ದಾಳಿಂಬೆ

ಆಲ್ಟರ್ನೇರಿಯಾ ಕಪ್ಪು ಚುಕ್ಕೆ ಮತ್ತು ಹಣ್ಣಿನ ಕೊಳೆತ

Alternaria alternata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಣ್ಣ ಕೆಂಪು ಕಂದು ಬಣ್ಣದ ಕಲೆಗಳು ಹಣ್ಣುಗಳು ಮತ್ತು ಎಲೆಗಳ ಮೇಲೆ ಕಾಣಿಸುತ್ತವೆ.
  • ಇದರ ಸುತ್ತ ಹಸಿರು ಹಳದಿ ಬಣ್ಣದ ವೃತ್ತವಿರುತ್ತದೆ.
  • ಕಲೆಗಳು ದೊಡ್ಡದಾಗುತ್ತಾ ಹೋಗುತ್ತವೆ.
  • ಹಣ್ಣು ಕೊಳೆಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ದಾಳಿಂಬೆ

ರೋಗಲಕ್ಷಣಗಳು

ಈ ಶಿಲೀಂಧ್ರವು ದಾಳಿಂಬೆಗಳಲ್ಲಿ ಎರಡು ಪ್ರಮುಖ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅವು ಏಕಕಾಲದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಕಪ್ಪು ಚುಕ್ಕೆ ಮತ್ತು ಹಣ್ಣಿನ ಹೃದಯ ಕೊಳೆತ ಎಂದು ಇವುಗಳನ್ನು ಕರೆಯಲಾಗುತ್ತದೆ. ಅವು ಹೆಚ್ಚಾಗಿ ದಾಳಿಂಬೆಗಳ ಪ್ರಭೇದವನ್ನು ಅವಲಂಬಿಸಿರುತ್ತವೆ. ಕಪ್ಪು ಚುಕ್ಕೆ ರೋಗವು ಸಣ್ಣ ವೃತ್ತಾಕಾರದ, (1-3 ಮಿ.ಮೀ.) ಕೆಂಪು ಕಂದು ಅಥವಾ ಕಪ್ಪು ಚುಕ್ಕೆಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಇವು ಹಣ್ಣುಗಳು ಮತ್ತು ಎಲೆಗಳ ಮೇಲೆ ಹಳದಿ ಹೊರವೃತ್ತದಿಂದ ಆವರಿಸಲ್ಪಟ್ಟಿರುತ್ತವೆ. ರೋಗ ಮುಂದುವರಿಯುತ್ತಿದ್ದಂತೆ, ಈ ಕಲೆಗಳು ಸೇರಿ ದೊಡ್ಡದಾದ ತೇಪೆಯನ್ನು ರೂಪಿಸುತ್ತವೆ. ಇದು ಹಣ್ಣಿನ ಮೇಲ್ಮೈಯ 50% ವರೆಗೂ ಆವರಿಸಿರಬಹುದು. ಎಲೆಗಳ ಮೇಲೆ, ಅವು ಕ್ಲೋರೊಟಿಕ್ ಆಗುತ್ತವೆ ಮತ್ತು ಅಕಾಲಿಕ ಉದುರುವಿಕೆಗೆ ಕಾರಣವಾಗಬಹುದು. ಹಣ್ಣಿನ ಹೊರ ಭಾಗವು ಕೊಳೆಯಲು ಆರಂಭವಾಗುತ್ತದೆ. ಆದರೆ ತಿನ್ನಲು ಯೋಗ್ಯ ಅಂಗಾಂಶವು ಹಾನಿಯಾಗದೆ ಉಳಿಯುತ್ತದೆ. ಸ್ವಲ್ಪ ಅಸಹಜ ಸಿಪ್ಪೆಯ ಬಣ್ಣ ಅಥವಾ ಹಣ್ಣಿನ ಆಕಾರದಲ್ಲಿನ ಬದಲಾವಣೆಗಳು ಹೃದಯ ಕೊಳೆತದ ಬಾಹ್ಯ ಚಿಹ್ನೆಗಳಾಗಿರಬಹುದು. ಆದರೆ ಹೆಚ್ಚಾಗಿ ಹಣ್ಣುಗಳು ಸುಗ್ಗಿಯವರೆಗೆ ಆರೋಗ್ಯಕರ ರೂಪವನ್ನು ಉಳಿಸಿಕೊಳ್ಳುತ್ತವೆ. ಅವುಗಳನ್ನು ತೆರೆದಾಗ, ಎರಿಲ್ ಗಳ ಕೊಳೆತ ಸ್ಪಷ್ಟವಾಗಿ ಕಾಣುತ್ತದೆ.

Recommendations

ಜೈವಿಕ ನಿಯಂತ್ರಣ

ಆಲ್ಟರ್ನೇರಿಯಾ ಆಲ್ಟರ್ನೇಟಾ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆಯು ಲಭ್ಯವಿಲ್ಲ. ಆದಾಗ್ಯೂ, ತಾಮ್ರದ ಆಕ್ಸಿಕ್ಲೋರೈಡ್ ಆಧಾರಿತ ಉತ್ಪನ್ನಗಳು ದಾಳಿಂಬೆಯ ರೋಗ ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಹೂಬಿಡುವ ಅವಧಿಯಲ್ಲಿ ಅಥವಾ ಮೊದಲ ರೋಗಲಕ್ಷಣಗಳು ಹಣ್ಣುಗಳ ಮೇಲೆ ಕಾಣಿಸಿಕೊಂಡಾಗ ಎರಡು ತಡೆಗಟ್ಟುವ ಸಿಂಪಡಿಸುವಿಕೆಯು ರೋಗದ ವಿರುದ್ಧ ಉತ್ತಮ ನಿಯಂತ್ರಣವನ್ನು ನೀಡುತ್ತದೆ. ಪ್ರೊಪಿಕೊನಜೋಲ್, ಥಿಯೋಫನೇಟ್ ಮೀಥೈಲ್ ಅಥವಾ ಅಜೋಕ್ಸಿಸ್ಟ್ರೋಬೈನ್ ಆಧಾರಿತ ಉತ್ಪನ್ನವು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಪ್ರತಿರೋಧವನ್ನು ತಡೆಗಟ್ಟಲು, ನಿಗದಿತ ಸಾಂದ್ರತೆಗಳನ್ನು ಅನುಸರಿಸುವುದು ಮತ್ತು ವಿಭಿನ್ನ ಕ್ರಮಗಳಿರುವ ಶಿಲೀಂಧ್ರನಾಶಕಗಳನ್ನು ಬಳಸುವುದು ಮುಖ್ಯವಾಗಿದೆ.

ಅದಕ್ಕೆ ಏನು ಕಾರಣ

ಕಪ್ಪು ಚುಕ್ಕೆ ಮತ್ತು ಹೃದಯ ಕೊಳೆತ ರೋಗಲಕ್ಷಣಗಳನ್ನು ಆಲ್ಟರ್ನೇರಿಯಾ ಕುಟುಂಬದ ಅನೇಕ ಶಿಲೀಂಧ್ರಗಳು ಪ್ರಚೋದಿಸಬಹುದು. ಆದರೆ ಮುಖ್ಯ ಕಾರಣ ಆಲ್ಟರ್ನೇರಿಯಾ ಆಲ್ಟರ್ನೇಟಾ. ಈ ಶಿಲೀಂಧ್ರಗಳು ಸಾಮಾನ್ಯವಾಗಿ ಸಸ್ಯದ ಅವಶೇಷಗಳು, ಸಂರಕ್ಷಿತ ಹಣ್ಣುಗಳು ಅಥವಾ ಮಣ್ಣಿನಲ್ಲಿ ಬದುಕುಳಿಯುತ್ತವೆ. ಬೀಜಕಗಳು ನಂತರ ಗಾಳಿಯ ಮೂಲಕ ಹೂವುಗಳಿಗೆ ಸಾಗಿಸಲ್ಪಡುತ್ತವೆ. ಕೀಟಗಳು ಮತ್ತು ಪಕ್ಷಿಗಳು ಪರ್ಯಾಯ ವಾಹಕಗಳಾಗಿವೆ. ಹೂಬಿಡುವ ಕೊನೆಯ ಹಂತಗಳಲ್ಲಿ ಅಥವಾ ಹಣ್ಣಿನ ಬೆಳವಣಿಗೆಯ ಆರಂಭಿಕ ಅವಧಿಗಳಲ್ಲಿ ಆಗಾಗ್ಗೆ ಮಳೆ ಅಥವಾ ಆರ್ದ್ರ ವಾತಾವರಣ ಸೋಂಕಿಗೆ ಅನುಕೂಲ. ಸಾಮಾನ್ಯವಾಗಿ, ಹೃದಯ ಕೊಳೆತವು ಸುಗ್ಗಿಯ ನಂತರ, ಸಂಗ್ರಹಣೆ ಅಥವಾ ಸಾರಿಗೆ ಸಮಯದಲ್ಲಿ ಮಾತ್ರ ಗುರುತಿಸಲ್ಪಡುತ್ತದೆ. ಶಿಲೀಂಧ್ರವು ದಾಳಿಂಬೆ ಹಣ್ಣಿನೊಳಗೆ ಬೆಳೆಯುತ್ತದೆ ಮತ್ತು ಅದು ಕೊಳೆಯತ್ತದೆ ಮತ್ತು ಮಾರಾಟ ಯೋಗ್ಯವಾಗಿರುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಸಸ್ಯ ವಸ್ತುಗಳನ್ನು ಬಳಸಿ.
  • ನೀರಿನ ಒತ್ತಡ ಅಥವಾ ಅತಿಯಾದ ನೀರು ಹಣ್ಣು ಬಿರುಕು ಬಿಡಲು ಕಾರಣವಾಗಬಹುದಾದ್ದರಿಂದ ಜಮೀನಿನಲ್ಲಿ ಉತ್ತಮ ಒಳಚರಂಡಿ ಒದಗಿಸಿ.
  • ವಿಶೇಷವಾಗಿ ಹೂಬಿಡುವ ಅವಧಿಯಲ್ಲಿ ರೋಗಗಳ ಯಾವುದೇ ಚಿಹ್ನೆಗಾಗಿ ನಿಮ್ಮ ಸಸ್ಯಗಳು ಅಥವಾ ಜಮೀನನ್ನು ಪರಿಶೀಲಿಸಿ.
  • ಸಸ್ಯಗಳ ನೈಸರ್ಗಿಕ ಪ್ರತಿರೋಧವನ್ನು ಹೆಚ್ಚಿಸಲು ನಿಮ್ಮ ಬೆಳೆಗಳನ್ನು ಸರಿಯಾಗಿ ಫಲವತ್ತಾಗಿಸಿ.
  • ಬಾಧಿತ ಹಣ್ಣುಗಳನ್ನು ಸಂಗ್ರಹಿಸಿ ಅವುಗಳನ್ನು ಸುಡುವ ಮೂಲಕ ನಾಶಮಾಡಿ.
  • ಸೋಂಕಿತ, ಆದರೆ ಆರೋಗ್ಯಕರವಾಗಿ ಕಾಣುವ ಹಣ್ಣು ಸುಗ್ಗಿಯ ಸಮಯದಲ್ಲಿ ಮೃದುವಾಗಿ ಮರವನ್ನು ಅಲುಗಾಡಿಸಿದಾಗ ನೆಲಕ್ಕೆ ಬೀಳಬಹುದು.
  • ಜಮೀನಿನಿಂದ ಹಳೆಯ ಹಣ್ಣುಗಳನ್ನು ಮತ್ತು ಸತ್ತ ಶಾಖೆಗಳನ್ನು ತೆಗೆದುಹಾಕಿ.
  • ಸುಗ್ಗಿಯ ಸಮಯದಲ್ಲಿ ದಾಳಿಂಬೆಗಳ ಸಮಗ್ರ ವಿಂಗಡಣೆ ಮತ್ತು ಶ್ರೇಣೀಕರಣವು ಶೇಖರಣೆ ಮತ್ತು ಸಾರಿಗೆ ಸಮಯದಲ್ಲಿ ರೋಗ ಹರಡುವುದನ್ನು ತಪ್ಪಿಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ