ಮಸೂರ ಅವರೆ

ಮಸೂರು ಅವರೆಯ ಆಸ್ಕೋಚೈಟಾ ರೋಗ

Didymella fabae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮಧ್ಯದಲ್ಲಿ ಕಪ್ಪು ಕಲೆಯಿರುವ ಚುಕ್ಕೆಗಳು ಮತ್ತು ಎಲೆಗಳ ಮೇಲೆ ಕಡು ಕಂದು ಅಂಚು ಕಾಣಿಸಿಕೊಳ್ಳುತ್ತದೆ.
  • ಚಿಗುರೆಲೆಗಳು ಮತ್ತು ಕಾಂಡಗಳು ಬೆಳೆಯುತ್ತಿರುವ ಬಿಂದುಗಳಲ್ಲಿ ತುದಿಯಿಂದ ಬುಡದ ಕಡೆಗೆ ಸಾಯುತ್ತಾ ಹೋಗುತ್ತವೆ.
  • ಇದು, ಸಸ್ಯಕ್ಕೆ ರೋಗಸ್ಥ ರೂಪ ನೀಡುತ್ತದೆ.
  • ಬೀಜದ ಮೇಲ್ಮೈಯಲ್ಲಿ ಕಂದು ಬಣ್ಣದ ತೇಪೆಗಳು ಕಾಣಿಸಿಕೊಂಡು ಬೀಜಗಳು ಬಣ್ಣ ಕಳೆದುಕೊಳ್ಳುವುದರಿಂದ ಮಾರುಕಟ್ಟೆಯ ಮೌಲ್ಯ ಕಡಿಮೆಯಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮಸೂರ ಅವರೆ

ಮಸೂರ ಅವರೆ

ರೋಗಲಕ್ಷಣಗಳು

ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಮತ್ತು ಬೇರು ಹೊರತುಪಡಿಸಿ ಸಸ್ಯದ ಎಲ್ಲಾ ಭಾಗಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಎಲೆಗಳ ಮೇಲೆ ಗಾಢವಾದ ಕಂದು ಬಣ್ಣದ ಅಂಚಿರುವ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಗಾಯಗಳ ಮದ್ಯಭಾಗವು ನಂತರ ಬೂದು ಬಣ್ಣಕ್ಕೆ ತಿರುಗಿ ಸಣ್ಣ ಗಾಢ ಚುಕ್ಕೆಗಳಿಂದ ಆವೃತವಾಗುತ್ತದೆ. ಇತರ ರೋಗಗಳಿಂದ ಈ ರೋಗವನ್ನು ಬೇರೆಯಾಗಿ ಗುರುತಿಸಲು ಈ ಲಕ್ಷಣ ಅನುವು ಮಾಡಿಕೊಡುತ್ತದೆ. ತೀವ್ರವಾದ ಸೋಂಕಿನ ಸಂದರ್ಭಗಳಲ್ಲಿ ಎಲೆಗಳು ಅಕಾಲಿಕವಾಗಿ ಉದುರುತ್ತವೆ. ಚಿಗುರೆಲೆಗಳು ಮತ್ತು ಕಾಂಡಗಳು ಬೆಳೆಯುತ್ತಿರುವ ಬಿಂದುಗಳಲ್ಲಿ ತುದಿಯಿಂದ ಬುಡದ ಕಡೆಗೆ ಸಾಯುತ್ತಾ ಹೋಗುತ್ತವೆ. ಇದು, ಸಸ್ಯಕ್ಕೆ ರೋಗಸ್ಥ ರೂಪ ನೀಡುತ್ತದೆ. ಈ ರೋಗದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ಬೀಜಗಳು ಮೇಲ್ಮೈಯಲ್ಲಿ ಕಂದು ತೇಪೆಗಳೊಂದಿಗೆ ಬಣ್ಣ ಕಳೆದುಕೊಳ್ಳುವುದು. ತೀವ್ರವಾಗಿ ಸೋಂಕಿತ ಬೀಜವು ಕೆನ್ನೀಲಿ-ಕಂದು ಬಣ್ಣದ್ದಾಗಿರುತ್ತದೆ ಮತ್ತು ಸುಕ್ಕಾಗಿರುತ್ತದೆ ಮತ್ತು ಗಾತ್ರದಲ್ಲಿ ಸಣ್ಣದಾಗಿರುತ್ತದೆ. ಬೀಜಗಳು ಬಣ್ಣಗೆಡುವುದರಿಂದ ಅವುಗಳ ಗುಣಮಟ್ಟ ಮತ್ತು ಅವುಗಳ ಮಾರುಕಟ್ಟೆ ಮೌಲ್ಯ ಕಡಿಮೆಯಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಇದುವರೆಗೂ, ಯಾವುದೇ ಜೈವಿಕ ಚಿಕಿತ್ಸೆಯು ಈ ರೋಗದ ವಿರುದ್ಧ ಲಭ್ಯವಿರುವಂತೆ ತೋರುವುದಿಲ್ಲ. ನಿಮಗೆ ಈ ಬಗ್ಗೆ ಏನಾದರೂ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ನಾಟಿ ಮಾಡುವ ಮೊದಲು ಬೀಜಗಳನ್ನು ನೆನೆಸಲು ಬೀಜಗಳ ಚಿಕಿತ್ಸಕಗಳನ್ನು ಬಳಸಬಹುದು. ಎಲೆಗಳ ಶಿಲೀಂಧ್ರನಾಶಕಗಳು ಉಪಯುಕ್ತವಾಗಿರುತ್ತವೆ, ಅದರಲ್ಲೂ ವಿಶೇಷವಾಗಿ ಸೋಂಕಿಗೆ ಸೂಕ್ಷ್ಮವಾಗಿರುವ ವಿಧಗಳನ್ನು ಬೆಳೆಯುತ್ತಿದ್ದರೆ. ಪಿರಾಕ್ಲೋಸ್ಟ್ರೋಬಿನ್ ಅಥವಾ ಕ್ಲೋರೊಥಲೋನಿಲ್ ಅನ್ನು ರಕ್ಷಕಗಳಾಗಿ ಬಳಸಬಹುದು ಮತ್ತು ಇವನ್ನು ತಡೆಗಟ್ಟಲು ಬಳಸಿದಾಗ ಹೆಚ್ಚು ಪರಿಣಾಮಕಾರಿ. ಆರಂಭಿಕವಾಗಿ ಹೂ ಬಿಡುವ ಸಮಯದಲ್ಲಿ ಸಿಂಪಡಿಸುವುದರಿಂದ ಬೀಜಕೋಶ ಮತ್ತು ಬೀಜದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಶಿಲೀಂಧ ರೋಗಕಾರಕವಾದ ಡಿಡಿಮೆಲ್ಲಾ ಫ್ಯಾಬೇ ಯಿಂದ ಉಂಟಾಗುತ್ತದೆ. ಅದು ಹಿಂದಿನ ಸೋಂಕಿತ ಸಸ್ಯದ ಉಳಿಕೆಗಳಲ್ಲಿ ಅಥವಾ ಬೀಜಗಳಲ್ಲಿ ಹಲವು ವರ್ಷಗಳ ಕಾಲ ಉಳಿದುಕೊಂಡಿರುತ್ತದೆ. ಸೋಂಕಿತ ಬೀಜಗಳ ಕಾರಣದಿಂದ ಸಸಿಗಳ ಬೆಳವಣಿಗೆ ಕಳಪೆಯಾಗುತ್ತದೆ. ಇವುಗಳಲ್ಲಿ ಬೀಜಕಣಗಳು ಉತ್ಪತ್ತಿಯಾಗುತ್ತವೆ ಮತ್ತು ಅವುಗಳ ಉಳಿಕೆಗಳು ಇನಾಕ್ಯುಲಮ್ ನ ಪ್ರಮುಖ ಮೂಲವಾಗಿರುತ್ತದೆ ಮತ್ತು ಮಳೆಯ ಹನಿಗಳ ಮೂಲಕ ಇವು ಸಸ್ಯದ ಕೆಳಗಿನ ಭಾಗಗಳಿಗೆ ಹರಡುತ್ತವೆ. ಗಾಯಗಳ ಮೇಲೆ ಕಾಣುವ ಕಪ್ಪು ಕಲೆಗಳು ಕೂಡ ಬೀಜಕ-ಉತ್ಪಾದಿಸುವ ರಚನೆಗಳಾಗಿವೆ ಮತ್ತು ಅವು ಮಳೆ ಮೂಲಕವೇ ಇತರ ಬೆಳೆಗಳಿಗೆ ಹರಡುತ್ತವೆ. ನಿಯಮಿತ ಮಳೆ ಮತ್ತು ದೀರ್ಘಕಾಲದ ಎಲೆಯ ಆರ್ದ್ರತೆಯು (ವಿಶೇಷವಾಗಿ ವಸಂತಕಾಲದಲ್ಲಿ) ಸೋಂಕಿನ ಪ್ರಕ್ರಿಯೆ ಮತ್ತು ರೋಗದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ತಡ ಋತುವಿನಲ್ಲಿ ತೇವವಾದ ಪರಿಸ್ಥಿತಿಗಳಿದ್ದರೆ ಬೀಜಕೋಶ ಮತ್ತು ಬೀಜದ ಸೋಂಕಿಗೆ ಸೂಕ್ತ ಸ್ಥಿತಿಯನ್ನು ಒದಗಿಸುತ್ತವೆ. ಆರೋಗ್ಯಕರವಾಗಿ ಕಾಣುವ ಬೀಜಗಳು ಅತೀ ಹೆಚ್ಚು ಶಿಲೀಂಧ್ರಗಳನ್ನು ಹೊಂದಿರಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಸಸ್ಯ ಬೀಜಗಳನ್ನು ಪಡೆಯಿರಿ.
  • ರೋಗಕ್ಕೆ ಹೆಚ್ಚು ನಿರೋಧಕವಾಗಿರುವ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಮೇಲಾವರಣ ದಟ್ಟವಾಗಿ ಬೆಳೆಯದಂತೆ ನೋಡಿಕೊಳ್ಳಲು ಶಿಫಾರಸು ಮಾಡಿರುವ ಬಿತ್ತನೆ ಪ್ರಮಾಣವನ್ನೇ ಅನುಸರಿಸಿ.
  • ಸಸ್ಯದ ಉಳಿಕೆಗಳಿರುವ ಜಾಗದಲ್ಲಿ ನಾಟಿ ಮಾಡಬೇಡಿ.
  • ಅಧಿಕ ಹಾನಿ ತಪ್ಪಿಸಲು ಋತುವಿನ ನಂತರದ ದಿನಗಳಲ್ಲಿ ಬಿತ್ತನೆ ಮಾಡಿ.
  • ಬೀಜಕ್ಕೆ ಸೋಂಕು ತಗಲುವುದನ್ನು ತಪ್ಪಿಸಲು ಸಾಧ್ಯವಾದಷ್ಟು ಬೇಗ ಕೊಯ್ಲು ಮಾಡಿ.
  • ಮುಂದಿನ ಋತುವಿಗೆ ಶಿಲೀಂಧ್ರ ದಾಟುವುದನ್ನು ಕಡಿಮೆಮಾಡಲು ಉಳಿಕೆಗಳನ್ನು ಹೂತು ಹಾಕಿ.
  • ಪರ್ಯಾಯವಾಗಿ ಅವುಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಲೆಂಟಿಲ್ ಬೆಳೆಗಳ ನಡುವೆ ಕನಿಷ್ಟ 3 ವರ್ಷಗಳ ಅವಧಿಯ ಸರದಿ ಬೆಳೆಯನ್ನು ಯೋಜನೆ ಮಾಡಿ.
  • ಉಪಕರಣಗಳು ಮತ್ತು ಸಲಕರಣೆಗಳು ಶುದ್ಧವಾಗಿರುವಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ