ಮಸೂರ ಅವರೆ

ಮಸೂರ ಅವರೆಯ ಅಂತ್ರಾಕ್ನೋಸ್

Colletotrichum truncatum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು, ಬೀಜಕೋಶಗಳು ಮತ್ತು ಬೀಜಗಳ ಮೇಲೆ ಗಾಯಗಳು ಕಾಣಿಸಿಕೊಳ್ಳುತ್ತವೆ.
  • ಗಾಯಗಳು ಉದ್ದವಾಗಿ ಅಂಡಾಕಾರವಾಗಿರುತ್ತವೆ.
  • ಬೂದುಬಣ್ಣದಿಂದ ಕಂದುಬಣ್ಣದವರೆಗಿದ್ದು, ಹೆಚ್ಚಾಗಿ ಗಾಢ-ಕಂದು ಅಂಚುಗಳಿಂದ ಆವೃತವಾಗಿರುತ್ತವೆ.
  • ಕಾಂಡದ ಕೆಳಗಿನ ಭಾಗವು ಗಾಢ ಕಂದು ಬಣ್ಣದ್ದಾಗಿದ್ದು, ಒರಟಾಗಿರಬಹುದು.
  • ಸೋಂಕಿತ ಬೀಜಗಳು ಸುಕ್ಕಾಗಿರುತ್ತವೆ ಮತ್ತು ಬಣ್ಣ ಕಳೆದುಕೊಂಡಿರುತ್ತವೆ.
  • ತೀವ್ರತರವಾದ ಪ್ರಕರಣಗಳಲ್ಲಿ, ಎಲೆ ಉದುರಬಹುದು, ಬಾಗಬಹುದು ಅಥವಾ ತುದಿಯಿಂದ ಬುಡದವರೆಗೆ ಸಾಯಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮಸೂರ ಅವರೆ

ಮಸೂರ ಅವರೆ

ರೋಗಲಕ್ಷಣಗಳು

ಆಂಥ್ರಾಕ್ನೋಸ್ ರೋಗದ ಲಕ್ಷಣವೆಂದರೆ ಎಲೆಗಳು, ಕಾಂಡಗಳು, ಬೀಜಕೋಶಗಳು ಮತ್ತು ಬೀಜಗಳ ಮೇಲೆ ಗಾಯಗಳು ಕಾಣಿಸಿಕೊಳ್ಳುವುದು. ಅಂಡಾಕಾರದ, ಕಂದು ಬಣ್ಣದ ಅಂಚುಗಳಿರುವ, ಬೂದು ಬಣ್ಣದಿಂದ ಕಂದು ಬಣ್ಣವಿರುವ ಒಣ ಕಲೆಗಳು ಹಳೆಯ ಎಲೆಗಳ ಮೇಲೆ ಬೆಳೆಯುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಈ ಎಲೆಗಳು ಬಾಡಿ, ಒಣಗಿ ಉದುರಿಹೋಗುತ್ತವೆ. ಇದು ಅಕಾಲಿಕ ಎಲೆ ಉದುರುವಿಕೆಗೆ ಕಾರಣವಾಗುತ್ತದೆ. ಕಾಂಡಗಳ ಮೇಲೆ, ಗಾಯಗಳು ಉದ್ದವಾಗಿರುತ್ತವೆ, ಗುಳಿಬಿದ್ದಂತಿರುತ್ತವೆ, ಕಂದು ಬಣ್ಣದಲ್ಲಿರುತ್ತವೆ ಮತ್ತು ಕಪ್ಪನೆಯ ಅಂಚು ಹೊಂದಿರುತ್ತವೆ. ಅವು ದೊಡ್ಡದಾಗುತ್ತಿದ್ದಂತೆ, ಗಾಯಗಳು ಕಾಂಡದ ಕೆಳಭಾಗವನ್ನು ಆವರಿಸಿ. ಸುತ್ತಿಕೊಳ್ಳುತ್ತದೆ. ಇದರಿಂದ ಸಸ್ಯ ಬಾಡಿ ಸಾಯುತ್ತದೆ. ಬೀಜಕೋಶಗಳು ವೃತ್ತಾಕಾರದ, ಗುಳಿಬಿದ್ದ, ಕೆಂಪು-ಮಿಶ್ರಿತ ಅಂಚಿರುವ ಮತ್ತು ಕೆಂಪು ಬಣ್ಣದ ಕೇಂದ್ರವಿರುವ ಗಾಯಗಳನ್ನು ಹೊಂದಿರುತ್ತವೆ. ಎಲ್ಲಾ ಸಂದರ್ಭಗಳಲ್ಲಿ, ಸತ್ತ ಅಂಗಾಂಶಗಳ ಮೇಲೆ ಸಣ್ಣ ವಿಶಿಷ್ಟವಾದ ಗಾಢವಾದ ಅಥವಾ ಕಪ್ಪು ಚುಕ್ಕೆಗಳು ಗೋಚರಿಸುತ್ತವೆ. ಕೆಲವೊಮ್ಮೆ, ಇಟ್ಟಿಗೆ ಕೆಂಪು ಬಣ್ಣದ ಸ್ರಾವ ಮಧ್ಯದಲ್ಲಿ ಕಾಣಿಸಿಕೊಳ್ಳಬಹುದು. ಸೋಂಕಿತ ಬೀಜಗಳು ಸುಕ್ಕಾಗಬಹುದು ಮತ್ತು ಬಣ್ಣ ಕಳೆದುಕೊಳ್ಳಬಹುದು. ಒಟ್ಟಾರೆಯಾಗಿ, ಸಸ್ಯದ ಚಟುವಟಿಕೆಯು ತೀವ್ರವಾಗಿ ಕಡಿಮೆಯಾಗುತ್ತದೆ ಮತ್ತು ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಲ್ಲಿ ಅವು ನೆಲಕ್ಕೆ ಬಾಗಬಹುದು.

Recommendations

ಜೈವಿಕ ನಿಯಂತ್ರಣ

ಸಂಬಂಧಿತ ಕೆಲ ಜಾತಿಯ ಶಿಲೀಂಧ್ರಗಳಿಗೆ, ಸೋಂಕಿತ ಬೀಜಗಳನ್ನು 52 ° ಸಿ ಬಿಸಿನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸುವುದರ ಮೂಲಕ ರೋಗವನ್ನು ಒಂದು ನಿರ್ದಿಷ್ಟ ಹಂತದವರೆಗೆ ನಿಯಂತ್ರಿಸಲಾಗಿದೆ. ಚಿಕಿತ್ಸೆಯ ಅಪೇಕ್ಷಿತ ಪರಿಣಾಮ ದೊರೆಯಬೇಕೆಂದರೆ ತಾಪಮಾನ ಮತ್ತು ಸಮಯವನ್ನು ನಿಖರವಾಗಿ ಅನುಸರಿಸಬೇಕು. ಸೋಂಕನ್ನು ನಿಯಂತ್ರಿಸಲು ಜೈವಿಕ ಏಜೆಂಟ್ ಸಹ ಸಹಾಯ ಮಾಡಬಹುದು. ಶಿಲೀಂಧ್ರ ಟ್ರೈಕೋಡರ್ಮಾ ಹಾರ್ಜಿಯನಂ ಮತ್ತು ಬ್ಯಾಕ್ಟೀರಿಯಾ ಸ್ಯೂಡೋಮೊನಸ್ ಫ್ಲೂರಸೀನ್ ಗಳು ಕೊಲೆಟೊಟ್ರಿಚಮ್ ನ ಕೆಲವು ಪ್ರಭೇದಗಳೊಂದಿಗೆ ಪೈಪೋಟಿ ನಡೆಸುವ ಕಾರಣ ಬೀಜ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಬೀಜ ಚಿಕಿತ್ಸೆಯನ್ನು ಬೀಜ-ಹರಡುವ ಸೋಂಕುಗಳಿಗೆ ಬಳಸಬಹುದು. ವಿವಿಧ ಶಿಲೀಂಧ್ರನಾಶಕಗಳನ್ನು ಹೂಬಿಡುವ ಮುಂಚೆಯೇ ಎಲೆಗಳಿಗೆ ಸಿಂಪಡಿಸುವಂತೆ ಸೂಚಿಸಲಾಗುತ್ತದೆ. ರೋಗದ ಅಭಿವೃದ್ಧಿಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಈ ಸಿಂಪಡಿಕೆಯನ್ನು ಪುನರಾವರ್ತಿಸಬೇಕು. ಪೈರಾಕ್ಲೋಸ್ಟ್ರೋಬಿನ್, ಕ್ಲೋರೊಥಲೋನಿಲ್, ಪ್ರೊಥೈಕೊನಜೋಲ್ ಅಥವಾ ಬೊಸ್ಕಲಿಡ್ ಗಳನ್ನು ಆಧರಿಸಿದ ಉತ್ಪನ್ನಗಳನ್ನು ರೋಗ ತಡೆಗಟ್ಟಲು ಯಶಸ್ವಿಯಾಗಿ ಬಳಸಲಾಗಿದೆ. ಈ ಕೆಲವು ಉತ್ಪನ್ನಗಳಿಗೆ ಕೆಲವು ಸಂದರ್ಭಗಳನ್ನು ಪ್ರತಿರೋಧ ಕಂಡುಬಂದಿದೆ.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಕೊಲೆಟೋಟ್ರಿಚಮ್ ಟ್ರುನ್ಕಟಮ್ ನಿಂದ ಉಂಟಾಗುತ್ತವೆ. ಅದು ಬೀಜಗಳಿಗೆ ಸಂಬಂಧಿಸಿದಂತೆ ಮಣ್ಣಿನಲ್ಲಿ ಅಥವಾ ಸಸ್ಯದ ಅವಶೇಷಗಳಲ್ಲಿ ನಾಲ್ಕು ವರ್ಷಗಳವರೆಗೂ ಉಳಿದುಕೊಂಡಿರುತ್ತದೆ. ಹೊಸ ಸಸ್ಯಗಳಿಗೆ ಸೋಂಕು ತಗುಲುವ ಎರಡು ವಿಧಾನಗಳಿವೆ. ಮಣ್ಣಿನಲ್ಲಿ ಬೆಳೆಯುವ ಬೀಜಕಗಳು ಮೊಳಕೆಯೊಡೆಯುವ ಸಂದರ್ಭದಲ್ಲಿ ಸಸಿಗಳಿಗೆ ಸೋಂಕು ಉಂಟುಮಾಡುತ್ತದೆ. ಅಂಗಾಂಶಗಳಲ್ಲಿ ಇವು ವ್ಯವಸ್ಥಿತವಾಗಿ ಬೆಳೆಯುವ ಮೂಲಕ ಪ್ರಾಥಮಿಕ ಸೋಂಕು ಸಂಭವಿಸುತ್ತದೆ. ಇತರ ಸಂದರ್ಭಗಳಲ್ಲಿ, ಬೀಜಕಗಳು ಕೆಳ ಎಲೆಗಳ ಮೇಲೆ ಮಳೆ ಹನಿಗಳಿಂದ ಎರಚಲ್ಪಡುತ್ತವೆ ಮತ್ತು ಮೇಲ್ಮುಖವಾಗಿ ಸೋಂಕನ್ನು ಹರಡಲು ಪ್ರಾರಂಭಿಸುತ್ತದೆ. ಶಿಲೀಂಧ್ರವು ಸಸ್ಯದ ಅಂಗಾಂಶಗಳ ಮೇಲೆ ಬೆಳೆಯುವ ಗಾಯಗಳಲ್ಲಿ ( ಗಾಢವಾದ ಅಥವಾ ಕಪ್ಪು ಬಣ್ಣದ ಕಲೆಗಳು) ಹೆಚ್ಚಿನ ಬೀಜಕಗಳನ್ನು ಉತ್ಪಾದಿಸುತ್ತದೆ. ಇವುಗಳು ಸಸ್ಯದ ಮೇಲಿನ ಭಾಗಗಳಿಗೆ ಅಥವಾ ಇತರ ಸಸ್ಯಗಳಿಗೆ (ದ್ವಿತೀಯ ಸೋಂಕು) ಮಳೆಯ ಹನಿಗಳ ಮೂಲಕ ಹರಡುತ್ತವೆ. ಬೆಚ್ಚಗಿನ ಉಷ್ಣತೆ (20 ರಿಂದ 24 ° ಸಿ ಗರಿಷ್ಠ), ಹೆಚ್ಚು ಪಿ ಹೆಚ್ ಇರುವ ಮಣ್ಣು, ದೀರ್ಘಕಾಲದ ಎಲೆಯ ಆರ್ದ್ರತೆ (18 ರಿಂದ 24 ಗಂಟೆಗಳವರೆಗೆ), ಆಗಾಗ್ಗೆ ಮಳೆ ಮತ್ತು ದಟ್ಟ ಎಲೆಚಪ್ಪರಗಳು ಈ ರೋಗಕ್ಕೆ ಅನುಕೂಲಕರ. ಪೋಷಕಾಂಶದ ಒತ್ತಡ ಅನುಭವಿಸುತ್ತಿರುವ ಬೆಳೆಗಳು ವಿಶೇಷವಾಗಿ ಈ ರೋಗಕ್ಕೆ ಒಳಗಾಗುತ್ತವೆ. ರೋಗ ಅತಿಯಾದ ಸಂದರ್ಭದಲ್ಲಿ 50% ದಷ್ಟು ಇಳುವರಿ ನಷ್ಟವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ಲಭ್ಯವಿದ್ದರೆ, ಹೆಚ್ಚು ನಿರೋಧಕ ವಿಧವನ್ನು ಆಯ್ಕೆ ಮಾಡಿಕೊಳ್ಳಿ.
  • ಬಿತ್ತನೆಯ ಸಮಯದಲ್ಲಿ ಸಸ್ಯಗಳ ನಡುವೆ ವಿಶಾಲ ಅಂತರವನ್ನು ಇರಿಸಿ.
  • ರೋಗ ಬರದ ಸಸ್ಯಗಳೊಂದಿಗೆ ಕನಿಷ್ಟ 4 ವರ್ಷಗಳ ಬೆಳೆ ಸರದಿ ಅನುಸರಿಸಿ.
  • ಈ ಹಿಂದೆ ಸೋಂಕಿಗೊಳಗಾಗಿದ್ದ ಭೂಮಿಯಲ್ಲಿ ಮಸೂರಗಳನ್ನು ನೆಡಬೇಡಿ.
  • ಜಮೀನಿನಲ್ಲಿ ಮತ್ತು ಸುತ್ತಲೂ ತಾವಾಗಿಯೇ ಬೆಳೆದಿರುವ ಮಸೂರ ಸಸ್ಯಗಳನ್ನು ಮತ್ತು ಕಳೆಗಳನ್ನು ತೆಗೆದುಹಾಕಿ.
  • ಪರ್ಯಾಯ ರೋಗ ಬರುವ ಸಸ್ಯಗಳಾಗಿರುವ ಬಟಾಣಿ ಅಥವಾ ಚಪ್ಪರದವರೆ ಸಸ್ಯಗಳನ್ನು ನೆಡಬೇಡಿ.
  • ಸಸ್ಯದ ಉಳಿಕೆಗಳನ್ನು ಹೂಳಬೇಡಿ.
  • ಏಕೆಂದರೆ ಇವುಗಳು ಶಿಲೀಂಧ್ರವನ್ನು ಮುಂದಿನ ಬೆಳೆಗೆ ಸಾಗಿಸುತ್ತವೆ.
  • ಬದಲಾಗಿ ಸಸ್ಯದ ಅವಶೇಷಗಳನ್ನು ನೆಲದ ಮೇಲೆಯೇ ಬಿಡಿ.
  • ಶಿಲೀಂಧ್ರವು ಇಲ್ಲಿ ಶೀಘ್ರವಾಗಿ ನಾಶವಾಗುತ್ತದೆ.
  • ನೆಲವನ್ನು ಸಾಗುವಳಿ ಮಾಡಬೇಡಿ.
  • ಏಕೆಂದರೆ, ಇದು ರೋಗಕಾರಕಕ್ಕೆ ಅನುಕೂಲಕರವಾಗಿದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ