ಬಾಳೆಹಣ್ಣು

ಬಾಳೆಹಣ್ಣಿನ ಬ್ಯಾಕ್ಟೀರಿಯಾ ಸಾಫ್ಟ್ ರಾಟ್

Pectobacterium carotovorum

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಬೇರು ಮೊಳಕೆಗಳ ಒಳಗಿನ ಅಂಗಾಂಶಗಳ ಕೊಳೆತ, ಮತ್ತು ಅದರ ಜೊತೆ ಕೆಟ್ಟ ವಾಸನೆ ಸಹ ಇರುತ್ತದೆ.
  • ತೊಟ್ಟಿನ ಭಾಗದಲ್ಲಿ ಕೊಳೆತ ಮತ್ತು ಎಲೆಯ ತಳದಲ್ಲಿ ಕಂದು ಅಥವಾ ಹಳದಿ ಬಣ್ಣದ ನೀರು ತುಂಬಿದ ಕಲೆಗಳು.
  • ಕಾಂಡದ ತಳದಲ್ಲಿ ಊದಿಕೊಂಡಂತಾಗಬಹುದು ಮತ್ತು ಅವು ಮುರಿಯಬಹುದು.
  • ಮರದ ಚಟುವಟಿಕೆಯಲ್ಲಿ ಕೊರತೆ, ನಂತರ ಎಲೆಗಳು ಒಣಗಿಹೋಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಈಚೆಗೆ ನಾಟಿ ಮಾಡಿದ ಬೇರು ಮೊಳಕೆಗಳಲ್ಲಿ ಕಂಡುಬರುವ ಆರಂಭಿಕ ರೋಗಲಕ್ಷಣಗಳೆಂದರೆ ಸೂಡೊಸ್ಟೊಮ್ ಗಳು ಮತ್ತು ಬೇರುಗಳ ಒಳಗಿನ ಅಂಗಾಂಶಗಳ ಕೊಳೆತ. ಇದನ್ನು ಒಳಗಿನ ಅಂಗಾಂಶಗಳಲ್ಲಿ ಬರುವ ಗಾಢ ಕಂದು ಬಣ್ಣ ಅಥವಾ ಹಳದಿ ಬಣ್ಣದ ಕಲೆಗಳು ಮತ್ತು ಕೆಟ್ಟ ವಾಸನೆಯಿಂದ ಗುರುತಿಸಬಹುದು. ಸೋಂಕಿತ ಸಸ್ಯಗಳ ಕಾಲರ್ ಭಾಗದಲ್ಲಿ ಕತ್ತರಿಸಿದಾಗ, ಹಳದಿ ಮಿಶ್ರಿತ ಕೆಂಪು ಬಣ್ಣದ ರಸಸ್ರಾವ ಗೋಚರಿಸುತ್ತದೆ. ಕಾಲರ್ ಭಾಗದ ಕೊಳೆತದಿಂದ ಎಲೆಗಳ ಚಟುವಟಿಕೆ ಇದ್ದಕ್ಕಿದ್ದಂತೆಯೇ ಕಡಿಮೆಯಾಗುತ್ತದೆ, ನಂತರ ಅವು ಸಂಪೂರ್ಣವಾಗಿ ಒಣಗುತ್ತವೆ. ರೋಗದ ನಂತರದ ಹಂತಗಳಲ್ಲಿ, ಕಾಂಡದ ತಳದಲ್ಲಿ ಊದಿಕೊಂಡಂತಾಗಬಹುದು ಮತ್ತು ಅವು ಮುರಿಯಬಹುದು. ಹಳೆಯ ಸಸ್ಯಗಳಲ್ಲಿ, ಕಾಲರ್ ಭಾಗ ಮತ್ತು ಎಲೆಗಳ ತಳದಲ್ಲಿಯೂ ಸಹ ಕೊಳೆತವುಂಟಾಗುತ್ತದೆ. ಸೋಂಕಿತ ಸಸ್ಯಗಳನ್ನು ಕಿತ್ತಾಗ, ಅವುಗಳು ಕಾಲರ್ ಭಾಗದ ಹತ್ತಿರ ಮುರಿಯುತ್ತವೆ ಮತ್ತು ಗೆಡ್ಡೆ ಹಾಗು ಬೇರುಗಳು ಮಣ್ಣಿನಲ್ಲೇ ಉಳಿದುಕೊಳ್ಳುತ್ತವೆ. ಕೀಟಗಳ ಆಕ್ರಮಣ ನಾಟಿ ಮಾಡಿದ 3-5 ತಿಂಗಳುಗಳ ನಂತರ ಕಂಡುಬರುತ್ತದೆ.

Recommendations

ಜೈವಿಕ ನಿಯಂತ್ರಣ

ಈ ರೋಗವನ್ನು ಸರಿಪಡಿಸಲು ಯಾವುದೇ ಜೈವಿಕ ಚಿಕಿತ್ಸೆಯು ಲಭ್ಯವಿಲ್ಲ ಎಂದು ತೋರುತ್ತದೆ. ರೋಗವು ಒಮ್ಮೆ ಪತ್ತೆಯಾದ ನಂತರ ಸೋಂಕಿಗೊಳಗಾದ ಸಸ್ಯಗಳನ್ನು ಗುಣಪಡಿಸಲು ಅಥವಾ ಸೋಂಕನ್ನು ಕಡಿಮೆ ಮಾಡಲು ಯಾವುದೇ ಸಾಧ್ಯತೆಗಳಿಲ್ಲ. ನಿಮಗೆ ಯಾವುದಾದರೂ ಜೈವಿಕ ಸಂಸ್ಕರಣೆಗಳ ಬಗ್ಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗವು ಒಮ್ಮೆ ಪತ್ತೆಯಾದ ನಂತರ ಸೋಂಕಿಗೊಳಗಾದ ಸಸ್ಯಗಳನ್ನು ಗುಣಪಡಿಸಲು ಅಥವಾ ಸೋಂಕನ್ನು ಕಡಿಮೆ ಮಾಡಲು ಯಾವುದೇ ಸಾಧ್ಯತೆಗಳಿಲ್ಲ. ನಿಮಗೆ ಯಾವುದಾದರೂ ರಾಸಾಯನಿಕ ಸಂಸ್ಕರಣೆಗಳ ಬಗ್ಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಅದಕ್ಕೆ ಏನು ಕಾರಣ

ಈ ರೋಗವು ಮಣ್ಣಿನ ಮೂಲದ ಬ್ಯಾಕ್ಟೀರಿಯಾವಾದ ಪೆಕ್ಟೊಬ್ಯಾಕ್ಟೀರಿಯಂ ಕ್ಯಾರೊಟೋವೊರಮ್ನ ಉಪಜಾತಿಗಳಿಂದ ಉಂಟಾಗುತ್ತದೆ. ಇದು ತೇವಾಂಶಯುಕ್ತ ಮಣ್ಣು ಮತ್ತು ಬೆಳೆ ಉಳಿಕೆಗಳಲ್ಲಿ ಬದುಕುತ್ತದೆ. ಇದು ಮಳೆ ಮತ್ತು ನೀರಾವರಿ ನೀರಿನ ಮೂಲಕ ಮರಗಳ ನಡುವೆ ಹರಡುವುದಲ್ಲದೆ ಸೋಂಕಿತ ಸಸ್ಯ ವಸ್ತುಗಳಿಂದ ಸಹ ಹರಡುತ್ತದೆ. ಮುಖ್ಯವಾಗಿ ಚಿಕ್ಕ ಸಸ್ಯಗಳಿಗೆ (ಬೇರು ಮೊಳಕೆಗಳು) ಈ ರೋಗದ ಸೋಂಕು ಬೇಗ ತಾಗುತ್ತದೆ. ಸಸ್ಯದ ಅಂಗಾಂಶದಲ್ಲಾದ ನೈಸರ್ಗಿಕ ಮತ್ತು ಕೃತಕ ಗಾಯಗಳ ಮೂಲಕ ರೋಗಕಾರಕವು ಬೇರಿನೊಳಗೆ ಪ್ರವೇಶಿಸುತ್ತದೆ. ಕಾಂಡದ ಒಳಗಿನ ಅಂಗಾಂಶಗಳ ಕೊಳೆತ ಮತ್ತು ನೀರು ಹಾಗು ಪೌಷ್ಟಿಕಾಂಶ ಸಾಗಣೆಯ ದುರ್ಬಲತೆಯಿಂದಾಗಿ ಈ ರೋಗಲಕ್ಷಣಗಳು ಕಂಡುಬರುತ್ತವೆ. ಹೆಚ್ಚಿನ ತೇವಾಂಶ ಮತ್ತು ಆಗಾಗ್ಗೆ ಬರುವ ಮಳೆಯು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ಬೇಸಿಗೆಯಲ್ಲಿ ಉಷ್ಣ, ಆರ್ದ್ರ ವಾತಾವರಣದಲ್ಲಿ ಸೋಂಕು ಇನ್ನೂ ಕೆಟ್ಟದಾಗಿರುತ್ತದೆ. ಗೊಂಚಲು ಬೆಳೆಯುವ ಸಮಯದಲ್ಲಿ ರೋಗವು ಬಂದರೆ ಆರ್ಥಿಕ ನಷ್ಟಗಳು ತೀವ್ರವಾಗಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಕಟ್ಟುನಿಟ್ಟಾದ ಸಂಪರ್ಕತಡೆ ಕ್ರಮಗಳನ್ನು ಅನುಸರಿಸಿ.
  • ವಿಶ್ವಾಸಾರ್ಹ ಮೂಲಗಳಿಂದ ಅಥವಾ ಆರೋಗ್ಯಕರ ಬೇರು ತಳಿಗಳಿಂದ ಆರೋಗ್ಯಕರ ನಾಟಿ ವಸ್ತುಗಳನ್ನು ಬಳಸಿ.
  • ಸಸ್ಯಗಳ ನಡುವೆ ಸಾಕಷ್ಟು ಜಾಗವನ್ನು ಇರಿಸಿ.
  • ಹೊಲದಲ್ಲಿ ನೀರು ಸಂಗ್ರಹಣೆಯಾಗುವುದನ್ನು ತಡೆಗಟ್ಟಲು ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ಕಾಂಪೋಸ್ಟ್ ಮಾಡಲಾದ ಜೈವಿಕ ವಸ್ತುಗಳನ್ನು ಮಾತ್ರ ಹಾಕಿ.
  • ರೋಗದ ಯಾವುದೇ ಚಿಹ್ನೆಗಾಗಿ ನಿಮ್ಮ ಸಸ್ಯಗಳು ಅಥವಾ ಹೊಲಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ಹೊಲದ ಕೆಲಸದ ನಂತರ ಬ್ಲೀಚ್ನೊಂದಿಗೆ ಉಪಕರಣಗಳು ಮತ್ತು ಸಲಕರಣೆಗಳಲ್ಲಿರಬಹುದಾದ ಸೋಂಕನ್ನು ತೆಗೆಯಿರಿ.
  • ಕನಿಷ್ಠ ಮೂರು ವರ್ಷಗಳವರೆಗೆ ನಿರೋಧಕ ಮತ್ತು ಹೋಸ್ಟ್-ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಲು ಸೂಚಿಸಲಾಗುತ್ತದೆ.
  • ಕೃಷಿ ಮಾಡುವ ಸಮಯದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ.
  • ಯಾಂತ್ರಿಕ ಗಾಯಗಳನ್ನು ಮಾಡಬೇಡಿ.
  • ಎಲೆಗಳು ತೇವವಾಗಿದ್ದರೆ ಹೊಲಗಳಲ್ಲಿ ಯಾವ ಕೆಲಸವನ್ನೂ ಮಾಡಬೇಡಿ ಅಥವಾ ಫಲವತ್ತತೆ ಕೆಲಸವನ್ನು ಮಾಡಬೇಡಿ.
  • ಶುಷ್ಕ ಹವಾಮಾನದ ಸಮಯದಲ್ಲಿ ಕೊಯ್ಲು ಮಾಡಿ.
  • ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಸುಡುವ ಮೂಲಕ ಅವುಗಳನ್ನು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ