ಭತ್ತ

ಅಕ್ಕಿಯಲ್ಲಿ ಫೋಮಾ ಸೊರ್ಗಿನಾ

Epicoccum sorghinum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬೆಳೆಯುತ್ತಿರುವ ಕಿರುಕದಿರುಗಳಲ್ಲಿ ನೀರು ತುಂಬಿದ ಗಾಯಗಳು.
  • ಕಾಳಿನ ಹೊಟ್ಟಿನ ಮೇಲೆ(ಗ್ಲೂಮ್ ರೋಗ)ಗಾಢ ಕಂದು ಬಣ್ಣದ ಅಂಚಿನಿಂದ ಸುತ್ತುವರಿದ ಬಿಳಿ ಕೇಂದ್ರವಿರುವ, ಆಯತಾಕಾರದ ಅಥವಾ ಅನಿಯಮಿತ ಕಲೆಗಳು.
  • ರೋಗಕ್ಕೆ ಬೇಗ ತುತ್ತಾಗುವ ಭತ್ತದ ಪ್ರಭೇದಗಳಲ್ಲಿ ರೋಗದ ತೀವ್ರತೆ ಹೆಚ್ಚಾದರೆ, 95% ನಷ್ಟು ಹೂಗೊಂಚಲುಗಳಿಗೆ ಹಾನಿಯಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ರೋಗದ ಮೊದಲ ರೋಗಲಕ್ಷಣಗಳೆಂದರೆ ಬೆಳೆಯುತ್ತಿರುವ ಕಿರುಕದಿರುಗಳಲ್ಲಿ ನೀರು ತುಂಬಿದ ಗಾಯಗಳು. ಈ ಗಾಯಗಳು ನಂತರ ದೊಡ್ಡದಾಗುತ್ತವೆ ಮತ್ತು ಗಾಢ ಕಂದು ಬಣ್ಣದ ಅಂಚಿರುವ ಆಯತಾಕಾರದ ಅಥವಾ ಅನಿಯಮಿತ ಕಲೆಗಳು ಒಂದು ಬಿಳಿ ಬಣ್ಣದ ಕಲೆಯ ಸುತ್ತ ಕಂಡುಬರುತ್ತವೆ. ಹೂಗೊಂಚಲು ಹುಟ್ಟುವ ಮುನ್ನವೇ ಸೋಂಕಾದರೆ, ಭತ್ತಗಳು ಕೊಳೆಯುತ್ತವೆ ಮತ್ತು ಅಂತಿಮವಾಗಿ ಒಣಗುತ್ತವೆ. ಹೂಬಿಟ್ಟ ನಂತರ ರೋಗಲಕ್ಷಣಗಳು ಕಾಣಿಸಿಕೊಂಡರೆ, ಧಾನ್ಯಗಳು ಸರಿಯಾಗಿ ತುಂಬಿರುವುದಿಲ್ಲ ಮತ್ತು ಕಾಳಿನ ಹೊಟ್ಟಿನ ಮೇಲೆ ಅನಿಯಮಿತ ಗಾಯಗಳು (ಗ್ಲೂಮ್ ರೋಗ) ಕಾಣಿಸಿಕೊಳ್ಳುತ್ತವೆ. ರೋಗಕ್ಕೆ ಬೇಗ ತುತ್ತಾಗುವ ಭತ್ತದ ಪ್ರಭೇದಗಳಲ್ಲಿ ರೋಗದ ತೀವ್ರತೆ ಹೆಚ್ಚಾದರೆ, 95% ನಷ್ಟು ಹೂಗೊಂಚಲುಗಳಿಗೆ ಹಾನಿಯಾಗುತ್ತದೆ (ಉದಾಹರಣೆಗೆ ಚೀನಾ ಬೋರೋ). ಈ ರೋಗಕ್ಕೆ ಸೂಕ್ತ ವಾತಾವರಣವೆಂದರೆ ಭಾರಿ ಮಳೆಯ ಸಮಯಲ್ಲಿ ಬಿರುಗಾಳಿ, ನೀರು ತುಂಬಿದ ಭೂಮಿ ಮತ್ತು ಪ್ರಕಾಶಮಾನವಾದ ಸೂರ್ಯನ ಬೆಳಕು. ಎತ್ತರದ ಪ್ರದೇಶದ ಭತ್ತದಲ್ಲಿ ಗ್ಲೂಮ್ ರೋಗಕ್ಕೆ ಕಡಿಮೆ ಆರ್ಥಿಕ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಅದನ್ನು ಪರಿಶೀಲಿಸದೇ ಹಾಗೇ ಬಿಟ್ಟರೆ ಅದು ಸಂಕ್ರಾಮಿಕವಾಗಬಹುದು.

Recommendations

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ, ಈ ರೋಗದ ಪರಿಣಾಮ ಅಥವಾ ತೀವ್ರತೆಯನ್ನು ಕಡಿಮೆ ಮಾಡುವಂತಹ ಯಾವುದೇ ಜೈವಿಕ ನಿಯಂತ್ರಣದ ಬಗ್ಗೆ ತಿಳಿದುಬಂದಿಲ್ಲ. ನಿಮಗೆ ಯಾವುದರ ಬಗ್ಗೆಯಾದರೂ ತಿಳಿದುಬಂದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಶಿಲೀಂಧ್ರನಾಶಕಗಳನ್ನು ಬೀಜಗಳನ್ನು ಗುಣಪಡಿಸಲು ಬಳಸಬಹುದು ಮತ್ತು ಕೆಲವು ಭತ್ತದ ಪ್ರಭೇದಗಳಲ್ಲಿ ನೈಸರ್ಗಿಕವಾಗಿ ಸೋಂಕಿತ ಬೀಜಗಳ ಮೇಲೆ ಪಿ.ಸೊರ್ಗಿನದ ವಿರುದ್ಧ ಉತ್ತಮ ನಿಯಂತ್ರಣವನ್ನು ನೀಡಲು ಬಳಸಬಹುದು. ಇಪ್ರೋಡೈನ್ ಮತ್ತು ಕ್ಯಾಪ್ಟನ್ ಅನ್ನು ಬಳಸಬಹುದು. ಆದರೆ ಇದು 100% ಪರಿಣಾಮಕಾರಿಯಾಗಿರುವುದಿಲ್ಲ.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಬೀಜ ಮತ್ತು ಮಣ್ಣಿನಿಂದ ಹರಡುವ ಶಿಲೀಂಧ್ರವಾದ ಎಪಿಕೊಕ್ಕಮ್ ಸೊರ್ಗಿಯಿಂದ ಉಂಟಾಗುತ್ತವೆ, ಇದನ್ನು ಮೊದಲು ಫೋಮಾ ಸೋರ್ಗಿನಾ ಎಂದು ಕರೆಯಲಾಗುತ್ತಿತ್ತು. ಇದೊಂದು ಅವಕಾಶವಾದಿ ಜೀವಿಯಾಗಿದ್ದು, ದುರ್ಬಲಗೊಂಡ ಅಥವಾ ಒತ್ತಡಕ್ಕೊಳಗಾದ ಸಸ್ಯಗಳನ್ನು ಮಾತ್ರ ಆಕ್ರಮಿಸುತ್ತದೆ ಮತ್ತು ಇದು ಮುಖ್ಯವಾಗಿ ಹುಲ್ಲು ಜೋಳ, ರಾಗಿ, ಕಬ್ಬು ಮತ್ತು ಭತ್ತ (ಗ್ರ್ಯಾಮಿನಿ) ಗಳಂತಹ ಆರ್ಥಿಕ ಪ್ರಾಮುಖ್ಯತೆಯ ಸಸ್ಯಗಳಿಗೆ ಸಂಬಂಧಿಸಿದೆಯಾದರೂ, ವಿಶ್ವದಾದ್ಯಂತ ಬಹುತೇಕ ಆಶ್ರಯದಾತ ಸಸ್ಯಗಳ ಮೇಲೂ ಪರಿಣಾಮ ಬೀರಬಹುದು. ಅಕೇಶಿಯ, ಅಲೋ, ಸಿಟ್ರಸ್ ಮತ್ತು ಯೂಕಲಿಪ್ಟಸ್ ನ ಕೆಲವು ಪ್ರಭೇದಗಳು ಇದರ ಪರ್ಯಾಯ ಆಶ್ರಯಯದಾತ ಸಸ್ಯಗಳಾಗಿವೆ. ಈ ಶಿಲೀಂಧ್ರವು ಬೆಳೆಗಳ ಕಸದಲ್ಲಿ ಬದುಕಬಲ್ಲದು ಮತ್ತು ಆಫ್ರಿಕಾದಲ್ಲಿನ ಹುಲ್ಲು ಛಾವಣಿ ಮತ್ತು ಪ್ರಾಣಿಗಳ ಆಹಾರದ ಮೇಲೆಯೂ ಬದುಕಬಲ್ಲದು ಎಂದು ತಿಳಿದುಬಂದಿದೆ. ಇದು ಮೈಕೋಟಾಕ್ಸಿನ್ ಗಳನ್ನು ಉತ್ಪಾದಿಸುತ್ತದೆ ಮತ್ತು ಅದು ಸಸ್ಯಗಳಲ್ಲಿ ರೋಗಲಕ್ಷಣಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ ಮತ್ತು ಮಾನವರ ಹಾಗು ಪ್ರಾಣಿಗಳ ಆರೋಗ್ಯದ ಮೇಲೂ ಸಹ ಪರಿಣಾಮ ಬೀರುತ್ತದೆ. ಮಾನವರ ಮೇಲೆ ಕಂಡುಬರುವ ರೋಗಲಕ್ಷಣಗಳೆಂದರೆ ಚರ್ಮದ ಮೇಲೆ ಕೆಂಪು ಗಾಯಗಳು, ಬಾಯಿಯಲ್ಲಿ ಗುಳ್ಳೆಗಳು ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಸಹ ಕಾಣಿಸಿಕೊಳ್ಳಬಹುದು.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳು ಲಭ್ಯವಿದ್ದರೆ ಅವುಗಳನ್ನು ಬಳಸಿ.
  • ಹೊಲವನ್ನು ಸರಿಯಾಗಿ ನೀರು ಬರಿದು ಮಾಡುವುದನ್ನು ಖಚಿತಪಡಿಸಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ