ಸೇಬು

ಸೇಬಿನ ಆಂಥ್ರಾಕ್ನೋಸ್

Neofabraea malicorticis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ತೊಗಟೆಯ ಮೇಲೆ ಸಣ್ಣ, ವೃತ್ತಾಕಾರದ, ಕೆಂಪು-ನೇರಳೆ ಬಣ್ಣಗಳ ಚುಕ್ಕೆಗಳು ಕಂಡು ಬರುತ್ತವೆ.
  • ಮೇಲ್ಮುಖವಾಗಿ ಸುತ್ತಿಕೊಂಡಿರುವ ಅಂಚುಗಳೊಂದಿಗೆ ಕ್ಯಾಂಕರ್‌ಗಳು ಕಾಣಿಸಿಕೊಳ್ಳುತ್ತವೆ.
  • ಅವುಗಳ ಮಧ್ಯದಲ್ಲಿ ಕೆನೆ ಬಿಳಿ ಬಣ್ಣದ ಶಿಲೀಂಧ್ರ ಬೆಳವಣಿಗೆಯಾಗುತ್ತದೆ.
  • ಹಣ್ಣುಗಳು ಮತ್ತು ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಮತ್ತು ತೇಪೆಗಳು ಇರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಸೇಬು
ಪೇರು ಹಣ್ಣು/ ಮರಸೇಬು

ಸೇಬು

ರೋಗಲಕ್ಷಣಗಳು

ಹಣ್ಣಿನ ಮರಗಳ ಆಂಥ್ರಾಕ್ನೋಸ್ ಸೋಂಕಿನ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ರೆಂಬೆಗಳು ಮತ್ತು ಕೊಂಬೆಗಳ ಮೇಲೆ ಕ್ಯಾಂಕರ್ಸ್‌ ಕಾಣಿಸಿಕೊಳ್ಳುವುದು. ಆರಂಭಿಕ ಹಂತಗಳಲ್ಲಿ, ಅವು ಸಣ್ಣ ವೃತ್ತಾಕಾರದ ಚುಕ್ಕೆಗಳ ಬೆಳವಣಿಗೆಯಿಂದ ಕೂಡಿರುತ್ತವೆ. ಕೆಂಪು- ನೇರಳೆ ಬಣ್ಣದಲ್ಲಿರುತ್ತವೆ ಮತ್ತು ವಿಶೇಷವಾಗಿ ತೇವವಾದಾಗ ಎದ್ದುಕಾಣುತ್ತವೆ. ಅವು ದೊಡ್ಡದಾಗುತ್ತಿದ್ದಂತೆ ಸ್ವಲ್ಪ ಉದ್ದವಾಗುತ್ತವೆ ಮತ್ತು ಗುಳಿಬಿದ್ದಿರುತ್ತವೆ ಮತ್ತು ಕಿತ್ತಳೆ ಬಣ್ಣದಿಂದ ಕಂದು ಬಣ್ಣದಲ್ಲಿರುತ್ತವೆ. ತೊಗಟೆ ಹದಗೆಡುತ್ತಿದ್ದಂತೆ, ಅಂಚುಗಳ ಮೇಲೆ ಬಿರುಕುಗಳು ಉಂಟಾಗುತ್ತವೆ ಮತ್ತು ಮೇಲ್ಮುಖವಾಗಿ ಸುರುಳಿಯಾಗಲು ಪ್ರಾರಂಭಿಸುತ್ತವೆ. ಅವುಗಳ ಮಧ್ಯದಲ್ಲಿ ಕೆನೆ ಬಿಳಿ ಶಿಲೀಂಧ್ರಗಳ ಬೆಳವಣಿಗೆಯನ್ನು ಗಮನಿಸಬಹುದು. ಕ್ಯಾಂಕರ್ ಎಳೆಯ ರೆಂಬೆಗಳನ್ನು ಬಿಗಿಯಾಗಿಸಿ ಅವುಗಳನ್ನು ಕೊಲ್ಲುತ್ತದೆ. ಎಳೆಯ ಎಲೆಗಳು ಅಥವಾ ಹಣ್ಣುಗಳ ಮೇಲೆಯೂ ಸಹ ಪರಿಣಾಮ ಬೀರಬಹುದು ಮತ್ತು ಕಂದು ಬಣ್ಣದ ಚುಕ್ಕೆಗಳು ಮತ್ತು ತೇಪೆಗಳನ್ನು ಉಂಟುಮಾಡಬಹುದು, ಇದು ಹಣ್ಣುಗಳು ಬಿಡುವ ಸಂದರ್ಭದಲ್ಲಿ ಶೇಖರಣೆಯ ಸಮಯದಲ್ಲಿ "ಬುಲ್ಸ್ ಐ ರಾಟ್‌"ಗೆ ಕಾರಣವಾಗುತ್ತದೆ. ನಿರ್ದಿಷ್ಟವಾಗಿ ದುರ್ಬಲ ಪ್ರಭೇದಗಳಲ್ಲಿ, ಇದು ಮರದ ಎಲೆಗಳ ಉದುರುವಿಕೆಗೆ ಕಾರಣವಾಗಬಹುದು ಮತ್ತು ಮರಗಳ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಇದು ಹಣ್ಣಿನ ಗುಣಮಟ್ಟದಲ್ಲಿನ ಇಳಿಕೆಗೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕೊಯ್ಲಿನ ನಂತರ ಬೋರ್ಡೆಕ್ಸ್ ಮಿಶ್ರಣ ಅಥವಾ ಕಾಪರ್‌ ಸಲ್ಫೇಟ್ ಅನ್ನು ಸಿಂಪಡಿಸುವುದರಿಂದ ಮುಂದಿನ ಋತುವಿನಲ್ಲಿ ಆಂಥ್ರಾಕ್ನೋಸ್ ಸಂಭವವನ್ನು ಕಡಿಮೆ ಮಾಡಬಹುದು. ಹಣ್ಣುಗಳ ಮೇಲಿನ ಬುಲ್ಸ್-ಐ ರಾಟ್‌ ರಚನೆಯನ್ನು ನಿಯಂತ್ರಿಸಲು ಕೊಯ್ಲು ಮಾಡುವ ಮೊದಲು ಈ ಸಂಯುಕ್ತಗಳನ್ನು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಬೇಕು. ಇರುವ ಕ್ಯಾಂಕರ್‌ಗಳನ್ನು ನಿರ್ಮೂಲನೆ ಮಾಡುವಲ್ಲಿ ಸಂಪೂರ್ಣವಾಗಿ ಪರಿಣಾಮಕಾರಿ ಎಂದು ಸಾಬೀತಾಗಿರುವ ಯಾವುದೇ ಶಿಲೀಂಧ್ರನಾಶಕಗಳಿಲ್ಲ. ಆದರೂ, ಕೊಯ್ಲು ಮಾಡುವ ಮೊದಲು ತಡೆಗಟ್ಟುವ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದರಿಂದ, ಶೇಖರಣೆಯ ಸಮಯದಲ್ಲಿ ಹಣ್ಣುಗಳ ಮೇಲೆ ಬುಲ್ಸ್-ಐ ರಾಟ್‌ ಸಂಭವವನ್ನು ಕಡಿಮೆ ಮಾಡಬಹುದು. ಸುಗ್ಗಿಯ ನಂತರ ಅದೇ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದರಿಂದ ಮುಂದಿನ ಋತುವಿನಲ್ಲಿ ಕ್ಯಾಂಕರ್‌ ಗಳನ್ನು ಕಡಿಮೆ ಮಾಡಬಹುದು. ಕ್ಯಾಪ್ಟನ್, ಮ್ಯಾಂಕೋಜೆಬ್ ಅಥವಾ ಜಿರಾಮ್ ಆಧಾರಿತ ಉತ್ಪನ್ನಗಳನ್ನು ಈ ಉದ್ದೇಶಗಳಿಗಾಗಿ ಬಳಸಬಹುದು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಮುಖ್ಯವಾಗಿ ನಿಯೋಫ್ಯಾಬ್ರಾ ಮಾಲಿಕಾರ್ಟಿಸಿಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ. ಆದರೆ ಅದೇ ಪ್ರಭೇದದ ಇತರ ಶಿಲೀಂಧ್ರಗಳು ಭಾಗಿಯಾಗಬಹುದು. ಅವುಗಳು ಬಾಧಿತ ಸಸ್ಯದ ಅವಶೇಷಗಳ ಮೇಲೆ ಅಥವಾ ಮಣ್ಣಿನಲ್ಲಿ ಬದುಕಬಲ್ಲವು. ಇದು ತೇವಾಂಶ ಮತ್ತು ಬೆಚ್ಚಗಿನ ಪರಿಸ್ಥಿತಿಗಳಲ್ಲಿ, ಆಗಾಗ್ಗೆ ಮಳೆಯೊಂದಿಗೆ ಬೆಳೆಯುತ್ತದೆ. ವಸಂತಕಾಲದಲ್ಲಿ, ಇದು ಬೆಳವಣಿಗೆಯನ್ನು ಪುನರಾರಂಭಿಸುತ್ತದೆ ಮತ್ತು ಬೀಜಕಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಈ ಬೀಜಕಗಳು ನೀರಾವರಿ ನೀರು ಅಥವಾ ಮಳೆ ನೀರಿನ ಚಿಮ್ಮುವಿಕೆಯ ಮೂಲಕ ಇತರ ಮರಗಳು ಅಥವಾ ಸಸ್ಯಗಳಿಗೆ ಸುಲಭವಾಗಿ ಹರಡುತ್ತವೆ. ಅವುಗಳು ಸಣ್ಣ ಗಾಯಗಳ ಮೂಲಕ ಮರಗಳನ್ನು ಪ್ರವೇಶಿಸಬಹುದು. ಆದರೆ ಗಾಯಗೊಳ್ಳದ ತೊಗಟೆಯ ಮೂಲಕವೂ ಭೇದಿಸಿಕೊಂಡು ಹೋಗಬಹುದು. ಕ್ಯಾಂಕರ್ ಕೇವಲ 1 ವರ್ಷ ಮಾತ್ರ ಸಕ್ರಿಯವಾಗಿ ಬೆಳೆಯುತ್ತದೆ. ಆದರೆ ಶಿಲೀಂಧ್ರ 2 ರಿಂದ 3 ವರ್ಷಗಳ ಕಾಲ ಹೆಚ್ಚಿನ ಸಂಖ್ಯೆಯ ಬೀಜಕಗಳನ್ನು ಉತ್ಪಾದಿಸುವುದನ್ನು ಮುಂದುವರಿಸುತ್ತದೆ. ಪರ್ಯಾಯ ಸಸ್ಯ ಸಂಕುಲಗಳಲ್ಲಿ ಹೆಚ್ಚಿನ ಪೋಮ್ ಮತ್ತು ಕಲ್ಲಿನ ಹಣ್ಣುಗಳು ಜೊತೆಗೆ ಹಾಥಾರ್ನ್ ಮತ್ತು ಮೌಂಟೇನ್‌ ಆಶ್ ಸೇರಿವೆ. ಎಲ್ಲಾ ಸೇಬು ಪ್ರಭೇದಗಳು ವಿವಿಧ ಹಂತಗಳಲ್ಲಿ ರೋಗಕ್ಕೆ ಒಳಗಾಗುತ್ತವೆ. ಪೇರಳೆ ಮರಗಳಿಗೂ ಸಹ ಪರಿಣಾಮ ಬೀರಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ರೋಗಕಾರಕ-ಮುಕ್ತ ಮೂಲಗಳಿಂದ ಆರೋಗ್ಯಕರ ಮರಗಳನ್ನು ನೆಡಬೇಕು.
  • ರೋಗಕ್ಕೆ ಕಡಿಮೆ ತುತ್ತಾಗುವ ಮರದ ಪ್ರಭೇದಗಳನ್ನು ಆಯ್ದುಕೊಳ್ಳಬೇಕು.
  • ರೋಗದ ಲಕ್ಷಣಗಳಿಗಾಗಿ ಹೊಸ ಮರಗಳ ಮೇಲೆ ಸಂಪೂರ್ಣವಾಗಿ ನಿಗಾ ಇಡಬೇಕು.
  • ಚಳಿಗಾಲದ ಮರಕಸಿಯ ಸಮಯದಲ್ಲಿ ಕ್ಯಾಂಕರ್‌ ನಿಂದ ಬಾಧೆಗೊಳಗಾದ ಕೊಂಬೆಗಳನ್ನು ಕತ್ತರಿಸಬೇಕು.
  • ಬಾಧಿತ ಭಾಗಗಳು ಮತ್ತು ಕಾಂಡಗಳು ಪತ್ತೆಯಾದ ತಕ್ಷಣ ಅವುಗಳನ್ನು ಕತ್ತರಿಸಬೇಕು.
  • ತೋಟದಿಂದ ಸಸ್ಯದ ಅವಶೇಷಗಳನ್ನು ತೆಗೆದುಹಾಕಬೇಕು.
  • ಹಣ್ಣಿನ ತೋಟದ ಸುತ್ತಲೂ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ನೆಡಬಾರದು.
  • ಉತ್ತಮ ಫಲವತ್ತತೆಯ ಕೆಲಸ ಮತ್ತು ಫೋರ್ಟಿಫೈಯರ್‌ಗಳ ಬಳಕೆಯ ಮೂಲಕ ಮರದ ಸಾಮರ್ಥ್ಯವನ್ನು ಉತ್ತೇಜಿಸಬೇಕು.
  • ಮಣ್ಣಿನ ಅತ್ಯುತ್ತಮ ಒಳಚರಂಡಿಯನ್ನು ಖಚಿತಪಡಿಸಿಕೊಳ್ಳಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ