾದ ಪೋಷಕಾಂಶಗಳನ್ನು ಜೀವಕೋಶಗಳಿಂದ ತೆಗೆದುಕೊಳ್ಳಲು ಅಗತ್ಯವಾದ ಆಹಾರದ ರಚನೆಗಳನ್ನು ಉತ್ಪತ್ತಿ ಮಾಡುತ್ತದೆ. ತಂಪಾದ ಮತ್ತು ಆರ್ದ್ರ ಪರಿಸ್ಥಿತಿಗಳು (95% ತೇವಾಂಶ) ಮತ್ತು ಮೋಡ ಕವಿದ ಹವಾಮಾನ ಅದರ ಅಭಿವೃದ್ಧಿಗೆ ಅನುಕೂಲಕರವಾಗಿದೆ. ಆದರೆ, ಬೀಜಕಗಳು ಕುಡಿಯೊಡೆಯಲು ಎಲೆಯ ತೇವಾಂಶದ ಅಗತ್ಯವಿರುವುದಿಲ್ಲ ಮತ್ತು ವಾಸ್ತವವಾಗಿ ಅದು ಪ್ರತಿಬಂಧಿಸುತ್ತದೆ. 16 ಡಿಗ್ರಿ ಸೆಲ್ಸಿಯಸ್ ಮತ್ತು 21 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನ ಅನುಕೂಲಕರ ಮತ್ತು 25 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕಿಂತ ಹೆಚ್ಚಿದ್ದರೆ ಅದು ಅಹಿತಕರ. ಇದರ ವ್ಯಾಪಕ ಹರಡುವಿಕೆ ಮತ್ತು ವಾಯುಗಾಮಿ ಪ್ರಸರಣದ ಕಾರಣದಿಂದಾಗಿ ಈ ರೋಗಕಾರಕಕ್ಕೆ ಯಾವುದೇ ಪ್ರಬಂಧಕ ನಿಯಮಗಳಿರುವುದು ತಿಳಿದು ಬಂದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಋತುವಿನ ಮೊದಲಲ್ಲೇ ಬಿತ್ತನೆ ಮಾಡಬೇಡಿ.
  • ಸಸಿಗಳ ನಡುವೆ ಉತ್ತಮವಾಗಿ ಗಾಳಿಯಾಡುವಂತೆ ಮತ್ತು ಕಡಿಮೆ ಆರ್ದ್ರತೆ ಇರುವಂತೆ ಮಾಡಲು ಬಿತ್ತನೆಯ ಸಾಂದ್ರತೆಯನ್ನು ಮಾರ್ಪಡಿಸಿ.
  • ರೋಗದ ಮೊದಲ ಚಿಹ್ನೆಗಳಿಗಾಗಿ ನಿಯಮಿತವಾಗಿ ಜಮೀನಿನ ಮೇಲ್ವಿಚಾರಣೆ ಮಾಡಿ.
  • ಸಾರಜನಕವನ್ನು ಎಚ್ಚರಿಕೆಯಿಂದ ಳಸಿ.
  • ಮಣ್ಣಿನಲ್ಲಿ ಇದರ ಪ್ರಮಾಣ ಹೆಚ್ಚಾದರೆ ಅದು ರೋಗಕಾರಕದ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
  • ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.
  • ಅದರ ಜೀವನಚಕ್ರಕ್ಕೆ ಅಡ್ಡಿಪಡಿಸಲು ಜಮೀನಿನಲ್ಲಿ ತಾನಾಗಿಯೇ ಬೆಳೆದ ಸಸ್ಯಗಳು ಮತ್ತು ಕಳೆಗಳನ್ನು ನಿವಾರಿಸಿ.
  • ಸಸ್ಯಗಳ ಪ್ರತಿರೋಧವನ್ನು ಬಲಪಡಿಸಲು ಸಿಲಿಕಾನ್ ಅಥವಾ ಕ್ಯಾಲ್ಸಿಯಂ ಸಿಲಿಕೇಟ್ ಅನ್ನು ಫೋಷಕಾಂಶ ಯೋಜನೆಗೆ ಸೇರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ