ಇತರೆ

ಗೋಧಿಯ ಸಾಮಾನ್ಯ ಕಾಡಿಗೆ ರೋಗ

Tilletia tritici

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕಿರುಕದಿರುಗಳು ಗಾಢ ಹಸಿರು ಬಣ್ಣದ ಎರಕದಿಂದ ಜಿಡ್ಡಿನಂತೆ ಕಾಣಿಸುತ್ತವೆ.
  • ಅದನ್ನು ಅಮುಕಿದಾಗ, ಒಳಗಿನ ಕಪ್ಪು ಬೀಜಕಗಳು ಹೊರಬರುತ್ತವೆ ಮತ್ತು ಸೋಂಕಿತ ಕಾಳುಗಳು ಕೊಳೆತ ಮೀನುಗಳಂತೆ ವಾಸನೆ ಹೊರಡಿಸುತ್ತವೆ.
  • ಸೋಂಕಿಗೊಳಗಾದ ಸಸ್ಯಗಳು ಕುಂಠಿತ ಬೆಳವಣಿಗೆಯನ್ನು ತೋರಿಸಬಹುದು ಮತ್ತು ಕದಿರುಗಳು ಸಣ್ಣ ಊಬುಗಳನ್ನು ಹೊಂದಿರಬಹುದು.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬಾರ್ಲಿ
ಗೋಧಿ

ಇತರೆ

ರೋಗಲಕ್ಷಣಗಳು

ಹೂವುಗಳ ಪರಾಗಸ್ಪರ್ಶದ ನಂತರ ಕೆಲವೇ ದಿನಗಳಲ್ಲಿ ಸೋಂಕಿನ ಮೊದಲ ಪುರಾವೆ ಕಂಡುಬರುತ್ತದೆ. ಸೋಂಕಿಗೊಳಗಾದ ಕಿರಿಕದಿರುಗಳು ಗಾಢವಾದ ಹಸಿರು ಎರಕದೊಂದಿಗೆ ಜಿಡ್ಡಾಗಿ ಕಾಣಿಸುತ್ತವೆ. ಬೀಜ ಕವಚಕ್ಕೆ ಹಾನಿಯಾಗಿರುವುದಿಲ್ಲ, ಆದರೆ ಒಳಭಾಗ ಮಾತ್ರ ಕಪ್ಪಾದ ಪುಡಿಯಾದ "ಕಾಡಿಗೆಯ ಚೆಂಡಿನಂತೆ" ಬದಲಾಗಿರುತ್ತದೆ. ಈ ಕಾಳುಗಳು ಆಕಾರ ಮತ್ತು ಗಾತ್ರದಲ್ಲಿ ಉಳಿದ ಕಾಳುಗಳಷ್ಟೇ ಇರುತ್ತವೆ, ಆದರೆ ಬೂದು-ಕಂದು ಬಣ್ಣದಲ್ಲಿರುತ್ತವೆ. ಅದನ್ನು ಅಮುಕಿದಾಗ, ಅವು ಕೊಳೆತ ಮೀನುಗಳಂತೆ ವಾಸನೆ ಸೂಸುವ ಕಪ್ಪು ಬೀಜಕಗಳನ್ನು ಹೊರ ಹಾಕುತ್ತವೆ. ಸೋಂಕಿತ ಗೋಧಿ ಸಸ್ಯಗಳು ಆರೋಗ್ಯಕರ ಸಸ್ಯಗಳಿಗಿಂತ ಸ್ವಲ್ಪ ಗಿಡ್ಡವಾಗಿರಬಹುದು. ಅವುಗಳ ತೆನೆ ಚಿಕ್ಕ ಊಬುಗಳನ್ನು ಹೊಂದಿರಬಹುದು, ಅಥವಾ ಯಾವುದೇ ಊಬು ಇಲ್ಲದೆಯೂ ಇರಬಹುದು. ಸಾಮಾನ್ಯವಾಗಿ, ಕದಿರಿನಲ್ಲಿರುವ ಎಲ್ಲಾ ಧಾನ್ಯಗಳೂ ಇದರ ಪರಿಣಾಮಕ್ಕೆ ಒಳಗಾಗಿರುತ್ತವೆ, ಆದರೆ ಒಂದು ಸಸ್ಯದಲ್ಲಿನ ಎಲ್ಲಾ ಕದಿರುಗಳು ಸೋಂಕಿಗೆ ಒಳಗಾಗುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಕೆನೆ ತೆಗೆದ ಹಾಲಿನ ಪುಡಿ, ಗೋಧಿ ಹಿಟ್ಟು ಅಥವಾ ಪುಡಿಮಾಡಿದ ಸೀ ವೀಡ್ ಅನ್ನು ನೀರಲ್ಲಿ ಬೆರೆಸಿ ಜಮೀನಿಗೆ ಹಾಕುವುದರಿಂದ ಟಿ. ಕ್ಯಾರೀಸ್ ಅನ್ನು ಬಹುತೇಕ ನಿವಾರಿಸಬಹುದು. ಬಿತ್ತನೆಯ ಮೊದಲು ಬೀಜವನ್ನು ಬೆಚ್ಚಗಿನ ನೀರಿನಲ್ಲಿ (45 °C) ಗಂಟೆಗಳ ಕಾಲ ಚಿಕಿತ್ಸೆಗೆ ಒಳಪಡಿಸುವ ಮೂಲಕ ಬೀಜಕಗಳನ್ನು ತೆಗೆಯಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವಿದ್ದರೆ ಮೊದಲು ಅದನ್ನು ಪರಿಗಣಿಸಿ. ಟೆಬುಕೊನಜೋಲ್, ಬೆನ್ಜಿಮಿಡಜೋಲ್ , ಫೀನಿಲೈಪೈರೋಲ್ಸ್ ಮತ್ತು ಟ್ರಿಯಾಜೋಲ್ ಗಳಂತಹ ಸಂಪರ್ಕ ಮತ್ತು ವ್ಯವಸ್ಥಿತ ಶಿಲೀಂಧ್ರನಾಶಕಗಳು (ಬೆಳೆಯುತ್ತಿರುವ ಸಸಿ ಒಳಗೆ ಮತ್ತು ಸುತ್ತಮುತ್ತ ಸಂಚರಿಸುವ) ಟಿ. ಕ್ಯಾರೀಸ್ ಗಳಿಂದ ಬೀಜಗಳನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿವೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಶಿಲೀಂಧ್ರವಾದ ಟಿಲೆಟಿಯ ಕ್ಯಾರಿಸ್ ನಿಂದ ಉಂಟಾಗುತ್ತವೆ. ಇವು ಬೀಜಗಳ ಮೇಲೆ ಮತ್ತು ಮಣ್ಣಿನಲ್ಲಿ ಎರಡು ವರ್ಷಗಳ ಕಾಲ ಸುಪ್ತ ಬೀಜಕಗಳಾಗಿ ಉಳಿಯಬಲ್ಲವು. ಮಣ್ಣಿನಲ್ಲಿ ಬೀಜಕಗಳು ಬದುಕುಳಿಯುವ ಪ್ರದೇಶಗಳಲ್ಲಿ, ಮೊಳಕೆಯೊಡೆದ ನಂತರ, ಸಸ್ಯದ ಬೆಳವಣಿಗೆಯ ಆರಂಭಿಕ ಹಂತಗಳಲ್ಲೇ ಹೆಚ್ಚಾಗಿ ಸೋಂಕು ಕಂಡುಬರುತ್ತದೆ. ಶಿಲೀಂಧ್ರವು ಮಣ್ಣಿನಿಂದ ಸಾಂಕ್ರಾಮಿಕ ಕೂದಲುಗಳ ಮೂಲಕ ಹೊರ ಬರುವ ಮುನ್ನವೇ ಹೊಸ ಗೋಧಿಯ ಚಿಗುರುಗಳಿಗೆ ಸೋಂಕು ತಗುಲಿಸಬಹುದು. ನಂತರ ಅವು ಬೆಳೆದಂತ ಸಸ್ಯದ ಆಂತರಿಕ ಅಂಗಾಂಶಗಳನ್ನು ಕ್ರಮೇಣ ಆಕ್ರಮಿಸುತ್ತವೆ ಮತ್ತು ಅಂತಿಮವಾಗಿ ಹೂಗೊಂಚಲುಗಳು ಮತ್ತು ಧಾನ್ಯಗಳನ್ನು ತಲುಪುತ್ತವೆ. ಕೊಯ್ಲಿನ ಸಂದರ್ಭದಲ್ಲಿ ಕೆಲವು ಸೋಂಕಿತ ಗೋಧಿ ಕಾಳುಗಳು ಒಡೆದು ಬೀಜಕಗಳನ್ನು ಬಿಡುಗಡೆ ಮಾಡುತ್ತವೆ. ಇವು ಗಾಳಿಯಿಂದ ಮಣ್ಣಿಗೆ ಹಾರಿಹೋಗಿ ಹೊಸ ಜೀವನಚಕ್ರವನ್ನು ಪ್ರಾರಂಭಿಸುತ್ತವೆ. ಉಳಿದ ಬೀಜಗಳು ಕಟಾವಿನ ನಂತರ ಭವಿಷ್ಯದಲ್ಲಿ ಸೋಂಕುಗಳಿಗೆ ವಾಹಕಗಳಾಗಿ ವರ್ತಿಸಬಹುದು. ಬೀಜಕಗಳು ಮೊಳಕೆಯೊಡೆಯಲು ಅತ್ಯುತ್ತಮವಾದ ಮಣ್ಣಿನ ತಾಪಮಾನವೆಂದರೆ 5-15 °C.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನ ಉಷ್ಣತೆಯು 20 °C ಕ್ಕಿಂತ ಹೆಚ್ಚಿರುವಾಗ ಚಳಿಗಾಲದಲ್ಲಿ ಗೋಧಿ ನೆಡುವುದರಿಂದ ಯಾವುದೇ ಸೋಂಕಿನ ಅಪಾಯ ಇರುವುದಿಲ್ಲ.
  • ಜೊತೆಗೆ, ಸಾಧ್ಯವಾದಷ್ಟು ಋತುವಿನ ಕೊನೆಯಲ್ಲಿ ಬೇಸಿಗೆ ಗೋಧಿಯನ್ನು ನೆಡಿ.
  • ನಿರೋಧಕ ಪ್ರಭೇದಗಳನ್ನು ಬಳಸಿ ಮತ್ತು ಸರಿಯಾದ ಪ್ರಮಾಣೀಕರಣಕ್ಕಾಗಿ ಬೀಜಗಳನ್ನು ಪರಿಶೀಲಿಸಿ.
  • ಸರದಿ ಬೆಳೆ ಮಾಡಿ.
  • ವಿವಿಧ ಜಮೀನುಗಳ ನಡುವೆ ಕೆಲಸ ಮಾಡುವಾಗ ಕೃಷಿ ಉಪಕರಣಗಳ ಸೋಂಕು ತೆಗೆದ ನಂತರ ಅವುಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ